2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ (Honda Car India) 2021ರ ಡಿಸೆಂಬರ್ ತಿಂಗಳ ಮಾಸಿಕ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ವರದಿ ಪ್ರಕಾರ, ಕಳೆದ ತಿಂಗಳು ಹೋಂಡಾ ಕಂಪನಿಯು 7,973 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

2020ರ ಡಿಸೆಂಬರ್ ತಿಂಗಳಿನಲ್ಲಿ ಹೋಂಡಾ ಕಂಪನಿಯು 8,638 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.7.7 ರಷ್ಟು ಕುಸಿತ ಕಂಡಿದೆ. ಇನ್ನು 2021ರ ಡಿಸೆಂಬರ್ ತಿಂಗಳಿನಲ್ಲಿ ಹೋಂಡಾ ಕಂಪನಿಯು 1,165 ಯುನಿಟ್‌ಗಳನ್ನು ರಫ್ತು ಮಾಡಿದೆ. ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ 713 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.15.48 ರಷ್ಟು ಬೆಳವಣಿಗೆ ಸಾಧಿಸುತ್ತದೆ.

2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

2021ರ ವರ್ಷದಲ್ಲಿ ಕಂಪನಿಯು 89,152 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇನ್ನು 2020ರ ವರ್ಷದಲ್ಲಿ ಹೋಂಡಾ ಕಂಪನಿಯು 70,593 ಯುನಿಟ್‌ಗಳನ್ನು ಬಾರತದಲ್ಲಿ ಮಾರಾಟಗೊಳಿಸಿತ್ತು. ಇದನ್ನು ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ ಶೇ.26 ರಷ್ಟು ಬೆಳವಣಿಗೆಯನ್ನು ಸಾದಿಸಿದೆ.

2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ನಿರ್ದೇಶಕ ಯುಯಿಚಿ ಮುರಾಟಾ ಮಾತನಾಡಿ, ಹೋಂಡಾ ಸಿಟಿಗೆ ಹೊಸ ರಫ್ತು ತಾಣಗಳನ್ನು ಎಡಗೈ ಡ್ರೈವ್ ಮಾರುಕಟ್ಟೆಗಳಿಗೆ ಸೇರಿಸಿರುವುದು ಕಳೆದ ವರ್ಷ ನಮ್ಮ ರಫ್ತುಗಳನ್ನು ಗಮನಾರ್ಹವಾಗಿ ಹೆಚ್ಚಿಸಿದೆ" ಎಂದು ಹೇಳಿದರು. "ನಮ್ಮ ಡಿಸೆಂಬರ್ ರವಾನೆಗಳು ನಮ್ಮ ಉತ್ಪಾದನೆಗೆ ಅನುಗುಣವಾಗಿರುತ್ತವೆ, ಇದು ಜಾಗತಿಕ ಚಿಪ್ ಕೊರತೆಯಿಂದ ಪ್ರಭಾವಿತವಾಗಿದೆ ಎಂದು ಹೇಳಿದರು.

2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

ಇನ್ನು ಜಪಾನ್ ಮೂಲದ ಖ್ಯಾತ ವಾಹನ ತಯಾರಕ ಕಂಪನಿಯಾದ ಹೋಂಡಾ ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಹೊರ ಹೊಮ್ಮುವ ಗುರಿಯನ್ನು ಹೊಂದಿದೆ. ಎಲೆಕ್ಟ್ರಿಕ್ ವಾಹನಗಳ ಮೇಲೆ ಕೇಂದ್ರೀಕರಿಸುವುದರ ಜೊತೆಗೆ, ಕಂಪನಿಯು ಪೂರೈಕೆ ಸರಪಳಿಯ ಕಡೆಗೂ ಗಮನಹರಿಸುತ್ತಿದೆ.

2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

ಇದನ್ನು ಗಮನದಲ್ಲಿಟ್ಟುಕೊಂಡು ಹೋಂಡಾ ಕಂಪನಿಯು ಭಾರತದಲ್ಲಿ ತನ್ನ ಬ್ಯಾಟರಿ ಹಂಚಿಕೆ ಸೇವೆಯನ್ನು ಆರಂಭಿಸಿದ್ದಾರೆ. ಹೋಂಡಾ ಪವರ್ ಪ್ಯಾಕ್ ಎನರ್ಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಹೊಸ ಘಟಕವಾಗಿದ್ದು, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಸೌಲಭ್ಯಗಳನ್ನು ಒದಗಿಸಲಿದೆ.

