ಈ ಕಾರಣಗಳಿಂದಲೇ ರೋಲ್ಸ್‌ ರಾಯ್ಸ್‌ ಫ್ಯಾಂಟಮ್ ಕಾರು ಹೆಲಿಕಾಪ್ಟರ್‌ಗಿಂತ ದುಬಾರಿ

ವಿಶ್ವದ ದುಬಾರಿ ಹಾಗೂ ಐಷಾರಾಮಿ ಕಾರು ಎಂದಾಕ್ಷಣ ನಮಗೆ ನೆನಪಾಗುವ ಕಾರುಗಳಲ್ಲಿ ರೋಲ್ಸ್ ರಾಯ್ಸ್ ಕೂಡ ಒಂದು. ಈ ವಾಹನದ ಬೆಲೆಯಂತೆಯೇ ಕಾರು ಹಲವು ವೈಶಿಷ್ಟಗಳನ್ನು ಒಳಗೊಂಡಿದ್ದು, ಭಾರತದಲ್ಲಿ ಒಂದು ಸಾಮಾನ್ಯ ಹೆಲಿಕಾಪ್ಟರ್‌ ಬೆಲೆಗಿಂತಲೂ ದುಬಾರಿ ವಾಹನ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.

ಈ ಕಾರಣಗಳಿಂದಲೇ ರೋಲ್ಸ್‌ ರಾಯ್ಸ್‌ ಫ್ಯಾಂಟಮ್ ಕಾರು ಹೆಲಿಕಾಪ್ಟರ್‌ಗಿಂತ ದುಬಾರಿ

ರೋಲ್ಸ್ ರಾಯ್ಸ್‌ನ ಇತ್ತೀಚಿನ ಮಾದರಿಯಾದ ಫ್ಯಾಂಟಮ್ ಕಾರು ಕಂಪನಿಯ ಅತ್ಯಂತ ದುಬಾರಿ ಕಾರು ಮಾದರಿಯಾಗಿದ್ದು, ಭಾರತದಲ್ಲಿ ಹೆಲಿಕಾಪ್ಟರ್‌ಗಿಂತಲೂ ಹೆಚ್ಚಿನ ಬೆಲೆಗೆ ಇತ್ತೀಚೆಗೆ ಮಾರಾಟವಾಗಿದೆ. ಸುಮಾರು 10 ಕೋಟಿ ರೂ.ಗೂ ಅಧಿಕ ಬೆಲೆಗೆ ಮಾರಾಟವಾಗಿದೆ ಎಂದು ವರದಿಯೊಂದು ತಿಳಿಸಿದೆ.

ಈ ಕಾರಣಗಳಿಂದಲೇ ರೋಲ್ಸ್‌ ರಾಯ್ಸ್‌ ಫ್ಯಾಂಟಮ್ ಕಾರು ಹೆಲಿಕಾಪ್ಟರ್‌ಗಿಂತ ದುಬಾರಿ

ಈ ಕಂಪನಿಯ ಮಾದರಿಗಳು ಇಷ್ಟೊಂದು ಗರಿಷ್ಠ ಬೆಲೆಗಳಿಗೆ ಮಾರಾಟವಾಗಲು ಕಾರಣವೇನು? ಎಂಬುದರ ಕುರಿತು ಸಂಪೂರ್ಣ ವಿವರವನ್ನು ಯೂಟ್ಯೂಬ್ ಚಾನೆಲ್‌ವೊಂದು ವಿಡಿಯೋ ರೂಪದಲ್ಲಿ ಬಿಡುಗಡೆ ಮಾಡಿದ್ದು, ಕಾರಿನ ಬೆಲೆಯಿಂದ ಹಿಡುದು ಅದರ ವೈಶಿಷ್ಟಗಳವರೆಗೂ ವಿವರಿಸಲಾಗಿದೆ. ಈ ಕುರಿತ ಮಾಹಿತಿಯನ್ನು ಇಲ್ಲಿ ನೋಡಬಹುದು..

