Just In
- 23 min ago
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 2 hrs ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 16 hrs ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- 17 hrs ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
Don't Miss!
- News
ಶೀಘ್ರವೇ ಭಾರತ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ: ಪಿಯೂಷ್ ಗೋಯಲ್
- Sports
IND vs IRE: ಮೊದಲ ಟಿ20 ಪಂದ್ಯಕ್ಕೂ ಮುನ್ನ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆ
- Movies
ನವೀನ್ ಸಜ್ಜು ಮೈಸೂರು ಮನೆ ಹೇಗಿದೆ ಗೊತ್ತಾ?
- Technology
LED ಡಿಸ್ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Finance
ಜೂನ್ 26: ಕಚ್ಚಾತೈಲ ದರ ಚೇತರಿಕೆ, ಭಾರತದಲ್ಲಿ ಇಂಧನ ದರ ಆಗಿಲ್ಲ ಏರಿಕೆ!
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಹೊಸ ವಿನ್ಯಾಸ, ವೈಶಿಷ್ಟ್ಯಗಳೊಂದಿಗೆ ಮತ್ತೆ ಮಾರಾಟಕ್ಕೆ ಲಭ್ಯವಾಗಲಿದೆ ಜನಪ್ರಿಯ ಅಂಬಾಸಿಡರ್ ಕಾರು
ಹಿಂದೂಸ್ತಾನ್ ಮೋಟಾರಸ್ನ ಅಂಬಾಸಿಡರ್ ಕಾರು ಒಂದು ಕಾಲದಲ್ಲಿ ಶ್ರೀಮಂತರು ಮತ್ತು ಸರ್ಕಾರಿ ಅಧಿಕಾರಿಗಳು ಬಳಸುವ ವಾಹನ ಎಂದೇ ಅನೇಕರಿಗೆ ಚಿರಪರಿಚಿತವಾಗಿದೆ. 1990ರ ದಶಕದಲ್ಲಿ ಈ ಕಾರು ಅಪಾರ ಜನಪ್ರಿಯತೆಯನ್ನು ಗಳಿಸುವುದರ ಜೊತೆಗೆ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದೆ. ಅನೇಕ ಕಾರು ಉತ್ಸಾಹಿಗಳು ಈಗಲೂ ಈ ಅಂಬಾಸಿಡರ್ ಕಾರನ್ನು ಹೊಂದಿದ್ದಾರೆ.

ಬಹುಕಾಲದಿಂದ ಭಾರತದ ಮಾರುಕಟ್ಟೆಯಲ್ಲಿದ್ದ ಈ ಕಾರು 2014ರಲ್ಲಿ ಉತ್ಪಾದನೆಯನ್ನು ನಿಲ್ಲಿಸಬೇಕಾಯಿತು. ಆದರೂ ಹಲವರು ಅಧಿಕಾರಿಗಳು ದೀರ್ಘ ಕಾಲದವರೆಗೆ ಈ ವಾಹನವನ್ನು ಬಳಸಿದ್ದರು. ಇಂತಹ ವಿಶೇಷ ಕಾರು ಭಾರತದಲ್ಲಿ ಮತ್ತೆ ತನ್ನ ಛಾಪು ಮೂಡಿಸಲು ಸಜ್ಜಾಗಿದೆ.

ಹೌದು. ಅಂಬಾಸಿಡರ್ ಆವೃತ್ತಿ 2.0 ಭಾರತದಲ್ಲಿ ಮತ್ತೆ ಲಭ್ಯವಾಗಲಿದ್ದು, ಇನ್ನು 2 ವರ್ಷಗಳಲ್ಲಿ ಭಾರತದ ರಸ್ತೆಗಿಳಿಯಲಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಈ ಕಾರು ಹೊಸ ಅವತಾರ ಮತ್ತು ಹೊಸ ವಿಶೇಷ ವೈಶಿಷ್ಟ್ಯಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ಪ್ರಸ್ತುತ ಈ ಕಾರನ್ನು ಹಿಂದ್ ಮೋಟಾರ್ ಫೈನಾನ್ಶಿಯಲ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಫ್ರೆಂಚ್ ಕಾರು ತಯಾರಕ ಪಿಯುಗಿಯೊ ಅಭಿವೃದ್ಧಿಪಡಿಸುತ್ತಿದೆ.

ಈ ಎರಡು ಕಂಪನಿಗಳ ಮೈತ್ರಿಯ ಆಧಾರದ ಮೇಲೆ ಹೊಸ ಅಂಬಾಸಿಡರ್ ವಿನ್ಯಾಸಗೊಳ್ಳಲಿದೆ. ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಹಿಂದೂಸ್ತಾನ್ ಮೋಟಾರ್ಸ್ ನೂತನ ಅಂಬಾಸಿಡರ್ ಕಾರನ್ನು ತಯಾರಿಸಲು ಮುಂದಾಗಿದೆ. ಸಿಕೆ ಬಿರ್ಲಾ ಗ್ರೂಪ್ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.

