ಇವಿ ಕಾರುಗಳಲ್ಲಿ ಗರಿಷ್ಠ ಮೈಲೇಜ್ ಪ್ರಮಾಣವನ್ನು ಪಡೆಯಲು ಸಿಂಪಲ್ ಟಿಪ್ಸ್ ಹೇಳಿದ ಟಾಟಾ ಮೋಟಾರ್ಸ್

ದೇಶಾದ್ಯಂತ ಎಲೆಕ್ಟ್ರಿಕ್ ಕಾರುಗಳ ಮಾರಾಟವು ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ವಿವಿಧ ಮಾದರಿಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಇವಿ ಕಾರುಗಳ ಉತ್ಪಾದನೆ ನಿರಂತರ ಬದಲಾವಣೆಗಳೊಂದಿಗೆ ಪ್ರಬುದ್ದತೆ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಇವಿ ಕಾರುಗಳ ನಿರ್ವಹಣೆಗಾಗಿ ಕೆಲವು ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದೆ.

ಇವಿ ಕಾರುಗಳಲ್ಲಿ ಗರಿಷ್ಠ ಮೈಲೇಜ್ ಪ್ರಮಾಣವನ್ನು ಪಡೆಯಲು ಸಿಂಪಲ್ ಟಿಪ್ಸ್ ಹೇಳಿದ ಟಾಟಾ ಮೋಟಾರ್ಸ್

ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವಾಗ ಹೆಚ್ಚಿನ ಗ್ರಾಹಕರು ವಿಚಾರಿಸುವುದು ಮೊದಲು ಬೆಲೆ ಮತ್ತು ಮೈಲೇಜ್ ಪ್ರಮಾಣ ಎಷ್ಟು ಎಂಬುವುದನ್ನು. ಈ ವಿಚಾರದಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಟಾಟಾ ಮೋಟಾರ್ಸ್ ಕಂಪನಿಯು ಉತ್ತಮ ಬೆಲೆಯೊಂದಿಗೆ ಅಧಿಕ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಯೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.

ಇವಿ ಕಾರುಗಳಲ್ಲಿ ಗರಿಷ್ಠ ಮೈಲೇಜ್ ಪ್ರಮಾಣವನ್ನು ಪಡೆಯಲು ಸಿಂಪಲ್ ಟಿಪ್ಸ್ ಹೇಳಿದ ಟಾಟಾ ಮೋಟಾರ್ಸ್

ಸಾಂಪ್ರಾದಾಯಿಕ ಕಾರುಗಳಿಂತ ವಿಭಿನ್ನ ಎನ್ನಿಸುವ ಎಲೆಕ್ಟ್ರಿಕ್ ಕಾರುಗಳ ಬಳಕೆಯು ಮಾಲೀಕರಿಗೆ ಹೊಸ ಅನುಭವ ನೀಡುತ್ತಿದ್ದರೂ ಇನ್ನು ಕೆಲವು ವಿಚಾರಗಳು ಇವಿ ವಾಹನ ಖರೀದಿಸಬೇಕೆಂಬ ಸಂಭಾವ್ಯ ಗ್ರಾಹಕರಿಗೆ ಇಷ್ಟವಾಗುತ್ತಿಲ್ಲ ಎನ್ನಬಹುದು.

ಇವಿ ಕಾರುಗಳಲ್ಲಿ ಗರಿಷ್ಠ ಮೈಲೇಜ್ ಪ್ರಮಾಣವನ್ನು ಪಡೆಯಲು ಸಿಂಪಲ್ ಟಿಪ್ಸ್ ಹೇಳಿದ ಟಾಟಾ ಮೋಟಾರ್ಸ್