ಈ ಕಾರಣಗಳಿಂದಲೇ ರೋಲ್ಸ್‌ ರಾಯ್ಸ್‌ ಫ್ಯಾಂಟಮ್ ಕಾರು ಹೆಲಿಕಾಪ್ಟರ್‌ಗಿಂತ ದುಬಾರಿ

ಯೂಟ್ಯೂಬ್ ಚಾನೆಲ್‌ನಲ್ಲಿ ಕಾಣಿಸಿಕೊಂಡಿರುವ ರಜನಿ ಚೌಧರಿ ಎಂಬ ಯುವತಿ ರೋಲ್ಸ್ ರಾಯ್ಸ್ ಕಂಪನಿಯ ಇತಿಹಾಸದಿಂದ ಹಿಡಿದು ಪ್ರಸ್ತುದವರೆಗೂ ತಮ್ಮ ಚಾನಲ್‌ನಲ್ಲಿ ವಿವರಿಸಿದ್ದಾರೆ. "ರೋಲ್ಸ್ ರಾಯ್ಸ್ ಅನ್ನು ಚಾರ್ಲ್ಸ್ ರೋಲ್ಸ್ ರಾಯ್ಸ್ ಮತ್ತು ಹೆನ್ರಿ ರಾಯ್ಸ್ ಪ್ರಾರಂಭಿಸಿದರು, ಅವರು ಕಾರುಗಳನ್ನು ತಯಾರಿಸುವುದರ ಜೊತೆಗೆ ವಿಮಾನಗಳಿಗೆ ದೊಡ್ಡ ಪ್ರಮಾಣದ ಎಂಜಿನ್‌ಗಳನ್ನು ಸಹ ಅಭಿವೃದ್ಧಿಪಡಿಸುತ್ತಿದ್ದರು.

ಈ ಕಾರಣಗಳಿಂದಲೇ ರೋಲ್ಸ್‌ ರಾಯ್ಸ್‌ ಫ್ಯಾಂಟಮ್ ಕಾರು ಹೆಲಿಕಾಪ್ಟರ್‌ಗಿಂತ ದುಬಾರಿ

ನಂತರ 1998 ರಲ್ಲಿ ವೋಕ್ಸ್‌ವ್ಯಾಗನ್ ಕಂಪನಿ ರೋಲ್ಸ್‌ ರಾಯ್ಸ್ ಅನ್ನು ಖರೀದಿಸಿತು. ನಂತರ ಕೆಲ ಅನಿವಾರ್ಯ ಕಾರಣಗಳಿಂದಾಗಿ ವೋಕ್ಸ್‌ವ್ಯಾಗನ್ ರೋಲ್ಸ್ ರಾಯ್ಸ್ ಅನ್ನು BMW ಕಂಪನಿಗೆ ಮಾರಾಟ ಮಾಡಿತ್ತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬಿಎಂಡಬ್ಲ್ಯು ರೋಲ್ಸ್ ರಾಯ್ಸ್ ಬ್ರಾಂಡ್ ಅನ್ನು ಮಾತ್ರ ಮಾರಾಟ ಮಾಡಿತ್ತು. ಇದರ ಸ್ಪಿರಿಟ್ ಆಫ್ ಎಕ್ಸ್ಟಸಿಯನ್ನು ಹಾಗೇ ಉಳಿಸಿಕೊಂಡಿತ್ತು. ಆದ್ದರಿಂದ BMW ಮತ್ತೊಮ್ಮೆ 40 ಮಿಲಿಯನ್ ಡಾಲರ್‌ ವೆಚ್ಚಿಸಿ ಸ್ಪಿರಿಟ್ ಆಫ್ ಎಕ್ಸ್‌ಟಸಿಯನ್ನು ಖರೀದಿಸಿತು.

