ಹೆಚ್ಚು ಮೈಲೇಜ್ ನೀಡುವ ಮಾರುತಿ ಸ್ವಿಫ್ಟ್ ಎಸ್-ಸಿಎನ್‌ಜಿ ಕಾರಿನ ವಿಶೇಷತೆಗಳು

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ತನ್ನ ಸ್ವಿಫ್ಟ್ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್‌ನ ಎಸ್-ಸಿಎನ್‌ಜಿ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಮಾರುತಿ ಸ್ವಿಫ್ಟ್ ಸಿಎನ್‌ಜಿ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.77 ಲಕ್ಷವಾಗಿದೆ.

ಹೆಚ್ಚು ಮೈಲೇಜ್ ನೀಡುವ ಮಾರುತಿ ಸ್ವಿಫ್ಟ್ ಎಸ್-ಸಿಎನ್‌ಜಿ ಕಾರಿನ ವಿಶೇಷತೆಗಳು

ಡಿಜೈರ್ ಸಿಎನ್‌ಜಿಯಂತೆ ಸ್ವಿಫ್ಟ್ ಕಾರಿನಲ್ಲಿ ಅದೇ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಫ್ಯಾಕ್ಟರಿ ಫಿಟೆಡ್ ಸಿಎನ್‌ಜಿಯೊಂದಿಗೆ ಹಂಚಿಕೊಳ್ಳುತ್ತವೆ. ಹೊಸ ಸ್ವಿಫ್ಟ್ ಸಿಎನ್‌ಜಿ ಕಾರು VXI ಮತ್ತು ZXI ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ VXI ಮತ್ತು ZXI ಎಂಬ ಎರಡು ರೂಪಾಂತರಗಳ ಬೆಲೆಯು ಕ್ರಮವಾಗಿ ಎಕ್ಸ್ ಶೋರೂಂ ಪ್ರಕಾರ ರೂ.7.77 ಲಕ್ಷ ಮತ್ತು ರೂ.8.45 ಲಕ್ಷವಾಗಿದೆ. ಇತ್ತೀಚೆಗೆ ಬಿಡುಗಡೆಗೊಂಡ ಈ ಹೊಸ ಮಾರುತಿ ಸ್ವಿಫ್ಟ್ ಸಿಎನ್‌ಜಿ ರೂಪಾಂತರಗಳು ಆಯಾ ಪೆಟ್ರೋಲ್ ಆವೃತ್ತಿಗಳಿಗಿಂತ ಸುಮಾರು ರೂ.96,000 ದುಬಾರಿಯಾಗಿದೆ.

ಹೆಚ್ಚು ಮೈಲೇಜ್ ನೀಡುವ ಮಾರುತಿ ಸ್ವಿಫ್ಟ್ ಎಸ್-ಸಿಎನ್‌ಜಿ ಕಾರಿನ ವಿಶೇಷತೆಗಳು

ಮಾರುತಿ ಸ್ವಿಫ್ಟ್ ಸಿಎನ್‌ಜಿ ಕಾರಿಗೆ ಟಾಟಾ ಟಿಯಾಗೋ iCNG ಗೆ ಪ್ರತಿಸ್ಪರ್ಧಿಯಾಗಲಿದೆ, ಇದು ಕಾರು ಖರೀದಿದಾರರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದಿದೆ. ಟಾಟಾ ಮೋಟಾರ್ಸ್ ಟಿಗೋರ್‌ನ ಸಿಎನ್‌ಜಿ ಆವೃತ್ತಿಯನ್ನು ಸಹ ನೀಡುತ್ತಿದೆ, ಇದು ಮಾರುತಿ ಡಿಜೈರ್ ಸಿಎನ್‌ಜಿಗೆ ಪ್ರತಿಸ್ಪರ್ಧಿಯಾಗಿದೆ. ಈ ಹೊಸ ಮಾರುತಿ ಸ್ವಿಫ್ಟ್ ಸಿಎನ್‌ಜಿ ಕಾರಿನ ವಿಶೇಷತೆಗಳು ಇಲ್ಲಿದೆ.

