ಸಾರ್ವಜನಿಕ ಬಳಕೆಯ ಇವಿ ಬಸ್‌ಗಳನ್ನು ಉತ್ತೇಜಿಸಲು ಉಚಿತ ಪ್ರಯಾಣದ ಆಫರ್

ದೇಶಾದ್ಯಂತ ಇವಿ ವಾಹನಗಳು ಹೊಸ ಸಂಚಲನ ಮೂಡಿಸುತ್ತಿದ್ದು, ಇವಿ ವಾಹನಗಳನ್ನು ಕೇವಲ ವ್ಯಯಕ್ತಿಕ ಬಳಕೆಗೆ ಮಾತ್ರವಲ್ಲ ಸಾರ್ವಜನಿಕ ಬಳಕೆಯಲ್ಲೂ ವ್ಯಾಪಕವಾಗಿ ಅಳವಡಿಸಿಕೊಳ್ಳಲಾಗುತ್ತಿದೆ.

ಸಾರ್ವಜನಿಕ ಬಳಕೆಯ ಇವಿ ಬಸ್‌ಗಳನ್ನು ಉತ್ತೇಜಸಲು ಉಚಿತ ಪ್ರಯಾಣದ ಆಫರ್

ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರದ ಫೇಮ್ 2 ಯೋಜನೆಯ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಹಲವಾರು ಬೃಹತ್ ಯೋಜನೆಗಳನ್ನು ಅಳವಡಿಸಿಕೊಂಡಿದ್ದು, ಇವಿ ವಾಹನ ಅಳವಡಿಕೆಯಲ್ಲಿ ಇತರೆ ರಾಜ್ಯಗಳಿಂತ ದೆಹಲಿ ಸರ್ಕಾರವು ಹೆಚ್ಚಿನ ಮುನ್ನಡೆ ಸಾಧಿಸುತ್ತಿದೆ. ದೆಹಲಿ ಸರ್ಕಾರ ಇವಿ ವಾಹನಗಳನ್ನು ಅಳವಡಿಸಿಕೊಳ್ಳುವ ಮಾಲೀಕರಿಗೆ ವಿವಿಧ ಸಬ್ಸಡಿ ಯೋಜನೆಗಳ ಜೊತೆ ಸಾರ್ವಜನಿಕ ಬಳಕೆಯ ಇವಿ ಬಸ್ ಅಳವಡಿಕೆಗೂ ಹೆಚ್ಚಿನ ಆದ್ಯತೆ ನೀಡಿದೆ.

ಸಾರ್ವಜನಿಕ ಬಳಕೆಯ ಇವಿ ಬಸ್‌ಗಳನ್ನು ಉತ್ತೇಜಸಲು ಉಚಿತ ಪ್ರಯಾಣದ ಆಫರ್

ದೆಹಲಿ ಸರ್ಕಾರವು ನಗರ ಸಾರಿಗೆಯಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಅಳಡಿಸಿಕೊಳ್ಳಲು ಇತ್ತೀಚೆಗೆ 150 ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಅಳಡಿಸಿಕೊಂಡಿದ್ದು, ಹೊಸ ಇವಿ ಬಸ್ ಕಾರ್ಯಾಚರಣೆ ಆರಂಭಿಸುವುದಕ್ಕೂ ಮುನ್ನ ದೆಹಲಿ ಸರ್ಕಾರವು ಸಾರ್ವಜನಿಕರನ್ನು ಸೆಳೆಯಲು ವಿಭಿನ್ನವಾದ ಪ್ರಯತ್ನಕ್ಕೆ ಕೈಹಾಕಿದೆ.

ಸಾರ್ವಜನಿಕ ಬಳಕೆಯ ಇವಿ ಬಸ್‌ಗಳನ್ನು ಉತ್ತೇಜಸಲು ಉಚಿತ ಪ್ರಯಾಣದ ಆಫರ್

ಹೊಸ ಎಲೆಕ್ಟ್ರಿಕ್ ಬಸ್‌ಗಳ ಅಧಿಕೃತ ಕಾರ್ಯಾಚರಣೆ ಆರಂಭದೊಂದಿಗೆ ದೆಹಲಿ ಸರ್ಕಾರವು ಸಾರ್ವಜನಿಕರಿಗೆ ಹೊಸ ಆಫರ್ ನೀಡಿದ್ದು, ಇವಿ ಬಸ್ ಸಂಚಾರದ ಆರಂಭಿದ ಮೂರು ದಿನಗಳ ತನಕ ಉಚಿತವಾಗಿ ಪ್ರಯಾಣಿಸುವ ಅವಕಾಶ ನೀಡಿದೆ.