ಈ ಕಾರಣಗಳಿಂದಲೇ ರೋಲ್ಸ್‌ ರಾಯ್ಸ್‌ ಫ್ಯಾಂಟಮ್ ಕಾರು ಹೆಲಿಕಾಪ್ಟರ್‌ಗಿಂತ ದುಬಾರಿ

ಇನ್ನು ಈ ಕಾರಿನ ದುಬಾರಿ ಬೆಲೆಗೆ ಪ್ರಮುಖ ಕಾರಣಗಳೆಂದರೆ, ಮೊದಲಿಗೆ ರೋಲ್ಸ್ ರಾಯ್ಸ್ ಫ್ಯಾಂಟಮ್‌ನ ವಿನ್ಯಾಸ. ಇದು ರಾಯಲ್‌ ಲುಕ್‌ನಲ್ಲಿ ಕಾಣಲು ಕಂಪನಿ ಐಷಾರಾಮಿ ಬಿಡಿಭಾಗಗಳನ್ನು ಬಳಿಸಿದೆ. ಕಾರಿನ ಮುಂಭಾಗದಲ್ಲಿ ದೊಡ್ಡ ರೋಲ್ಸ್ ರಾಯ್ಸ್ ಗ್ರಿಲ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಒಳಗೊಂಡ ಮುಂಭಾಗವು ಒಂದು ಐಷಾರಾಮಿ ದೈತ್ಯ ಹಡಗನ್ನು ನೋಡಿದ ಭಾವನೆಯನ್ನು ನೀಡುತ್ತದೆ.

ಈ ಕಾರಣಗಳಿಂದಲೇ ರೋಲ್ಸ್‌ ರಾಯ್ಸ್‌ ಫ್ಯಾಂಟಮ್ ಕಾರು ಹೆಲಿಕಾಪ್ಟರ್‌ಗಿಂತ ದುಬಾರಿ

ಇನ್ನು 22 ಇಂಚಿನ ಅಲಾಯ್ ವ್ಹೀಲ್‌ಗಳನ್ನು ರೋಲ್ಸ್ ರಾಯ್ಸ್ ಬ್ಯಾಡ್ಜ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಈ ಬ್ಯಾಡ್ಜ್‌ಗೊಂದು ವಿಶೇಷತೆಯೂ ಇದೆ, ವಾಹನ ಚಲಿಸುತ್ತಿದ್ದರೂ ಚಕ್ರದ ಮಧ್ಯಭಾಗದಲ್ಲಿರುವ ಬ್ಯಾಡ್ಜ್ ಮಾತ್ರ ನೇರವಾಗಿ ನಿಲ್ಲುತ್ತದೆ. ಇಂತಹ ಹಲವು ವಿಶೇಷತೆಗಳಿಂದಲೇ ರೋಲ್ಸ್ ರಾಯ್ಸ್ ಕಂಪನಿ, ವಾಹನ ರಂಗದಲ್ಲಿ ತನ್ನ ಅಸ್ತಿತ್ವವನ್ನು ಇಂದಿಗೂ ಉಳಿಸಿಕೊಂಡಿದೆ.

ಈ ಕಾರಣಗಳಿಂದಲೇ ರೋಲ್ಸ್‌ ರಾಯ್ಸ್‌ ಫ್ಯಾಂಟಮ್ ಕಾರು ಹೆಲಿಕಾಪ್ಟರ್‌ಗಿಂತ ದುಬಾರಿ

ಕಾರಿನ ಹಿಂಭಾಗವು ತುಂಬಾ ಸರಳವಾಗಿ ಕಾಣುತ್ತದೆಯಾದರೂ ಅದೇ ಸಮಯದಲ್ಲಿ ತುಂಬಾ ಸೊಗಸಾಗಿಯೂ ಕಾಣುತ್ತದೆ. ಈ ಐಷಾರಾಮಿ ಕಾರಿನಲ್ಲಿ ಅತ್ಯಂತ ಪರಿಣಾಮಕಾರಿ ಡಿಸ್ಚಾರ್ಜ್ ಅನ್ನು ಸುಲಭಗೊಳಿಸಲು ಟ್ವಿನ್ ಎಕ್ಸಾಸ್ಟ್ ಸಿಸ್ಟಮ್ ಅನ್ನು ಬಳಸಲಾಗಿದೆ. ಇದಲ್ಲದೆ, ಹೆಚ್ಚಿನ ಇಂಧನ ತುಂಬಲು ಕಾರಿನಲ್ಲಿ ಬರೋಬ್ಬರಿ 100 ಲೀಟರ್ ಇಂಧನ ಟ್ಯಾಂಕ್ ಅನ್ನು ಅಳವಡಿಸಲಾಗಿದೆ.

