ಭಾರತದಲ್ಲಿ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟ ಗ್ರೇಟ್ ವಾಲ್ ಮೋಟಾರ್ಸ್‌

ಚೀನಿ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿರುವ ಗ್ರೇಟ್ ವಾಲ್ ಮೋಟಾರ್ಸ್ ಹಾಗೂ ತನ್ನ ಅಂಗಸಂಸ್ಥೆಯಾದ ಹವಾಲ್ ಕಂಪನಿಗಳು ಭಾರತದಲ್ಲಿ ಕಾರು ಬಿಡುಗಡೆಗಾಗಿ ಭಾರೀ ಹೂಡಿಕೆಗೆ ಮುಂದಾಗಿದ್ದವು. ಆದರೆ ವಿವಿಧ ಕಾರಣಾಂತರಗಳಿಂದ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟಿದ್ದು, ಭಾರತದಲ್ಲಿನ ಕೇಂದ್ರ ಕಚೇರಿಯನ್ನು ಸಹ ಇದೀಗ ಖಾಲಿ ಮಾಡಿದೆ.

ಭಾರತದಲ್ಲಿ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟ ಗ್ರೇಟ್‌ವಾಲ್ ಮೋಟಾರ್ಸ್‌

ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ಮಧ್ಯಮ ಗಾತ್ರದ ಐಷಾರಾಮಿ ಎಸ್‌ಯುವಿ ಆವೃತ್ತಿಯಾಗಿರುವ ಹವಾಲ್ ಬ್ರಾಂಡ್ ಹೊಸ ಕಾರುಗಳೊಂದಿಗೆ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗಿತ್ತು. ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಎಸ್‌ಯುವಿ, ಸೆಡಾನ್, ಎಂಪಿವಿ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಕಳೆದ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲೂ ಅನಾವರಣಗೊಳಿಸಿತ್ತು.

ಭಾರತದಲ್ಲಿ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟ ಗ್ರೇಟ್‌ವಾಲ್ ಮೋಟಾರ್ಸ್‌

ಭಾರತದಲ್ಲಿ ಉದ್ಯಮ ವ್ಯವಹಾರಕ್ಕಾಗಿ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ಬರೋಬ್ಬರಿ 1 ಬಿಲಿಯನ್ ಯುಎಸ್‌ಡಿ ಡಾಲರ್(ರೂ. 7 ಸಾವಿರ ಕೋಟಿ) ಹೂಡಿಕೆಗೆ ಒಪ್ಪಿಗೆ ಸೂಚಿಸುವ ಮೂಲಕ ಮಹಾರಾಷ್ಟ್ರದ ತಲೆಗಾಂವ್‌ನಲ್ಲಿ ಕಾರು ಉತ್ಪಾದನಾ ಘಟಕ ಆರಂಭಕ್ಕೂ ಚಾಲನೆ ನೀಡಲು ಸಿದ್ದತೆ ನಡೆಸಿತ್ತು.

ಭಾರತದಲ್ಲಿ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟ ಗ್ರೇಟ್‌ವಾಲ್ ಮೋಟಾರ್ಸ್‌

ಹೊಸ ಕಾರು ಉತ್ಪಾದನಾ ಘಟಕಕ್ಕಾಗಿ ಕಂಪನಿಯು ಜಿಎಂ ಕಂಪನಿಯ ಈ ಹಿಂದಿನ ಕಾರು ಘಟಕವನ್ನೇ ಖರೀದಿಗೆ ಮುಂದಾಗಿದ್ದ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ಎರಡು ಹಂತದ ಮಾತುಕತೆ ಕೂಡಾ ಮಾಡಿತ್ತು. ಇದರ ಜೊತಗೆ ನಮ್ಮ ಬೆಂಗಳೂರಿನಲ್ಲಿ ಆರ್‌ಡಿ(ಸಂಶೋಧನೆ ಮತ್ತು ಅಭಿವೃದ್ದಿ) ಕೇಂದ್ರವನ್ನು ತೆರೆಯಲು ಯೋಜನೆ ರೂಪಿಸಿದ್ದ ಕಂಪನಿಯು ಮೊದಲ ಹಂತದಲ್ಲಿಯೇ ಸುಮಾರು 3 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿತ್ತು.

