2023ರ ವೇಳೆಗೆ ಒಂದು ಸಾವಿರ ಫಾಸ್ಟ್ ಚಾರ್ಜಿಂಗ್ ಹಬ್‌ಗಳನ್ನು ತೆರೆಯಲಿದೆ ಇವೆರೆ

ಇವೆರೆ(EVRE) ಕಂಪನಿಯು ಫಾಸ್ಟ್ ಚಾರ್ಜಿಂಗ್ ಸೌಲಭ್ಯಕ್ಕಾಗಿ ಪ್ರಮುಖ ಇವಿ ಕಂಪನಿಗಳೊಂದಿಗೆ ಪಾಲುದಾರಿಕೆ ಪ್ರಕಟಿಸುತ್ತಿದ್ದು, ಕಂಪನಿಯ ಹೊಸ ಪಾಲುದಾರಿಕೆ ಯೋಜನೆ ಅಡಿ ಮುಂದಿನ 2023ರ ಅಂತ್ಯಕ್ಕೆ ಒಟ್ಟು 1 ಸಾವಿರ ಫಾಸ್ಟ್ ಚಾರ್ಜಿಂಗ್ ಹಬ್‌ಗಳನ್ನು ತೆರೆಯುವ ಯೋಜನೆ ಹೊಂದಿದೆ.

2023ರ ವೇಳೆಗೆ ಒಂದು ಸಾವಿರ ಫಾಸ್ಟ್ ಚಾರ್ಜಿಂಗ್ ಹಬ್‌ಗಳನ್ನು ತೆರೆಯಲಿದೆ ಇವೆರೆ

ಇವಿ ವಾಹನಗಳಿಗೆ ಪೂರಕವಾಗಿ ಹಲವಾರು ಸ್ಟಾರ್ಟ್ಅಪ್ ಕಂಪನಿಗಳು ಇವಿ ಚಾರ್ಜಿಂಗ್ ಸೌಲಭ್ಯವನ್ನು ಹೆಚ್ಚಿಸುವತ್ತ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ನಮ್ಮ ಬೆಂಗಳೂರು ಮೂಲದ ಇವೆರೆ ಕಂಪನಿಯು ಕೂಡಾ ದೇಶಾದ್ಯಂತ ಪ್ರಮುಖ ನೂರು ನಗರಗಳಲ್ಲಿ ವಿವಿಧ ಕಂಪನಿಗಳ ಸಹಯೋಗದೊಂದಿಗೆ ಬೃಹತ್ ಇವಿ ಚಾರ್ಜಿಂಗ್ ನಿಲ್ದಾಣಗಳ ಜಾಲವನ್ನು ತೆರೆಯುತ್ತಿದೆ.

2023ರ ವೇಳೆಗೆ ಒಂದು ಸಾವಿರ ಫಾಸ್ಟ್ ಚಾರ್ಜಿಂಗ್ ಹಬ್‌ಗಳನ್ನು ತೆರೆಯಲಿದೆ ಇವೆರೆ

ಭಾರತದಲ್ಲಿ ಹೆಚ್ಚುತ್ತಿರುವ ಇವಿ ವಾಹನಗಳಿಗೆ ಪೂರಕವಾಗಿ ವಿವಿಧ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಇವಿ ವಾಹನಗಳ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣ ಪ್ರಕ್ರಿಯೆಯನ್ನು ಹೆಚ್ಚಿಸಿದ್ದು, ಚಾರ್ಜಿಂಗ್ ಕೇಂದ್ರಗಳ ಹೆಚ್ಚಳಕ್ಕೆ ಪ್ರಮುಖ ಕಂಪನಿಗಳು ವಿಶೇಷ ಆಸಕ್ತಿ ವಹಿಸಿವೆ.