2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

ಇನ್ನು ಈ ಹೋಂಡಾ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ಹತ್ತು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ಹೊಂದಿದೆ. ಹೋಂಡಾ ಕಂಪನಿಯು 2040ರ ನಂತರ ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ಉತ್ಪಾದಿಸುವ ಗುರಿಯನ್ನು ಹೊಂದಿದೆ. ಭಾರತವು ಎಲೆಕ್ಟ್ರಿಕ್ ವಾಹನಗಳ ಬೃಹತ್ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿರುವ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿದೆ.

2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

ಹೋಂಡಾ ದೇಶಿಯ ಮಾರುಕಟ್ಟೆಯ ಎಲೆಕ್ಟ್ರಿಕ್ ವಾಹನ ಸೆಗ್ ಮೆಂಟಿನಲ್ಲಿ ಪ್ರಾಬಲ್ಯ ಸಾಧಿಸುವ ಗುರಿಯನ್ನು ಹೊಂದಿದೆ. 2050ರ ವೇಳೆಗೆ ವಾಹನ ಅಪಘಾತಗಳನ್ನು ಶೂನ್ಯಕ್ಕೆ ತಗ್ಗಿಸುವ ಸಲುವಾಗಿ ಕಂಪನಿಯು ಸುಧಾರಿತ ಸುರಕ್ಷತಾ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಗುರಿಯನ್ನು ಸಾಧಿಸಲು, ಕಂಪನಿಯು ಎರಡು ಪ್ರಮುಖ ತಂತ್ರಜ್ಞಾನಗಳನ್ನು ಬಳಸಲಿದ ಎಂದು ಹೇಳಲಾಗುತ್ತಿದೆ.

2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

ಇದರಲ್ಲಿ ಮೊದಲನೆಯದು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ - AI) ತಂತ್ರಜ್ಞಾನವಾಗಿದ್ದರೆ ಎರಡನೆಯದು ಕಾರುಗಳ ನೆಟ್‌ವರ್ಕ್ ಆಧಾರಿತ ತಂತ್ರಜ್ಞಾನವಾಗಿದೆ. ಇನ್ನು AI ಚಾಲಿತ ತಂತ್ರಜ್ಞಾನವು ವಾಹನ ಚಾಲನೆ ಮಾಡುವಾಗ ಸಂಭವನೀಯ ಅಪಾಯಗಳ ಬಗ್ಗೆ ಕಾರು ಚಾಲಕನಿಗೆ ಮಾಹಿತಿ ನೀಡುತ್ತದೆ. ಇದರಿಂದ ರಸ್ತೆಯಲ್ಲಿನ ಅಜಾಗರೂಕತೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ಹೋಂಡಾ ಕಂಪನಿ ಹೇಳಿದೆ.

2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

ಮತ್ತೊಂದೆಡೆ ಸುರಕ್ಷಿತ ಹಾಗೂ ದೃಢವಾದ ನೆಟ್‌ವರ್ಕ್ ತಂತ್ರಜ್ಞಾನವು ರಸ್ತೆ ವಾಹನಗಳು ಹಾಗೂ ಪಾದಚಾರಿಗಳ ಕಾರ್ ಟು ಕಾರ್ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ. ಇದರಿಂದ ದೂರಸಂಪರ್ಕದ ಮೂಲಕ ರಸ್ತೆಯಲ್ಲಿ ಸಂಭವನೀಯ ಅಪಾಯಗಳನ್ನು ಊಹಿಸಲು ಸಾಧ್ಯವಾಗುವುದರಿಂದ ರಸ್ತೆ ಅಪಘಾತಗಳನ್ನು ತಪ್ಪಿಸಬಹುದಾಗಿದೆ.

