ಚಾರ್ಜಿಂಗ್ ಸೌಲಭ್ಯಕ್ಕಾಗಿ ಟಾಟಾ ಪವರ್ ಜೊತೆ ಪಾಲುದಾರಿಕೆ ಪ್ರಕಟಿಸಿದ ಹ್ಯುಂಡೈ

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ಮೋಟಾರ್ ಇಂಡಿಯಾ ಕಂಪನಿಯು ಟಾಟಾ ಪವರ್ ಜೊತೆ ಕೈಜೋಡಿಸಿದ್ದು, ದೇಶದಲ್ಲಿನ ತನ್ನ ಆಯ್ದ ಡೀಲರ್‌ಶಿಪ್‌ಗಳಲ್ಲಿ ಫಾಸ್ಟ್ ಚಾರ್ಜಿಂಗ್ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಮೂಲಸೌಕರ್ಯವನ್ನು ಸ್ಥಾಪಿಸಲು ಬೃಹತ್ ಯೋಜನೆ ರೂಪಿಸಿದೆ.

ಚಾರ್ಜಿಂಗ್ ಸೌಲಭ್ಯಕ್ಕಾಗಿ ಟಾಟಾ ಪವರ್ ಜೊತೆ ಪಾಲುದಾರಿಕೆ ಪ್ರಕಟಿಸಿದ ಹ್ಯುಂಡೈ

ಹೊಸ ಸಹಯೋಗದ ಯೋಜನೆಯ ಭಾಗವಾಗಿ ಟಾಟಾ ಪವರ್ ಕಂಪನಿಯು ದೇಶಾದ್ಯಂತ ಪ್ರಮುಖ 29 ಹುಂಡೈ ಡೀಲರ್‌ಶಿಪ್‌ಗಳಲ್ಲಿ ಒಟ್ಟು 34 60 kW DC ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗುತ್ತಿದ್ದು, ಚಾರ್ಜಿಂಗ್ ಸ್ಟೇಷನ್‌ಗಳ ಕುರಿತು ಮಾಹಿತಿಯನ್ನು ಟಾಟಾ ಪವರ್‌ನ ಇಜೆಡ್ ಚಾರ್ಜಿಂಗ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಾಗುವಂತೆ ಮಾಡಲಿದೆ.

ಚಾರ್ಜಿಂಗ್ ಸೌಲಭ್ಯಕ್ಕಾಗಿ ಟಾಟಾ ಪವರ್ ಜೊತೆ ಪಾಲುದಾರಿಕೆ ಪ್ರಕಟಿಸಿದ ಹ್ಯುಂಡೈ

ಇಂಧನ ಆಧರಿತ ವಾಹನಗಳನ್ನು ತ್ಯಜಿಸಿ ಇವಿ ವಾಹನಗಳನ್ನು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸಲು ಇಂತಹ ಸಹಭಾಗಿತ್ವ ಯೋಜನೆಗಳು ಅವಶ್ಯವಾಗಿ ಎಂದಿರುವ ಹ್ಯುಂಡೈ ಕಂಪನಿಯು ಎಂಡ್-ಟು-ಎಂಡ್ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ಒದಗಿಸಲು ಇದು ಸಹಕಾರಿಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಾರ್ಜಿಂಗ್ ಸೌಲಭ್ಯಕ್ಕಾಗಿ ಟಾಟಾ ಪವರ್ ಜೊತೆ ಪಾಲುದಾರಿಕೆ ಪ್ರಕಟಿಸಿದ ಹ್ಯುಂಡೈ

ಹೊಸ ಯೋಜನೆ ಅಡಿ ಹ್ಯುಂಡೈ ಕಂಪನಿಯು ಟಾಟಾ ಪವರ್ ಚಾರ್ಜಿಂಗ್ ಗ್ರಿಡ್‌ಗಳಿಗೆ ಅಗತ್ಯ ಸ್ಥಳಾವಕಾಶ ಒದಗಿಸಲಿದ್ದು, ಚಾರ್ಜಿಂಗ್ ಸ್ಥಾಪನೆಯ ನಂತರ ಅವರ ನಿರ್ವಹಣೆಯನ್ನು ಟಾಟಾ ಪವರ್ ನಿರ್ವಹಿಸಲಿದೆ.