ಭಾರತದಲ್ಲಿ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟ ಗ್ರೇಟ್‌ವಾಲ್ ಮೋಟಾರ್ಸ್‌

ಆದರೆ ವಿವಿಧ ಕಾರಣಾಂತರಗಳಿಂದ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಹೊಸ ಕಾರು ಉತ್ಪಾದನಾ ಘಟಕ ತೆರೆಯುವ ಯೋಜನೆಯನ್ನು ಕೈಬಿಟ್ಟಿದ್ದು, ಉತ್ಪಾದನಾ ಘಟಕ ಆರಂಭಕ್ಕಾಗಿ ನೇಮಕವಾಗಿದ್ದ ಹಿರಿಯ ಉದ್ಯೋಗಿಗಳನ್ನು ಇದೀಗ ಪಿಂಕ್ ಸ್ಲಿಪ್ ಮೂಲಕ ಅಧಿಕೃತವಾಗಿ ಭಾರತದಲ್ಲಿ ತನ್ನ ವ್ಯವಹಾರವನ್ನು ಮುಕ್ತಾಯಗೊಳಿಸಿದೆ.

ಭಾರತದಲ್ಲಿ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟ ಗ್ರೇಟ್‌ವಾಲ್ ಮೋಟಾರ್ಸ್‌

ಕೆಲವು ವರದಿಗಳ ಪ್ರಕಾರ ಭಾರತ-ಚೀನಾ ಗಡಿಯಲ್ಲಿನ ಉಭಯ ದೇಶಗಳ ನಡುವಿನ ಉದ್ವಿಗ್ನತೆಯಿಂದಾಗಿ ಚೀನಿ ಕಂಪನಿಗೆ ಅನುಮೋದನೆ ಪಡೆಯದಿರಲು ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಇದಲ್ಲದೆ ಏಪ್ರಿಲ್ 2020ರಿಂದ ಭಾರತದಲ್ಲಿ ಜಾರಿಯಾಗಿರುವ ಹೊಸ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಅನುಷ್ಠಾನದ ನಂತರದಲ್ಲೂ ಭಾರತದಲ್ಲಿನ ನಿಯಂತ್ರಕ ಅನುಮೋದನೆಗಳನ್ನು ಪಡೆಯುವಲ್ಲಿ ಚೀನಾ ಕಂಪನಿಗಳು ಸಮಸ್ಯೆಯನ್ನು ಎದುರಿಸುತ್ತಿವೆ.

ಭಾರತದಲ್ಲಿ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟ ಗ್ರೇಟ್‌ವಾಲ್ ಮೋಟಾರ್ಸ್‌

ಹೀಗಾಗಿ ಹಲವು ಪ್ರಯತ್ನಗಳ ನಂತರ ಭಾರತದಿಂದ ಹೊರಹೋಗಲು ನಿರ್ಧರಿಸಿರುವ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ತನ್ನ ಹೊಸ ಘಟಕ ಸ್ಥಾಪನೆ ಯೋಜನೆಯನ್ನು ಬ್ರೆಜಿಲ್‌ನಲ್ಲಿ ಸ್ಥಾಪಿಸುವ ಮುಂದಾಗಿದೆ ಎನ್ನಲಾಗಿದ್ದು, ಅಲ್ಲಿ ಕಂಪನಿಯು ಹೊಸ ಸ್ಥಾವರಕ್ಕಾಗಿ 2 ಶತಕೋಟಿ ಡಾಲರ್ ಹೂಡಿಕೆ ಮಾಡುತ್ತಿದೆ ಎನ್ನಲಾಗಿದೆ.

ಭಾರತದಲ್ಲಿ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟ ಗ್ರೇಟ್‌ವಾಲ್ ಮೋಟಾರ್ಸ್‌

ಭಾರತದಲ್ಲಿ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯನ್ನು ಮುನ್ನಡೆ ನಡೆಸಲು ಅಧ್ಯಕ್ಷ ಸ್ಥಾನ ವಹಿಸಿದ್ದ ಕೌಶಿಕ್ ಗಂಗೂಲಿ ಭಾರತದಲ್ಲಿ ಮಹತ್ವಾಂಕ್ಷಿ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಗಳನ್ನು ಹಂಚಿಕೊಂಡಿದ್ದರು. ಆದರೆ ಕಂಪನಿಯು ಎದುರಿಸಿದ್ದ ತಾಂತ್ರಿಕ ಕಾರಣಗಳಿಂದ ಕೌಶಿಕ್ ಗಂಗೂಲಿ ಕಳೆದ ಕೆಲ ದಿನಗಳ ಹಿಂದಷ್ಟೇ ಅಧ್ಯಕ್ಷ ಸ್ಥಾನಕ್ಕಾಗಿ ರಾಜೀನಾಮೆ ಸಲ್ಲಿಸಿದ್ದರು.