ಸಾರ್ವಜನಿಕ ಬಳಕೆಯ ಇವಿ ಬಸ್‌ಗಳನ್ನು ಉತ್ತೇಜಸಲು ಉಚಿತ ಪ್ರಯಾಣದ ಆಫರ್

ಫೇಮ್ 2 ಯೋಜನೆಯಡಿಯಲ್ಲಿ ಬರೋಬ್ಬರಿ 150 ಎಲೆಕ್ಟ್ರಿಕ್ ಬಸ್‌ಗಳನ್ನು ಪಡೆದುಕೊಂಡಿರುವ ದೆಹಲಿ ನಗರ ಸಾರಿಗೆ ವಿಭಾಗವು ನಗರದ ಪ್ರಮುಖ ಮೂರು ಡಿಪೋಗಳಿಂದ ಇವಿ ಬಸ್ ಸಂಚಾರ ಆರಂಭಿಸುತ್ತಿದ್ದು, ಮೂರು ಡೀಪೋಗಳಲ್ಲಿ ಇವಿ ಬಸ್‌ಗಳಿಗೆ ಅಗತ್ಯವಾಗಿರುವ ಮೂಲಭೂತ ಸೌಕರ್ಯಗಳನ್ನು ನೀಡಲಾಗಿದೆ.

ಸಾರ್ವಜನಿಕ ಬಳಕೆಯ ಇವಿ ಬಸ್‌ಗಳನ್ನು ಉತ್ತೇಜಸಲು ಉಚಿತ ಪ್ರಯಾಣದ ಆಫರ್

150 ಹೊಸ ಇವಿ ಬಸ್‌ಗಳು ಪ್ರಮುಖ ಮಾರ್ಗಗಳಲ್ಲಿ ಸಂಚರಿಸುವ ಮೂಲಕ ನಿಗದಿತ ಡೀಪೊದಲ್ಲಿ ಚಾರ್ಜಿಂಗ್ ನಿಲ್ದಾಣಗಳನ್ನು ಬಳಕೆ ಮಾಡಿಕೊಳ್ಳಲಿದ್ದು, ಇಂದಿನಿಂದ ಮೂರು ದಿನಗಳ ಕಾಲ ಸಾರ್ವಜನಿಕರು ಉಚಿತವಾಗಿ ಪ್ರಯಾಣಿಸುವ ಅವಕಾಶ ನೀಡಲಾಗಿದೆ.

ಸಾರ್ವಜನಿಕ ಬಳಕೆಯ ಇವಿ ಬಸ್‌ಗಳನ್ನು ಉತ್ತೇಜಸಲು ಉಚಿತ ಪ್ರಯಾಣದ ಆಫರ್

ಅತ್ಯಾಧುನಿಕ ಸೌಲಭ್ಯ ಹೊಂದಿರುವ ಹೊಸ ಎಲೆಕ್ಟ್ರಿಕ್ ಬಸ್ ಮಾದರಿಗಳು ಶೂನ್ಯ ಹೊರಸೂಸುವಿಕೆಯೊಂದಿಗೆ ಹಲವಾರು ಸುಧಾರಿತ ಸೌಲಭ್ಯಗಳನ್ನು ಹೊಂದಿದ್ದು, ಇವಿ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ, ಜಿಪಿಎಸ್, 10 ಪ್ಯಾನಿಕ್ ಬಟನ್‌ಗಳನ್ನು ಮತ್ತು ಅಂಗವಿಕಲರಿಗಾಗಿ ರ‍್ಯಾಂಪ್‌ಗಳ ಸೌಲಭ್ಯಗಳಿವೆ.

ಸಾರ್ವಜನಿಕ ಬಳಕೆಯ ಇವಿ ಬಸ್‌ಗಳನ್ನು ಉತ್ತೇಜಸಲು ಉಚಿತ ಪ್ರಯಾಣದ ಆಫರ್

ಮಾರ್ಗ ಮಧ್ಯದಲ್ಲಿ ಚಾರ್ಜಿಂಗ್ ‌ಕೊರತೆ ಉಂಟಾಗದಂತೆ ಮೊಬೈಲ್ ಚಾರ್ಜರ್ ವಾಹನ ಕೂಡಾ ಸರ್ಪೊಟ್ ವೆಹಿಕಲ್ ಸೌಲಭ್ಯವನ್ನು ಸಹ ಹೊಂದಿದ್ದು, ಮಾಲಿನ್ಯದಿಂದ ಬಳಲುತ್ತಿರುವ ದೆಹಲಿಯಲ್ಲಿ ಇವಿ ವಾಹನಗಳು ಹೊಸ ಆಶಾಕಿರಣವಾಗಲಿವೆ.

