ಆಗಸ್ಟ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಹ್ಯುಂಡೈ ಕಾರುಗಳು...

ಭಾರತದಲ್ಲಿ ಮಾರುತಿ ಸುಜುಕಿಯಂತಹ ಕಾರುಗಳೊಂದಿಗೆ ಸ್ಪರ್ಧಿಸುವ ದೇಶದ ಪ್ರಮುಖ ವಾಹನ ತಯಾರಕರಲ್ಲಿ ಹ್ಯುಂಡೈ ಒಂದಾಗಿದೆ. ಹ್ಯುಂಡೈ ಮೋಟಾರ್ ಇಂಡಿಯಾ ಕಂಪನಿಯು ಇತ್ತೀಚೆಗೆ 2022ರ ಜುಲೈ ತಿಂಗಳ ವಾಹನ ಮಾರಾಟದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.

ಆಗಸ್ಟ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಹ್ಯುಂಡೈ ಕಾರುಗಳು...

ಈ ಮಾರಾಟ ವರದಿಯ ಪ್ರಕಾರ, ಕಳೆದ ತಿಂಗಳಿನಲ್ಲಿ ಕೊರಿಯನ್ ವಾಹನ ತಯಾರಕ ಹ್ಯುಂಡೈ ಒಟ್ಟು 49,510 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ಹ್ಯುಂಡೈ ಕಾರುಗಳು ಕಳೆದ ತಿಂಗಳಿನಲ್ಲಿ ಭರ್ಜರಿ ಮಾರಾಟವನ್ನು ಕಂಡಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ 46,866 ಯುನಿಟ್‌ಗಳನ್ನು ಮಾರಾಟ ಮಾಡಿದ್ದರು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.5.64 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಕಳೆದ ತಿಂಗಳು 2,644 ಯುನಿಟ್‌ಗಳು ಹೆಚ್ಚು ಮಾರಾಟವಾಗಿದೆ. ಇನ್ನು ಕಳೆದ ತಿಂಗಳು ದೇಶದಲ್ಲಿ ಹೆಚ್ಚು ಮಾರಾಟವಾದ ಮೂರು ಹ್ಯುಂಡೈ ಮಾದರಿಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ಆಗಸ್ಟ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಹ್ಯುಂಡೈ ಕಾರುಗಳು...

ಹ್ಯುಂಡೈ ಕ್ರೆಟಾ

2022ರ ಆಗಸ್ಟ್ ತಿಂಗಳಿನಲ್ಲಿ ಕ್ರೆಟಾ ಕಂಪನಿಯ ಹೆಚ್ಚು ಮಾರಾಟವಾದ ಮಾದರಿಯಾಗಿ ಉಳಿಸಿಕೊಂಡಿದೆ. ಹ್ಯುಂಡೈ ಕಂಪನಿಯು ಕಳೆದ ತಿಂಗಳು ಭಾರತದಲ್ಲಿ 12,577 ಯುನಿಟ್ ಕ್ರೆಟಾವನ್ನು ಮಾರಾಟ ಮಾಡಿದೆ, 2021ರ ಆಗಸ್ಟ್ ತಿಂಗಳಿನಲ್ಲಿ ಕ್ರೆಟಾದ 12,597 ಯುನಿಟ್ ಗಳನ್ನು ಮಾರಾಟ ಮಾಡಿದೆ. ಇದರಿಂದಾಗಿ ಸರಿಸುಮಾರು ಒಂದೇ ರೀತಿಯ ಮಾರಾಟ ಸಂಖ್ಯೆಗಳನ್ನು ಹೊಂದಿದೆ.

ಆಗಸ್ಟ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಹ್ಯುಂಡೈ ಕಾರುಗಳು...

ಈ ಹ್ಯುಂಡೈ ಕ್ರೆಟಾದಲ್ಲಿ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯ ಮಾರಾಟವನ್ನು ಹೊಂದಿದೆ. ಕ್ರೆಟಾ ಆವೃತ್ತಿಯಲ್ಲಿ ಈ ಹಿಂದೆ ನೀಡಲಾಗುತ್ತಿದ್ದ 1.6-ಲೀಟರ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಅನ್ನು ತೆಗೆದುಹಾಕಲಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಹ್ಯುಂಡೈ ಕಾರುಗಳು...

