ಮುಂದಿನ ವರ್ಷ E230 ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ಎಂಜಿ ಮೋಟಾರ್ ಸಿದ್ಧತೆ!

ಜನಪ್ರಿಯ ವಾಹನ ತಯಾರಕ ಕಂಪನಿ ಎಂಜಿ ಮೋಟಾರ್, ಭಾರತದಲ್ಲಿ ಹೆಚ್ಚಾಗಿ ಮಾರಾಟಗೊಳ್ಳುತ್ತಿರುವ ಎಲೆಕ್ಟ್ರಿಕ್ ಕಾರುಗಳ ಮೇಲೆ ತನ್ನ ದೃಷ್ಟಿಯನ್ನು ಕೇಂದ್ರೀಕರಿಸುತ್ತಿದೆ. ಇದರ ಭಾಗವಾಗಿ, ಕಂಪನಿಯು ಮುಂದಿನ ವರ್ಷ ದೇಶದಲ್ಲಿ ಆಲ್-ಎಲೆಕ್ಟ್ರಿಕ್ ಎರಡು ಡೋರ್‌ಗಳ ಮಾದರಿಯನ್ನು ಪರಿಚಯಿಸಲು ಅಭಿವೃದ್ಧಿಪಡಿಸುತ್ತಿದೆ.

ಮುಂದಿನ ವರ್ಷ E230 ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ಎಂಜಿ ಮೋಟಾರ್ ಸಿದ್ಧತೆ!

E230 ಎಂದು ಕರೆಯಲಾಗುವ ಈ ಎಲೆಕ್ಟ್ರಿಕ್ ಕಾರು ಎಂಜಿ ಮೋಟಾರ್ಸ್‌ನ ಇವಿ ವಿಭಾಗದಲ್ಲಿ ಎರಡನೇ ಮಾದರಿಯಾಗಲಿದೆ. ಅಲ್ಲದೇ ಇದು ಜಾಗತಿಕ ಉತ್ಪನ್ನವಾಗಲಿದ್ದು, ಒಂದು ವೇಳೆ ಭಾರತದಲ್ಲಿ ಅಂದುಕೊಂಡಂತೆ ಬಿಡುಗಡೆಯಾದರೆ, ಭಾರತವು ಅದನ್ನು ಪಡೆದ ಮೊದಲ ಕೆಲವು ಮಾರುಕಟ್ಟೆಗಳಲ್ಲಿ ಒಂದಾಗಲಿದೆ. ಈ ಮಾದರಿಯು ಕಂಪನಿಯ ಎಲೆಕ್ಟ್ರಿಕ್ ಕಾರ್‌ಗಳ ಮಾರಾಟ ವ್ಯವಸ್ಥೆಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ.

ಮುಂದಿನ ವರ್ಷ E230 ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ಎಂಜಿ ಮೋಟಾರ್ ಸಿದ್ಧತೆ!

ಗಮನಾರ್ಹವಾಗಿ ಎಂಜಿ ತನ್ನ ಹೊಸ ಮಾದರಿಗಾಗಿ ಮಹತ್ವಾಕಾಂಕ್ಷೆಯ ವೆಚ್ಚದ ಗುರಿಗಳನ್ನು ಹೊಂದಿದೆ. ಪ್ರಸ್ತುತ ಭಾರತದಲ್ಲಿ ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ಕಾರುಗಳಿಗಿಂತ ಇದು ತುಂಬಾ ಅಗ್ಗವಾಗಿ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ ಎಂಜಿನ ಝಡ್ ಎಸ್‌ಇವಿ ಬೆಲೆ 21.99 ಲಕ್ಷ ರೂ.ಗಳಿಂದ 25.88 ಲಕ್ಷ ರೂ.ವರೆಗೆ ಇದೆ.

ಮುಂದಿನ ವರ್ಷ E230 ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ಎಂಜಿ ಮೋಟಾರ್ ಸಿದ್ಧತೆ!