ಸಾರ್ವಜನಿಕ ಬಳಕೆಯ ಇವಿ ಬಸ್‌ಗಳನ್ನು ಉತ್ತೇಜಸಲು ಉಚಿತ ಪ್ರಯಾಣದ ಆಫರ್

ಇನ್ನ ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೇಶಾದ್ಯಂತ ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನ ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿರುವುದು ಮಹತ್ವದ ಬದಲಾವಣೆಗೆ ಕಾರಣವಾಗುತ್ತಿದೆ.

ಸಾರ್ವಜನಿಕ ಬಳಕೆಯ ಇವಿ ಬಸ್‌ಗಳನ್ನು ಉತ್ತೇಜಸಲು ಉಚಿತ ಪ್ರಯಾಣದ ಆಫರ್

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡಲಾಗುತ್ತಿರುವುದರಿಂದ ಇವಿ ವಾಹನಗಳ ಬಳಕೆಗೆ ಸಾರ್ವಜನಿಕರು ಆದ್ಯತೆ ನೀಡುತ್ತಿದ್ದಾರೆ.

ಸಾರ್ವಜನಿಕ ಬಳಕೆಯ ಇವಿ ಬಸ್‌ಗಳನ್ನು ಉತ್ತೇಜಸಲು ಉಚಿತ ಪ್ರಯಾಣದ ಆಫರ್

ಹೊಸ ಯೋಜನೆಗಳ ಪರಿಣಾಮ ಇವಿ ವಾಹನಗಳ ನೋಂದಣಿ ಪ್ರಮಾಣವು ಸಾಕಷ್ಟು ಏರಿಕೆಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಹೆಚ್ಚುತ್ತಿರುವ ಪರಿಣಾಮ ಇವಿ ವಾಹನಗಳು ಇನ್ನು ಹೆಚ್ಚಿನ ಮಟ್ಟದಲ್ಲಿ ರಸ್ತೆಗಿಳಿಯುತ್ತಿವೆ.

ಸಾರ್ವಜನಿಕ ಬಳಕೆಯ ಇವಿ ಬಸ್‌ಗಳನ್ನು ಉತ್ತೇಜಸಲು ಉಚಿತ ಪ್ರಯಾಣದ ಆಫರ್

ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಸಾರ್ವಜನಿಕ ಬಳಕೆಯ ಚಾರ್ಜಿಂಗ್ ನಿಲ್ದಾಣಗಳನ್ನು ಸಹ ಹೆಚ್ಚಿಸಲಾಗುತ್ತಿದ್ದು, ಮುಂದಿನ ಕೆಲವೇ ತಿಂಗಳುಗಳಲ್ಲಿ ವಿವಿಧ ರಾಜ್ಯಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ನಿಲ್ದಾಣ ಕಾರ್ಯಾರಂಭಕ್ಕೆ ಸಿದ್ದವಾಗುತ್ತಿವೆ.

ಸಾರ್ವಜನಿಕ ಬಳಕೆಯ ಇವಿ ಬಸ್‌ಗಳನ್ನು ಉತ್ತೇಜಸಲು ಉಚಿತ ಪ್ರಯಾಣದ ಆಫರ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕೂಡಾ ಹೆಚ್ಚಿನ ಸಂಖ್ಯೆಯ ಚಾರ್ಜಿಂಗ್ ನಿಲ್ದಾಣಗಳು ಕಾರ್ಯಾರಂಭಿಸುತ್ತಿದ್ದು, ಜೂನ್ ಅಂತ್ಯಕ್ಕೆ ದೆಹಲಿಯಲ್ಲಿ ಹೊಸದಾಗಿ ಸುಮಾರು 100 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳು ಆರಂಭಗೊಳ್ಳುತ್ತಿವೆ. ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳ ಪಾರ್ಕಿಂಗ್ ಸ್ಥಳಗಳಲ್ಲಿ, ಮಾಲ್‌ಗಳಲ್ಲಿ, ಸೂಪರ್ ಮಾರುಕಟ್ಟೆಗಳಲ್ಲಿ ಸ್ಥಳ ಲಭ್ಯತೆ ಆಧರಿಸಿ ಹೊಸ ಇವಿ ಚಾರ್ಜಿಂಗ್ ನಿಲ್ದಾಣಗಳನ್ನು ಆರಂಭಿಸಲಾಗಿತ್ತಿದ್ದು, ಇವಿ ವಾಹನಗಳಿಗೆ ನೀಡಲಾಗುವ ವಿದ್ಯುತ್ ದರವನ್ನು ಪ್ರತಿ ಯುನಿಟ್‌ಗೆ ರೂ. 2 ನಿಗದಿಪಡಿಸಿದೆ.

Most Read Articles

Kannada
English summary
Delhi government offer free electric bus rides for next 3 days details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X