2.0 ಲೀಟರ್ ಇಕೋಬೂಸ್ಟ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಹೊಸ ಫೋರ್ಡ್ ಟಾರಸ್ ಕಾರು

ಅಮೆರಿಕ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಫೋರ್ಡ್ ಮೋಟಾರ್ ಮಧ್ಯಪ್ರಾಚ್ಯಕ್ಕೆ ಹೊಸ ಟಾರಸ್ ಕಾರನ್ನು ಅನಾವರಣಗೊಳಿಸಿದೆ .ಇದು ಮೂಲಭೂತವಾಗಿ ಚೀನೀ ಮಾರುಕಟ್ಟೆಯಲ್ಲಿ ಮಾರಾಟವಾದ ಹೊಸ ಫೋರ್ಡ್ ಮೊಂಡಿಯೊದ ಮರುಬ್ಯಾಡ್ಜ್ ಆವೃತ್ತಿಯಾಗಿದೆ,

2.0 ಲೀಟರ್ ಇಕೋಬೂಸ್ಟ್ ಎಂಜಿನ್‌ನೊಂದಿಗೆ ಹೊಸ ಫೋರ್ಡ್ ಟಾರಸ್ ಕಾರು ಅನಾವರಣ

ಫೋರ್ಡ್ ಟಾರಸ್ ಕಾರು ಅದೇ ಫ್ಯೂಚರಿಸ್ಟಿಕ್ ಸ್ಟೈಲಿಂಗ್ ಅನ್ನು ಒಳಗೊಂಡಿದೆ. ಬೃಹತ್ ಮುಂಭಾಗದ ಗ್ರಿಲ್ ಜೊತೆಗೆ ನಯವಾದ ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್ ವಿನ್ಯಾಸದ ಪ್ರಮುಖ ಅಂಶವಾಗಿದೆ. ಸೈಡ್ ಪ್ರೊಫೈಲ್ ಅತ್ಯಂತ ಏರೋಡೈನಾಮಿಕ್ ಆಗಿದೆ, ಇದು ಸೆಡಾನ್ ಅತ್ಯಂತ ಸ್ಪೋರ್ಟಿಯಾಗಿ ಕಾಣಲು ಸಹಾಯ ಮಾಡುತ್ತದೆ. ಹಿಂಬದಿಯ ವಿಭಾಗವು ಅಗ್ರೇಸಿವ್ ಟೈಲ್‌ಲೈಟ್‌ಗಳನ್ನು ಹೊಂದಿದೆ, ಅವುಗಳ ನಡುವೆ ಅಡ್ಡಲಾಗಿ ಚಲಿಸುವ ಎಲ್ಇಡಿ ಲೈಟ್ ಬಾರ್‌ನಿಂದ ಒಟ್ಟಿಗೆ ಸೇರಿಕೊಳ್ಳುತ್ತದೆ.

2.0 ಲೀಟರ್ ಇಕೋಬೂಸ್ಟ್ ಎಂಜಿನ್‌ನೊಂದಿಗೆ ಹೊಸ ಫೋರ್ಡ್ ಟಾರಸ್ ಕಾರು ಅನಾವರಣ

ಅಲ್ಲದೆ, ಹಿಂಬದಿಯ ಬಂಪರ್ ಕ್ರೋಮ್ ಹೈಲೈಟ್‌ಗಳನ್ನು ನಕಲಿ ಎಕ್ಸಾಸ್ಟ್ ಟಿಪ್ಸ್‌ನೊಂದಿಗೆ ಸೇರಿಸಲಾಗಿದೆ, ಹೆಚ್ಚುವರಿ ಸ್ಪೋರ್ಟಿನೆಸ್‌ಗಾಗಿ. ಹೆಚ್ಚುವರಿಯಾಗಿ, ವಾಹನವು ಕ್ರೋಮ್ ವಿಂಡೋ ಲೈನಿಂಗ್ ಜೊತೆಗೆ ಬದಿಗಳಲ್ಲಿ ಡೋರುಗಳ ಕೆಳಗೆ ಸಿಲ್ವರ್ ಫಿನಿಶಿಂಗ್ ಅಸ್ಸೆಂಟ್ ಗಳನ್ನು ಹೊಂದಿವೆ.