ಈ ಹೊಸ ಎಮಿಷನ್ ಜಾರಿ ನಂತರ ಸಾಮಾನ್ಯ ಮಾದರಿಯಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಹಾಗೂ ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಜೋಡಿಸಲಾಗಿದೆ. ಇದು 1.5-ಲೀಟರ್ ಪೆಟ್ರೋಲ್ ಆವೃತ್ತಿಯು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಆಗಸ್ಟ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಹ್ಯುಂಡೈ ಕಾರುಗಳು...

ಇನ್ನು 1.5-ಲೀಟರ್ ಡೀಸೆಲ್ ಮಾದರಿಯು ಸಹ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಆಗಸ್ಟ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಹ್ಯುಂಡೈ ಕಾರುಗಳು...

ಹುಂಡೈ ವೆನ್ಯೂ

ಹುಂಡೈ ವೆನ್ಯೂ ಕಳೆದ ತಿಂಗಳು ಭಾರತದಲ್ಲಿ ಕಂಪನಿಗೆ ಎರಡನೇ ಹೆಚ್ಚು ಮಾರಾಟವಾದ ಮಾದರಿಯಾಗಿ ಹೊರಹೊಮ್ಮಿತು. ಕಳೆದ ತಿಂಗಳಿನಲ್ಲಿ ಮಾರಾಟವಾದ ವೆನ್ಯೂಕಾಂಪ್ಯಾಕ್ಟ್ ಎಸ್‍ಯುವಿಯ 11,240 ಯುನಿಟ್ ಮಾರಾಟವನ್ನು ಕಳೆದ ವರ್ಷದ ಇದೇ ಅವಧಿಯಲ್ಲಿ 8,377 ಯುನಿಟ್ ಮಾರಾಟಕ್ಕೆ ಹೋಲಿಸಿದರೆ, 34 ಪ್ರತಿಶತದಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಆಗಸ್ಟ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಹ್ಯುಂಡೈ ಕಾರುಗಳು...

ಕಂಪನಿಯು ಇತ್ತೀಚೆಗೆ ವೆನ್ಯೂ ಫೇಸ್‌ಲಿಫ್ಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಹೊಸ ಹ್ಯುಂಡೈ ವೆನ್ಯೂ ಗಮನಾರ್ಹವಾಗಿ ಪರಿಷ್ಕೃತ ವಿನ್ಯಾಸದೊಂದಿಗೆ ಬರುತ್ತದೆ, ಏಕೆಂದರೆ ಇದು ಬ್ರ್ಯಾಂಡ್‌ನ ಹೊಸ ಸೆನ್ಸೌಸ್ ಸ್ಪೋರ್ಟಿನೆಸ್ ವಿನ್ಯಾಸದ ತತ್ತ್ವಶಾಸ್ತ್ರವನ್ನು ಒಳಗೊಂಡಿದೆ. ಮುಂಭಾಗದ ವಿನ್ಯಾಸವು ಹೊಸ ಟ್ಯೂಸಾನ್ ಮತ್ತು ಪಾಲಿಸೇಡ್ ಎಸ್‍ಯುವಿಗಳಿಂದ ಹೆಚ್ಚು ಪ್ರೇರಿತವಾಗಿದೆ. ಈ ಹೊಸ ವೆನ್ಯೂ ಎಸ್‍ಯುವಿಯಲ್ಲಿ ಡಾರ್ಕ್ ಕ್ರೋಮ್‌ನೊಂದಿಗೆ ಹೊಸ ಗ್ರಿಲ್ ಅನ್ನು ಒಳಗೊಂಡಿರುವ ಪರಿಷ್ಕೃತ ಮುಂಭಾಗದ ಫಾಸಿಕದೊಂದಿಗೆ ಬರುತ್ತದೆ.

ಆಗಸ್ಟ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಹ್ಯುಂಡೈ ಕಾರುಗಳು...