ಝಡ್ ಎಸ್‌ಇವಿ ತನ್ನ ಪ್ರೀಮಿಯಂ ಬೆಲೆಯಿಂದಾಗಿ ಸಾಮಾನ್ಯ ಜನರಿಗೆ ಇದು ಕೈಗೆಟುಕದಂತಾಗಿದೆ. ಮುಂಬರುವ ಎರಡು ಬಾಗಿಲುಗಳ ಎಲೆಕ್ಟ್ರಿಕ್ ಕಾರು ಇದಕ್ಕಿಂತ ಭಿನ್ನವಾದ ನಿಲುವನ್ನು ತೆಗೆದುಕೊಳ್ಳಲಿದೆ. ಏಕೆಂದರೆ ಇ230 ಮಾದರಿಯು ಚೀನಾದ ಎಸ್ಎಐಸಿ-ಜಿಎಂ-ವುಲಿಂಗ್‌ನ ಗ್ಲೋಬಲ್ ಸ್ಮಾಲ್ ಎಲೆಕ್ಟ್ರಿಕ್ ವೆಹಿಕಲ್ (ಜಿಎಸ್ ಇವಿ) ಪ್ಲಾಟ್ ಫಾರ್ಮ್ ಅನ್ನು ಆಧರಿಸಿದೆ.

ಮುಂದಿನ ವರ್ಷ E230 ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ಎಂಜಿ ಮೋಟಾರ್ ಸಿದ್ಧತೆ!

ಚೀನಾದ ಕಾರು ತಯಾರಕ ವುಲಿಂಗ್ ಹಾಂಗ್ ಗುವಾಂಗ್ (Wuling HongGuang) 2020 ರಲ್ಲಿ ಎಲೆಕ್ಟ್ರಿಕ್ ಕಾರು ಉತ್ಪಾದಿಸಿ ಅದನ್ನು ಮಾರಾಟ ಮಾಡುವ ಮೂಲಕ ಎರಡನೇ ಅತಿ ಹೆಚ್ಚು ಮಾರಾಟವಾದ ಇವಿ ಎನಿಸಿಕೊಂಡಿತ್ತು. ಸುಮಾರು 119,255 ಯುನಿಟ್‌ಗಳಷ್ಟು ಮಾರಾಟವಾಗಿತ್ತು.

ಮುಂದಿನ ವರ್ಷ E230 ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ಎಂಜಿ ಮೋಟಾರ್ ಸಿದ್ಧತೆ!

ಎಂಜಿಯ ಅಗ್ಗದ ಬೆಲಯ ಇವಿ ಕೂಡ ಬಾವೊಜುನ್ ಇ100, ಇ200, ಇ300 ಮತ್ತು ಇ300 ಪ್ಲಸ್ ನಂತಹ ವಾಹನಗಳನ್ನು ಮತ್ತು ಚೀನಾದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ ವುಲಿಂಗ್ ಹಾಂಗ್ ಗುವಾಂಗ್ ಮಿನಿ ಇವಿಯಂತೆ ಇರಲಿದೆ ಎನ್ನಲಾಗುತ್ತಿದೆ. ವಿಶೇಷವೆಂದರೆ, ಈ ಎಲ್ಲಾ ಮಾದರಿಗಳು ಎರಡು ಬಾಗಿಲು ವಾಹನಗಳಾಗಿವೆ. ಮತ್ತೊಂದು ಪ್ರಮುಖ ವಿಷಯವೆಂದರೆ ಜಿಎಸ್‌ಇವಿ ಪ್ಲಾಟ್ ಫಾರ್ಮ್ ಆಧಾರಿತ ವಾಹನಗಳು ಕಾಂಪ್ಯಾಕ್ಟ್ ಬಾಡಿ ಶೈಲಿಯನ್ನು ಹೊಂದಿವೆ.

