ಜುಲೈ ಅವಧಿಯಲ್ಲಿನ ಎಲೆಕ್ಟ್ರಿಕ್ ವಾಹನಗಳ ಮಾರಾಟ ವರದಿ ಪ್ರಕಟ

ಎಲೆಕ್ಟ್ರಿಕ್ ವಾಹನ ಮಾರಾಟವು ಸಾಕಷ್ಟು ಸುಧಾರಣೆ ಕಂಡಿದ್ದು, ಕಳೆದ ಕೆಲ ತಿಂಗಳಿನಿಂದ ಇವಿ ವಾಹನ ಮಾರಾಟ ಬೆಳವಣಿಗೆ ಸಾಕಷ್ಟು ಏರಿಕೆ ಕಂಡಿದೆ. ಕಳೆದ ತಿಂಗಳು ಜುಲೈನಲ್ಲೂ ಕೂಡಾ ಹಲವು ಕಂಪನಿಗಳು ಇವಿ ವಾಹನ ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿದ್ದು, ಕಳೆದ ತಿಂಗಳು ಮೂರು ವಿಭಾಗಗಳಲ್ಲೂ ಇವಿ ಚಿಲ್ಲರೆ ವ್ಯಾಪಾರದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ.

ಜುಲೈ ಅವಧಿಯಲ್ಲಿನ ಎಲೆಕ್ಟ್ರಿಕ್ ವಾಹನಗಳ ಮಾರಾಟ ವರದಿ ಪ್ರಕಟ

ಹೆಚ್ಚುತ್ತಿರುವ ಇಂಧನ ದರಗಳು ಮತ್ತು ಮಾಲಿನ್ಯದ ಕಾರಣಕ್ಕೆ ಹೊಸ ವಾಹನ ಖರೀದಿದಾರರು ಪರಿಸರ ಸ್ನೇಹಿಯಾಗಿರುವ ಮತ್ತು ಕಡಿಮೆ ವೆಚ್ಚದಾಯಕವಾಗಿರುವ ಇವಿ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿದ್ದು, ಚಾರ್ಜಿಂಗ್ ನಿಲ್ದಾಣಗಳು ಹೆಚ್ಚುತ್ತಿರುವಂತೆ ಇವಿ ವಾಹನ ನೋಂದಣಿ ಸಂಖ್ಯೆ ಕೂಡಾ ಸಾಕಷ್ಟು ಸುಧಾರಣೆ ಕಂಡಿದೆ.

ಜುಲೈ ಅವಧಿಯಲ್ಲಿನ ಎಲೆಕ್ಟ್ರಿಕ್ ವಾಹನಗಳ ಮಾರಾಟ ವರದಿ ಪ್ರಕಟ

ಪ್ರಸ್ತುತ ಮಾರುಕಟ್ಟೆಯಲ್ಲಿ ಇಂಧನ ಆಧರಿತ ವಾಹನಗಳ ಮಾರಾಟಕ್ಕೆ ಹೋಲಿಕೆ ಮಾಡಿದರೆ ಇವಿ ವಾಹನಗಳ ಮಾರಾಟವು ಸಾಕಷ್ಟು ಕಡಿಮೆ ಪ್ರಮಾಣದಲ್ಲಿದ್ದರೂ ಇದರ ಪ್ರಮಾಣ ಮುಂಬರುವ ದಿನಗಳಲ್ಲಿ ವೇಗವಾಗಿ ಬದಲಾಗುವ ನೀರಿಕ್ಷೆಗಳಿದ್ದು, ಅದರಲ್ಲೂ ಇವಿ ದ್ವಿಚಕ್ರ ವಾಹನಗಳು ಮುಂಬರುವ ಕೆಲವೇ ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟಗೊಳ್ಳುತ್ತಿವೆ.