2023ರ ವೇಳೆಗೆ ಒಂದು ಸಾವಿರ ಫಾಸ್ಟ್ ಚಾರ್ಜಿಂಗ್ ಹಬ್‌ಗಳನ್ನು ತೆರೆಯಲಿದೆ ಇವೆರೆ

ಇವೆರೆ ಕಂಪನಿಯು ಈಗಾಗಲೇ ಇವಿ ವಾಹನಗಳಿಗಾಗಿ ಸಣ್ಣ ಪ್ರಮಾಣದ ಚಾರ್ಜಿಂಗ್ ನಿಲ್ದಾಣಗಳ ಸೌಲಭ್ಯವನ್ನು ಒದಗಿಸುತ್ತಿದ್ದು, ಕಂಪನಿಯು ಇದೀಗ ಸಾಮಾನ್ಯ ಇವಿ ಚಾರ್ಜಿಂಗ್ ನಿಲ್ದಾಣಗಳ ಜೊತೆಗೆ ಫಾಸ್ಟ್ ಚಾರ್ಜಿಂಗ್ ಹಬ್‌ಗಳನ್ನು ನಿರ್ಮಾಣ ಮಾಡುತ್ತಿದೆ.

2023ರ ವೇಳೆಗೆ ಒಂದು ಸಾವಿರ ಫಾಸ್ಟ್ ಚಾರ್ಜಿಂಗ್ ಹಬ್‌ಗಳನ್ನು ತೆರೆಯಲಿದೆ ಇವೆರೆ

ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಇವೆರೆ ಕಂಪನಿಯು ಈಗಾಗಲೇ 52 ಚಾರ್ಜಿಂಗ್ ನಿಲ್ದಾಣಗಳೊಂದಿಗೆ ಗ್ರಾಹಕರ ಸೇವೆಗಳನ್ನು ಒದಗಿಸುತ್ತಿದ್ದು, ಕಾರ್ಯನಿರ್ವಹಣೆಯಲ್ಲಿರುವ ಎಲ್ಲಾ ಚಾರ್ಜಿಂಗ್ ನಿಲ್ದಾಣಗಳಲ್ಲೂ ಇದೀಗ ಎಸಿ ಚಾರ್ಜರ್ (3.3 kW ಇಂಡಸ್ಟ್ರಿಯಲ್/ಡೊಮೆಸ್ಟಿಕ್ 3-ಪಿನ್ ಸಾಕೆಟ್ ಮತ್ತು 7 kW ಟೈಪ್-II) ಮತ್ತು ಇವಿ ಫ್ಲೀಟ್ ಮತ್ತು ಚಿಲ್ಲರೆ ಗ್ರಾಹಕರನ್ನು ಒಳಗೊಂಡಂತೆ ಅದರ ಎಲ್ಲಾ ಗ್ರಾಹಕರಿಗೆ ವೇಗದ ಡಿಸಿ ಚಾರ್ಜರ್ (GB/T ಮತ್ತು CCS) ನೊಂದಿಗೆ ಚಾರ್ಜಿಂಗ್ ಹಬ್ ಆಗಿ ಪರಿವರ್ತಿಸಿದೆ.

2023ರ ವೇಳೆಗೆ ಒಂದು ಸಾವಿರ ಫಾಸ್ಟ್ ಚಾರ್ಜಿಂಗ್ ಹಬ್‌ಗಳನ್ನು ತೆರೆಯಲಿದೆ ಇವೆರೆ

ಚಾರ್ಜಿಂಗ್ ಹಬ್‌ಗಳಲ್ಲಿ ಏಕಕಾಲಕ್ಕೆ 80 ವಾಹನಗಳನ್ನು ಚಾರ್ಜ್ ಮಾಡಬಹುದಾಗಿದ್ದು, ಚಾರ್ಜಿಂಗ್ ಹಬ್‌ಗಳಲ್ಲಿ ವಿವಿಧ ವಾಹನ ಮಾದರಿಗಳಿಗೆ ಅನುಗುಣವಾಗಿ ಸಾಮಾನ್ಯ ಇಲ್ಲವೇ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