ಚಾರ್ಜಿಂಗ್ ಸೌಲಭ್ಯಕ್ಕಾಗಿ ಟಾಟಾ ಪವರ್ ಜೊತೆ ಪಾಲುದಾರಿಕೆ ಪ್ರಕಟಿಸಿದ ಹ್ಯುಂಡೈ

ಭಾರತದಲ್ಲಿ ಹ್ಯುಂಡೈ ಕಂಪನಿಯು ಶೀಘ್ರದಲ್ಲಿಯೇ ತನ್ನ ಎರಡು ಬಹುನೀರಿಕ್ಷಿತ ಇವಿ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರುಗಳ ಬಿಡುಗಡೆಗೂ ಮನ್ನ ಕಂಪನಿಯು ತನ್ನ ಡೀಲರ್‌ಶಿಪ್ ಫಾಸ್ಟ್ ಚಾರ್ಜಿಂಗ್ ಯುನಿಟ್‌ಗಳನ್ನು ಹೆಚ್ಚಿಸಲು ಹೊಸ ಪಾಲುದಾರಿಕೆ ಪ್ರಕಟಿಸಿದೆ.

ಚಾರ್ಜಿಂಗ್ ಸೌಲಭ್ಯಕ್ಕಾಗಿ ಟಾಟಾ ಪವರ್ ಜೊತೆ ಪಾಲುದಾರಿಕೆ ಪ್ರಕಟಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಸದ್ಯ ಭಾರತದಲ್ಲಿ ಕೊನಾ ಇವಿ ಕಾರು ಮಾದರಿಯನ್ನು ಮಾರಾಟ ಮಾಡುತ್ತಿದ್ದು, ಕಂಪನಿಯು ಮುಂಬರುವ ದಿನಗಳಲ್ಲಿ ಕೊನಾ ಮಾದರಿಗಿಂತಲೂ ಹೆಚ್ಚು ಮೈಲೇಜ್ ಪ್ರೇರಿತ ಕಾರುಗಳ ಜೊತೆ ಬಜೆಟ್ ಕಾರು ಮಾದರಿಗಳನ್ನು ಸಹ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಚಾರ್ಜಿಂಗ್ ಸೌಲಭ್ಯಕ್ಕಾಗಿ ಟಾಟಾ ಪವರ್ ಜೊತೆ ಪಾಲುದಾರಿಕೆ ಪ್ರಕಟಿಸಿದ ಹ್ಯುಂಡೈ

ಪ್ರೀಮಿಯಂ ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಬಜೆಟ್ ಬೆಲೆಯ ಎಲೆಕ್ಟ್ರಿಕ್ ವಾಹನಗಳನ್ನು ಸಹ ಮಾರಾಟ ಮಾಡಲು ಉದ್ದೇಶಿಸಿರುವ ಹ್ಯುಂಡೈ ಕಂಪನಿಯು ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿದ್ದು, ಕಂಪನಿಯು 2028ರ ವೇಳೆಗೆ ವಿವಿಧ ಸೆಗ್ಮೆಂಟ್‌ಗಳಲ್ಲಿ ಆರು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿದೆ.

ಚಾರ್ಜಿಂಗ್ ಸೌಲಭ್ಯಕ್ಕಾಗಿ ಟಾಟಾ ಪವರ್ ಜೊತೆ ಪಾಲುದಾರಿಕೆ ಪ್ರಕಟಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಹೊಸ ಇವಿ ಕಾರುಗಳ ಉತ್ಪಾದನೆಗೆ ಪೂರಕವಾದ ಮತ್ತು ಗುಣಮಟ್ಟದ ಮಾದರಿಗಳನ್ನು ಸಿದ್ದಪಡಿಸಲು ಆಧುನಿಕ ತಂತ್ರಜ್ಞಾನ ಪ್ರೇರಿತ ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (ಇ-ಜಿಎಂಪಿ) ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಲು ಉದ್ದೇಶಿಸಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಕಂಪನಿಯು ವಿವಿಧ ಸೆಗ್ಮೆಂಟ್‌ ಇವಿ ಪರಿಚಯಿಸಲಿದೆ.

ಚಾರ್ಜಿಂಗ್ ಸೌಲಭ್ಯಕ್ಕಾಗಿ ಟಾಟಾ ಪವರ್ ಜೊತೆ ಪಾಲುದಾರಿಕೆ ಪ್ರಕಟಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಬಿಡುಗಡೆ ಮಾಡಲಿರುವ ಆರು ಹೊಸ ಎಲೆಕ್ಟ್ರಿಕ್ ಕಾರುಗಳ ಪೈಕಿ ಐಯಾನಿಕ್ 5 ಕ್ರಾಸ್ಓವರ್ ಎಸ್‌ಯುವಿ ಮಾದರಿಯು ಕೂಡಾ ಒಂದಾಗಿದ್ದು, ಹೊಸ ಕಾರು ಮಾದರಿಯನ್ನು ಹ್ಯುಂಡೈ ಕಂಪನಿಯು ಭಾರತದಲ್ಲಿ ಮಾತ್ರವಲ್ಲ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ಪರಿಚಯಿಸಲಿದೆ.

