ಬಹುಬೇಡಿಕೆಯ ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಿ ಬರಲಿದೆ ಹೊಸ ಹ್ಯುಂಡೈ ಕಾರು

ಹ್ಯುಂಡೈ ಭಾರತೀಯ ಮಾರುಕಟ್ಟೆಯಲ್ಲಿ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾಗಿದೆ, ಹ್ಯುಂಡೈ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹಲವು ವಿಭಾಗದಲ್ಲಿ ತಮ್ಮ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇದೀಗ ಭಾರತದಲ್ಲಿ ಹ್ಯುಂಡೈ ಕಂಪನಿಯು ಹೊಸ ಮೈಕ್ರೋ ಎಸ್‍ಯುವಿ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಬಹುಬೇಡಿಕೆಯ ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಿ ಬರಲಿದೆ ಹೊಸ ಹ್ಯುಂಡೈ ಕಾರು

ವರದಿಗಳ ಪ್ರಕಾರ ಹೊಸ ಮೈಕ್ರೋ ಎಸ್‍ಯುವಿ ಭಾರತದಲ್ಲಿ 2023 ರಲ್ಲಿ ಬಿಡುಗಡೆಯಾಗಲಿದೆ. ಆದ್ದರಿಂದ ಈ ವರ್ಷದ ಅಂತ್ಯದ ವೇಳೆಗೆ ಈ ಮಾದರಿಯು ರೋಡ್ ಟೆಸ್ಟ್ ಅನ್ನು ಪ್ರಾರಂಭಿಸಬಹುದು. ಈ ಹೊಸ ಎಂಟ್ರಿ ಲೆವೆಲ್ ಮೈಕ್ರೋ ಎಸ್‍ಯುವಿಗೆ ಸದ್ಯಕ್ಕೆ Ai3 ಎಂಬ ಕೋಡ್ ನೇಮ್ ಅನ್ನು ನೀಡಲಾಗಿದೆ, ಇನ್ನು ಹುಂಡೈ ಮೋಟಾರ್ ಇಂಡಿಯಾ ಎರಡನೇ ಬಾರಿಗೆ ಐಕಾನಿಕ್ ಸ್ಯಾಂಟ್ರೊವನ್ನು ಸ್ಥಗಿತಗೊಳಿಸಲು ಸಿದ್ಧವಾಗಿದೆ ಎಂದು ವರದಿಗಳಾಗಿದೆ. ಹೊಸ ಮೈಕ್ರೋ ಎಸ್‍ಯುವಿಯು ಸ್ಯಾಂಟ್ರೊ ಕಾರಿನ ಸ್ಥಾನವನ್ನು ತುಂಬುವ ಸಾಧ್ಯತೆಗಳಿದೆ.

ಬಹುಬೇಡಿಕೆಯ ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಿ ಬರಲಿದೆ ಹೊಸ ಹ್ಯುಂಡೈ ಕಾರು

ಈ ಹೊಸ ಹ್ಯುಂಡೈ ಮೈಕ್ರೋ ಎಸ್‍ಯುವಿ ಮಾದರಿಯು ಭಾರತದಲ್ಲಿ ಮಾರುತಿ ಸುಜುಕಿ ಇಗ್ನಿಸ್, ಇತ್ತೀಚೆಗೆ ಬಿಡುಗಡೆಯಾದ ಟಾಟಾ ಪಂಚ್ ಮತ್ತು ಮಹೀಂದ್ರಾ KUV100 ಮಾದರಿಗಳಿಗೆ ಪೈಪೋಟಿ ನೀಡುತ್ತದೆ. Ai3 ಮಾದರಿಯು ಬಹುಶಃ ದಕ್ಷಿಣ ಕೊರಿಯಾದಲ್ಲಿ ಬಿಡುಗಡೆ ಮಾಡಲಾದ ಕ್ಯಾಸ್ಪರ್ ಮೈಕ್ರೋ ಎಸ್‍ಯುವಿಯ ಹೆಚ್ಚು ಸ್ಥಳೀಯ ಆವೃತ್ತಿಯಾಗಿದೆ.

