ಬಿಡುಗಡೆಗೂ ಮುನ್ನ ಹೊಸ ಐಯಾನಿಕ್ 5 ಇವಿ ಕಾರಿನ ರೋಡ್ ಟೆಸ್ಟ್ ನಡೆಸಿದ ಹ್ಯುಂಡೈ

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಐಯಾನಿಕ್ 5 ಎಲೆಕ್ಟ್ರಿಕ್ ಕ್ರಾಸ್ ಓವರ್ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಬಿಡುಗಡೆಗೂ ಮುನ್ನ ಹೊಸ ಐಯಾನಿಕ್ 5 ಇವಿ ಕಾರಿನ ರೋಡ್ ಟೆಸ್ಟ್ ನಡೆಸಿದ ಹ್ಯುಂಡೈ

ಸುಧಾರಿತ ವೈಶಿಷ್ಟ್ಯತೆಗಳೊಂದಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿರುವ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕ್ರಾಸ್ ಓವರ್ ಎಸ್‌ಯುವಿ ಮಾದರಿಯು ಶೀಘ್ರದಲ್ಲಿಯೇ ಭಾರತದಲ್ಲೂ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಕಾರು ಪ್ರತಿಸ್ಪರ್ಧಿ ಮಾದರಿಯಾದ ಕಿಯಾ ಇವಿ6 ಮಾದರಿಗಿಂತಲೂ ಆಕರ್ಷಕ ಬೆಲೆಯಲ್ಲಿ ಬಿಡುಗಡೆಯಾಗುವ ಸುಳಿವು ನೀಡಿದೆ.

ಬಿಡುಗಡೆಗೂ ಮುನ್ನ ಹೊಸ ಐಯಾನಿಕ್ 5 ಇವಿ ಕಾರಿನ ರೋಡ್ ಟೆಸ್ಟ್ ನಡೆಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣಾಗಿ ಮುಂಬರುವ ಕೆಲವೇ ದಿನಗಳಲ್ಲಿ ವಿವಿಧ ಮಾದರಿಯ ಎಲೆಕ್ಟ್ರಿಕ್ ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡುತ್ತಿದ್ದು, ಕಂಪನಿಯು ಭಾರತದಲ್ಲೂ ಸಹ ತನ್ನ ಹೊಸ ಇವಿ ಕಾರುಗಳ ಬಿಡುಗಡೆಯಾಗಿ ಬೃಹತ್ ಯೋಜನೆಗೆ ರೂಪಿಸುತ್ತಿದೆ.

ಬಿಡುಗಡೆಗೂ ಮುನ್ನ ಹೊಸ ಐಯಾನಿಕ್ 5 ಇವಿ ಕಾರಿನ ರೋಡ್ ಟೆಸ್ಟ್ ನಡೆಸಿದ ಹ್ಯುಂಡೈ

2028ರ ವೇಳೆಗೆ ಜಾಗತಿಕ ಮಾರುಕಟ್ಟೆಯಲ್ಲಿ 30ಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಹೊಂದುವುದಾಗಿ ಹೇಳಿಕೊಂಡಿರುವ ಹ್ಯುಂಡೈ ಮೋಟಾರ್ಸ್ ಕಂಪನಿಯು ಭಾರತದಲ್ಲೂ ಗ್ರಾಹಕರ ಬೇಡಿಕೆಯೆಂತೆ ಮುಂದಿನ ಐದು ವರ್ಷಗಳಲ್ಲಿ ಆರು ಹೊಸ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ.

ಬಿಡುಗಡೆಗೂ ಮುನ್ನ ಹೊಸ ಐಯಾನಿಕ್ 5 ಇವಿ ಕಾರಿನ ರೋಡ್ ಟೆಸ್ಟ್ ನಡೆಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಹೊಸ ಇವಿ ಕಾರುಗಳ ಉತ್ಪಾದನೆಗೆ ಪೂರಕವಾದ ಮತ್ತು ಗುಣಮಟ್ಟದ ಮಾದರಿಗಳನ್ನು ಸಿದ್ದಪಡಿಸಲು ಆಧುನಿಕ ತಂತ್ರಜ್ಞಾನ ಪ್ರೇರಿತ ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (ಇ-ಜಿಎಂಪಿ) ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಲು ಉದ್ದೇಶಿಸಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಕಂಪನಿಯು ವಿವಿಧ ಸೆಗ್ಮೆಂಟ್‌ ಇವಿ ಪರಿಚಯಿಸಲಿದೆ.