ಚಾರ್ಜಿಂಗ್ ಸೌಲಭ್ಯಕ್ಕಾಗಿ ಟಾಟಾ ಪವರ್ ಜೊತೆ ಪಾಲುದಾರಿಕೆ ಪ್ರಕಟಿಸಿದ ಹ್ಯುಂಡೈ

ಹೊಸ ಐಕಾನಿಕ್ 5 ಎಲೆಕ್ಟ್ರಿಕ್ ಕಾರನ್ನು ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (ಇ-ಜಿಎಂಪಿ) ತಂತ್ರಜ್ಞಾನದಡಿ ನಿರ್ಮಾಣ ಮಾಡಲಾಗಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಹೊಸ ಕಾರು 58 ಕಿ.ವ್ಯಾ ಮತ್ತು 72.6 ಕಿ.ವ್ಯಾ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ.

ಚಾರ್ಜಿಂಗ್ ಸೌಲಭ್ಯಕ್ಕಾಗಿ ಟಾಟಾ ಪವರ್ ಜೊತೆ ಪಾಲುದಾರಿಕೆ ಪ್ರಕಟಿಸಿದ ಹ್ಯುಂಡೈ

ಐಷಾರಾಮಿ ಎಲೆಕ್ಟ್ರಿಕ್ ಕಾರುಗಳಿಗೆ ಸಮನಾದ ಫೀಚರ್ಸ್ ಹೊಂದಿರವ ಹೊಸ ಐಯಾನಿಕ್ 5 ಕಾರು ಭಾರತದಲ್ಲಿ ರೂ.35 ಲಕ್ಷದಿಂದ ರೂ.50 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದ್ದ, ದೇಶಿಯ ಮಾರುಕಟ್ಟೆಯಲ್ಲಿ ಈ ವರ್ಷದ ಮೂರನೇ ತ್ರೈಮಾಸಿಕ ಅವಧಿಗೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ

ಚಾರ್ಜಿಂಗ್ ಸೌಲಭ್ಯಕ್ಕಾಗಿ ಟಾಟಾ ಪವರ್ ಜೊತೆ ಪಾಲುದಾರಿಕೆ ಪ್ರಕಟಿಸಿದ ಹ್ಯುಂಡೈ

ತದನಂತದಲ್ಲಿ ಕಂಪನಿಯು ಕೊನಾ ಫೇಸ್‌ಲಿಫ್ಟ್ ಆವೃತ್ತಿಯನ್ನು ಹೊಸ ತಾಂತ್ರಿಕ ಅಂಶಗಳೊಂದಿಗೆ ಪರಿಚಯಿಸಲಿದ್ದು, ಹೊಸ ಕೊನಾ ಇವಿ ಕಾರು ಪ್ರಮುಖ ಫೀಚರ್ಸ್‌ಗಳ ಬದಲಾಣೆ ಹೊರತುಪಡಿಸಿ ಈ ಹಿಂದಿನಂತೆಯೇ ಎರಡು ಪ್ರಮುಖ ಬ್ಯಾಟರಿ ಆಯ್ಕೆಯನ್ನು ಹೊಂದಿರಲಿದೆ.

