ಡಿಎಲ್ ಇಲ್ಲದೆ 70 ವರ್ಷ ಕಾರು ಚಾಲನೆ: 83ನೇ ವಯಸ್ಸಿಗೆ ಮೊದಲ ಬಾರಿ ಸಿಕ್ಕಿಬಿದ್ದ ಖರ್ತನಾಕ್ ಚಾಲಕ

ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಾಲಯಿಸಿದರೆ ಅದು ಕನೂನಿನ ಉಲ್ಲಂಘನೆಯಾಗಿದೆ. ಅಲ್ಲದೇ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡುವಾಗ ಸಿಕ್ಕಿಬಿದ್ದರೆ ದುಬಾರಿ ದಂಡವನ್ನು ಕಟ್ಟಬೇಕಾಗುತ್ತದೆ. ಡ್ರೈವಿಂಗ್ ಲೆಸನ್ಸ್ ಇಲ್ಲದೆ ಪೊಲೀಸರ ಕಣ್ಣು ತಪ್ಪಿಸಿ ಅಧಿಕ ಕಾಲ ವಾಹನ ಚಲಾಯಿಸುವುದು ಸುಲಭದ ಮಾತಲ್ಲ.

ಡಿಎಲ್ ಇಲ್ಲದೆ 70 ವರ್ಷ ಕಾರು ಚಾಲನೆ: 83ನೇ ವಯಸ್ಸಿಗೆ ಮೊದಲ ಬಾರಿ ಸಿಕ್ಕಿಬಿದ್ದ ಖರ್ತನಾಕ್ ಚಾಲಕ

ಆದರೆ ಇಲ್ಲೊಬ್ಬ ಭೂಪ 70 ವರ್ಷಗಳಿಂದ ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸುತ್ತಿದ್ದಾನೆ. ತನ್ನ 83ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಘಟೆನೆಯು ಯುಕೆಯ ಬುಲ್‌ವೆಲ್‌ನಲ್ಲಿ ನಡೆದಿದೆ. ಇತ 70 ವರ್ಷಗಳಿಂದ ಡ್ರೈವಿಂಗ್ ಲೈಸೆನ್ಸ್, ಇನ್ಶೂರೆನ್ಸ್ ಇಲ್ಲದೆ, ಎಮಿಷನ್ ಟೆಸ್ಟ್ ಸೇರಿದಂತೆ ಯಾವುದೇ ದಾಖಲೆಗಳಿಲ್ಲ ವಾಹನ ಚಲಾಯಿಸಿದ್ದರು. ಈ ಚಾಲಕ 12ನೇ ವಯಸ್ಸಿಗೆ ಕಾರು ಡ್ರೈವಿಂಗ್ ಮಾಡಲು ಪ್ರಾರಂಭಿಸಿದ್ದಾನೆ,

ಡಿಎಲ್ ಇಲ್ಲದೆ 70 ವರ್ಷ ಕಾರು ಚಾಲನೆ: 83ನೇ ವಯಸ್ಸಿಗೆ ಮೊದಲ ಬಾರಿ ಸಿಕ್ಕಿಬಿದ್ದ ಖರ್ತನಾಕ್ ಚಾಲಕ

ಮೊದಲಿಗೆ ಪೋಷಕರ ಕಾರು ಓಡಿಸಲು ಪ್ರಾರಂಭಿಸಿದ. ಬಳಿಕ ಆತ ಸ್ವತಃ ಕಾರು ಖರೀದಿಸಿ ಪ್ರತಿ ದಿನ ಕಾರಿನಲ್ಲಿ ಓಡಾಟ ಮುಂದುವರಿಸಿದ್ದಾನೆ. ಆದರೆ ಕಳೆದ 70 ವರ್ಷಗಳಲ್ಲಿ ಒಂದು ಬಾರಿಯೂ ಪೊಲೀಸರ ಕೈಗೆ ಸಿಕ್ಕಿಬಿದ್ದಿಲ್ಲ. ಈತನ ಕಾರಿಗೆ ನೋಂದಣೆ ಕಾರ್ಡ್ ಹೊರತುಪಡಿಸಿದರೆ ಇತರೆ ಯಾವುದೇ ದಾಖಲೆಯೂ ಇರಲಿಲ್ಲ.