ಬಿಡುಗಡೆಗೂ ಮುನ್ನ ಹೊಸ ಐಯಾನಿಕ್ 5 ಇವಿ ಕಾರಿನ ರೋಡ್ ಟೆಸ್ಟ್ ನಡೆಸಿದ ಹ್ಯುಂಡೈ

ಎಲೆಕ್ಟ್ರಿಕ್ ಜೊತೆಗೆ ಭವಿಷ್ಯದಲ್ಲಿ ಸದ್ದುಮಾಡಬಹುದಾದ ಹೈಡ್ರೊಜನ್ ಫ್ಯೂಲ್ ಸೆಲ್ಸ್ ವಾಹನಗಳನ್ನು ಉತ್ಪಾದನೆ ಆರಂಭಿಸುತ್ತಿದ್ದು, ಹೊಸ ಮಾದರಿಯ ವಾಹನಗಳ ಸಂಶೋಧನೆ ಮತ್ತು ಅಭಿವೃದ್ದಿ ಮೇಲೆ ಹೆಚ್ಚಿನ ಗಮನಹರಿಸಿರುವ ಹ್ಯುಂಡೈ ಕಂಪನಿಯು ಶೀಘ್ರದಲ್ಲೇ ತನ್ನ ಬಹುನೀರಿಕ್ಷಿತ ಪ್ರಮುಖ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ.

ಬಿಡುಗಡೆಗೂ ಮುನ್ನ ಹೊಸ ಐಯಾನಿಕ್ 5 ಇವಿ ಕಾರಿನ ರೋಡ್ ಟೆಸ್ಟ್ ನಡೆಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಬಿಡುಗಡೆ ಮಾಡಲಿರುವ ಆರು ಹೊಸ ಎಲೆಕ್ಟ್ರಿಕ್ ಕಾರುಗಳ ಪೈಕಿ ಐಯಾನಿಕ್ 5 ಕ್ರಾಸ್ಓವರ್ ಎಸ್‌ಯುವಿ ಮಾದರಿಯು ಕೂಡಾ ಒಂದಾಗಿದ್ದು, ಹೊಸ ಕಾರು ಮಾದರಿಯನ್ನು ಹ್ಯುಂಡೈ ಕಂಪನಿಯು ಭಾರತದಲ್ಲಿ ಮಾತ್ರವಲ್ಲ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ಪರಿಚಯಿಸಲಿದೆ.

ಬಿಡುಗಡೆಗೂ ಮುನ್ನ ಹೊಸ ಐಯಾನಿಕ್ 5 ಇವಿ ಕಾರಿನ ರೋಡ್ ಟೆಸ್ಟ್ ನಡೆಸಿದ ಹ್ಯುಂಡೈ

ಹೊಸ ಐಯಾನಿಕ್ 5 ಮಾದರಿಯನ್ನು ಈಗಾಗಲೇ ಯುಎಸ್ಎ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರುವ ಹ್ಯುಂಡೈ ಇದೀಗ ಭಾರತ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡುತ್ತಿದ್ದು, ಒಂದೇ ಪ್ಲ್ಯಾಟ್‌ಫಾರ್ಮ್ ಹೊಂದಿರುವ ಕಿಯಾ ಇವಿ6 ಮಾದರಿಗಿಂತಲೂ ಐಯಾನಿಕ್ 5 ಭಾರತದಲ್ಲಿ ಬೆಲೆ ವಿಚಾರವಾಗಿ ಗಮನಸೆಳೆಯಲಿದೆ.

ಬಿಡುಗಡೆಗೂ ಮುನ್ನ ಹೊಸ ಐಯಾನಿಕ್ 5 ಇವಿ ಕಾರಿನ ರೋಡ್ ಟೆಸ್ಟ್ ನಡೆಸಿದ ಹ್ಯುಂಡೈ

ಹೊಸ ಐಕಾನಿಕ್ 5 ಎಲೆಕ್ಟ್ರಿಕ್ ಕಾರನ್ನು ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (ಇ-ಜಿಎಂಪಿ) ತಂತ್ರಜ್ಞಾನದಡಿ ನಿರ್ಮಾಣ ಮಾಡಲಾಗಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಹೊಸ ಕಾರು 58 ಕಿ.ವ್ಯಾ ಮತ್ತು 72.6 ಕಿ.ವ್ಯಾ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ.

