Just In
- 9 hrs ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 10 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 10 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 10 hrs ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ ಎಂಜಿ ಹೆಕ್ಟರ್
ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ಇಂಡಿಯಾ ತನ್ನ ಅತ್ಯಂತ ಜನಪ್ರಿಯ ಹೆಕ್ಟರ್ ಎಸ್ಯುವಿಯನ್ನು ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ 2022ರ ಎಂಜಿ ಹೆಕ್ಟರ್ ಎಸ್ಯುವಿಯು ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.
ಭಾರತದಲ್ಲಿ ತ್ವರಿತವಾಗಿ ತನ್ನನ್ನು ತಾನು ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಬ್ರ್ಯಾಂಡ್ಗಳಲ್ಲಿ ಎಂಜಿ ಕೂಡ ಒಂದಾಗಿದೆ. ಎಂಜಿ ಕಂಪನಿಯು ಹೆಕ್ಟರ್, ಗ್ಲೋಸ್ಟರ್, ಆಸ್ಟರ್ ಮತ್ತು ಜೆಡ್ಎಸ್ ಇವಿ ಯಂತಹ ಮಾದರಿಗಳನ್ನು ಹೊಂದಿವೆ. ಎಂಜಿ ಮೋಟಾರ್ ಇಂಡಿಯಾ ಮೊದಲು ಬಿಡುಗಡೆಗೊಳಿಸಿದ ಮಾದರಿ ಹೆಕ್ಟರ್ ಆಗಿದೆ. ಈ ಎಸ್ಯುವಿಯನ್ನು 2019ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಇದನ್ನು 2021 ರಲ್ಲಿ ನವೀಕರಿಸಲ್ಪಟ್ಟಿದೆ. ಮತ್ತು ಇದೀಗ ಭಾರತದಲ್ಲಿ ನವೀಕರಿಸಿದ ಹೆಕ್ಟರ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.
ನವೀಕರಿಸಿದ ಈ ಹೊಸ ಎಂಜಿ ಹೆಕ್ಟರ್ ಎಸ್ಯುವಿಯು ಹಬ್ಬದ ಸೀಸನ್ ದೀಪಾವಳಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇತ್ತೀಚೆಗೆ ಎಂಜಿ ಮೋಟಾರ್ ಕಂಪನಿಯು ಈ ಹೊಸ ಹೆಕ್ಟರ್ ಎಸ್ಯುವಿಯ ಇಂಟಿರಿಯರ್ ಅನ್ನು ಬಹಿರಂಗಪಡಿಸುವ ಚಿತ್ರಗಳನ್ನು ಬಿಡುಗಡೆ ಮಾಡಿದೆ,
ಈ ಹೊಸ ಎಸ್ಯುವಿಯು 14-ಇಂಚಿನ ದೊಡ್ಡ ಪೋರ್ಟ್ರೇಟ್ HD ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂನೊಂದಿಗೆ ಹೊಸ ಡ್ಯುಯಲ್-ಟೋನ್ ಕ್ಯಾಬಿನ್ ಅನ್ನು ತೋರಿಸುತ್ತದೆ. ಹೊಸ ಹೆಕ್ಟರ್ನ ಒಳಾಂಗಣವನ್ನು 'ಸಿಂಫನಿ ಆಫ್ ಐಷಾರಾಮಿ' ಎಂದು ಪರಿಗಣಿಸಲಾಗಿದೆ ಎಂದು ಎಂಜಿ ಹೇಳಿಕೊಂಡಿದೆ.
ಈ ಹೊಸ ಮಾದರಿಯು ಡ್ಯುಯಲ್-ಟೋನ್ ಓಕ್ ವೈಟ್ ಮತ್ತು ಬ್ಲ್ಯಾಕ್ ಒಳಾಂಗಣವನ್ನು ಹೊಂದಿದೆ, ಜೊತೆಗೆ ಲಕ್ಷುರಿ ಬ್ರಷ್ಡ್ ಮೆಟಲ್ ಫಿನಿಶ್ ಹೊಂದಿದೆ. ಈ ಎಸ್ಯುವಿಯ ಡ್ಯಾಶ್ಬೋರ್ಡ್ ಅನ್ನು ಲೆದರ್ನ ಫಿನಿಶಿಂಗ್ ಹೊಂದಿದೆ ಮತ್ತು ಲೆದರ್ ಕವರ್ ಅನ್ನು ಡೋರ್ ಪ್ಯಾನಲ್ಗಳು, ಸ್ಟೀರಿಂಗ್ ವೀಲ್ ಮತ್ತು ಗೇರ್ ಶಿಫ್ಟ್ನಲ್ಲಿ ಸೇರಿಸಲಾಗಿದೆ.