ಬಹುಬೇಡಿಕೆಯ ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಿ ಬರಲಿದೆ ಹೊಸ ಹ್ಯುಂಡೈ ಕಾರು

ಸದ್ಯಕ್ಕೆ, ಹ್ಯುಂಡೈ Ai3 ಗಾಗಿ ಯಾವ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತದೆ ಎಂಬುದು ನಮಗೆ ತಿಳಿದಿಲ್ಲ. ಹ್ಯುಂಡೈ ಹೊಸ ಮೈಕ್ರೋ ಎಸ್‍ಯುವಿಗಾಗಿ ಭಾರತದಲ್ಲಿ ಬೇರೆ ಹೆಸರನ್ನು ಬಳಸಬಹುದು. ದಕ್ಷಿಣ ಕೊರಿಯಾದಲ್ಲಿ ಬಿಡುಗಡೆಗೊಂಡ ಹ್ಯುಂಡೈ ಕ್ಯಾಸ್ಪರ್ ಸಣ್ಣ ಎಸ್‍ಯುವಿಯಲ್ಲಿರುವ ಅದೇ ಎರಡು ಎಂಜಿನ್ ಆಯ್ಕೆಯನ್ನು ಭಾರತದಲ್ಲಿ ಬಿಡುಗಡೆಯಾಗಲಿರುವ Ai3 ಮಾದರಿಯಲ್ಲಿ ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

ಬಹುಬೇಡಿಕೆಯ ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಿ ಬರಲಿದೆ ಹೊಸ ಹ್ಯುಂಡೈ ಕಾರು

ಹ್ಯುಂಡೈ ಮೈಕ್ರೋ ಎಸ್‍ಯುವಿಯು 1.0-ಲೀಟರ್ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು ಹೊಸ 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿದೆ. ಇದರಲ್ಲಿ 1.0-ಲೀಟರ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 76 ಬಿಎಚ್‌ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿರುತ್ತದೆ.

ಬಹುಬೇಡಿಕೆಯ ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಿ ಬರಲಿದೆ ಹೊಸ ಹ್ಯುಂಡೈ ಕಾರು

ಇದರೊಂದಿಗೆ 1.0-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಟರ್ಬೋ ಎಂಜಿನ್ 100 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ನೊಂದಿಗೆ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಬಹುಬೇಡಿಕೆಯ ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಿ ಬರಲಿದೆ ಹೊಸ ಹ್ಯುಂಡೈ ಕಾರು

ಹ್ಯುಂಡೈ ಮೈಕ್ರೋ ಎಸ್‍ಯುವಿಯು 3,595 ಎಂಎಂ ಉದ್ದ, 1,595 ಎಂಎಂ ಅಗಲ ಮತ್ತು 1,575 ಎಂಎಂ ಎತ್ತರವನ್ನು ಹೊಂದಿದೆ. ಇದು ಸ್ಯಾಂಟ್ರೊ ಹ್ಯಾಚ್‌ಬ್ಯಾಕ್‌ಗಿಂತ ಚಿಕ್ಕದಾಗಿದೆ. ಆದರೆ ಇದು ಕ್ಯಾಬಿನ್‌ನಲ್ಲಿ ಯೋಗ್ಯವಾದ ಜಾಗವನ್ನು ಹೊಂದಿದೆ. ಈ ಕ್ಯಾಸ್ಪರ್ ನಾಲ್ಕು ಸೀಟ್ ಮಾದರಿಯಾಗಿದೆ. ಆದರೆ ನಾಲ್ಕೂ ಸೀಟುಗಳು ಉತ್ತಮ ಸೌಕರ್ಯ ಮತ್ತು ಬೆಂಬಲವನ್ನು ನೀಡುತ್ತವೆ. ಭಾರತದ ಮಾದರಿಯಲ್ಲಿ ಸಣ್ಣ ಬದಲಾವಣೆ ನಡೆಸಬಹುದು ಎಂದು ನಿರೀಕ್ಷಿಸಬಹುದು.