ಈ ಕಾರಣಗಳಿಂದಲೇ ರೋಲ್ಸ್‌ ರಾಯ್ಸ್‌ ಫ್ಯಾಂಟಮ್ ಕಾರು ಹೆಲಿಕಾಪ್ಟರ್‌ಗಿಂತ ದುಬಾರಿ

ಇದರ ಮೈಲೇಜ್ ಸಾಮರ್ಥ್ಯವನ್ನು ಕೇಳಿದರೆ ನೀವು ದಂಗಾಗಬಹುದು. ಮಾಹಿತಿಯ ಪ್ರಕಾರ, ಈ ಕಾರುಗಳು ಪ್ರತಿ ಲೀಟರ್‌ಗೆ ಕೇವಲ 9.8 ಕಿಮೀ ಮೈಲೇಜ್ ನೀಡುತ್ತವೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ ನಿಜ ಜೀವನದಲ್ಲಿ ಓಡಿಸುವವರ ಮಾಹಿತಿಯಂತೆ ಕೇವಲ 8 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ವರದಿಯಾಗಿದೆ.

ಈ ಕಾರಣಗಳಿಂದಲೇ ರೋಲ್ಸ್‌ ರಾಯ್ಸ್‌ ಫ್ಯಾಂಟಮ್ ಕಾರು ಹೆಲಿಕಾಪ್ಟರ್‌ಗಿಂತ ದುಬಾರಿ

ಕಾರಿನ ಒಳಭಾಗವನ್ನು ಕಪ್ಪು ಮತ್ತು ಕಂದು ಬಣ್ಣದಲ್ಲಿ ಅಲಂಕರಿಸಿ, ಕಾರ್ಪೆಟ್‌ಗಳನ್ನು ಡೇನ್ ಬ್ರೌನ್‌ನಲ್ಲಿ ಚಿತ್ರಿಸಲಾಗಿದೆ. ಕಾರಿನ ಒಳಭಾಗದಲ್ಲಿ ಫ್ಯಾಬ್ರಿಕ್ ಕರ್ಟನ್, ಅಂಬ್ರೆಲಾ, ಎಲೆಕ್ಟ್ರಿಕ್ ಓಪನ್ ಡೋರ್‌ಗಳು, ವೆಂಟಿಲೇಟೆಡ್ ಸೀಟ್ ಮತ್ತು ಹಿಂಭಾಗದಲ್ಲಿ ಪ್ರತ್ಯೇಕ ಹವಾಮಾನ ನಿಯಂತ್ರಣ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

ಈ ಕಾರಣಗಳಿಂದಲೇ ರೋಲ್ಸ್‌ ರಾಯ್ಸ್‌ ಫ್ಯಾಂಟಮ್ ಕಾರು ಹೆಲಿಕಾಪ್ಟರ್‌ಗಿಂತ ದುಬಾರಿ

ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರಿನಲ್ಲಿ ತುರ್ತು ನಿರ್ಗಮನ ಬಾಗಿಲುಗಳನ್ನು ಸಹ ನೀಡಲಾಗಿದೆ. ಇದರಿಂದ ಪ್ರಯಾಣಿಕರು ಸುಲಭವಾಗಿ ಒಳಗೆ ಬರಲು ಮತ್ತು ಹೊರಗೆ ಹೋಗಲು ಅನುಕೂಲವಾಗಲಿದೆ. ಕಾರಿನ ಒಳಭಾಗದ ರೂಫ್‌ ರಾತ್ರಿಯಲ್ಲಿನ ಕಕ್ಷತ್ರ ಮಂಡಲದಂತೆ ವಿನ್ಯಾಸಗೊಳಿಸಲಾಗಿದೆ. ಅಂದರೆ ನಕ್ಷತ್ರಗಳಿರುವಂತೆ ಪುಟ್ಟ ಪುಟ್ಟ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಸಣ್ಣ ಫ್ರಿಡ್ಜ್ ಮತ್ತು ಆರ್ಮ್ ರೆಸ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳಿವೆ.