ಹೌದು, ಸಾಕಷ್ಟು ಜನರಿಗೆ ಇವಿ ವಾಹನಗಳ ಖರೀದಿ ಮಾಡುವ ಬಯಕೆ ಇದ್ದರೂ ಇವಿ ಕಾರುಗಳ ಬ್ಯಾಟರಿ ರೇಂಜ್, ದುಬಾರಿ ಬೆಲೆ ಮತ್ತು ಅವುಗಳ ನಿರ್ವಹಣೆ ವಿಚಾರಕ್ಕೆ ಹಿಂದೆ ಸರಿಯುತ್ತಿದ್ದು, ಇವಿ ಕಾರುಗಳ ಸುಲಭ ನಿರ್ವಹಣೆಗಾಗಿ ಮತ್ತು ಗ್ರಾಹಕರ ಸ್ನೇಹಿ ಫೀಚರ್ಸ್‌ಗಳ ಮೂಲಕ ಇವಿ ವಾಹನಗಳ ಬಳಕೆಯನ್ನು ಸುಲಭವಾಗಿಸಲು ಟಾಟಾ ಮೋಟಾರ್ಸ್ ಕಂಪನಿಯು ನಿರಂತರವಾಗಿ ಪ್ರಯತ್ನಿಸುತ್ತಿದೆ.

ಇವಿ ಕಾರುಗಳಲ್ಲಿ ಗರಿಷ್ಠ ಮೈಲೇಜ್ ಪ್ರಮಾಣವನ್ನು ಪಡೆಯಲು ಸಿಂಪಲ್ ಟಿಪ್ಸ್ ಹೇಳಿದ ಟಾಟಾ ಮೋಟಾರ್ಸ್

ಇವಿ ಕಾರುಗಳು ಆಯಾ ಕಂಪನಿಯು ಹೇಳಿದಷ್ಟು ಮೈಲೇಜ್ ರೇಂಜ್ ನೀಡುವುದಿಲ್ಲ ಎನ್ನುವ ಗ್ರಾಹಕರ ದೂರಗಳನ್ನು ಆಧರಿಸಿ ಮೈಲೇಜ್ ಪ್ರಮಾಣವನ್ನು ಸುಧಾರಿಸಲು ಟಾಟಾ ಮೋಟಾರ್ಸ್ ಕಂಪನಿಯು ಕೆಲವು ಮುಖ್ಯ ಸಲಹೆಗಳನ್ನು ಹಂಚಿಕೊಂಡಿದ್ದು, ಈ ಸಲಹೆಗಳು ನಿಮ್ಮ ಇವಿ ವಾಹನದಲ್ಲಿ ಲಭ್ಯವಿರುವ ಚಾರ್ಜಿಂಗ್ ಆಧರಿಸಿ ಗರಿಷ್ಠ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

ಇವಿ ಕಾರುಗಳಲ್ಲಿ ಗರಿಷ್ಠ ಮೈಲೇಜ್ ಪ್ರಮಾಣವನ್ನು ಪಡೆಯಲು ಸಿಂಪಲ್ ಟಿಪ್ಸ್ ಹೇಳಿದ ಟಾಟಾ ಮೋಟಾರ್ಸ್

ಯಾವುದೇ ಇವಿ ಕಾರು ಕಂಪನಿಯು ಎಆರ್‌ಎಐ ಪರೀಕ್ಷೆ ಆಧರಿಸಿ ಮೈಲೇಜ್ ಪ್ರಮಾಣವನ್ನು ನಿಗದಿಪಡಿಸಿದರೂ ಅದನ್ನು ಗ್ರಾಹಕರು ರಿಯಲ್ ವರ್ಲ್ಡ್ ಡ್ರೈವಿಂಗ್ ವೇಳೆ ಪಡೆಯಲು ಸಾಧ್ಯವಾಗುವುದಿಲ್ಲ. ಇದಕ್ಕೆ ಹಲವಾರು ಕಾರಣಗಳಿದ್ದು, ಅದು ಚಾಲಕನ ಚಾಲನಾ ಶೈಲಿ, ರಸ್ತೆಗಳ ಸ್ಥಿತಿಗತಿ ಮತ್ತು ಟ್ರಾಫಿಕ್ ದಟ್ಟಣೆ ಆಧರಿಸಿರುತ್ತದೆ.