ಜುಲೈ ಅವಧಿಯಲ್ಲಿನ ಎಲೆಕ್ಟ್ರಿಕ್ ವಾಹನಗಳ ಮಾರಾಟ ವರದಿ ಪ್ರಕಟ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ಪ್ರಯಾಣಿಕ ಕಾರುಗಳು ಮತ್ತು ವಾಣಿಜ್ಯ ಇವಿ ವಾಹನ ಮೂರು ವಿಭಾಗಗಳಲ್ಲೂ ಚಿಲ್ಲರೆ ವ್ಯಾಪಾರದಲ್ಲಿ ಬೆಳವಣಿಗೆ ಕಂಡುಬಂದಿದ್ದು, ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ ಹೀರೋ ಎಲೆಕ್ಟ್ರಿಕ್, ಇವಿ ಕಾರುಗಳ ವಿಭಾಗದಲ್ಲಿ ಟಾಟಾ ಮೋಟಾರ್ಸ್ ಮತ್ತು ತ್ರಿಚಕ್ರ ವಾಹನಗಳ ವಿಭಾಗದಲ್ಲಿ ಒಲೆಕ್ಟ್ರಾ ಕಂಪನಿಗಳು ಮುಂಚೂಣಿಯಲ್ಲಿವೆ.

ಜುಲೈ ಅವಧಿಯಲ್ಲಿನ ಎಲೆಕ್ಟ್ರಿಕ್ ವಾಹನಗಳ ಮಾರಾಟ ವರದಿ ಪ್ರಕಟ

ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಹೀರೋ ಎಲೆಕ್ಟ್ರಿಕ್ 8953 ಯುನಿಟ್‌ ಮಾರಾಟದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ಓಕಿನಾವಾ ಮತ್ತು ಆಂಪಿಯರ್ ಕ್ರಮವಾಗಿ 8093 ಯುನಿಟ್ ಮತ್ತು 6313 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಟಿವಿಎಸ್ ಮತ್ತು ಓಲಾ ಕಂಪನಿಗಳು ಕ್ರಮವಾಗಿ 4258 ಯುನಿಟ್‌ಗಳು ಮತ್ತು 3859 ಯುನಿಟ್‌ಗಳನ್ನು ಮಾರಾಟ ಮಾಡಿ ಟಾಪ್ 5 ರಲ್ಲಿ ಸ್ಥಾನ ಪಡೆದಿವೆ.

ಜುಲೈ ಅವಧಿಯಲ್ಲಿನ ಎಲೆಕ್ಟ್ರಿಕ್ ವಾಹನಗಳ ಮಾರಾಟ ವರದಿ ಪ್ರಕಟ

ಇದರ ನಂತರ ಎಲೆಕ್ಟ್ರಿಕ್ ಬೈಕ್ ತಯಾರಕ ರಿವೋಲ್ಟ್ ಜುಲೈ ತಿಂಗಳಲ್ಲಿ 2317 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಇದರ ನಂತರ ಎಥರ್ ಎನರ್ಜಿ ಕಂಪನಿಯು 1286 ಯುನಿಟ್‌ಗಳನ್ನು ಚಿಲ್ಲರೆ ಮಾರಾಟ ಮಾಡಿದೆ. ಇದು ಜೂನ್ 2022ರಲ್ಲಿ 42,303 ಯುನಿಟ್‌ಗಳಿಗೆ ಹೋಲಿಸಿದರೆ ಹಿಂದಿನ ಜುಲೈನಲ್ಲಿ ಮಾರಾಟವಾಗಿದ್ದ 13,392 ಯುನಿಟ್‌‌ಗಳಿಗೆ ಹೋಲಿಕೆ ಮಾಡಿದರೆ ಶೇ.232 ಹೆಚ್ಚಳವಾಗಿದೆ.

ಜುಲೈ ಅವಧಿಯಲ್ಲಿನ ಎಲೆಕ್ಟ್ರಿಕ್ ವಾಹನಗಳ ಮಾರಾಟ ವರದಿ ಪ್ರಕಟ

ಹಾಗೆಯೇ ಪ್ರಯಾಣಿಕ ಕಾರುಗಳ ಮಾರಾಟದಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, ಇದು ಜುಲೈ ತಿಂಗಳಲ್ಲಿ 2,878 ಯುನಿಟ್‌ಗಳನ್ನು ಚಿಲ್ಲರೆ ಮಾರಾಟ ಮಾಡಿದೆ. ಕಳೆದ ವರ್ಷ 680 ಯುನಿಟ್‌ಗಳಿಗೆ ಹೋಲಿಸಿದರೆ ಶೇ.323 ಬೆಳವಣಿಗೆಯನ್ನು ದಾಖಲಿಸಿದೆ.