ಹೊಸ ಅಂಬಾಸಿಡರ್ ಕಾರು ಹೊಸ ಯಾಂತ್ರಿಕ ವೈಶಿಷ್ಟ್ಯಗಳು ಮತ್ತು ವಿನ್ಯಾಸವನ್ನು ಪಡೆಯಲಿದೆ. ಈಗಾಗಲೇ ಕಾಮಗಾರಿ ಮುಂದುವರಿದ ಹಂತ ತಲುಪಿದೆ ಎಂದು ಹಿಂದೂಸ್ತಾನ್ ಮೋಟಾರ್ ಕಂಪನಿಯ ನಿರ್ದೇಶಕ ಉತ್ತಮ್ ಬೋಸ್ ತಿಳಿಸಿದ್ದಾರೆ.

ಪ್ರಸ್ತುತ ಪಿಯುಗಿಯೊ ಮತ್ತೆ ಭಾರತದಲ್ಲಿ ತನ್ನ ಛಾಪು ಮೂಡಿಸಲು ಉತ್ಸುಕವಾಗಿದೆ. ಭಾರತದ ಆರ್ಥಿಕ ಉದಾರೀಕರಣದ ನಂತರ 1990ರ ದಶಕದ ಮಧ್ಯಭಾಗದಲ್ಲಿ ದೇಶವನ್ನು ಪ್ರವೇಶಿಸಿದ ಮೊದಲ ವಿದೇಶಿ ಕಾರು ತಯಾರಕ ಕಂಪನಿಯಾಗಿದೆ. ಆದ್ದರಿಂದ, ಈ ಕಂಪನಿಯು ಭಾರತಕ್ಕೆ ಹೊಸದಲ್ಲ ಎಂಬುದು ಗಮನಾರ್ಹ.

ಸ್ವಾತಂತ್ರ್ಯದ ನಂತರ ಭಾರತದಲ್ಲಿ ವಾಹನ ಯುಗವನ್ನು ಆರಂಭಿಸಿದ 'ಅಂಬಾಸಿಡರ್' ಕಾರು ಬಿಎಸ್ 6 ಎಮಿಷನ್ ಮಾನದಂಡಗಳನ್ನು ಅನುಸರಿಸದ ಕಾರಣ ಸ್ಥಗಿತಗೊಂಡಿತ್ತು. ಹಿಂದೂಸ್ತಾನ್ ಅಂಬಾಸಿಡರ್ ಅನ್ನು ಇನ್ನೂ ಅನೇಕ ಸ್ಥಳಗಳಲ್ಲಿ ಟ್ಯಾಕ್ಸಿ ಮತ್ತು ಕ್ಯಾಬ್ ಆಗಿ ಬಳಸಲಾಗುತ್ತಿದೆ.

ಈ ಕಾರಿನ ಇತಿಹಾಸ
ಬ್ರಿಟನ್ನ ಮೋರಿಸ್ ಆಕ್ಸ್ಫರ್ಡ್ 3 ಕಾರಿನ ಮೂಲ ವಿನ್ಯಾಸದೊಂದಿಗೆ ನಿರ್ಮಾಣಗೊಂಡಿರುವ ಅಂಬಾಸಿಡರ್ ಕಾರುಗಳು 1957ರಿಂದ 2014ರ ತನಕ ದೇಶದಲ್ಲಿ ಮಾರಾಟದಲ್ಲಿದ್ದವು. ಜೊತೆಗೆ ಕಾರಿನ ಗುಣಮಟ್ಟ ಮತ್ತು ಬೆಲೆ ವಿಚಾರವಾಗಿ ಅತ್ಯಂತ ವಿಶ್ವಾಸಾರ್ಹ ಕಾರೆಂದು ಗುರುತಿಸಿಕೊಂಡಿತ್ತು.

ಹಿಂದೂಸ್ತಾನ್ ಮೋಟಾರ್ಸ್ ಅದರ ಜೋಡಣಾ ಕಾರ್ಖಾನೆಯನ್ನು ಗುಜರಾತ್ ನಲ್ಲಿರುವ ಪೋರ್ಟ್ ಓಕಾ ದಿಂದ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿರುವ ಉತ್ತರಪಾರಾಕ್ಕೆ 1948 ರಲ್ಲಿ ಬದಲಾಯಿಸಿತ್ತು. ಅಲ್ಲದೇ ಮೋಟಾರು ಕಾರಿನ ವಿಭಾಗದಲ್ಲಿ ಇದರ ಉತ್ಪಾದನಾ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲಾಗಿತ್ತು.