ಇವಿ ಕಾರುಗಳಲ್ಲಿ ಗರಿಷ್ಠ ಮೈಲೇಜ್ ಪ್ರಮಾಣವನ್ನು ಪಡೆಯಲು ಸಿಂಪಲ್ ಟಿಪ್ಸ್ ಹೇಳಿದ ಟಾಟಾ ಮೋಟಾರ್ಸ್

ಹೀಗಾಗಿ ಚಾಲಕರು ತಮ್ಮ ಚಾಲನಾ ಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವ ಮೂಲಕ ಮೈಲೇಜ್ ಪ್ರಮಾಣವನ್ನು ಈ ಹಿಂದಿಗಿಂತಲೂ ಉತ್ತಮವಾಗಿ ಸುಧಾರಿಸಲು ಈ ಸಲಹೆಗಳನ್ನು ನೇರವಾಗಲಿವೆ.

ಇವಿ ಕಾರುಗಳಲ್ಲಿ ಗರಿಷ್ಠ ಮೈಲೇಜ್ ಪ್ರಮಾಣವನ್ನು ಪಡೆಯಲು ಸಿಂಪಲ್ ಟಿಪ್ಸ್ ಹೇಳಿದ ಟಾಟಾ ಮೋಟಾರ್ಸ್

ಚಾಲನಾ ಶೈಲಿ ಬದಲಿಸಿ

ಇವಿ ಕಾರುಗಳ ಬ್ಯಾಟರಿ ದಕ್ಷತೆ ಹೆಚ್ಚಿಸಲು ಮೊದಲಿಗೆ ಚಾಲನಾ ಶೈಲಿಯನ್ನು ಸುಧಾರಿಸುವ ಅವಶ್ಯಕತೆಯಿದೆ. ಇವಿ ಕಾರುಗಳು ಫಾರ್ವಡ್ ಡ್ರೈವಿಂಗ್ ಸಿಸ್ಟಂ ಹೊಂದಿರುವುದರಿಂದ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ವೇಗ ಪಡೆದುಕೊಳ್ಳುತ್ತವೆ. ಆದರೆ ನಿಮ್ಮ ಹೊಸ ಇವಿ ಕಾರಿನಲ್ಲಿ ಹೆಚ್ಚಿನ ಮೈಲೇಜ್ ಬಯಸಿದರೆ ನೀವು ಇಕೋ ಮತ್ತು ನಾರ್ಮಲ್ ಮೋಡ್‌ಗಳಲ್ಲಿ ಪ್ರತಿ ಗಂಟೆಗೆ ಗರಿಷ್ಠ 80 ಕಿ.ಮೀ ಹೆಚ್ಚದಂತೆ ಮಧ್ಯಮ ವೇಗದಲ್ಲಿ ಚಾಲನೆ ಮಾಡಿ.

ಇವಿ ಕಾರುಗಳಲ್ಲಿ ಗರಿಷ್ಠ ಮೈಲೇಜ್ ಪ್ರಮಾಣವನ್ನು ಪಡೆಯಲು ಸಿಂಪಲ್ ಟಿಪ್ಸ್ ಹೇಳಿದ ಟಾಟಾ ಮೋಟಾರ್ಸ್

ಅತಿಯಾದ ವೇಗ ಬೇಡ

ಸ್ಪೋರ್ಟ್ಸ್ ಮೋಡ್‌ನಲ್ಲಿ ಕಾರು ಚಾಲನೆಯು ನಿಮಗೆ ಹೆಚ್ಚಿನ ಉತ್ಸಾಹವನ್ನು ಕೊಡಬಹುದು. ಆದರೆ ಇದು ಬ್ಯಾಟರಿ ವ್ಯಾಪ್ತಿಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಹೀಗಾಗಿ ನಿಗದಿತ ವೇಗದಲ್ಲಿ ಚಾಲನೆ ಮೂಲಕ ಬ್ರೇಕ್‌ಗಳ ಕನಿಷ್ಠ ಬಳಕೆಯೊಂದಿಗೆ ವಾಹನವನ್ನು ನಿಧಾನಗೊಳಿಸುವ ಮೂಲಕ ವ್ಯಾಪ್ತಿಯನ್ನು ಹೆಚ್ಚಿಸಲಾಗುತ್ತದೆ.