ಬಿಡುಗಡೆಗೂ ಮುನ್ನ ಹೊಸ ಐಯಾನಿಕ್ 5 ಇವಿ ಕಾರಿನ ರೋಡ್ ಟೆಸ್ಟ್ ನಡೆಸಿದ ಹ್ಯುಂಡೈ

ಐಯಾನಿಕ್ 5 ಕಾರು ಬ್ಯಾಟರಿ ಪ್ಯಾಕ್ ಆಧಾರದ ಪ್ರತಿ ಚಾರ್ಜ್‌ಗೆ ಗರಿಷ್ಠ ಮೈಲೇಜ್ ಹಿಂದಿಗಿರುಗಿಸಲಿದ್ದು, ಯಎಸ್ ಎನ್ವಿರೋನ್ಮೆಂಟ್ ಪ್ರೊಟೆಕ್ಷನ್ ಎಜೆನ್ಸಿ(EPA) ಸಂಸ್ಥೆಯು ನೀಡಿರುವ ಪ್ರಮಾಣ ಪತ್ರದಲ್ಲಿ ಹೊಸ ಕಾರಿ ಅಧಿಕೃತ ಮೈಲೇಜ್ ಪ್ರಮಾಣವು ಪ್ರತಿ ಚಾರ್ಜ್‌ಗೆ 488 ಕಿ.ಮೀ ಆಗಿದೆ.

ಬಿಡುಗಡೆಗೂ ಮುನ್ನ ಹೊಸ ಐಯಾನಿಕ್ 5 ಇವಿ ಕಾರಿನ ರೋಡ್ ಟೆಸ್ಟ್ ನಡೆಸಿದ ಹ್ಯುಂಡೈ

ಈ ಮೂಲಕ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳಿಗೆ ಸಮನಾದ ಫೀಚರ್ಸ್ ಹೊಂದಿರವ ಹೊಸ ಐಯಾನಿಕ್ 5 ಕಾರು ಭಾರತದಲ್ಲಿ ರೂ. 35 ಲಕ್ಷದಿಂದ ರೂ. 50 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಈ ವರ್ಷದ ಕೊನೆಯಲ್ಲಿ ಇಲ್ಲವೇ 2023ರ ಆರಂಭದಲ್ಲಿ ಬಿಡುಗಡೆಯಾಗಬಹುದಾಗಿದೆ.

ಬಿಡುಗಡೆಗೂ ಮುನ್ನ ಹೊಸ ಐಯಾನಿಕ್ 5 ಇವಿ ಕಾರಿನ ರೋಡ್ ಟೆಸ್ಟ್ ನಡೆಸಿದ ಹ್ಯುಂಡೈ

ಹೊಸ ಐಯಾನಿಕ್ 5 ಕಾರು ಕಿಯಾ ಇವಿ6 ಮಾದರಿಯೊಂದಿಗೆ ಪ್ಲ್ಯಾಟ್‌ಫಾರ್ಮ್ ಹಂಚಿಕೊಂಡಿದ್ದರೂ ಇವಿ6 ಮಾದರಿಗಿಂತಲೂ ಐಯಾನಿಕ್ 5 ಭಾರತದಲ್ಲಿ ಕಡಿಮೆ ಬೆಲೆ ಹೊಂದಿರಲಿದ್ದು, ಇದಕ್ಕೆ ಕಾರಣ ಐಯಾನಿಕ್ 5 ಮಾದರಿಯನ್ನು ಭಾರತದಲ್ಲಿ ಹ್ಯುಂಡೈ ಕಂಪನಿಯು ಸಿಕೆಡಿ ಆಮದು ನೀತಿಯಡಿಯಲ್ಲಿ ಮಾರಾಟ ಮಾಡಲಿದೆ.

ಬಿಡುಗಡೆಗೂ ಮುನ್ನ ಹೊಸ ಐಯಾನಿಕ್ 5 ಇವಿ ಕಾರಿನ ರೋಡ್ ಟೆಸ್ಟ್ ನಡೆಸಿದ ಹ್ಯುಂಡೈ

ಕಿಯಾ ಇವಿ6 ಮಾದರಿಯು ಸದ್ಯ ಪೂರ್ಣ ಪ್ರಮಾಣದಲ್ಲಿ ವಿದೇಶದಲ್ಲಿ ನಿರ್ಮಾಣಗೊಂಡ ಮಾದರಿಯು ಭಾರತಕ್ಕೆ ಸಿಬಿಯು ಆಮದು ನೀತಿ ಅಡಿ ಮಾರಾಟಗೊಳಿಸುತ್ತಿರುವುದರಿಂದ ತುಸು ದುಬಾರಿಯಾಗಿದ್ದು, ಐಯಾನಿಕ್ 5 ಮಾದರಿಯನ್ನು ಹ್ಯುಂಡೈ ಕಂಪನಿಯು ಭಾರತದಲ್ಲಿ ಮರುಜೋಡಣೆ ಪ್ರಕ್ರಿಯೆಯಿಂದ ಬೆಲೆಯಲ್ಲಿ ತುಸು ಇಳಿಕೆಯಾಗಲಿದೆ.