2023ರ ವೇಳೆಗೆ ಒಂದು ಸಾವಿರ ಫಾಸ್ಟ್ ಚಾರ್ಜಿಂಗ್ ಹಬ್‌ಗಳನ್ನು ತೆರೆಯಲಿದೆ ಇವೆರೆ

ಇವೆರೆ ಹೊಸ ಚಾರ್ಜಿಂಗ್ ಹಬ್‌ಗಳಲ್ಲಿ ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ OTP ಅಥವಾ QR ಕೋಡ್ ಸ್ಕ್ಯಾನಿಂಗ್ ಮೂಲಕ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ಟಚ್-ಫ್ರೀ ಸೇವೆಗಳನ್ನು ಒದಗಿಸುವ ವಿಶ್ವದ ಏಕೈಕ ಇವಿ ಚಾರ್ಜಿಂಗ್ ಕಂಪನಿಯಾಗಿದ್ದು, ಪ್ರಮುಖ ಇವಿ ವಾಹನ ಫ್ಲಿಟ್ ಆಪರೇಟ್ ಸಂಸ್ಥೆಗಳು ತಮ್ಮ ಇವಿ ವಾಹನಗಳಿಗೆ ಪ್ರತ್ಯೇಕ ಚಾರ್ಜಿಂಗ್ ಸೌಲಭ್ಯಕ್ಕೂ ಇವೆರೆ ಜೊತೆ ಪಾಲುದಾರಿಕೆ ಪಡೆದುಕೊಂಡಿದೆ.

2023ರ ವೇಳೆಗೆ ಒಂದು ಸಾವಿರ ಫಾಸ್ಟ್ ಚಾರ್ಜಿಂಗ್ ಹಬ್‌ಗಳನ್ನು ತೆರೆಯಲಿದೆ ಇವೆರೆ

ಹೊಸ ಇವೆರೆ ಇವಿ ಚಾರ್ಜಿಂಗ್ ನಿಲ್ದಾಣಗಳನ್ನು ಇಂಟೆಲಿಜೆಂಟ್ ಫ್ರೇಮ್‌ವರ್ಕ್ ಅಡಿ ಅಭಿವೃದ್ದಿಗೊಳಿಸಲಾಗಿದ್ದು, ಇವು ಪ್ರತಿ ಇವಿ ವಾಹನ ಬಳಕೆದಾರರಿಗೆ ತಡೆರಹಿತ ಚಾರ್ಜಿಂಗ್ ಅನುಭವವನ್ನು ಖಚಿತಪಡಿಸಲಿವೆ.

2023ರ ವೇಳೆಗೆ ಒಂದು ಸಾವಿರ ಫಾಸ್ಟ್ ಚಾರ್ಜಿಂಗ್ ಹಬ್‌ಗಳನ್ನು ತೆರೆಯಲಿದೆ ಇವೆರೆ

ಇವೆರೆ ಅಪ್ಲಿಕೇಶನ್ ಮೂಲಕ ಎಲ್ಲಾ ಸೇವೆಗಳಿಗೂ ಏಕ-ವಿಂಡೋ ಪ್ರವೇಶವನ್ನು ಒದಗಿಸಲಾಗಿದ್ದು, ಇವೆರೆ ಚಾರ್ಜಿಂಗ್ ನಿಲ್ದಾಣಗಳ ಮಾಹಿತಿಯನ್ನು ಕ್ಲೌಡ್-ಆಧಾರಿತ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುತ್ತಿರುವುದರಿಂದ ಎಲೆಕ್ಟ್ರಿಕ್ ವಾಹನ ಬಳಕೆದಾರರ ಎಲ್ಲಾ ಅಗತ್ಯಗಳಿಗೆ ಒಂದೇ ಸೂರಿನಡಿಯಲ್ಲಿ ಪರಿಹಾರವನ್ನು ಒದಗಿಸಲಿದೆ.