ಮುಂದಿನ ವರ್ಷ E230 ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ಎಂಜಿ ಮೋಟಾರ್ ಸಿದ್ಧತೆ!

ಹಾಂಗ್ ಗುವಾಂಗ್ ಮಿನಿ ಇವಿ ಕೇವಲ 2,917 ಮಿಮೀ ಉದ್ದ, 1,493 ಮಿಮೀ ಅಗಲ, 1,621 ಮಿಮೀ ಎತ್ತರ ಮತ್ತು 1,940 ಎಂಎಂ ವೀಲ್ ಬೇಸ್ ಇದೆ. ಈ ಅಳತೆಗಳು ಮಾರುತಿ ಸುಜುಕಿ ಆಲ್ಟೊಗಿಂತ ಚಿಕ್ಕದಾಗಿವೆ. E230 ತನ್ನ ಜಿಎಸ್ಇವಿ ಆಧಾರಗಳನ್ನು ಹಾಂಗ್ ಗುವಾಂಗ್‌ನೊಂದಿಗೆ ಹಂಚಿಕೊಂಡಿರುವುದರಿಂದ ಇದರ ವಿನ್ಯಾಸಕ್ಕೆ ಹೆಚ್ಚು ತೊಂದರೆ ಆಗುವುದಿಲ್ಲ ಎನ್ನಲಾಗಿದೆ.

ಮುಂದಿನ ವರ್ಷ E230 ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ಎಂಜಿ ಮೋಟಾರ್ ಸಿದ್ಧತೆ!

ಕಳೆದ ವರ್ಷ, ಎಂಜಿ ಮೋಟಾರ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಬಾ ಅವರು ಕಂಪನಿಯ ಮುಂದಿನ ಬಿಡುಗಡೆಯು "ಜಾಗತಿಕ ವೇದಿಕೆಯನ್ನು ಆಧರಿಸಿದ ಎಲೆಕ್ಟ್ರಿಕ್ ಕ್ರಾಸ್ ಓವರ್" ಎಂದು ಹೇಳಿದ್ದರು. 2023ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ಇವಿಯನ್ನು ಬಿಡುಗಡೆ ಮಾಡಲಾಗುವುದು. ಅದನ್ನು "ಭಾರತೀಯ ನಿಯಮಗಳು ಮತ್ತು ಗ್ರಾಹಕರ ಅಭಿರುಚಿಗಳಿಗೆ ಗ್ರಾಹಕೀಯಗೊಳಿಸಲಾಗುವುದು" ಎಂದು ಹೇಳಿದ್ದರು.

ಮುಂದಿನ ವರ್ಷ E230 ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ಎಂಜಿ ಮೋಟಾರ್ ಸಿದ್ಧತೆ!

ಎಬಿಎಸ್, ಇಬಿಡಿ, ಪಿನ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳನ್ನು ಹೊಂದಿಸಲು ಇ230 ಯೋಜಿಸಿದೆ. ಜಿಎಸ್‌ಇವಿ ಪ್ಲಾಟ್ ಫಾರ್ಮ್ ಸಂಪರ್ಕಿತ ಕಾರು ಕಾರ್ಯಕ್ಷಮತೆಯನ್ನು ಸಹ ಸಂಯೋಜಿಸಬಹುದು. ಭಾರತದಲ್ಲಿ ತಂತ್ರಜ್ಞಾನದ ಮೇಲೆ ಹೆಚ್ಚು ಗಮನ ಹರಿಸಿರುವುದರಿಂದ ಎಂಜಿ ಕೆಲವು ವೈಶಿಷ್ಟ್ಯಗಳೊಂದಿಗೆ ಮುಂಬರುವ ಎಲೆಕ್ಟ್ರಿಕ್ ಕಾರನ್ನು ರಚಿಸುವ ಸಾಧ್ಯತೆಯಿದೆ.

ಮುಂದಿನ ವರ್ಷ E230 ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ಎಂಜಿ ಮೋಟಾರ್ ಸಿದ್ಧತೆ!