ಡಿಎಲ್ ಇಲ್ಲದೆ 70 ವರ್ಷ ಕಾರು ಚಾಲನೆ: 83ನೇ ವಯಸ್ಸಿಗೆ ಮೊದಲ ಬಾರಿ ಸಿಕ್ಕಿಬಿದ್ದ ಖರ್ತನಾಕ್ ಚಾಲಕ

ಮುಖ್ಯವಾಗಿ ಈತನ ಬಳಿ ಡ್ರೈವಿಂಗ್ ಲೆಸೆನ್ಸ್ ಇಲ್ಲವೇ ಇಲ್ಲ. ಇದುವರೆಗೂ ಮಾಡಿಸಿಕೊಂಡಿಲ್ಲ, ಕಾರು ವಿಮೆಯನ್ನು ಕೂಡ ಪಾವತಿಸಿಲ್ಲ. ತನ್ನ 83ನೇ ವಯಸ್ಸಿನಲ್ಲಿ ಅಂದರೆ ಕಾರು(Car) ಡ್ರೈವಿಂಗ್ ಆರಂಭಿಸಿದ 70 ವರ್ಷದ ಬಳಿಕ ಮೊದಲ ಬಾರಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದು ಭಾರಿ ಸುದ್ದಿಯಾಗಿದ್ದಾರೆ.

ಡಿಎಲ್ ಇಲ್ಲದೆ 70 ವರ್ಷ ಕಾರು ಚಾಲನೆ: 83ನೇ ವಯಸ್ಸಿಗೆ ಮೊದಲ ಬಾರಿ ಸಿಕ್ಕಿಬಿದ್ದ ಖರ್ತನಾಕ್ ಚಾಲಕ

ಟ್ರಾಫಿಕ್ ಪೊಲೀಸರು 83ರ ಹರೆಯದ ವೃದ್ಧನ ನಿಲ್ಲಿಸಿ ದಾಖಲೆ ಕೇಳಿದ್ದಾರೆ. ಈತನ ಬಳಿ ಯಾವ ದಾಖಲೆಯೂ ಇಲ್ಲ. ಇದುವರೆಗೂ ಲೈಸೆನ್ಸ್ ಮಾಡಿಸಿಲ್ಲ ಎಂದಾಗ ಪೊಲೀಸರಿಗೆ ಅಚ್ಚರಿ ಆಗಿತ್ತು. ಇಷ್ಟೇ ಅಲ್ಲ ವೃದ್ಧನ ಉತ್ತರದಿಂದ ಪೊಲೀಸರು ಶಾಕ್ ಆದರು, ಕಾರಣ ಕಳೆದ 70 ವರ್ಷಗಳಿಂದ ಲೈಸೆನ್ಸ್ ಮಾಡಿಸದೆ ಇದುವರೆಗೆ ಯಾರ ಕೈಗೂ ಸಿಕ್ಕಿಬೀಳದೆ ಹೇಗೆ ಡ್ರೈವಿಂಗ್ ಮಾಡಲು ಸಾಧ್ಯ ಎಂಬ ಬಗೆಹರಿಯಾದ ಪ್ರಶ್ನೆಯು ಉಂಟುತ್ತದೆ.

ಡಿಎಲ್ ಇಲ್ಲದೆ 70 ವರ್ಷ ಕಾರು ಚಾಲನೆ: 83ನೇ ವಯಸ್ಸಿಗೆ ಮೊದಲ ಬಾರಿ ಸಿಕ್ಕಿಬಿದ್ದ ಖರ್ತನಾಕ್ ಚಾಲಕ

ಅದೃಷ್ಟವಶಾತ್, ಆತ ಎಂದಿಗೂ ಅಪಘಾತಕ್ಕೆ ಒಳಗಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇವರು ಬಹಳ ಎಚ್ಚರಿಕೆಯಿಂದ ಕಾರು ಚಾಲನೆ ಮಾಡುತ್ತಾರೆ. 70 ವರ್ಷಗಳಿಗೂ ಹೆಚ್ಚು ಕಾಲ ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಚಲಾಯಿಸಿಕೊಂಡು ಬಂದಿರುವ ಇವರು ಇದುವರೆಗೆ ಅಪಘಾತಕ್ಕೆ ಒಳಗಾಗದೇ ಇರುವುದು ಅತ್ಯಂತ ಅಪರೂಪದ ಪ್ರಕರಣವಾಗಿದೆ.

ಡಿಎಲ್ ಇಲ್ಲದೆ 70 ವರ್ಷ ಕಾರು ಚಾಲನೆ: 83ನೇ ವಯಸ್ಸಿಗೆ ಮೊದಲ ಬಾರಿ ಸಿಕ್ಕಿಬಿದ್ದ ಖರ್ತನಾಕ್ ಚಾಲಕ

ಇನ್ನು ಈತನನ್ನು ಯಾವತ್ತೂ ಪೊಲೀಸರು ತಪಾಸಣೆಗೆ ಒಳಪಡಿಸದಿರುವುದು ಅಚ್ಚರಿಯ ಸಂಗತಿಯಾಗಿದೆ. ಆದರೆ 83ನೇ ವಯಸ್ಸಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಆದರೆ ಇವರು ಎಂದಿಗೂ ಅಪಘಾತ ಮಾಡಿಲ್ಲ. ಒಂದು ವೇಳೆ ಅಪಾಘತಕ್ಕೆ ಒಳಗಾಗಿದ್ದರು ಅವರಿಗೆ ವಿಮೆ ಸಿಗುತ್ತಿರಲಿಲ್ಲ.