2.0 ಲೀಟರ್ ಇಕೋಬೂಸ್ಟ್ ಎಂಜಿನ್‌ನೊಂದಿಗೆ ಹೊಸ ಫೋರ್ಡ್ ಟಾರಸ್ ಕಾರು ಅನಾವರಣ

2022ರ ಫೋರ್ಡ್ ಟಾರಸ್‌ನ ಒಳಭಾಗವು ವಿನ್ಯಾಸದಲ್ಲಿ ಸಾಕಷ್ಟು ಪ್ರಭಾವಶಾಲಿಯಾಗಿದೆ, ಇದು ಡ್ಯುಯಲ್-ಸ್ಕ್ರೀನ್ ಡ್ಯಾಶ್ ಸೆಟಪ್ ಅನ್ನು ಒಳಗೊಂಡಿರುತ್ತದೆ. ಇದು 8-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು 13.2-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಅನ್ನು ಒಳಗೊಂಡಿದೆ.

2.0 ಲೀಟರ್ ಇಕೋಬೂಸ್ಟ್ ಎಂಜಿನ್‌ನೊಂದಿಗೆ ಹೊಸ ಫೋರ್ಡ್ ಟಾರಸ್ ಕಾರು ಅನಾವರಣ

ಸೆಡಾನ್ ಮೂರು-ಸ್ಪೋಕ್ ಸ್ಟೀರಿಂಗ್ ವೀಲ್ (ಮಲ್ಟಿ-ಫಂಕ್ಷನಲ್), ಆಂಬಿಯೆಂಟ್ ಕ್ಯಾಬಿನ್ ಲೈಟಿಂಗ್ ಮತ್ತು ಡ್ಯುಯಲ್-ಟೋನ್ ಕ್ಯಾಬಿನ್ ಥೀಮ್ ಅನ್ನು ಸಹ ಪಡೆಯುತ್ತದೆ. ಕ್ಲೀನರ್ ಕ್ಯಾಬಿನ್ ವಿನ್ಯಾಸಕ್ಕಾಗಿ, ಸೆಂಟರ್ ಕನ್ಸೋಲ್ ಶಿಫ್ಟ್ ಲಿವರ್ ಬದಲಿಗೆ ರೋಟರಿ ಗೇರ್ ಸೆಲೆಕ್ಟರ್ ಅನ್ನು ಪಡೆಯುತ್ತದೆ.

2.0 ಲೀಟರ್ ಇಕೋಬೂಸ್ಟ್ ಎಂಜಿನ್‌ನೊಂದಿಗೆ ಹೊಸ ಫೋರ್ಡ್ ಟಾರಸ್ ಕಾರು ಅನಾವರಣ

ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್-ಸ್ಪಾಟ್ ಮಧ್ಯಸ್ಥಿಕೆ ಮತ್ತು ಕೊಲಿಷನ್ ಮಿಟಿಗೇಷನ್ ವೈಶಿಷ್ಟ್ಯಗಳೊಂದಿಗೆ ಸುರಕ್ಷತಾ ಮಟ್ಟವು ಸಹ ಪ್ರಭಾವಶಾಲಿಯಾಗಿದೆ. ಇನ್ನು ಆಫರ್‌ನಲ್ಲಿರುವ ಇತರ ವೈಶಿಷ್ಟ್ಯಗಳು ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಸ್ಮಾರ್ಟ್‌ಫೋನ್ ಸಂಪರ್ಕ (ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ) ಆಗಿದೆ.

2.0 ಲೀಟರ್ ಇಕೋಬೂಸ್ಟ್ ಎಂಜಿನ್‌ನೊಂದಿಗೆ ಹೊಸ ಫೋರ್ಡ್ ಟಾರಸ್ ಕಾರು ಅನಾವರಣ

ಈ 2022ರ ಫೋರ್ಡ್ ಟಾರಸ್ 2.0-ಲೀಟರ್ ಇಕೋಬೂಸ್ಟ್ ಎಂಜಿನ್ ಅನ್ನು ಪಡೆಯುತ್ತದೆ. ಈ ಟರ್ಬೋಚಾರ್ಜ್ಡ್, ಇನ್‌ಲೈನ್-4, ಪೆಟ್ರೋಲ್ ಪವರ್‌ಪ್ಲಾಂಟ್ 8-ಸ್ಪೀಡ್ ಸ್ವಯಂಚಾಲಿತ ಗೇರ್‌ಬಾಕ್ಸ್‌ಗೆ ಪ್ರತ್ಯೇಕವಾಗಿ ಬರುತ್ತದೆ. ಎಂಜಿನ್, ಗೇರ್ ಬಾಕ್ಸ್ ಮತ್ತು ಇತರ ಸಿಸ್ಟಂಗಳು ಮಧ್ಯಪ್ರಾಚ್ಯದ ಮತ್ತು ಮರಳು ಪರಿಸರವನ್ನು ನಿಭಾಯಿಸಬಲ್ಲವು ಎಂಬುದನ್ನು ಖಚಿತಪಡಿಸಿಕೊಳ್ಳಲು ಕಠಿಣ ಪರೀಕ್ಷೆಗೆ ಒಳಪಟ್ಟಿವೆ.