ಭಾರತದಲ್ಲಿ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟ ಗ್ರೇಟ್‌ವಾಲ್ ಮೋಟಾರ್ಸ್‌

ಕೇಂದ್ರ ಕಚೇರಿಯಲ್ಲಿ ಇನ್ನುಳಿದ ಏಳು ಉದ್ಯೋಗಿಗಳಿಗೂ ಇದೀಗ ಪಿಂಕ್ ಸ್ಲಿಪ್ ಮೂಲಕ ಅಧಿಕೃತವಾಗಿ ಭಾರತದಲ್ಲಿ ಕಾರು ಬಿಡುಗಡೆ ಯೋಜನೆಯನ್ನು ಕೈಬಿಡಲಾಗಿದ್ದು, ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಅನುಷ್ಠಾನವು ಚೀನಿ ಕಂಪನಿಗಳಿಗೆ ಭಾರೀ ಹೊಡೆತ ನೀಡುತ್ತಿದೆ.

ಭಾರತದಲ್ಲಿ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟ ಗ್ರೇಟ್‌ವಾಲ್ ಮೋಟಾರ್ಸ್‌

ಭಾರತದಲ್ಲಿ ಈಗಾಗಲೇ ಕಾರ್ಯನಿರ್ವಹಣೆ ಮಾಡುತ್ತಿರುವ ಹಲವು ಚೀನಿ ವಾಹನ ಉತ್ಪಾದನಾ ಕಂಪನಿಗಳು ಭಾರತದ ಪ್ರಮುಖ ವಾಹನ ಕಂಪನಿಗಳೊಂದಿಗೆ ಸಹಭಾಗೀತ್ವ ಯೋಜನೆ ಅಡಿ ನಿರ್ವಹಿಸುತ್ತಿದ್ದು, ಹೊಸದಾಗಿ ಆರಂಭಗೊಳ್ಳುವ ಯಾವುದೇ ವಾಣಿಜ್ಯ ಕಂಪನಿಗಳಿಗೂ ಅವಕಾಶ ನೀಡಲಾಗುತ್ತಿಲ್ಲ.

ಭಾರತದಲ್ಲಿ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟ ಗ್ರೇಟ್‌ವಾಲ್ ಮೋಟಾರ್ಸ್‌

ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ಚೀನಾದಲ್ಲಿ ಎಂಟನೇ ಅತಿ ದೊಡ್ಡ ವಾಹನ ತಯಾರಕ ಕಂಪನಿಯಾಗಿದ್ದು, ಇದು ಕಳೆದ ವರ್ಷ ಬರೋಬ್ಬರಿ 12.8 ಲಕ್ಷ ಕಾರುಗಳನ್ನು ಮಾರಾಟ ಮಾಡಿ ಎಸ್‌ಯುವಿ ಕಾರುಗಳ ವಿಭಾಗದಲ್ಲಿ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿ ಹೊರಹೊಮ್ಮಿದೆ.

ಭಾರತದಲ್ಲಿ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟ ಗ್ರೇಟ್‌ವಾಲ್ ಮೋಟಾರ್ಸ್‌

ವಿಶೇಷವಾಗಿ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ಶೇ. 90ರಷ್ಟು ಕಾರುಗಳನ್ನು ಎಸ್‌ಯುವಿ ವಿಭಾಗದಲ್ಲಿ ಬಿಡುಗಡೆ ಮಾಡುತ್ತಿದ್ದು, ಭಾರತದಲ್ಲೂ ಕೂಡಾ ಮೊದಲ ಹಂತದಲ್ಲಿಯೇ ಸುಮಾರು ಐದು ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿತ್ತು. ಆದರೆ ತಾಂತ್ರಿಕ ಕಾರಣ ಮತ್ತು ಗಡಿಯಲ್ಲಿನ ಉಭಯ ದೇಶಗಳ ನಡುವಿನ ಉದ್ವಿಗ್ನತೆಯಿಂದಾಗಿ ಭಾರತದಲ್ಲಿನ ಉದ್ಯಮ ವ್ಯವಹಾರ ಯೋಜನೆಯನ್ನು ಕೈಬಿಟ್ಟಿದೆ.

Most Read Articles

Kannada
English summary
Great wall motors india operations end details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X