ಬಹುಬೇಡಿಕೆಯ ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಿ ಬರಲಿದೆ ಹೊಸ ಹ್ಯುಂಡೈ ಕಾರು

ಹ್ಯುಂಡೈ ಕ್ಯಾಸ್ಪರ್ ಮಾದರಿಯಲ್ಲಿ ಎರಡೂ ಮುಂಭಾಗದ ಸೀಟುಗಳನ್ನು ಫ್ಲಾಟ್ ಆಗಿ ಮಡಚಬಹುದು, ಇದು ಪ್ರೊಡಕ್ಷನ್ ಕಾರ್‌ಗೆ ವಿಶ್ವದಲ್ಲೇ ಮೊದಲನೆಯದು. ಹೀಗಾಗಿ ಮೇಕ್-ಶಿಫ್ಟ್ ಕ್ಯಾಂಪಿಂಗ್ ಟೇಬಲ್‌ಗಳಾಗಿ ಕಾರ್ಯನಿರ್ವಹಿಸುತ್ತದೆ. ಹಿಂಭಾಗದ ಸೀಟುಗಳನ್ನು ಪ್ರತ್ಯೇಕವಾಗಿ 160 ಎಂಎಂ ಮುಂದಕ್ಕೆ ಮತ್ತು ಹಿಂದಕ್ಕೆ ಸ್ಲೈಡ್ ಮಾಡಬಹುದು. ಇನ್ನು 39 ಡಿಗ್ರಿಗಳವರೆಗೆ ಒರಗಬಹುದು, ಇದು ಹಿಂಭಾಗದ ಪ್ರಯಾಣಿಕರ ಸೌಕರ್ಯ ಉತ್ತಮವಾಗಿದೆ.

ಬಹುಬೇಡಿಕೆಯ ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಿ ಬರಲಿದೆ ಹೊಸ ಹ್ಯುಂಡೈ ಕಾರು

ಈ ಹೊಸ ಮೈಕ್ರೋ ಎಸ್‍ಯುವಿಯಲ್ಲಿ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಪೂರ್ಣ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್ (ಎರಡು-ಸ್ಪೋಕ್, ಫ್ಲಾಟ್-ಬಾಟಮ್ ವಿನ್ಯಾಸ), ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೀಲ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ, ವೆಂಟಿಲೇಟೆಡ್ ಡ್ರೈವರ್ ಸೀಟ್ ಮತ್ತು.ಮುಂತಾದ ಹಲವು ಫೀಚರ್ಸ್ ಗಳನ್ನು ಮತ್ತು ತಂತ್ರಜ್ಙಾನಗಳನ್ನು ಹೊಂದಿರಲಿದೆ,

ಬಹುಬೇಡಿಕೆಯ ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಿ ಬರಲಿದೆ ಹೊಸ ಹ್ಯುಂಡೈ ಕಾರು

ಹೊಸ ಹುಂಡೈ ಪ್ರಾಜೆಕ್ಟ್ AX1 ನ ಉತ್ಪಾದನೆಯ ಆವೃತ್ತಿಯಾದ ಹ್ಯುಂಡೈ ಕ್ಯಾಸ್ಪರ್ ಸಿಟಿ ಮೂಲದ ಗ್ರಾಹಕರನ್ನು ಗುರಿಯಾಗಿರಿಸಿಕೊಳ್ಳುತ್ತದೆ. ಹ್ಯುಂಡೈ ಐ10 ಗಾಗಿ ಬಳಸಿದ ಪ್ಲಾಟ್‌ಫಾರ್ಮ್ ಅನ್ನು ಕಾರು ಹಂಚಿಕೊಂಡಿದೆ, ಅಂದರೆ ಕೋನಾ ಅಥವಾ ವೆನ್ಯೂ ಎಸ್‌ಯುವಿಗಳಿಗೆ ಹೋಲಿಸಿದರೆ ಇದು ಗಾತ್ರದಲ್ಲಿ ಚಿಕ್ಕದಾಗಿರುತ್ತದೆ,

ಬಹುಬೇಡಿಕೆಯ ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಿ ಬರಲಿದೆ ಹೊಸ ಹ್ಯುಂಡೈ ಕಾರು