ಇದು ಹೊಸ ಮಲ್ಟಿ-ಫಂಕ್ಷನಲ್ ಸ್ಟೀಯರಿಂಗ್ ವೀಲ್ ಮತ್ತು ಹೊಸ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಪಡೆಯುತ್ತದೆ. ಕ್ರೋಮ್ ಏರ್-ಕಾನ್ ವೆಂಟ್ಗಳಲ್ಲಿ ಮತ್ತು ಸ್ಟೀರಿಂಗ್ ವೀಲ್ನಲ್ಲಿ ಗೋಚರಿಸುತ್ತದೆ. ಈ ಹೊಸ ಹೆಕ್ಟರ್ 2022ರ ದೊಡ್ಡ 14-ಇಂಚಿನ HD ಪೋಟ್ರೇಟ್ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ನೊಂದಿಗೆ ಬರುತ್ತದೆ, ಇದು ನೆಕ್ಸ್ಟ್-ಜೆನ್ i-SMART ತಂತ್ರಜ್ಞಾನದೊಂದಿಗೆ ಬೆಂಬಲಿತವಾಗಿದೆ. ಹೊಸ ಟಚ್ಸ್ಕ್ರೀನ್ ಸ್ಪಂದಿಸುವ, ನಿಖರ ಮತ್ತು ತಡೆರಹಿತ ಅನುಭವವನ್ನು ನೀಡುತ್ತದೆ ಎಂದು ಹೇಳಲಾಗಿದೆ.
ಇದು ವೈರ್ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಜೊತೆಗೆ ಬರುತ್ತದೆ. ಎಸ್ಯುವಿಯು ಸಂಪೂರ್ಣ ಡಿಜಿಟಲ್ 7-ಇಂಚಿನ ಕಾನ್ಫಿಗರ್ ಮಾಡಬಹುದಾದ ಇನ್ಸ್ ಟ್ರೂಮೆಂಟ್ ಕನ್ಸೋಲ್ನೊಂದಿಗೆ ಬರುತ್ತದೆ. ಏರ್ ಕಾನ್ ವೆಂಟ್ಗಳು ಮತ್ತು ಇತರ ಕಾರ್ಯಗಳಿಗಾಗಿ ಯಾವುದೇ ಫಿಸಿಕಲ್ ಬಟನ್ಗಳಿಲ್ಲ, ಏಕೆಂದರೆ ಇವುಗಳಲ್ಲಿ ಹೆಚ್ಚಿನ ಕಾರ್ಯಗಳನ್ನು HD ಇನ್ಫೋಟೈನ್ಮೆಂಟ್ ಸಿಸ್ಟಂ ಮೂಲಕ ನಿರ್ವಹಿಸಲಾಗುತ್ತದೆ.
ಚಿತ್ರಗಳು ಆಟೋಮ್ಯಾಟಿಕ್ ಗೇರ್ಬಾಕ್ಸ್ ಅನ್ನು ತೋರಿಸುತ್ತವೆ ಮತ್ತು ಸೆಂಟ್ರಲ್ ಕನ್ಸೋಲ್ ವೈರ್ಲೆಸ್ ಫೋನ್ ಚಾರ್ಜಿಂಗ್ ಸಿಸ್ಟಮ್, ಸೆಲ್ಫ್ ಗೇರ್ಬಾಕ್ಸ್ ಅನ್ನು ತೋರಿಸುತ್ತವೆ ಮತ್ತು ಸೆಂಟ್ರಲ್ ಕನ್ಸೋಲ್ ವೈರ್ಲೆಸ್ ಫೋನ್ ಚಾರ್ಜಿಂಗ್ ಸಿಸ್ಟಂ, ಆಟೋಮ್ಯಾಟಿಕ್ ಪಾರ್ಕಿಂಗ್ ಲಾಕ್ ಮತ್ತು ಇತರವುಗಳನ್ನು ಕೂಡ ಹೊಂದಿದೆ.
ಈ ಹೊಸ ಹೆಕ್ಟರ್ ಎಸ್ಯುವಿಯು ಕನೆಕ್ಟಿವಿಟಿ ಕಾರ್ ವೈಶಿಷ್ಟ್ಯಗಳಿಗಾಗಿ ಜಿಯೋ ಇ-ಸಿಮ್ ಮತ್ತು ಫೋನ್ನಲ್ಲಿ ಅಳವಡಿಸಬಹುದಾದ ಡಿಜಿಟಲ್ ಕೀಯೊಂದಿಗೆ ಬರುವ ನಿರೀಕ್ಷೆಯಿದೆ. ಈ ಎಸ್ಯುವಿ ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಜೊತೆಗೆ ಫಾರ್ವರ್ಡ್ ಕೊಲಿಷನ್ ವಾರ್ನಿಂಗ್, ಲೇನ್-ಕೀಪ್ ಅಸಿಸ್ಟ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಸ್ಪೀಡ್ ವಾರ್ನಿಂಗ್, ಇಂಟೆಲಿಜೆಂಟ್ ಮುಂತಾದ ವೈಶಿಷ್ಟ್ಯಗಳೊಂದಿಗೆ ಬರುವ ಸಾಧ್ಯತೆಗಳಿದೆ,