ಹೆಚ್ಚು ಮೈಲೇಜ್ ನೀಡುವ ಮಾರುತಿ ಸ್ವಿಫ್ಟ್ ಎಸ್-ಸಿಎನ್‌ಜಿ ಕಾರಿನ ವಿಶೇಷತೆಗಳು

ಎಂಜಿನ್

ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಸಿಎನ್‌ಜಿ ಡಿಜೈರ್ ಸಿಎನ್‌ಜಿಯೊಂದಿಗೆ ಎಂಜಿನ್ ಅನ್ನು ಹಂಚಿಕೊಳ್ಳುತ್ತದೆ, ಇದು ಫ್ಯಾಕ್ಟರಿ-ಫಿಟ್ ಮಾಡಿದ ಸಿಎನ್‌ಜಿ ಕಿಟ್‌ನೊಂದಿಗೆ 1.2 ಲೀಟರ್ ಎನ್ಎ ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ 77 ಬಿಹೆಚ್‍ಪಿ ಪವರ್ ಮತ್ತು 98.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೆಚ್ಚು ಮೈಲೇಜ್ ನೀಡುವ ಮಾರುತಿ ಸ್ವಿಫ್ಟ್ ಎಸ್-ಸಿಎನ್‌ಜಿ ಕಾರಿನ ವಿಶೇಷತೆಗಳು

ಇದು ಪೆಟ್ರೋಲ್ ಮಾತ್ರ ಮಾದರಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಪೆಟ್ರೋಲ್ ಆವೃತ್ತಿಯು 89 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬೂಟ್‌ನಲ್ಲಿರುವ ಸಿಎನ್‌ಜಿ ಟ್ಯಾಂಕ್ ಲಗೇಜ್ ಸ್ಪೇಸ್ ಮೇಲೆ ಪರಿಣಾಮ ಬೀರಲಿದೆ.

ಹೆಚ್ಚು ಮೈಲೇಜ್ ನೀಡುವ ಮಾರುತಿ ಸ್ವಿಫ್ಟ್ ಎಸ್-ಸಿಎನ್‌ಜಿ ಕಾರಿನ ವಿಶೇಷತೆಗಳು

ಇದರೊಂದಿಗೆ ಸಿಎನ್‌ಜಿ ಟ್ಯಾಂಕ್‌ನಲ್ಲಿರುವ 10 ಕೆಜಿ ಅನಿಲವು ಹಿಂಭಾಗದ ತೂಕವನ್ನು ಹೆಚ್ಚಿಸಿದೆ. ಹೆಚ್ಚುವರಿ ತೂಕವನ್ನು ಎದುರಿಸಲು, ಮಾರುತಿ ಸುಜುಕಿ ಕಂಪನಿಯು ಎಸ್-ಸಿಎನ್‌ಜಿ ರೂಪಾಂತರಗಳಲ್ಲಿ ಸ್ವಲ್ಪ ಗಟ್ಟಿಯಾದ ಸಸ್ಪೆಕ್ಷನ್ ಗಳನ್ನು ನೀಡಿದೆ.

ಹೆಚ್ಚು ಮೈಲೇಜ್ ನೀಡುವ ಮಾರುತಿ ಸ್ವಿಫ್ಟ್ ಎಸ್-ಸಿಎನ್‌ಜಿ ಕಾರಿನ ವಿಶೇಷತೆಗಳು

ಫೀಚರ್ಸ್

ಎರಡು ಇಂಧನಗಳ ನಡುವೆ ಚಾಲಕವನ್ನು ಬದಲಾಯಿಸಲು ಅನುವು ಮಾಡಿಕೊಡುವ ಹೆಡ್‌ಲೈಟ್ ಎತ್ತರದ ನಿಯಂತ್ರಣದ ಜೊತೆಗೆ ಎಲೆಕ್ಟ್ರಾನಿಕ್ ಸ್ವಿಚ್ ಇದೆ. ಸಿಎನ್‌ಜಿ ಸಂಬಂಧಿತ ವಿವರಗಳನ್ನು MID ನಲ್ಲಿ ಪ್ರದರ್ಶಿಸಲಾಗುತ್ತದೆ ಮತ್ತು ಸಿಎನ್‌ಜಿ ಅನ್ನು ಆಯ್ಕೆ ಮಾಡಿದಾಗ ಎಂಜಿನ್ ಪ್ಯಾರ ಮೀಟರ್ ಗಳ ನಿಯಂತ್ರಿಸುವ ಪ್ರತ್ಯೇಕ ಇಸಿಯು ಹೊಂದಿದೆ.

ಹೆಚ್ಚು ಮೈಲೇಜ್ ನೀಡುವ ಮಾರುತಿ ಸ್ವಿಫ್ಟ್ ಎಸ್-ಸಿಎನ್‌ಜಿ ಕಾರಿನ ವಿಶೇಷತೆಗಳು

ಆಯಾಮಗಳು

ಈ 2022ರ ಮಾರುತಿ ಸುಜುಕಿ ಸ್ವಿಫ್ಟ್ ಎಸ್-ಸಿಎನ್‌ಜಿ ಒಟ್ಟಾರೆ ಉದ್ದ 3,845 ಎಂಎಂ, ಅಗಲ 1,530 ಎಂಎಂ ಮತ್ತು ಎತ್ತರ 1,735 ಎಂಎಂ ಮತ್ತು ವೀಲ್‌ಬೇಸ್ 2,450 ಎಂಎಂ ವರೆಗೆ ಹೊಂದಿದೆ. 2022ರ ಮಾರುತಿ ಸುಜುಕಿ ಸ್ವಿಫ್ಟ್ ಎಸ್-ಸಿಎನ್‌ಜಿಯನ್ನು ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ.

