819 ಬಿಹೆಚ್‌ ಪವರ್‌ನೊಂದಿಗೆ ಅನಾವರಣಗೊಂಡ ಡ್ರಾಪ್-ಟಾಪ್ ಫೆರಾರಿ 296 ಜಿಟಿಎಸ್

ಇಟಲಿ ಮೂಲದ ಸೂಪರ್ ಕಾರ್ ಉತ್ಪಾದನಾ ಸಂಸ್ಥೆಯಾದ ಫೆರಾರಿ ತನ್ನ 296 ಜಿಟಿಎಸ್ ಕನ್ವರ್ಟಿಬಲ್ ಸೂಪರ್ ಕಾರ್ ಅನ್ನು ಬಹಿರಂಗಪಡಿಸಿದೆ. ಹೊಸ ಫೆರಾರಿ 296 ಜಿಟಿಎಸ್ ಇಟಾಲಿಯನ್ ಮಾರ್ಕ್ವೆಯ 296 ಜಿಟಿಬಿ ವಿ6-ಹೈಬ್ರಿಡ್ ಎಂಜಿನ್ ಹೊಂದಿರುವ ಸೂಪಕಾರ್ ಡ್ರಾಪ್-ಟಾಪ್ ಆವೃತ್ತಿಯಾಗಿದೆ.

819 ಬಿಹೆಚ್‌ ಪವರ್‌ನೊಂದಿಗೆ ಅನಾವರಣಗೊಂಡ ಡ್ರಾಪ್-ಟಾಪ್ ಫೆರಾರಿ 296 ಜಿಟಿಎಸ್

ಫೆರಾರಿ 296 GTSನ ವಿಶೇಷತೆ

ಫೆರಾರಿ 296 GTS ಅದೇ 120-ಡಿಗ್ರಿ 3.0-ಲೀಟರ್ V6 ಎಂಜಿನ್‌ನಿಂದ ಚಾಲಿತವಾಗಿದ್ದು, ಇದು 8,000rpm ನಲ್ಲಿ 654bh ಪವರ್ ಅನ್ನು ಉತ್ಪಾದಿಸುತ್ತದೆ, ಇದು ಹೈಬ್ರಿಡ್ ಪವರ್‌ಟ್ರೇನ್ 819bhp ಮತ್ತು 740Nm ಗರಿಷ್ಠ ಟಾರ್ಕ್‌ನ ಒಟ್ಟು ಔಟ್‌ಪುಟ್ ಅನ್ನು ತರುವ 164bhp ಎಲೆಕ್ಟ್ರಿಕ್ ಮೋಟರ್‌ನಿಂದ ಕಾರ್ಯಾಚರಿಸುತ್ತದೆ.

819 ಬಿಹೆಚ್‌ ಪವರ್‌ನೊಂದಿಗೆ ಅನಾವರಣಗೊಂಡ ಡ್ರಾಪ್-ಟಾಪ್ ಫೆರಾರಿ 296 ಜಿಟಿಎಸ್

ಹೈಬ್ರಿಡ್ ಫೆರಾರಿ 296 GTS ತನ್ನ ಪವರ್‌ ಅನ್ನು 8-ಸ್ಪೀಡ್ ಡ್ಯುಯಲ್-ಕ್ಲಚ್ ಸ್ವಯಂಚಾಲಿತ ಗೇರ್‌ಬಾಕ್ಸ್ ಮೂಲಕ ಹಿಂದಿನ ಚಕ್ರಗಳಿಗೆ ರವಾನಿಸುತ್ತದೆ. ಫೆರಾರಿ 296 GTS ಕೇವಲ 2.9 ಸೆಕೆಂಡುಗಳಲ್ಲಿ 0-100km/h ವೇಗವನ್ನು ತಲುಪಲಿದ್ದು, 0-200km/h ವೇಗವನ್ನು ತಲುಪಲು ಕೇವಲ 7.6 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಇದರ ಗರಿಷ್ಠ ವೇಗವು 330km/h ಗೂ ಹೆಚ್ಚಿದೆ. ಫೆರಾರಿ 296 GTS ಕೇವಲ 107 ಮೀಟರ್‌ಗಳಲ್ಲಿ ತನ್ನ 200km/h ವೇಗವನ್ನು ಸಂಪೂರ್ಣವಾಗಿ ನಿಯಂತ್ರಿಸಬಲ್ಲದು.