2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

ಅಪಘಾತ ಮುಕ್ತ ರಸ್ತೆಗಳಿಗಾಗಿ ಕಂಪನಿಯು ತನ್ನ ಹೊಸ ಹೋಂಡಾ ಸೆನ್ಸಿಂಗ್ 360 ತಂತ್ರಜ್ಞಾನವನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು ಎಂದು ಹೇಳಿದೆ. ಇದು ಬಹುಪಯೋಗಿ ತಂತ್ರಜ್ಞಾನವಾಗಿದ್ದು, 2030 ರಿಂದ ಹೋಂಡಾ ಕಾರುಗಳಲ್ಲಿ ಬಳಸಲಾಗುವುದು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ಸುಧಾರಿತ ಸಂವಹನ ಮಾಧ್ಯಮದಿಂದ ಬೆಂಬಲಿತವಾಗಿರುವ ಈ ತಂತ್ರಜ್ಞಾನವು ಹೋಂಡಾ ಕಾರುಗಳನ್ನು ರಸ್ತೆಯಲ್ಲಿ ಸುರಕ್ಷಿತವಾಗಿಸುತ್ತದೆ. ಜೊತೆಗೆ ಚಾಲಕರು ರಸ್ತೆಯಲ್ಲಿ ಸರಿಯಾದ ರೀತಿಯಲ್ಲಿ ಕಾರ್ ಅನ್ನು ಚಾಲನೆ ಮಾಡಲು ನೆರವಾಗುತ್ತದೆ. ಈ ತಂತ್ರಜ್ಞಾನವನ್ನು ಹೋಂಡಾದ ಕಾರುಗಳ ಜೊತೆಗೆ ಬೈಕ್ ಹಾಗೂ ಸ್ಕೂಟರ್‌ಗಳಂತಹ ದ್ವಿಚಕ್ರ ವಾಹನಗಳನ್ನು ರಕ್ಷಿಸಲು ಸಹ ಬಳಸಬಹುದು ಎಂದು ಹೋಂಡಾ ಕಂಪನಿ ತಿಳಿಸಿದೆ.

2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

ಡ್ರೈವಿಂಗ್ ಮಾಡುವಾಗ ಉಂಟಾಗುವ ತಪ್ಪುಗಳ ಕಾರಣಗಳನ್ನು ಕಂಡುಹಿಡಿಯಲು ತಂತ್ರಜ್ಞಾನವನ್ನು ಬಳಸುವುದಾಗಿ ಹೋಂಡಾ ಹೇಳಿಕೊಂಡಿದೆ. ಜೊತೆಗೆ ರಸ್ತೆಯಲ್ಲಿ ಚಾಲನೆ ಮಾಡುವಾಗ ಜನರ ಮನಸ್ಥಿತಿಯನ್ನು ತಿಳಿಯಲು ಪ್ರಯತ್ನಿಸುತ್ತದೆ. ಸುರಕ್ಷತಾ ತಂತ್ರಜ್ಞಾನವು ಅಪಘಾತಗಳನ್ನು ತಡೆಯಲು ನೆರವಾಗುತ್ತದೆ ಎಂದು ಕಂಪನಿ ತಿಳಿಸಿದೆ. ಹೊಸ ತಲೆಮಾರಿನ ಚಾಲಕ - ಸಹಾಯಕ ತಂತ್ರಜ್ಞಾನವು ಈಗ ಸಂಶೋಧನೆ ಮತ್ತು ಅಭಿವೃದ್ಧಿ ಹಂತದಲ್ಲಿದೆ ಎಂದು ಹೋಂಡಾ ವರದಿ ಮಾಡಿದೆ.

2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Honda

ಇನ್ನು ಹೋಂಡಾ ಕಾರ್ಸ್ ಇಂಡಿಯಾ ತನ್ನ ಅಮೇಜ್ ಸಬ್ ಕಾಂಪ್ಯಾಕ್ಟ್ ಸೆಡಾನ್‌ನ ಎರಡನೇ ತಲೆಮಾರಿನ ಮಾದರಿ 2 ಲಕ್ಷ ಮಾರಾಟದ ಮೈಲಿಗಲ್ಲನ್ನು ದಾಟಿದೆ ಎಂದು ಘೋಷಿಸಿದೆ. ಎರಡನೇ ತಲೆಮಾರಿನ ಅಮೇಜ್ ಅನ್ನು ಏಪ್ರಿಲ್ 2018 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಮೂರು ವರ್ಷಗಳಲ್ಲಿ ಹೋಂಡಾ 2 ಲಕ್ಷ ವಾಹನಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಅಮೇಜ್ ಭಾರತದಲ್ಲಿ ಹೋಂಡಾದ ಅತ್ಯಂತ ಯಶಸ್ವಿ ಮಾದರಿಯಾಗಿದೆ. ಆದರೆ ಕಲೆದ ತಿಂಗಳ ಮಾರಾಟದಲ್ಲಿ ಕುಸಿತ ಕಂಡಿದೆ.

Most Read Articles

Kannada
Read more on ಹೋಂಡಾ honda
English summary
Honda cars india sales 7973 units in december 2021 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X