ಹೆಚ್ಚು ಮೈಲೇಜ್ ನೀಡುವ ಮಾರುತಿ ಸ್ವಿಫ್ಟ್ ಎಸ್-ಸಿಎನ್‌ಜಿ ಕಾರಿನ ವಿಶೇಷತೆಗಳು

ಮೈಲೇಜ್

ಹೊಸದಾಗಿ ಬಿಡುಗಡೆಯಾದ ಮಾರುತಿ ಸುಜುಕಿ ಸ್ವಿಫ್ಟ್ ಎಸ್-ಸಿಎನ್‌ಜಿ 30.90km/kg ಮೈಲೇಜ್ ಅನ್ನು ನೀಡುತ್ತದೆ. ಮಾರುತಿ ಸುಜುಕಿ ಸ್ವಿಫ್ಟ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ 22.38 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು AMT ಟ್ರಾನ್ಸ್‌ಮಿಷನ್ ಹೊಂದಿದ ಮಾರುತಿ ಸುಜುಕಿ ಸ್ವಿಫ್ಟ್ 22.56 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಹೆಚ್ಚು ಮೈಲೇಜ್ ನೀಡುವ ಮಾರುತಿ ಸ್ವಿಫ್ಟ್ ಎಸ್-ಸಿಎನ್‌ಜಿ ಕಾರಿನ ವಿಶೇಷತೆಗಳು

ಕಾರು ಬಿಡುಗಡೆಯ ವೇಳೆ, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ (ಮಾರ್ಕೆಟಿಂಗ್ ಮತ್ತು ಸೇಲ್ಸ್) ಶಶಾಂಕ್ ಶ್ರೀವಾಸ್ತವ ಅವರು ಮಾತನಾಡಿ, ಬ್ರಾಂಡ್ ಸ್ವಿಫ್ಟ್‌ಗೆ ಯಾವುದೇ ಪರಿಚಯದ ಅಗತ್ಯವಿಲ್ಲ ಮತ್ತು ಐಕಾನಿಕ್ ಸ್ಪೋರ್ಟಿ ಹ್ಯಾಚ್‌ಬ್ಯಾಕ್ ಈಗ ಸಾಬೀತಾದ ಮತ್ತು ಪರೀಕ್ಷಿಸಿದ ಕಂಪನಿ-ಹೊಂದಿಸಿದ ಮಾರುತಿ ಸುಜುಕಿ ಎಸ್-ನೊಂದಿಗೆ ಲಭ್ಯವಿದೆ.

ಹೆಚ್ಚು ಮೈಲೇಜ್ ನೀಡುವ ಮಾರುತಿ ಸ್ವಿಫ್ಟ್ ಎಸ್-ಸಿಎನ್‌ಜಿ ಕಾರಿನ ವಿಶೇಷತೆಗಳು

ಸಿಎನ್‌ಜಿ ತಂತ್ರಜ್ಞಾನ. 26 ಲಕ್ಷಕ್ಕೂ ಹೆಚ್ಚು ಸ್ವಿಫ್ಟ್ ಪ್ರಿಯರನ್ನು ತನ್ನ ಕಾರ್ಯಕ್ಷಮತೆ, ಸ್ಟೈಲಿಂಗ್ ಮತ್ತು ರಸ್ತೆಯ ಉಪಸ್ಥಿತಿಯಿಂದ ಆಕರ್ಷಿಸಿದ ನಂತರ, ಸ್ವಿಫ್ಟ್ ಈಗ ಎಸ್-ಸಿಎನ್‌ಜಿ ಯೊಂದಿಗೆ ತನ್ನ ನಂಬಲಾಗದ ಇಂಧನ ದಕ್ಷತೆ 30.90 Km/kg ನೊಂದಿಗೆ ಗ್ರಾಹಕರನ್ನು ಆನಂದಿಸಲು ಲಭ್ಯವಿದೆ. ಇದು ಸಿಎನ್‌ಜಿ ಕೊಡುಗೆಯೊಂದಿಗೆ ನಮ್ಮ ಪೋರ್ಟ್‌ಫೋಲಿಯೊದಲ್ಲಿ 9 ನೇ ಮಾದರಿಯಾಗಿದೆ.