ಡಿಎಲ್ ಇಲ್ಲದೆ 70 ವರ್ಷ ಕಾರು ಚಾಲನೆ: 83ನೇ ವಯಸ್ಸಿಗೆ ಮೊದಲ ಬಾರಿ ಸಿಕ್ಕಿಬಿದ್ದ ಖರ್ತನಾಕ್ ಚಾಲಕ

ಯುಕೆಯ ನಾಟಿಂಗ್‌ಹ್ಯಾಮ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಎನ್‌ಪಿಆರ್‌ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಣ್ಣ ಪ್ರಯಾಣದಲ್ಲಿಯು ಕ್ಯಾಮರಾ ಕಣ್ಣಿಗೆ ಬೀಳುವುದು ಗ್ಯಾರಂಟಿ. ಆದ್ದರಿಂದ ಚಾಲಕರು ದಾಖಲೆಗಳನ್ನು ಕ್ರಮಬದ್ಧವಾಗಿ ಹೊಂದಿರುವುದು ಮುಖ್ಯ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಡಿಎಲ್ ಇಲ್ಲದೆ 70 ವರ್ಷ ಕಾರು ಚಾಲನೆ: 83ನೇ ವಯಸ್ಸಿಗೆ ಮೊದಲ ಬಾರಿ ಸಿಕ್ಕಿಬಿದ್ದ ಖರ್ತನಾಕ್ ಚಾಲಕ

83 ವರ್ಷದ ಚಾಲಕನಿಗೆ ಯಾವ ಶಿಕ್ಷೆಯನ್ನು ನೀಡಲಾಗಿದೆ ಎಂಬುದನ್ನು ಪೋಸ್ಟ್ ಉಲ್ಲೇಖಿಸಿಲ್ಲ ಆದರೆ ಬೇರೆ ಯಾವುದೂ ಇಲ್ಲದಿದ್ದರೆ, ಅವರು ಎಂದಿಗೂ ಡ್ರೈವಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ ಮತ್ತು ವಿಮೆ ಇಲ್ಲದೆ ವಾಹನ ಚಲಾಯಿಸಿದ್ದಕ್ಕಾಗಿ ದಂಡವನ್ನು ಖಂಡಿತವಾಗಿ ವಿಧಿಸಿರಬೇಕು. ಆದರೆ ಕೆಲವು ವರದಿಗಳ ಪ್ರಕಾರ, 83ರ ಹರಯ ವೃದ್ಧಿ ಮಿನಿ ಕೂಪರ್ ಕಾರಿನಲ್ಲಿ ಎಂದು ಪ್ರಯಾಣಿಸುತ್ತಿದ್ದ. ಲೈಸೆನ್ಸ್ ಇಲ್ಲದೆ ಇಷ್ಟು ದಿನ ಡ್ರೈವಿಂಗ್ ಮಾಡಿದ ವೃದ್ಧನ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲೈಸೆನ್ಸ್ ಇದ್ದವರು ಕಾರು ಚಲಾಯಿಸಲಿ, ಅಥವಾ ಲೈಸೆನ್ಸ್ ಪಡೆದುಕೊಳ್ಳಿ ಎಂದು ವೃದ್ಧನಿಗೆ ಪೊಲೀಸರು ಸೂಚಿಸಿದ್ದಾರೆ.

ಡಿಎಲ್ ಇಲ್ಲದೆ 70 ವರ್ಷ ಕಾರು ಚಾಲನೆ: 83ನೇ ವಯಸ್ಸಿಗೆ ಮೊದಲ ಬಾರಿ ಸಿಕ್ಕಿಬಿದ್ದ ಖರ್ತನಾಕ್ ಚಾಲಕ