ಕೆಳಗಿನ ಬಂಪರ್ ಸ್ಪೋರ್ಟಿ ಲುಕ್ ಗಾಗಿ ಹೆಚ್ಚು ಸ್ಪಷ್ಟವಾದ ಫಾಕ್ಸ್ ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್ ಜೊತೆಗೆ ಎಲ್ಇಡಿ DRL ಗಳನ್ನು ಮೇಲ್ಭಾಗದಲ್ಲಿ ಮತ್ತು ಮುಖ್ಯ ಹೆಡ್‌ಲ್ಯಾಂಪ್ ಕೆಳಗಿರುತ್ತದೆ. ಮೇಲಿನ ಲೈಟಿಂಗ್ ಗ್ರಿಲ್ನ ವಿಸ್ತರಣೆಯಂತೆ ಕಾಣುತ್ತದೆ. ಈ ಹೊಸ ವೆನ್ಯೂ ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಈ 2022ರ ಹ್ಯುಂಡೈ ವೆನ್ಯೂ ಸೈಡ್ ಪ್ರೊಫೈಲ್ ಪ್ರಸ್ತುತ ಮಾದರಿಗೆ ಹೆಚ್ಚಾಗಿ ಹೋಲುತ್ತದೆ. ಆದರೆ ಇದು ಹೊಸ ಅಲಾಯ್ ವ್ಹೀಲ್ ಗಳು ಮತ್ತು ವೀಲ್ ಕ್ಯಾಪ್ ಪಡೆಯುತ್ತದೆ.

ಆಗಸ್ಟ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಹ್ಯುಂಡೈ ಕಾರುಗಳು...

ಈ 2022ರ ವೆನ್ಯೂ ಮಾದರಿಯಲ್ಲಿ ಕಂಪನಿಯು ಈ ಹಿಂದಿನಂತೆಯೇ 1.2 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್, 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಹೊಸ ಕಾರಿನಲ್ಲಿ ವಿವಿಧ ಎಂಜಿನ್ ಆಯ್ಕೆಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್, 6-ಸ್ಪೀಡ್ ಮ್ಯಾನುವಲ್ ಮತ್ತು 6 -ಸ್ಪೀಡ್ ಐಎಂಟಿ ಗೇರ್‌ಬಾಕ್ಸ್ ಮತ್ತು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಮಾದರಿಗಳನ್ನು ಪರಿಚಯಿಸಿತು.

ಆಗಸ್ಟ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಹ್ಯುಂಡೈ ಕಾರುಗಳು...

ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್

ಈ ಕಾರು ಭಾರತದಲ್ಲಿ ಕಂಪನಿಗೆ ಮೂರನೇ ಅತಿ ಹೆಚ್ಚು ಮಾರಾಟವಾದ ಮಾದರಿಯಾಗಿ ಹೊರಹೊಮ್ಮಿದೆ, ಹ್ಯುಂಡೈ ಇಂಡಿಯಾ ಆಗಸ್ಟ್ 2021 ರಲ್ಲಿ 8,023 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಕಳೆದ ತಿಂಗಳು 9,274 ಗ್ರ್ಯಾಂಡ್ ಐ10 ನಿಯೋಸ್ ಅನ್ನು ಮಾರಾಟ ಮಾಡಿದೆ, ಆ ಮೂಲಕ 16 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ.

ಆಗಸ್ಟ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಹ್ಯುಂಡೈ ಕಾರುಗಳು...

ಕಂಪನಿಯು ಕಳೆದ ತಿಂಗಳು ದೇಶದಲ್ಲಿ ಹೊಸ ಕಾರ್ಪೊರೇಟ್ ಆವೃತ್ತಿ ರೂಪಾಂತರವನ್ನು ಪರಿಚಯಿಸಿತು. ಇನ್ನು ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ನಾಲ್ಕು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಬೇಸ್ ಎಂಜಿನ್ ಆಯ್ಕೆಯು 1.2-ಲೀಟರ್ ನ್ಯಾಚುರಲ್ ಆಸ್ಪೈರಡ್ ಪೆಟ್ರೋಲ್ ಎಂಜಿನ್ ಆಗಿದ್ದು. ಇದು 82 ಬಿಹೆಚ್‍ಪಿ ಪವರ್ ಮತ್ತು 121 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದರೊಂದಿಗೆ 99 ಬಿಹೆಚ್‍ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ,

ಆಗಸ್ಟ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಹ್ಯುಂಡೈ ಕಾರುಗಳು...

ಮತ್ತೊಂದೆಡೆ, 1.2-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 74 ಬಿಹೆಚ್‌ಪಿ ಪವರ್ ಮತ್ತು 190 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕೊನೆಯ ಎಂಜಿನ್ ಆಯ್ಕೆಯು 1.2-ಲೀಟರ್ ನ್ಯಾಚುರಲ್ ಆಸ್ಪೈರಡ್ ಪೆಟ್ರೋಲ್ ಎಂಜಿನ್‌ನ CNG ಆವೃತ್ತಿಯಾಗಿದೆ

Most Read Articles

Kannada
English summary
Here is list hyundai top 3 bestselling cars in august 2022 details
Story first published: Monday, September 12, 2022, 19:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X