ಬಿಡುಗಡೆಗೂ ಮುನ್ನ ಹೊಸ ಐಯಾನಿಕ್ 5 ಇವಿ ಕಾರಿನ ರೋಡ್ ಟೆಸ್ಟ್ ನಡೆಸಿದ ಹ್ಯುಂಡೈ

ಹೀಗಾಗಿ ಬೆಲೆ ವಿಚಾರವಾಗಿ ಗಮನಸೆಳಯಲಿರುವ ಐಯಾನಿಕ್ 5 ಮಾದರಿಯು ಐಷಾರಾಮಿ ಕಾರು ಮಾದರಿಗಳಿಗೂ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದ್ದು, ಐಯಾನಿಕ್ 5 ಕಾರಿನಲ್ಲಿ ಹ್ಯುಂಡೈ ಕಂಪನಿಯು 58 ಕಿ.ವ್ಯಾ ಮತ್ತು 72.6 ಕಿ.ವ್ಯಾ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲು ನಿರ್ಧರಿಸಿದೆ.

ಬಿಡುಗಡೆಗೂ ಮುನ್ನ ಹೊಸ ಐಯಾನಿಕ್ 5 ಇವಿ ಕಾರಿನ ರೋಡ್ ಟೆಸ್ಟ್ ನಡೆಸಿದ ಹ್ಯುಂಡೈ

ಆರಂಭಿಕ ಮಾದರಿಯು 167 ಬಿಹೆಚ್‌ಪಿ ಉತ್ಪಾದಿಯೊಂದಿಗೆ ಕೇವಲ 8.5 ಸೆಕೆಂಡುಗಳಲ್ಲಿ ಗಂಟೆಗೆ ಸೊನ್ನೆಯಿಂದ ನೂರು ಕಿಮೀ ವೇಗವನ್ನು ತಲುಪಲಿದ್ದರೆ ದೊಡ್ಡ ಬ್ಯಾಟರಿ ಪ್ಯಾಕ್‌ ಜೋಡಣೆ ಹೊಂದಿರುವ ಐಯಾನಿಕ್ 5 ಮಾದರಿಯು 302 ಬಿಹೆಚ್‌ಪಿ ಮತ್ತು 605 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಈ ಕೇವಲ 5.2 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗದೊಂದಿಗೆ ಪ್ರತಿ ಗಂಟೆಗೆ 185 ಕಿ.ಮೀ ಟಾಪ್ ಸ್ಪೀಡ್ ತಲುಪುತ್ತದೆ.

ಬಿಡುಗಡೆಗೂ ಮುನ್ನ ಹೊಸ ಐಯಾನಿಕ್ 5 ಇವಿ ಕಾರಿನ ರೋಡ್ ಟೆಸ್ಟ್ ನಡೆಸಿದ ಹ್ಯುಂಡೈ

ಐಯಾನಿಕ್ 5 ಕಾರು ಬ್ಯಾಟರಿ ಪ್ಯಾಕ್ ಆಧಾರದ ಪ್ರತಿ ಚಾರ್ಜ್‌ಗೆ ಗರಿಷ್ಠ ಮೈಲೇಜ್ ಹಿಂದಿಗಿರುಗಿಸಲಿದ್ದು, ಯಎಸ್ ಎನ್ವಿರೋನ್ಮೆಂಟ್ ಪ್ರೊಟೆಕ್ಷನ್ ಎಜೆನ್ಸಿ(EPA) ಸಂಸ್ಥೆಯು ನೀಡಿರುವ ಪ್ರಮಾಣ ಪತ್ರದಲ್ಲಿ ಹೊಸ ಕಾರಿ ಅಧಿಕೃತ ಮೈಲೇಜ್ ಪ್ರಮಾಣವು ಪ್ರತಿ ಚಾರ್ಜ್‌ಗೆ 488 ಕಿ.ಮೀ ಆಗಿದೆ.

Most Read Articles

Kannada
English summary
Hyundai ioniq 5 ev suv spotted testing in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X