ಇತ್ತೀಚಿನ ಟೀಸರ್ ವೀಡಿಯೊದಲ್ಲಿ ಹೊಸ ಹೆಕ್ಟರ್ ಮುಂಭಾಗವನ್ನು ಹೊಸದಾಗಿ ವಿನ್ಯಾಸಗೊಳಿಸಿದ ಕ್ರೋಮ್ ಗ್ರಿಲ್ ಮತ್ತು ಅದರ ಸಿಲೂಯೆಟ್ ಅನ್ನು ತೋರಿಸುತ್ತದೆ. ಹೆಡ್ಲ್ಯಾಂಪ್ಗಳು ಮತ್ತು ಟೈಲ್ಲ್ಯಾಂಪ್ಗಳನ್ನು ಸಹ ಪರಿಷ್ಕರಿಸಲಾಗುವುದು ಎಂದು ಸ್ಪೈ ಚಿತ್ರಗಳು ಬಹಿರಂಗಪಡಿಸಿದೆ. ಹೆಕ್ಟರ್ ಎಸ್ಯುವಿಯ ಮಿಡ್ ಸೈಜ್ ಎಸ್ಯುವಿ ವಿಭಾಗದಲ್ಲಿ ಹೆಕ್ಟರ್ ಹೆಚ್ಚು ಮಾರಾಟವಾದ ಎಸ್ಯುವಿಗಳಲ್ಲಿ ಒಂದಾಗಿದೆ. ಆದರೆ ಮಹೀಂದ್ರಾ XUV700 ಆಗಮನದೊಂದಿಗೆ, ಹೆಕ್ಟರ್ ಬೇಡಿಕೆಯು ಕುಸಿತ ಕಂಡಿದೆ,
ಟಾಟಾ ಸಫಾರಿ ಮತ್ತು ಹ್ಯಾರಿಯರ್ ಕೂಡ ಎಂಜಿ ಹೆಕ್ಟರ್ ಎಸ್ಯುವಿಯನ್ನು ಮಾರಾಟದಲ್ಲಿ ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹೆಕ್ಟರ್ ಎಸ್ಯುವಿಯು ಹೊಸ ನವೀಕರಣದ ಸಹಾಯದಿಂದ, ಕಳೆದುಹೋದ ಕೆಲವು ಮಾರುಕಟ್ಟೆ ಪಾಲನ್ನು ಮರಳಿ ಪಡೆಯಲು ಎಂಜಿ ಆಶಿಸುತ್ತಿದೆ. ಹೆಕ್ಟರ್ ಸ್ಪಾಟ್ ಟೆಸ್ಟ್ ನಡೆಸುವ ಸ್ಪೈ ಚಿತ್ರಗಳು ಈಗಗಾಲೇ ಬಹಿರಂಗವಾಗಿದೆ. ಈ ಎಸ್ಯುವಿಯ ಒಳಭಾಗದಲ್ಲಿ, ಸ್ವಲ್ಪ ಮರುವಿನ್ಯಾಸದೊಂದಿಗೆ ಸ್ವಲ್ಪ ಹೆಚ್ಚು ಪ್ರೀಮಿಯಂ ಒಳಾಂಗಣಗಳೊಂದಿಗೆ ಬರಲಿದೆ. ಇನ್ಫೋಟೈನ್ಮೆಂಟ್ ಡಿಸ್ ಪ್ಲೇ ಕನಿಷ್ಟ ಬೆಜೆಲ್ಗಳೊಂದಿಗೆ ದೊಡ್ಡದಾಗಬಹುದು ಮತ್ತು ಸಾಫ್ಟ್ವೇರ್ ಮುಂಭಾಗದಲ್ಲಿ ಸ್ವಲ್ಪ ಉತ್ತಮ ಗ್ರಾಫಿಕ್ಸ್ ಅನ್ನು ಹೊಂದಿದೆ.
ಈ ಎಂಜಿ ಹೆಕ್ಟರ್ ಎಸ್ಯುವಿಯಲ್ಲಿ ಅದೇ 1.5 ಲೀಟರ್ ಟಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 143 ಬಿಹೆಚ್ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇನ್ನು ಈ ಎಸ್ಯುವಿಯಲ್ಲಿ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 143 ಬಿಹೆಚ್ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಈ ಎಂಜಿ ಹೆಕ್ಟರ್ ಮಾದರಿಯು ಉತ್ತಮ ಸ್ಪೇಸ್ ಅನ್ನು ಮತ್ತು ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರುವ ಎಸ್ಯುವಿಯಾಗಿದೆ.
ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಈ ಎಂಜಿ ಹೆಕ್ಟರ್ ಎಸ್ಯುವಿಯು ಹೊಸ ನವೀಕರಣಗಳನ್ನು ಪಡೆಯಲಿದೆ. ಎಂಜಿ ಇಂಟಿರಿಯರ್ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಎಸ್ಯುವಿಯ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ, ಈ ಎಂಜಿ ಹೆಕ್ಟರ್ ಎಸ್ಯುವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ಜೀಪ್ ಕಂಪಾಸ್, ಮಹೀಂದ್ರಾ ಎಕ್ಸ್ಯುವಿ 500 ಮತ್ತು ಟಾಟಾ ಹ್ಯಾರಿಯರ್ ಎಸ್ಯುವಿಗಳಿಗೆ ಪೈಪೋಟಿ ನೀಡುತ್ತಿದೆ.