ಜುಲೈ ಅವಧಿಯಲ್ಲಿನ ಎಲೆಕ್ಟ್ರಿಕ್ ವಾಹನಗಳ ಮಾರಾಟ ವರದಿ ಪ್ರಕಟ

ಇದರ ನಂತರ ಎಂಜಿ ಮೋಟಾರ್ ಕಂಪನಿಯು ಜುಲೈ ತಿಂಗಳಲ್ಲಿ 263 ಯುನಿಟ್‌ಗಳನ್ನು ಚಿಲ್ಲರೆ ಮಾರಾಟ ಮಾಡಿದ್ದು, ಕಳೆದ ವರ್ಷ 284 ಯುನಿಟ್‌ಗಳಿಗೆ ಹೋಲಿಸಿದರೆ ಶೇ.7 ಕುಸಿತವನ್ನು ದಾಖಲಿಸಿದೆ.

ಜುಲೈ ಅವಧಿಯಲ್ಲಿನ ಎಲೆಕ್ಟ್ರಿಕ್ ವಾಹನಗಳ ಮಾರಾಟ ವರದಿ ಪ್ರಕಟ

ಜುಲೈ ತಿಂಗಳಲ್ಲಿ 58 ಯುನಿಟ್‌ಗಳನ್ನು ಮಾರಾಟ ಮಾಡಿರುವ ಹುಂಡೈ ಕಂಪನಿಯು ಕಳೆದ ವರ್ಷದ 22 ಯುನಿಟ್‌ಗಳಿಗೆ ಹೋಲಿಸಿದರೆ ಶೇ. 164 ಬೆಳವಣಿಗೆಯನ್ನು ದಾಖಲಿಸಿದೆ. ಈ ವಿಭಾಗದಲ್ಲಿ ಜುಲೈ ತಿಂಗಳಲ್ಲಿ 3295 ಯುನಿಟ್‌ಗಳನ್ನು ಚಿಲ್ಲರೆ ಮಾರಾಟ ಮಾಡಲಾಗಿದ್ದು, ಇದು ಕಳೆದ ವರ್ಷದ 1071 ಯುನಿಟ್‌ಗಳಿಗೆ ಹೋಲಿಸಿದರೆ ಶೇ. 208 ರಷ್ಟು ಬೆಳವಣಿಗೆಯಾಗಿದೆ,

ಜುಲೈ ಅವಧಿಯಲ್ಲಿನ ಎಲೆಕ್ಟ್ರಿಕ್ ವಾಹನಗಳ ಮಾರಾಟ ವರದಿ ಪ್ರಕಟ

ಇನ್ನು ಇವಿ ತ್ರಿಚಕ್ರ ವಿಭಾಗದಲ್ಲಿ ಜುಲೈ ತಿಂಗಳಲ್ಲಿ 65 ಯುನಿಟ್ ಮಾರಾಟ ಮಾಡಲಾಗಿದ್ದು, ಕಳೆದ ವರ್ಷದ 15 ಘಟಕಗಳಿಗೆ ಹೋಲಿಸಿದರೆ ಶೇ. 333 ಬೆಳವಣಿಗೆಯನ್ನು ದಾಖಲಿಸಿದೆ. ನಂತರ ಪಿಎಂಐ ಸ್ವಿಚ್ ಮೊಬಿಲಿಟಿ ಮುಂಚೂಣಿ ಸಾಧಿಸಿದ್ದು, ಈ ವಿಭಾಗದಲ್ಲಿ ಜುಲೈ ತಿಂಗಳಲ್ಲಿ 237 ಯುನಿಟ್‌ಗಳನ್ನು ಚಿಲ್ಲರೆ ಮಾರಾಟ ಮಾಡಲಾಗಿದೆ.