ಎಂಜಿಯ ಇ230, 20ಕೆಡಬ್ಲ್ಯೂಎಚ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರಬಹುದು. ಹಾಗಿದ್ದಲ್ಲಿ, ಕಾರು ಸುಮಾರು 150 ಕಿ.ಮೀ ವ್ಯಾಪ್ತಿಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇ230ನಲ್ಲಿ ಹಾಂಗ್ ಗುವಾಂಗ್ ಗಿಂತ ಬಲವಾದ ಮೋಟರ್ ಸಹ ಇರಲಿದ್ದು, ಹಿಂಭಾಗದಲ್ಲಿ ಬಲವಾದ 27 ಬಿಎಚ್‌ಪಿ ಇ-ಮೋಟರ್ ಅನ್ನು ಜೋಡಿಸಲಾಗಿದೆ ಎಂಬುದು ಗಮನಾರ್ಹ.

ಮುಂದಿನ ವರ್ಷ E230 ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ಎಂಜಿ ಮೋಟಾರ್ ಸಿದ್ಧತೆ!

ಭಾರತದಲ್ಲಿ ಮುಂಬರುವ ಇವಿಯ ಬೆಲೆ 10 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳವರೆಗೆ ಇರುತ್ತದೆ ಎಂದು ಎಂಜಿ ಈಗಾಗಲೇ ಅಧಿಕೃತವಾಗಿ ಹೇಳಿದೆ. ಆದರೆ ಮೂಲಗಳ ಪ್ರಕಾರ ಈ ಇವಿ ಬೆಲೆಯನ್ನು 10 ಲಕ್ಷ ರೂ.ಗಿಂತ ಕಡಿಮೆಯು ಮಾಡಬಹುದು ಎನ್ನಲಾಗುತ್ತಿದೆ. ಇದು ಪ್ರಸ್ತುತ ಭಾರತದಲ್ಲಿ ಖಾಸಗಿ ಗ್ರಾಹಕರಿಗೆ ಮಾರಾಟವಾಗುವ ಇತರ ಎಲೆಕ್ಟ್ರಿಕ್ ಕಾರುಗಳಿಗಿಂತ ತುಂಬಾ ಅಗ್ಗದ ಬೆಲೆ ಎಂದೇ ಹೇಳಬಹುದು.

ಮುಂದಿನ ವರ್ಷ E230 ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ಎಂಜಿ ಮೋಟಾರ್ ಸಿದ್ಧತೆ!

ಈಗ ಟಾಟಾ ಟಿಗೋರ್ ಇವಿ ಭಾರತದಲ್ಲಿ ಲಭ್ಯವಿರುವ ಅಗ್ಗದ ಎಲೆಕ್ಟ್ರಿಕ್ ಕಾರು. ದೇಶದಲ್ಲಿ ಇದರ ಎಕ್ಸ್‌ ಶೋರೂಮ್ ಬೆಲೆ 11.99 ಲಕ್ಷ ರೂ.ಗಳಿಂದ 13.14 ಲಕ್ಷ ರೂ.ಗಳವರೆಗೆ ಇದೆ. ಕಾಂಪ್ಯಾಕ್ಟ್ ಸೆಡಾನ್ ಬ್ಯಾಟರಿ ಪ್ಯಾಕ್ 26ಕೆಡಬ್ಲ್ಯೂಎಚ್ ನೊಂದಿಗೆ ಬರುತ್ತದೆ. ಇದು ಎಆರ್‌ಎಐ ನಿಂದ ಪ್ರಮಾಣೀಕರಿಸಿದ್ದು, 306 ಕಿ.ಮೀ ಚಾಲನಾ ವ್ಯಾಪ್ತಿಯನ್ನು ಹೊಂದಿದೆ.

Most Read Articles

Kannada
English summary
E230 two door ev will be the second mg electric model for india
Story first published: Tuesday, March 8, 2022, 18:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X