819 ಬಿಹೆಚ್‌ ಪವರ್‌ನೊಂದಿಗೆ ಅನಾವರಣಗೊಂಡ ಡ್ರಾಪ್-ಟಾಪ್ ಫೆರಾರಿ 296 ಜಿಟಿಎಸ್

ಫೆರಾರಿ 296 GTS 4,565mm ಉದ್ದ, 1,958mm ಅಗಲ ಮತ್ತು 1,191mm ಎತ್ತರವಿದೆ. ಡ್ರಾಪ್-ಟಾಪ್ 296 GTS ನ ವ್ಹೀಲ್‌ಬೇಸ್ 2,600mm ಉದ್ದವಿದ್ದು, ಕನ್ವರ್ಟಿಬಲ್ ಫೆರಾರಿ 296 ಜಿಟಿಎಸ್ ಸೂಪರ್‌ಕಾರ್‌ನ ಮುಂಭಾಗದ ಟ್ರ್ಯಾಕ್ 1,665 ಎಂಎಂ ಅಗಲವನ್ನು ಹೊಂದಿದ್ದರೆ ಹಿಂದಿನ ಟ್ರ್ಯಾಕ್ 1,632 ಎಂಎಂ ಅಗಲವಿದೆ.

819 ಬಿಹೆಚ್‌ ಪವರ್‌ನೊಂದಿಗೆ ಅನಾವರಣಗೊಂಡ ಡ್ರಾಪ್-ಟಾಪ್ ಫೆರಾರಿ 296 ಜಿಟಿಎಸ್

ಫೆರಾರಿ 296 GTS 40.5% (ಮುಂಭಾಗ)/ 59.5% (ಹಿಂಭಾಗ) ತೂಕದದೊಂದಿಗೆ 1,540 ಕಿಲೋಗ್ರಾಂಗಳಷ್ಟು (ಶುಷ್ಕ) ಭಾರವನ್ನು ಹೊಂದಿದೆ. ಇದರ ಇಂಧನ ಟ್ಯಾಂಕ್ 65-ಲೀಟರ್‌ಗೂ ಹೆಚ್ಚಿನ ಆಕ್ಟೇನ್ ಪೆಟ್ರೋಲ್ ಅನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

819 ಬಿಹೆಚ್‌ ಪವರ್‌ನೊಂದಿಗೆ ಅನಾವರಣಗೊಂಡ ಡ್ರಾಪ್-ಟಾಪ್ ಫೆರಾರಿ 296 ಜಿಟಿಎಸ್

ಫೆರಾರಿ 296 GTS 20-ಇಂಚಿನ ಚಕ್ರಗಳ ಮೇಲೆ 245/35 ZR20 (ಮುಂಭಾಗ) ಮತ್ತು 305/35 ZR20 ಟೈರ್‌ಗಳನ್ನು ಹೊಂದಿದೆ. 296 GTS ಮುಂಭಾಗದಲ್ಲಿ 398mm ಡಿಸ್ಕ್ ಮತ್ತು ಹಿಂಭಾಗದಲ್ಲಿ 360mm ಘಟಕಗಳನ್ನು ಹೊಂದಿದ್ದು, ನೋಡಲು ಭಾರಿ ಲುಕ್‌ನೊಂದಿಗೆ ಸ್ಪೋರ್ಟಿಯಾಗಿ ಕಾಣುತ್ತದೆ.

819 ಬಿಹೆಚ್‌ ಪವರ್‌ನೊಂದಿಗೆ ಅನಾವರಣಗೊಂಡ ಡ್ರಾಪ್-ಟಾಪ್ ಫೆರಾರಿ 296 ಜಿಟಿಎಸ್

ಅಸೆಟ್ಟೊ ಫಿಯೊರಾನೊ ಪ್ಯಾಕೇಜ್ 296 GTS ನ ಏರೋ ಕಾರ್ಯಕ್ಷಮತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಅಲ್ಲದೆ ಈ ಸೂಪರ್‌ಕಾರ್‌ನ ಭಾರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಈಗಾಗಲೇ ಅದರ ಕೂಪ್ ಮಾದರಿಗಿಂತ 70 ಕೆ.ಜಿಗೂ ಹೆಚ್ಚು ಭಾರವಾಗಿದೆ.