ಜುಲೈ ಅವಧಿಯಲ್ಲಿನ ಎಲೆಕ್ಟ್ರಿಕ್ ವಾಹನಗಳ ಮಾರಾಟ ವರದಿ ಪ್ರಕಟ

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೇಶಾದ್ಯಂತ ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿವೆ. ಇದರಲ್ಲಿ ಕೇಂದ್ರದ ಫೇಮ್ 2 ಸಬ್ಸಡಿ ಯೋಜನೆಯು ಪ್ರಮುಖವಾಗಿದ್ದು, ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಇವಿ ವಾಹನಗಳ ಉತ್ತೇಜನಕ್ಕೆ ವಿವಿಧ ಸಬ್ಸಡಿ ಯೋಜನೆಗಳನ್ನು ಅಳವಡಿಸಿಕೊಂಡಿವೆ.

ಜುಲೈ ಅವಧಿಯಲ್ಲಿನ ಎಲೆಕ್ಟ್ರಿಕ್ ವಾಹನಗಳ ಮಾರಾಟ ವರದಿ ಪ್ರಕಟ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರೋತ್ಸಾಹದಿಂದಾಗಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಸಬ್ಸಡಿ ಯೋಜನೆಗಳಿಂದಾಗಿ ಇವಿ ವಾಹನಗಳ ಬಳಕೆಗೆ ಸಾರ್ವಜನಿಕರು ಆದ್ಯತೆ ನೀಡುತ್ತಿದ್ದಾರೆ.

ಜುಲೈ ಅವಧಿಯಲ್ಲಿನ ಎಲೆಕ್ಟ್ರಿಕ್ ವಾಹನಗಳ ಮಾರಾಟ ವರದಿ ಪ್ರಕಟ

ಕರ್ನಾಟಕದಲ್ಲೂ ಸಹ ಇವಿ ವಾಹನಗಳ ಅಳವಡಿಕೆಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ಯೋಜನೆಗಳನ್ನು ಘೋಷಣೆ ಮಾಡಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಇವಿ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿ ರಸ್ತೆಗಿಳಿದಿವೆ.

ಜುಲೈ ಅವಧಿಯಲ್ಲಿನ ಎಲೆಕ್ಟ್ರಿಕ್ ವಾಹನಗಳ ಮಾರಾಟ ವರದಿ ಪ್ರಕಟ

ರಾಜ್ಯ ಸರ್ಕಾರದ ಸಬ್ಸಡಿ ಯೋಜನೆ ಜಾರಿ ನಂತರ ಇದುವರೆಗೆ ಕರ್ನಾಟಕದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಇವಿ ವಾಹನಗಳು ನೋಂದಣಿಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಹೆಚ್ಚಳ ಪರಿಣಾಮ ಇವಿ ವಾಹನಗಳ ಸಂಖ್ಯೆಯು ನಿಧಾನವಾಗಿ ಏರಿಕೆಯಾಗುತ್ತಿದೆ.

ಜುಲೈ ಅವಧಿಯಲ್ಲಿನ ಎಲೆಕ್ಟ್ರಿಕ್ ವಾಹನಗಳ ಮಾರಾಟ ವರದಿ ಪ್ರಕಟ

ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ಮಾತ್ರವಲ್ಲದೆ ಹೊಸದಾಗಿ ಇವಿ ವಾಹನ ಉತ್ಪಾದನೆಗೆ ಪೂರಕವಾದ ಸ್ಟಾರ್ಟ್‌ಅಪ್ ಕಂಪನಿಗಳಿಗೂ ರಾಜ್ಯ ಸರ್ಕಾರವು ಹಲವಾರು ಸಬ್ಸಡಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಹೊಸ ಯೋಜನೆಗಳಿಂದಾಗಿ ಕರ್ನಾಟಕದಲ್ಲಿ ಇದೀಗ 45ಕ್ಕೂ ಹೆಚ್ಚು ಇವಿ ವಾಹನಗಳಿಗೆ ಸಂಬಂಧಿಸಿದ ಸ್ಟಾರ್ಟ್ಅಪ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.

Most Read Articles

Kannada
English summary
Ev vehicle retail july 2022 details
Story first published: Friday, August 5, 2022, 20:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X