ಚಾರ್ಜಿಂಗ್ ಸೌಲಭ್ಯಕ್ಕಾಗಿ ಟಾಟಾ ಪವರ್ ಜೊತೆ ಪಾಲುದಾರಿಕೆ ಪ್ರಕಟಿಸಿದ ಹ್ಯುಂಡೈ

ಹೊಸ ಮಾದರಿಯ ಮರುವಿನ್ಯಾಸಗೊಳಿಸಿದ ಎಲ್ಇಡಿ ಡಿಆರ್‌ಎಲ್‌ಗಳು, ಟು ವರ್ಟಿಕಲ್ ಸ್ಲಾಟ್ ಹೊಂದಿರುವ ಬಂಪರ್, ಸಿಲ್ವರ್ ಆಕ್ಸೆಂಟ್ ಸೇರಿದಂತೆ ಪ್ರಮುಖ ಬದಲಾವಣೆಗಳು ಎಲೆಕ್ಟ್ರಿಕ್ ಎಸ್‌ಯುವಿ ಪ್ರಿಯರನ್ನು ಆಕರ್ಷಿಸಲಿವೆ. ಜೊತೆಗೆ ಹೊಸ ಕಾರಿನ ಹಿಂಭಾಗದ ವಿನ್ಯಾಸದಲ್ಲೂ ಪ್ರಮುಖ ಬದಲಾವಣೆಗಳಾಗಿದ್ದು, ಸ್ಪಿಟ್ ಟೈಲ್ ಲ್ಯಾಂಪ್ ಪ್ರತ್ಯೇಕಗೊಂಡಿರುವ ಫಾಗ್ ಲ್ಯಾಂಪ್, ಟರ್ನ್ ಇಂಡಿಕೇಟರ್ ಸಿಗ್ನಲ್, ಆಕ್ಸಿಲರಿ ಟೈಲ್‌ಲ್ಯಾಂಪ್ ನೀಡಲಾಗಿದೆ.

ಚಾರ್ಜಿಂಗ್ ಸೌಲಭ್ಯಕ್ಕಾಗಿ ಟಾಟಾ ಪವರ್ ಜೊತೆ ಪಾಲುದಾರಿಕೆ ಪ್ರಕಟಿಸಿದ ಹ್ಯುಂಡೈ

ಇದರೊಂದಿಗೆ ಹೊಸ ಕಾರಿನಲ್ಲಿ ಸುಧಾರಿತ ವಿನ್ಯಾಸದ ಅಲಾಯ್ ವೀಲ್ಹ್, ಆಕರ್ಷಕ ವಿನ್ಯಾಸದ ರೂಫ್ ರೈಲ್ಸ್ ನೀಡಲಾಗಿದ್ದು, ಹೊಸ ಕಾರಿನ ಒಳಭಾಗದಲ್ಲಿ ಫುಲ್-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ ಸರ್ಪೊಟ್ ಮಾಡುವ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೋಡಿಸಲಾಗಿದೆ.

ಚಾರ್ಜಿಂಗ್ ಸೌಲಭ್ಯಕ್ಕಾಗಿ ಟಾಟಾ ಪವರ್ ಜೊತೆ ಪಾಲುದಾರಿಕೆ ಪ್ರಕಟಿಸಿದ ಹ್ಯುಂಡೈ

ಹೊಸ ಕಾರಿನಲ್ಲಿ ಮತ್ತೊಂದು ಪ್ರಮುಖ ಬದಲಾವಣೆ ಎಂದರೆ ಪ್ರಮುಖ ಸೇಫ್ಟಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗಿದ್ದು, ಹೊಸ ಕಾರಿನಲ್ಲಿ 6 ಏರ್‌ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ ಸೇರಿದಂತೆ ಸುಧಾರಿತ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳಾದ ರಿಯರ್ ಟ್ರಾಫಿಕ್ ಕೂಲಿಷನ್ ಅವಾಯ್ಡೆನ್ಸ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಕೂಲಿಷನ್ ಅವಾಯ್ಡೆನ್ಸ್ ಅಸಿಸ್ಟ್‌ನಂತಹ ಸೌಲಭ್ಯ ಹೊಂದಿದೆ.

ಚಾರ್ಜಿಂಗ್ ಸೌಲಭ್ಯಕ್ಕಾಗಿ ಟಾಟಾ ಪವರ್ ಜೊತೆ ಪಾಲುದಾರಿಕೆ ಪ್ರಕಟಿಸಿದ ಹ್ಯುಂಡೈ

ಫೇಸ್‌ಲಿಫ್ಟ್ ಮಾದರಿಯೊಂದಿಗೆ ಹ್ಯುಂಡೈ ಕಂಪನಿಯು ಭಾರತದಲ್ಲಿ 64kWh ಬ್ಯಾಟರಿ ಪ್ಯಾಕ್ ಹೊಂದಿರುವ ಕೊನಾ ಇವಿ ಮಾದರಿಯನ್ನು ಬಿಡುಗಡೆ ಮಾಡಬಹುದಾದ ಸಾಧ್ಯತೆಗಳಿದ್ದು, ಇದು 39.2kWh ಮಾದರಿಗಿಂತಲೂ ತುಸು ದುಬಾರಿ ದರದೊಂದಿಗೆ ಹೆಚ್ಚಿನ ಮಟ್ಟದ ಮೈಲೇಜ್ ಹೊಂದಿರಲಿದೆ.

Most Read Articles

Kannada
English summary
Hyundai partners with tata power to power up ev charging infrastructure in india
Story first published: Thursday, May 19, 2022, 13:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X