819 ಬಿಹೆಚ್‌ ಪವರ್‌ನೊಂದಿಗೆ ಅನಾವರಣಗೊಂಡ ಡ್ರಾಪ್-ಟಾಪ್ ಫೆರಾರಿ 296 ಜಿಟಿಎಸ್

ಅಸೆಟೊ ಫಿಯೊರಾನೊ ಪ್ಯಾಕೇಜ್ ಟ್ರ್ಯಾಕ್ ಬಳಕೆಗೆ ಹೊಂದುವಂತೆ ಹೊಂದಾಣಿಕೆ ಮಾಡಬಹುದಾದ ಮಲ್ಟಿಮ್ಯಾಟಿಕ್ ಶಾಕ್ ಅಬ್ಸಾರ್ಬರ್‌ಗಳು, ಮುಂಭಾಗದ ಬಂಪರ್‌ನಲ್ಲಿ ಹೆಚ್ಚಿನ ಡೌನ್‌ಫೋರ್ಸ್ ಕಾರ್ಬನ್-ಫೈಬರ್ ಅಪೆಂಡಿಸಿಸ್‌ಗಳು ಮತ್ತು ಕ್ಯಾಬಿನ್ ಹಾಗೂ ಹೊರಾಂಗಣ ಎರಡಕ್ಕೂ ಕಾರ್ಬನ್-ಫೈಬರ್‌ನಂತಹ ಹಗುರವಾದ ವಸ್ತುಗಳ ಬಳಕೆಯನ್ನು ಒಳಗೊಂಡಿದೆ. ಅಸೆಟೊ ಫಿಯೊರಾನೊ ಪ್ಯಾಕ್‌ನೊಂದಿಗೆ, 296 GTS 250km/h ವೇಗದಲ್ಲಿ 360 ಕೆ.ಜಿಗಳಷ್ಟು ಡೌನ್‌ಫೋರ್ಸ್ ಅನ್ನು ಉತ್ಪಾದಿಸುತ್ತದೆ.

819 ಬಿಹೆಚ್‌ ಪವರ್‌ನೊಂದಿಗೆ ಅನಾವರಣಗೊಂಡ ಡ್ರಾಪ್-ಟಾಪ್ ಫೆರಾರಿ 296 ಜಿಟಿಎಸ್

ಫೆರಾರಿ 296 GTS ವಿನ್ಯಾಸ

ಫೆರಾರಿ 296 ಜಿಟಿಎಸ್ ನೋಟದಲ್ಲಿ 296 ಜಿಟಿಬಿಗೆ ಹೋಲಿಸಿದರೆ ಬಹುತೇಕ ಒಂದೇ ವಿನ್ಯಾಸವನ್ನು ಒಳಗೊಂಡಿದೆ. ಆದರೆ ಫೋಲ್ಡಿಂಗ್ ಹಾರ್ಡ್‌ಟಾಪ್ ರೂಫ್ ಅನ್ನು ಸೇರಿಸಿದ್ದರೂ ಸೀಟ್‌ಗಳ ಹಿಂದೆ ಇಂಜಿನ್ ಕಂಪಾರ್ಟ್‌ಮೆಂಟ್ ಪ್ರದೇಶದಲ್ಲಿ ಹೊಸ ವಿಭಾಗಕ್ಕೆ ಮಡಚಿಕೊಳ್ಳುತ್ತದೆ. ಛಾವಣಿಯು 45km/h ವೇಗದಲ್ಲಿ ಕೇವಲ 14 ಸೆಕೆಂಡುಗಳಲ್ಲಿ ತನ್ನ ಹೊಸ ಡಿಸೈನ್‌ನಿಂದ ಒಳಗೆ ಮತ್ತು ಹೊರಗೆ ಮಡಚಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.