ಬಿರ್ಲಾ, ಮೋರಿಸ್ ಆಕ್ಸ್ ಫರ್ಡ್ ಸೀರಿಸ್ II ರ (ಹಿಂದೂಸ್ತಾನ್ ಲ್ಯಾಂಡ್ ಮಾಸ್ಟರ್ ) ಮಾದರಿಯಲ್ಲಿ ತಯಾರಿಸಲಾಗಿದ್ದ ಹಳೆಯ ಹಿಂದೂಸ್ತಾನ್ ಮಾದರಿಯನ್ನು ಬದಲಾಯಿಸಬೇಕೆಂದಾಗ, ಅನಂತರದ ಹೊಸ ಮೋರಿಸ್ ಆಕ್ಸ್ ಫರ್ಡ್ ಸೀರಿಸ್ III ಅನ್ನು ಪರಿಚಯಿಲಾಗಿತ್ತು.

ಮೋರಿಸ್ ಆಕ್ಸ್ ಫರ್ಡ್ ಸರಣಿ II ರ ಮಾದರಿಯನ್ನು ಭಾರತದಲ್ಲಿ ತಯಾರಿಸಲು 1954 ರಲ್ಲಿ ಅನುಮತಿ ದೊರೆಯಿತು. ಅಲ್ಲದೆ ಇಂಗ್ಲೆಂಡ್ ನಲ್ಲಿ ಈ ಕಾರನ್ನು ಪ್ರಥಮ ಬಾರಿಗೆ ನಿರ್ಮಿಸಿದ ಮೂರು ವರ್ಷಗಳ ನಂತರ, ಇದನ್ನು ಪಶ್ಚಿಮ ಬಂಗಾಳದ ಉತ್ತರಪಾರದಲ್ಲಿ ನಿರ್ಮಿಸಲಾಯಿತು.

ಅಂಬಾಸಿಡರ್ ದೇಶದ ಮೊದಲ ಡೀಸೆಲ್ ಕಾರಾಗಿದ್ದು, 1489 ಸಿಸಿ, ಬಿಎಂಸಿ ಡೀಸೆಲ್ ಎಂಜಿನ್ನಿಂದ ನಿಯಂತ್ರಿಸ್ಪಟ್ಟಿತ್ತು. ಬಳಿಕ 1.5 ಲೀಟರ್ ಬದಲು 1900ರ ಪೂರ್ವಾರ್ಧದಲ್ಲಿ ಇಸುಝು 1.8 ಲೀಟರ್ ಬಳಸಲಾಯಿತು. ಇದಾದ ಬಳಿಕ 1.8 ಲೀಟರ್ (75 ಬಿಎಚ್ ಪಿ) ಎಂಪಿಎಫ್ ಐ ಪೆಟ್ರೋಲ್ ಹಾಗೂ ಇಸುಝು 2.0 ಲೀಟರ್ (50 ಬಿಎಚ್ ಪಿ) ಡೀಸೆಲ್ ಎಂಜಿನ್ ಗಳು ಜೋಡಣೆಯಾಗಿತ್ತು.

50 ವರ್ಷಕ್ಕೂ ಹೆಚ್ಚು ಕಾಲ ಭಾರತೀಯ ರಸ್ತೆಗಳಲ್ಲಿ ರಾರಾಜಿಸಿರುವ ಅಂಬಾಸಿಡರ್, ದೇಶದ ಅತ್ಯಂತ ಜನಪ್ರಿಯ ಕಾರಾಗಿದೆ. ಕಾಲ ಕಾಲಕ್ಕೆ ತನ್ನ ವಿನ್ಯಾಸದಲ್ಲಿ ಬದಲಾವಣೆ ಪಡೆದುಕೊಳ್ಳುತ್ತಿದ್ದ ಅಂಬಾಸಿಡರ್, 1957ರಲ್ಲಿ ಮಾರ್ಕ್ I, 1962ರಲ್ಲಿ ಮಾರ್ಕ್-II, 1977ರಲ್ಲಿ ಮಾರ್ಕ್- III, 1979ರಲ್ಲಿ ಮಾರ್ಕ್ IV, 1990ರಲ್ಲಿ ಹೆಚ್ಚು ಪ್ರೀಮಿಯಂ ಸೌಲಭ್ಯಗಳುಳ್ಳ ಅಂಬಾಸಿಡರ್ ನೋವಾ, 1992ರಲ್ಲಿ ಅಂಬಾಸಿಡರ್ 1800 ಐಎಸ್ ಝಡ್ ವಷನ್ಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡಿತ್ತು.