ಇವಿ ಕಾರುಗಳಲ್ಲಿ ಗರಿಷ್ಠ ಮೈಲೇಜ್ ಪ್ರಮಾಣವನ್ನು ಪಡೆಯಲು ಸಿಂಪಲ್ ಟಿಪ್ಸ್ ಹೇಳಿದ ಟಾಟಾ ಮೋಟಾರ್ಸ್

ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂ

ಇವಿ ಕಾರುಗಳಲ್ಲಿ ರೀಜನರೇಟಿವ್ ಅಥವಾ ಪುನರುತ್ಪಾದಕ ಬ್ರೇಕಿಂಗ್ ವ್ಯವಸ್ಥೆಯನ್ನು ಬಳಸಿಕೊಳ್ಳುವ ಮೂಲಕ ಎಲೆಕ್ಟ್ರಿಕ್ ವಾಹನದ ವೇಗವರ್ಧನೆಯೊಂದಿಗೆ ಬ್ರೇಕಿಂಗ್ ಸಮಯದಲ್ಲಿ ಉತ್ಪತ್ತಿಯಾಗುವ ಚಲನ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಲಾಗುತ್ತದೆ. ಆಗ ಅಧಿಕ-ವೋಲ್ಟೇಜ್ ಬ್ಯಾಟರಿಯನ್ನು ಚಾರ್ಜ್ ಮಾಡುವ ಮೂಲಕ ವಾಹನದ ವ್ಯಾಪ್ತಿಯನ್ನು ಹೆಚ್ಚಿಸಲಾಗುತ್ತದೆ.

ಇವಿ ಕಾರುಗಳಲ್ಲಿ ಗರಿಷ್ಠ ಮೈಲೇಜ್ ಪ್ರಮಾಣವನ್ನು ಪಡೆಯಲು ಸಿಂಪಲ್ ಟಿಪ್ಸ್ ಹೇಳಿದ ಟಾಟಾ ಮೋಟಾರ್ಸ್

ಅನಗತ್ಯ ಎಸಿ ಬಳಕೆ ಬೇಡ

ಇವಿ ಕಾರುಗಳಲ್ಲಿ ಚಾಲನೆ ಮಾಡುವ ಅವಶ್ಯವಿದ್ದಾಗ ಮಾತ್ರ ಎಸಿ ಸೌಲಭ್ಯವನ್ನು ಬಳಸಿಕೊಳ್ಳುವ ಮೂಲಕ ಬ್ಯಾಟರಿ ಬಳಕೆಯನ್ನು ತಗ್ಗಿಸಿ ಮೈಲೇಜ್ ಹೆಚ್ಚಳ ಮಾಡಬಹುದು. ಆಟೋ ಏರ್‌ ಕಂಡಿಷನರ್ ಸೌಲಭ್ಯವಿದ್ದಲ್ಲಿ ಅದನ್ನು ಇಕೋ ಮೋಡ್‌‌ಗೆ ಬದಲಿಸಿ 24 ರಿಂದ 26 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇರಿಸಬಹುದು.

ಇವಿ ಕಾರುಗಳಲ್ಲಿ ಗರಿಷ್ಠ ಮೈಲೇಜ್ ಪ್ರಮಾಣವನ್ನು ಪಡೆಯಲು ಸಿಂಪಲ್ ಟಿಪ್ಸ್ ಹೇಳಿದ ಟಾಟಾ ಮೋಟಾರ್ಸ್