819 ಬಿಹೆಚ್‌ ಪವರ್‌ನೊಂದಿಗೆ ಅನಾವರಣಗೊಂಡ ಡ್ರಾಪ್-ಟಾಪ್ ಫೆರಾರಿ 296 ಜಿಟಿಎಸ್

ಫೋಲ್ಟ್‌ ರೂಫ್ ಸೇರ್ಪಡೆಗೆ ಕಾರಿನ ಹಿಂಭಾಗದ ವಿನ್ಯಾಸಕ್ಕೆ ಕೆಲವು ಸೂಕ್ಷ್ಮ ಬದಲಾವಣೆಗಳ ಅಗತ್ಯವಿದ್ದ ಕಾರಣ ಪುನರ್ನಿರ್ಮಾಣದ ಭಾಗವಾಗಿ ಫೋಲ್ಡ್ ರೂಫ್ ಮತ್ತು ಏರೋ-ಬ್ರಿಡ್ಜ್ ವಿಭಾಗದ ನಡುವೆ ಒಂದಷ್ಟು ಅಂತರವನ್ನು ನೀಡಲಾಗಿದೆ.

819 ಬಿಹೆಚ್‌ ಪವರ್‌ನೊಂದಿಗೆ ಅನಾವರಣಗೊಂಡ ಡ್ರಾಪ್-ಟಾಪ್ ಫೆರಾರಿ 296 ಜಿಟಿಎಸ್

ಕಾರಿನೊಳಗೆ ಹತ್ತಿ ಫೆರಾರಿ 296 GTS ರೂಫ್‌ ಕೆಳಗಿರುವಾಗ ಬಫೆಟಿಂಗ್ ಅನ್ನು ಕಡಿಮೆ ಮಾಡಲು ಕೆಲವು ಫ್ಲಾಪ್‌ಗಳನ್ನು ಸೇರಿಸುವುದನ್ನು ಹೊರತುಪಡಿಸಿ ಅದರ ಹಾರ್ಡ್‌ಟಾಪ್ ಅನ್ನು ಹಿಂದಿನ ಮಾದರಿಗೆ ಹೋಲಿಸಿದರೆ ಹಲವು ಫೀಚರ್ಸ್‌ ಅನ್ನು ಹಾಗೆ ಉಳಿಸಲಾಗಿದೆ. ಅಂದರೆ 296 ಜಿಟಿಎಸ್ ಸ್ಟೀರಿಂಗ್ ವೀಲ್ ಹಿಂದೆ ದೊಡ್ಡ ಡಿಸ್ಪ್ಲೇ ಜೊತೆಗೆ ಪ್ರಯಾಣಿಕರಿಗೆ ಸೆಕೆಂಡರಿ ಡಿಸ್ಪ್ಲೇ ನೀಡಲಾಗಿದೆ.

819 ಬಿಹೆಚ್‌ ಪವರ್‌ನೊಂದಿಗೆ ಅನಾವರಣಗೊಂಡ ಡ್ರಾಪ್-ಟಾಪ್ ಫೆರಾರಿ 296 ಜಿಟಿಎಸ್

ಹೊಸ ಫೆರಾರಿ 296 ಜಿಟಿಬಿ ಕಾರು ಜಿಟಿಬಿಯ ಬೆಲೆಗಳು ಮತ್ತು ಲಭ್ಯತೆಯ ವಿವರಗಳು ಇನ್ನು ಕೂಡ ಬಹಿರಂಗಗೊಂಡಿಲ್ಲ, ಆದರೆ ಎಸ್‌ಎಫ್ 90 ಸ್ಟ್ರಾಡೇಲ್‌ಗಿಂತ ಎಫ್8 ಟ್ರಿಬ್ಯುಟೊ ಕಾರಿನ ಬೆಲೆಗೆ ಹೆಚ್ಚು ಸಾಮ್ಯತೆಯನ್ನು ಹೊಂದಿರಬಹುದು. ಫೆರಾರಿ ಕಂಪನಿಯು 1960 ಮತ್ತು 1970 ರ ದಶಕಗಳಲ್ಲಿ ಎಂಟ್ರಿ ಲೆವೆಲ್ ಸ್ಪೋರ್ಟ್ಸ್ ಕಾರುಗಳಲ್ಲಿ ವಿ6 ಎಂಜಿನ್ ಅನ್ನು ಬಳಿಸಿದ್ದರು. ಈ ಕಾರುಗಳನ್ನು ಡಿನೋ ಬ್ರ್ಯಾಂಡ್ ಅಡಿಯಲ್ಲಿ ಮಾರಾಟ ಮಾಡಲಾಯಿತು.

Most Read Articles

Kannada
English summary
Ferrari 296 gts revealed specs features images
Story first published: Wednesday, April 20, 2022, 11:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X