2.0 ಲೀಟರ್ ಇಕೋಬೂಸ್ಟ್ ಎಂಜಿನ್‌ನೊಂದಿಗೆ ಹೊಸ ಫೋರ್ಡ್ ಟಾರಸ್ ಕಾರು ಅನಾವರಣ

ಇನ್ನು ಭಾರತದಲ್ಲಿ ಉತ್ಪಾದನೆಯನ್ನು ನಿಲ್ಲಿಸುವ ಮುನ್ನ ಫೋರ್ಡ್ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಎಂಡೀವರ್ ಎಸ್‍ಯುವಿಯನ್ನು ಉಳಿಸಲು ಪ್ರಯತ್ನಿಸಿತು. ಫೋರ್ಡ್ ಮತ್ತೊಂದು ಕಾರು ತಯಾರಕರೊಂದಿಗೆ ಒಪ್ಪಂದದ ಆಧಾರದ ಮೇಲೆ ಎಂಡೀವರ್ ಅನ್ನು ಉತ್ಪಾದಿಸಲು ಪ್ರಯತ್ನಿಸಿತು. ಆದರೆ ಈ ಒಪ್ಪಂದ ಪ್ರಯತ್ನಯು ವಿಫಲವಾಯ್ತು. ಇದರಿಂದ ಎಂಡೀವರ್ ಎಸ್‍ಯುವಿಯನ್ನು ಭಾರತದಲ್ಲಿ ಉಳಿಸುವಲ್ಲಿ ವಿಫಲವಾಗಿತ್ತು. ಇನ್ನು ಈ ಎಸ್‍ಯುವಿಯು ಭಾರತಕ್ಕೆ ಮರಳಿ ಬರುವ ಸಾಧ್ಯತೆ ಕಡಿಮೆಯಾಗಿದೆ,

2.0 ಲೀಟರ್ ಇಕೋಬೂಸ್ಟ್ ಎಂಜಿನ್‌ನೊಂದಿಗೆ ಹೊಸ ಫೋರ್ಡ್ ಟಾರಸ್ ಕಾರು ಅನಾವರಣ

ಫೋರ್ಡ್ ಎಂಡೀವರ್ ಮಾದರಿಯು ಸಮರ್ಥ ಆನ್ ರೋಡ್ ಮತ್ತು ಆಪ್ ರೋಡ್ ಎಸ್‍ಯುವಿಯಾಗಿದೆ. ಅಫ್-ರೋಡ್ ವಿಭಾಗದಲ್ಲಿಯು ಫೋರ್ಡ್ ಎಂಡೀವರ್ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ ಎಸ್‍ಯುವಿಯಾಗಿದೆ. ಫೋರ್ಡ್ ಎಂಡೀವರ್ ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್, ಮಹೀಂದ್ರಾ ಅಲ್ಟುರಾಸ್ ಜಿ4, ಎಂಜಿ ಗ್ಲೋಸ್ಟರ್ ಮತ್ತು ಇಸುಝು ಎಂಯು-ಎಕ್ಸ್ ಎಸ್‍‍ಯುವಿಗಳಿಗೆ ಪೈಪೋಟಿ ನೀಡಲಾಗುತ್ತಿತ್ತು.