2023ರ ವೇಳೆಗೆ ಒಂದು ಸಾವಿರ ಫಾಸ್ಟ್ ಚಾರ್ಜಿಂಗ್ ಹಬ್‌ಗಳನ್ನು ತೆರೆಯಲಿದೆ ಇವೆರೆ

ಇದು ರಿಯಲ್ ಟೈಮ್ ಮೂಲಕ ಸ್ಮಾರ್ಟ್ ಕೀ ನಿರ್ವಹಣೆ ಮತ್ತು ವಾಹನ ಸುರಕ್ಷತೆಯನ್ನು ಖಚಿತಪಡಿಸಲು ಬಳಕೆದಾರರಿಗೆ ವೆಬ್ ಡ್ಯಾಶ್‌ಬೋರ್ಡ್ ಮೂಲಕ ಟೆಲಿಮ್ಯಾಟಿಕ್ಸ್‌ನಂತಹ ವೈಶಿಷ್ಟ್ಯಗಳನ್ನು ನೀಡುತ್ತದೆ.

2023ರ ವೇಳೆಗೆ ಒಂದು ಸಾವಿರ ಫಾಸ್ಟ್ ಚಾರ್ಜಿಂಗ್ ಹಬ್‌ಗಳನ್ನು ತೆರೆಯಲಿದೆ ಇವೆರೆ

ಜೊತೆಗೆ ಚಾರ್ಜಿಂಗ್ ಸಮಯದಲ್ಲಿ ಬಳಕೆದಾರರಿಗೆ ಉಂಟಾಗುವ ಯಾವುದೇ ಹಾನಿಯನ್ನು ಸರಿದೂಗಿಸಲು ಕಂಪನಿಯು ವಿಮಾ ರಕ್ಷಣೆಯನ್ನು ಸಹ ಒದಗಿಸಲಿದ್ದು, ಸ್ಮಾರ್ಟ್ ಪಾರ್ಕಿಂಗ್ ಮತ್ತು ಚಾರ್ಜಿಂಗ್ ಪಾಯಿಂಟ್‌ಗಳೊಂದಿಗೆ ಈಟ್ ಅಂಡ್ ಚಾರ್ಜ್‌ನಂತಹ ವೈಶಿಷ್ಟ್ಯತೆಗಳನ್ನು ಸಹ ಒದಗಿಸುತ್ತದೆ.

2023ರ ವೇಳೆಗೆ ಒಂದು ಸಾವಿರ ಫಾಸ್ಟ್ ಚಾರ್ಜಿಂಗ್ ಹಬ್‌ಗಳನ್ನು ತೆರೆಯಲಿದೆ ಇವೆರೆ

ಇನ್ನು ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವ ಇವಿ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹವು ಹೊಸ ಬದಲಾವಣೆಗೆ ಕಾರಣವಾಗಿದೆ.

2023ರ ವೇಳೆಗೆ ಒಂದು ಸಾವಿರ ಫಾಸ್ಟ್ ಚಾರ್ಜಿಂಗ್ ಹಬ್‌ಗಳನ್ನು ತೆರೆಯಲಿದೆ ಇವೆರೆ

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.

2023ರ ವೇಳೆಗೆ ಒಂದು ಸಾವಿರ ಫಾಸ್ಟ್ ಚಾರ್ಜಿಂಗ್ ಹಬ್‌ಗಳನ್ನು ತೆರೆಯಲಿದೆ ಇವೆರೆ

ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ.

2023ರ ವೇಳೆಗೆ ಒಂದು ಸಾವಿರ ಫಾಸ್ಟ್ ಚಾರ್ಜಿಂಗ್ ಹಬ್‌ಗಳನ್ನು ತೆರೆಯಲಿದೆ ಇವೆರೆ

ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರದ ಫೇಮ್ 2 ಹೊರತುಪಡಿಸಿ ರಾಜ್ಯಗಳ ಮಟ್ಟದಲ್ಲೂ ವಿವಿಧ ರಾಜ್ಯ ಸರ್ಕಾರಗಳು ಸಹ ಹೆಚ್ಚಿನ ಮಟ್ಟದ ಪ್ರೊತ್ಸಾಹ ನೀಡುತ್ತಿದ್ದು ಕೇಂದ್ರ ಫೇಮ್ 2 ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಕೂಡಾ ಹೊಸ ಇವಿ ನೀತಿ ಘೋಷಣೆ ಮಾಡುತ್ತಿವೆ.

Most Read Articles

Kannada
English summary
Evre to setup 1000 ev charging hub in next two years
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X