ಟೈರ್‌ನಲ್ಲಿರುವ ಗಾಳಿಯ ಒತ್ತಡ ಪರೀಕ್ಷಿಸಿ

ಇವಿ ವಾಹನಗಳಲ್ಲಿನ ಮೈಲೇಜ್ ಪ್ರಮಾಣದ ಮೇಲೆ ಪರಿಣಾಮ ಬೀರುವ ಅಂಶಗಳಲ್ಲಿ ಕಾರಿನ ಚಕ್ರಗಳ ಗಾಳಿಯ ಒತ್ತಡದಲ್ಲಿನ ಏರಿಳಿತವು ಕೂಡಾ ಕಾರಣವಾಗುತ್ತದೆ. ಇದಕ್ಕಾಗಿ ಇತ್ತೀಚೆಗೆ ಪ್ರಮುಖ ವಾಹನ ಕಂಪನಿಗಳು ಟೈರ್ ಪ್ರೆಷರ್ ಮಾನಿಟರಿಂಗ ಸಿಸ್ಟಂ ಅನ್ನು ಬಳಸುತ್ತಿದ್ದು, ಇದರಲ್ಲಿ ವಾಹನ ಮಾಲೀಕರು ಯಾವ ಚಕ್ರದಲ್ಲಿ ಎಷ್ಟು ಪ್ರಮಾಣದಲ್ಲಿ ಗಾಳಿಯ ಒತ್ತಡ ಇದೆ ಎಂಬುವುದನ್ನು ತಿಳಿಯಬಹುದು.

ಇವಿ ಕಾರುಗಳಲ್ಲಿ ಗರಿಷ್ಠ ಮೈಲೇಜ್ ಪ್ರಮಾಣವನ್ನು ಪಡೆಯಲು ಸಿಂಪಲ್ ಟಿಪ್ಸ್ ಹೇಳಿದ ಟಾಟಾ ಮೋಟಾರ್ಸ್

ಒಂದು ವೇಳೆ ನಿಮ್ಮ ವಾಹನದಲ್ಲಿ ಟೈರ್ ಪ್ರೆಷರ್ ಸೌಲಭ್ಯವಿಲ್ಲವಾದಲ್ಲಿ ವಾಹನ ಬಿಡಿಭಾಗಗಳ ಕಂಪನಿಗಳು ಅಳವಡಿಸಿಕೊಡಲಿದ್ದು, ಈ ಸೌಲಭ್ಯವನ್ನು ಬಳಸುವ ಮೂಲಕವು ಇವಿ ಕಾರಿನ ಮೈಲೇಜ್ ತಗ್ಗದ್ದಂತೆ ಎಚ್ಚರವಹಿಸಬಹುದು.

ಇವಿ ಕಾರುಗಳಲ್ಲಿ ಗರಿಷ್ಠ ಮೈಲೇಜ್ ಪ್ರಮಾಣವನ್ನು ಪಡೆಯಲು ಸಿಂಪಲ್ ಟಿಪ್ಸ್ ಹೇಳಿದ ಟಾಟಾ ಮೋಟಾರ್ಸ್

ಅಂತಿಮವಾಗಿ ಇವಿ ಕಾರು ಬಳಕೆದಾರರು ಕಂಪನಿಯ ಶಿಫಾರಸ್ಸು ಮಾಡಿರುವ ಎಲೆಕ್ಟ್ರಾನಿಕ್ ಉಪಕರಣಗಳ ಹೊರತಾಗಿ ಯಾವುದೇ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉಪಕರಣಗಳನ್ನು ಬಳಕೆ ಮಾಡಬೇಡಿ. ಏಕೆಂದರೆ ಅವುಗಳು ಲಭ್ಯವಿರುವ ಡ್ರೈವಿಂಗ್ ಶ್ರೇಣಿಯ ಮೇಲೆ ಪರಿಣಾಮ ಬೀರಲಿದ್ದು, ಅಧಿಕೃತ ವಿದ್ಯುತ ಉಪಕಣಗಳನ್ನು ಮಾತ್ರ ಬಳಿಸಿ.

Most Read Articles

Kannada
English summary
How to get maximum range from electric cars tata motors shares some tips
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X