ಲಂಡನ್‌ನಂತ ಹೈ ಸ್ಟಾಂಡರ್ಡ್ ಸಿಟಿಯಲ್ಲಿ ಹೆಜ್ಜೆ ಹೆಜ್ಜೆಗೂ ಕ್ಯಾಮರಗಳು ಇದೆ. ಅತ್ಯಾಧುನಿಕ ತಂತ್ರಜ್ಞಾನವಿದೆ. ಯಾವ ಕಾರಿಗೆ ದಾಖಲೆ ಇಲ್ಲ, ವಿಮೆ ಮಾಡಿಲ್ಲ ಅನ್ನೋದು ಕ್ಷಣಮಾತ್ರದಲ್ಲಿ ಪತ್ತೆಹಚ್ಚಲು ಸಾಧ್ಯವಿದೆ. ಬಹಳ ಮುಂದುವರೆದ ನಗರಗಳಲ್ಲಿ ಇಂತಹ ಅತ್ಯಾಧುನಿಕ ತಂತ್ರಜ್ಞಾನವಿದೆ. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 166, ಅಪಘಾತದಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಮೋಟಾರು ಅಪಘಾತ ಹಕ್ಕುಗಳ ನ್ಯಾಯಮಂಡಳಿಗೆ (MACT) ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದಾದ ನಿಬಂಧನೆಗಳ ಬಗ್ಗೆ ತಿಳಿಸುತ್ತದೆ. ಪರಿಹಾರ ಪಡೆಯಲು ಈ ಸೆಕ್ಷನ್ ಅಡಿಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಡಿಎಲ್ ಇಲ್ಲದೆ 70 ವರ್ಷ ಕಾರು ಚಾಲನೆ: 83ನೇ ವಯಸ್ಸಿಗೆ ಮೊದಲ ಬಾರಿ ಸಿಕ್ಕಿಬಿದ್ದ ಖರ್ತನಾಕ್ ಚಾಲಕ

ಭಾರತದಲ್ಲಿ ವಾಹನ ಚಾಲನೆ ವೇಳೆ ಚಾಲಕರು ಕಡ್ಡಾಯವಾಗಿ ಡಿಎಲ್ ಮತ್ತು ಆರ್‌ಸಿ ದಾಖಲೆಗಳನ್ನು ಹೊಂದಿರುವುದನ್ನು ಈಗಾಗಲೇ ಕಡ್ಡಾಯವಾಗಿದೆ. ಅಲ್ಲದೇ ಟ್ರಾಫಿಕ್ ಪೊಲೀಸ್ ತಪಾಸಣೆ ವೇಳೆ ಡಿಎಲ್ ಮತ್ತು ಆರ್‌ಸಿ ದಾಖಲೆಗಳ ಮೂಲಪ್ರತಿಗಳ ಬದಲಾಗಿ ಡಿಜಿಟಲ್ ಪ್ರತಿ ಪ್ರದರ್ಶನ ಮಾಡಬಹುದು, ವಾಹನಗಳ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲ್ ರೂಪಕ್ಕೆ ತರಲು ಈ ಹಿಂದೆ ಡಿಜಿ ಲಾಕರ್ ಮತ್ತು ಎಂ-ಪರಿವಾಹನ್ ನಂತಹ ಮೊಬೈಲ್ ಅಪ್ಲಿಕೇಷನ್‌ಗಳನ್ನು ಪರಿಚಯಿಸಿದ್ದ ಸಾರಿಗೆ ಇಲಾಖೆಯು ಡಿಎಲ್ ಮತ್ತು ಆರ್‌ಸಿ ದಾಖಲೆಗಳನ್ನು ಮಾತ್ರ ಮೂಲಪ್ರತಿಯಲ್ಲಿಯೇ ತಪಾಸಣೆ ವೇಳೆ ತೋರಿಸಬೇಕಾಗಿತ್ತು.

ಡಿಎಲ್ ಇಲ್ಲದೆ 70 ವರ್ಷ ಕಾರು ಚಾಲನೆ: 83ನೇ ವಯಸ್ಸಿಗೆ ಮೊದಲ ಬಾರಿ ಸಿಕ್ಕಿಬಿದ್ದ ಖರ್ತನಾಕ್ ಚಾಲಕ

ಕಳೆದ ವರ್ಷದ ನೋಟಿಫಿಕೇಶನ್‌ ಪ್ರಕಾರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಡಿಎಲ್ ಮತ್ತು ಆರ್‌ಸಿ ಪ್ರತಿಗಳನ್ನು ಸಹ ಡಿಜಿಟಲ್ ರೂಪದಲ್ಲೇ ತೋರಿಸಬಹುದು, ಸಾರಿಗೆ ನಿಯಮಗಳ ಉಲ್ಲಂಘನೆಗಳ ತಡೆಗಾಗಿ ಕೇಂದ್ರ ಸರ್ಕಾರವು 1989ರ ಮೋಟಾರ್ ವೆಹಿಕಲ್ ಕಾಯ್ದೆಯಲ್ಲಿ ನಿರಂತರ ಬದಲಾವಣೆ ತರುತ್ತಿದ್ದು, ಡಿಜಿ ಲಾಕರ್ ಅಥವಾ ಎಂ-ಪರಿವಾಹನ್ ಅಪ್ಲಿಕೇಷನ್ ಮೂಲಕ ಡಿಎಲ್ ಮತ್ತು ಆರ್‌ಸಿ ತೋರಿಸಬಹುದು.

Image Courtesy: Bulwell, Rise Park and Highbury Vale Police

Most Read Articles

Kannada
English summary
Driving without licence for 70 years arrested in uk find here all details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X