ಹ್ಯುಂಡೈ ಕ್ಯಾಸ್ಪರ್ ಮೈಕ್ರೊ ಎಸ್‍ಯುವಿಯು ಆಕರ್ಷಕ ಬಾಕ್ಸಿ ವಿನ್ಯಾಸವನ್ನು ಹೊಂದಿದೆ. ಈ ಮಕ್ರೋ ಎಸ್‍ಯುವಿಯು ವೃತ್ತಾಕಾರದ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಸುತ್ತಿನ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿಸಿ, ದೊಡ್ಡ ಗ್ರಿಲ್, ಎಲ್ಇಡಿ ಡಿಆರ್‌ಎಲ್‌ಗಳ ತೆಳುವಾದ ಸ್ಟ್ರಿಪ್ ಟರ್ನ್ ಇಂಡಿಕೇಟರ್‌ಗಳು, ಸ್ಪ್ಲಿಟ್ ಟೈಲ್ ಲ್ಯಾಂಪ್ಸ್, ರೂಫ್ ಮೇಲೆ ಜೋಡಿಸಲಾದ ಸ್ಪಾಯ್ಲರ್ ಜೊತೆಗೆ ಟೈಲ್ ಗೇಟ್ ಅನ್ನು ಹೊಂದಿರುತ್ತದೆ,

ಬಹುಬೇಡಿಕೆಯ ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಿ ಬರಲಿದೆ ಹೊಸ ಹ್ಯುಂಡೈ ಕಾರು

ಇನ್ನು ಈ ಮೈಕ್ರೋ ಎಸ್‍ಯುವಿಯಲ್ಲಿ 7-ಏರ್‌ಬ್ಯಾಗ್‌ಗಳು, TPMS, ಫಾರ್ವರ್ಡ್ ಕಾಲಿಷನ್ ಅವೈಡನ್ಸ್ ಅಸಿಸ್ಟ್, ರೇರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಡ್ರೈವರ್ ಅಟೆಕ್ಷನ್ ಮಾನಿಟರ್, ಇತ್ಯಾದಿ ಸೇರಿದಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳು ಲಭ್ಯವಿದೆ. ಇನ್ನು ಈ ಪುಟ್ಟ ಎಸ್‍ಯುವಿಯಲ್ಲಿ ಸ್ನೋ, ಸ್ಯಾಂಡ್ ಮತ್ತು ಮಾಡ್ ಎಂಬ ಡ್ರೈವಿಂಗ್ ಮೋಡ್ ಗಳನ್ನು ಒಳಗೊಂಡಿದೆ. ಈ ಮೈಕ್ರೊ ಎಸ್‍ಯುವಿಯು ಬೋರ್ಗ್‌ವರ್ನರ್ ಇಂಟಿಗ್ರೇಟೆಡ್ ಡ್ರೈವ್ ಮಾಡ್ಯೂಲ್ (ಐಡಿಎಂ) ಅನ್ನು ಪಡೆಯಲಿದೆ.

ಬಹುಬೇಡಿಕೆಯ ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಿ ಬರಲಿದೆ ಹೊಸ ಹ್ಯುಂಡೈ ಕಾರು

ಹ್ಯುಂಡೈ ಕಂಪನಿಯು ಹಲವು ಜನಪ್ರಿಯ ಮಾದರಿಗಳು ಭಾರತದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಇದರೊಂದಿಗೆ ಹ್ಯುಂಡೈ ಕಂಪನಿಯು ಈ ವರ್ಷ ಭಾರತದಲ್ಲಿ ಹಲವು ಕಾರುಗಳನ್ನು ಬಿಡುಗಡೆಗೊಳಿಸಲಿವೆ. ಆದರೆ ಈ ಹೊಸ ಮೈಕ್ರೋ ಎಸ್‍ಯುವಿಯು ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಗೊಳಿಸುತ್ತಾರೆ.

Most Read Articles

Kannada
English summary
Hyundai plans to launch new small suv next year to compete with tata punch details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X