ಹೆಚ್ಚು ಮೈಲೇಜ್ ನೀಡುವ ಮಾರುತಿ ಸ್ವಿಫ್ಟ್ ಎಸ್-ಸಿಎನ್‌ಜಿ ಕಾರಿನ ವಿಶೇಷತೆಗಳು

ಇದು ಸ್ವಚ್ಛ ಮತ್ತು ಹಸಿರು ಪರಿಸರಕ್ಕೆ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ. ಸ್ವಿಫ್ಟ್ ಗ್ರಾಹಕರ ಹೃದಯದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದಿದೆ. ಇದು ನಿರಂತರವಾಗಿ ವಿಕಸನಗೊಂಡಿತು ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಯಶಸ್ವಿ ಹ್ಯಾಚ್‌ಬ್ಯಾಕ್ ಆಗಿ ತನ್ನ ವ್ಯಕ್ತಿತ್ವವನ್ನು ಉಳಿಸಿಕೊಂಡಿದೆ. ಸ್ವಿಫ್ಟ್ S-CNG ಗ್ರಾಹಕರಿಗೆ ಸರಿಯಾದ ಪ್ರತಿಪಾದನೆಯಾಗಿದೆ, ಇದು ಉತ್ಸಾಹಭರಿತ ಮತ್ತು ಉತ್ತಮ ಮೈಲೇಜ್ ಹೊಂದಿರುವ ಮಾದರಿಯಾಗಿದೆ ಎಂದು ಹೇಳಿದ್ದಾರೆ.

ಹೆಚ್ಚು ಮೈಲೇಜ್ ನೀಡುವ ಮಾರುತಿ ಸ್ವಿಫ್ಟ್ ಎಸ್-ಸಿಎನ್‌ಜಿ ಕಾರಿನ ವಿಶೇಷತೆಗಳು

ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಎಷ್ಟೇ ಅತ್ಯಾಧುನಿಕ ಕಾರುಗಳು ಬಿಡುಗಡೆಯಾದರೂ ಮಾರುತಿ ಸ್ವಿಫ್ಟ್ ಕಳೆದ 15 ವರ್ಷದಿಂದ ದೇಶಿಯ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಹಲವು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯೊಂದಿಗೆ ದಾಖಲೆಯ ಮಟ್ಟದಲ್ಲಿ ಜನಪ್ರಿಯ ಸ್ವಿಫ್ಟ್ ಕಾರು ಮಾರಾಟವಾಗುತ್ತಿದೆ.

ಹೆಚ್ಚು ಮೈಲೇಜ್ ನೀಡುವ ಮಾರುತಿ ಸ್ವಿಫ್ಟ್ ಎಸ್-ಸಿಎನ್‌ಜಿ ಕಾರಿನ ವಿಶೇಷತೆಗಳು

ಅಲ್ಲದೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯು ಕೂಡ ಸ್ವಿಫ್ಟ್ ಕಾರು ಉತ್ತಮವಾಗಿ ಮಾರಾಟವಾಗುತ್ತಿದೆ. ಪ್ರಸ್ತುತ ತಲೆಮಾರಿನ ಸ್ವಿಫ್ಟ್ ಕಾರನ್ನು ಸುಜುಕಿ ಕಂಪನಿಯು 2017ರಲ್ಲಿಬಿಡುಗಡೆ ಮಾಡಲಾಯಿತು. ಇದನ್ನು 2018ರಲ್ಲಿ ಆರಂಭದಲ್ಲಿ ಇದನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಮಾರುತಿ ಸ್ವಿಫ್ಟ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ.

ಹೆಚ್ಚು ಮೈಲೇಜ್ ನೀಡುವ ಮಾರುತಿ ಸ್ವಿಫ್ಟ್ ಎಸ್-ಸಿಎನ್‌ಜಿ ಕಾರಿನ ವಿಶೇಷತೆಗಳು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಈಗಾಗಲೇ ಸಿಎನ್‌ಜಿ ವಾಹನಗಳ ಅತಿದೊಡ್ಡ ಪೋರ್ಟ್‌ಫೋಲಿಯೊವನ್ನು ಹೊಂದಿದ್ದರೂ, ಮಾರುತಿ ತನ್ನ ಹೆಚ್ಚಿನ ಕಾರುಗಳಿಗೆ ಸಿಎನ್‌ಜಿ ಆಯ್ಕೆಯನ್ನು ಪರಿಚಯಿಸುವುದನ್ನು ಮುಂದುವರೆಸಿದೆ. ಇದೀಗ ತನ್ನ ಜನಪ್ರಿಯ ಸ್ವಿಫ್ಟ್ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್‌ನ ಎಸ್-ಸಿಎನ್‌ಜಿ ಮಾದರಿಯೊಂದಿಗೆ ಮಾರಾಟ ಮಾದಲಾಗುತ್ತಿದೆ.

Most Read Articles

Kannada
English summary
Find here some top highlights of maruti suzuki swift s cng details
Story first published: Tuesday, August 16, 2022, 13:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X