ಈ ಕಾರಣಗಳಿಂದಲೇ ರೋಲ್ಸ್‌ ರಾಯ್ಸ್‌ ಫ್ಯಾಂಟಮ್ ಕಾರು ಹೆಲಿಕಾಪ್ಟರ್‌ಗಿಂತ ದುಬಾರಿ

ರೋಲ್ಸ್ ರಾಯ್ಸ್ ಕಂಪನಿಗಳ ಉತ್ಪನ್ನಗಳನ್ನು ಹಡಗಿನಲ್ಲಿ ತೇಲುವ ಅನುಭವವನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಫ್ಯಾಂಟಮ್ ಕಾರು ಮಾದರಿ ಕೂಡ ಇದೇ ರೀತಿಯ ಅನುಭವವನ್ನು ನೀಡುತ್ತದೆ. ದೊಡ್ಡ ಕೊರಕಲು, ಗುಡ್ಡಗಳನ್ನು ಹತ್ತಿ ಇಳಿಯುವಾಗಲೂ ವಾಹನ ಮಾತ್ರ ಯಾವುದೇ ಅಡೆತಡೆಗಳಿಗೆ ಒಳಗಾಗುವುದಿಲ್ಲ.

ಈ ಕಾರಣಗಳಿಂದಲೇ ರೋಲ್ಸ್‌ ರಾಯ್ಸ್‌ ಫ್ಯಾಂಟಮ್ ಕಾರು ಹೆಲಿಕಾಪ್ಟರ್‌ಗಿಂತ ದುಬಾರಿ

ಇನ್ನು ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡಲು ಕಾರಿನಲ್ಲಿ 6.6 ಲೀಟರ್ V12 ಪೆಟ್ರೋಲ್ ಎಂಜಿನ್ ಅನ್ನು ಬಳಸಲಾಗಿದೆ. ಈ ಎಂಜಿನ್ ಗರಿಷ್ಠ 612 ಬಿಎಚ್‌ಪಿ ಮತ್ತು 840 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಫ್ಯಾಂಟಮ್ VIII ಕಾರು ಮಾದರಿಯು 6.75 ಲೀಟರ್ ಟ್ವಿನ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.

ಈ ಕಾರಣಗಳಿಂದಲೇ ರೋಲ್ಸ್‌ ರಾಯ್ಸ್‌ ಫ್ಯಾಂಟಮ್ ಕಾರು ಹೆಲಿಕಾಪ್ಟರ್‌ಗಿಂತ ದುಬಾರಿ

ಈ ಎಂಜಿನ್ ಗರಿಷ್ಠ 571 ಪಿಎಸ್ ಪವರ್ ಮತ್ತು 900 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‌ಗಳು ಎಷ್ಟೇ ವೇಗದಲ್ಲಿ ಚಲಿಸಿದರೂ ಕಂಪನದ ಭಾವನೆಯನ್ನು ಪ್ರಯಾಣಿಕರಿಗೆ ನೀಡುವುದಿಲ್ಲ. ಸುಗಮ ಮತ್ತು ಆರಾಮದಾಯಕ ಚಾಲನಾ ಅನುಭವವನ್ನು ಮಾತ್ರ ಒದಗಿಸುತ್ತದೆ. ಇಂತಹ ಐಷಾರಾಮಿ ಗುಣಗಳಿಂದಲೇ ರೋಲ್ಸ್ ರಾಯ್ಸ್ ಪ್ಯಾಂಟಮ್‌ ಸೇರಿದಂತೆ ಕಂಪನಿಯ ಕೆಲ ಮಾದರಿಗಳು ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿವೆ. ಅಲ್ಲದೇ ಹೆಲಿಕಾಪ್ಟರ್‌ಗಿಂತಲೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ.

Most Read Articles

Kannada
English summary
Here is why latest rolls royce phantom sold higher than helicopter price in india
Story first published: Saturday, March 26, 2022, 16:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X