2.0 ಲೀಟರ್ ಇಕೋಬೂಸ್ಟ್ ಎಂಜಿನ್‌ನೊಂದಿಗೆ ಹೊಸ ಫೋರ್ಡ್ ಟಾರಸ್ ಕಾರು ಅನಾವರಣ

ಇನ್ನು ಫೋರ್ಡ್ ಕಂಪನಿಯು ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಅಧಿಕೃತವಾಗಿ ಸ್ಥಗಿತ ಘೋಷಣೆ ನಂತರ ಸನಂದ್‌ನಲ್ಲಿರುವ ಕಾರು ಉತ್ಪಾದನಾ ಘಟಕ ಖರೀದಿಗೆ ಪ್ರಮುಖ ಕಾರು ಕಂಪನಿಗಳು ಆಸಕ್ತಿ ತೋರಿದ್ದವು. ಆದರೆ ಅಂತಿಮವಾಗಿ ಟಾಟಾ ಮೋಟಾರ್ಸ್ ಕಂಪನಿಯು ಫೋರ್ಡ್ ಘಟಕವನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದು ಬಹುತೇಕ ಖಚಿತವಾಗಿದ್ದು, ಉತ್ಪಾದನಾ ಘಟಕ ಮಾಲೀಕತ್ವ ಬದಲಾವಣೆಗಾಗಿ ಎರಡು ಕಂಪನಿಗಳು ಒಪ್ಪಿಗೆ ಪತ್ರ ಸಲ್ಲಿಸಿವೆ.

2.0 ಲೀಟರ್ ಇಕೋಬೂಸ್ಟ್ ಎಂಜಿನ್‌ನೊಂದಿಗೆ ಹೊಸ ಫೋರ್ಡ್ ಟಾರಸ್ ಕಾರು ಅನಾವರಣ

ಭಾರತದಲ್ಲಿ ಒಟ್ಟು ಐದು ಕಾರು ಮಾದರಿಗಳ ಉತ್ಪಾದನೆಯನ್ನು ಹೊಂದಿದ್ದ ಫೋರ್ಡ್ ಕಂಪನಿಯು ಇಕೋಸ್ಪೋರ್ಟ್, ಫಿಗೋ, ಫ್ರೀಸ್ಟೈಲ್, ಎಂಡೀವರ್ ಮತ್ತು ಆಸ್ಪೈರ್ ಕಾರು ಮಾದರಿಗಳನ್ನು ಸ್ಥಳೀಯವಾಗಿಯೇ ಅಭಿವೃದ್ದಿಗೊಳಿಸಿ ಮಾರಾಟ ಸೌಲಭ್ಯವನ್ನು ಹೊಂದಿತ್ತು. ಆದರೆ ಫೋರ್ಡ್ ಕಾರುಗಳಲ್ಲಿ ಇಕೋಸ್ಪೋರ್ಟ್ ಮಾದರಿಯನ್ನು ಹೊರತುಪಡಿಸಿ ಇನ್ನುಳಿದ ಕಾರು ಮಾದರಿಗಳು ನೀರಿಕ್ಷೆಯ ಮಟ್ಟದಲ್ಲಿ ಮಾರಾಟಗೊಳ್ಳಲು ಸಾಧ್ಯವಾಗಿರಲಿಲ್ಲ. ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾಗಿದ್ದ ಹೊಸ ವಿನ್ಯಾಸದ ಕಾರುಗಳ ಅಬ್ಬರ ನಡುವೆ ಫೋರ್ಡ್ ಕಾರುಗಳ ಮಾರಾಟವು ತೀವ್ರ ಹಿನ್ನಡೆ ಕಂಡಿದ್ದವು.

2.0 ಲೀಟರ್ ಇಕೋಬೂಸ್ಟ್ ಎಂಜಿನ್‌ನೊಂದಿಗೆ ಹೊಸ ಫೋರ್ಡ್ ಟಾರಸ್ ಕಾರು ಅನಾವರಣ

ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಲವು ಜನಪ್ರಿಯ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಫೋರ್ಡ್ ಟಾರಸ್ ಹೊರಹೋಗುವ ಜನರೇಷನ್ ಮಧ್ಯಪ್ರಾಚ್ಯದಲ್ಲಿ ನಂಬಲಾಗದಷ್ಟು ಜನಪ್ರಿಯವಾದ ವಾಹನವಾಗಿದ್ದು, 2021 ರಲ್ಲಿ ಯುಎಇ, ಸೌದಿ ಅರೇಬಿಯಾ, ಓಮನ್ ಮತ್ತು ಬಹ್ರೇನ್‌ನಲ್ಲಿ ಬಲವಾದ ಮಾರಾಟದ ಬೆಳವಣಿಗೆಯನ್ನು ದಾಖಲಿಸಿದೆ. ಹೊಸ-ತಮೆಮಾರಿನ ಮಾದರಿಯು ಪ್ರದೇಶದಾದ್ಯಂತ ಮತ್ತಷ್ಟು ಮಾರಾಟದ ಬೆಳವಣಿಗೆಯನ್ನು ಕಾಣುವ ನಿರೀಕ್ಷೆಯಿದೆ.

Most Read Articles

Kannada
Read more on ಫೋರ್ಡ್ ford
English summary
Ford unveiled 2022 taurus sedan features and engine details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X