Just In
- 1 hr ago
ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ
- 14 hrs ago
ಆಕರ್ಷಕ ವಿನ್ಯಾಸದ 2022ರ ಹ್ಯುಂಡೈ ಟ್ಯೂಸಾನ್ ಎಸ್ಯುವಿಯ ವಿಶೇಷತೆಗಳು
- 15 hrs ago
ಪಾಸ್ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..
- 15 hrs ago
ಬ್ರೇಕ್ ಫೇಲ್ ಆದಾಗ ಕೇವಲ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ? ಇಲ್ಲಿದೆ ಉಪಯುಕ್ತ ಸಲಹೆ
Don't Miss!
- Education
UGC Scholarship : ಯುಜಿಸಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
- News
ಆಗಸ್ಟ್ 17ರಂದು ಭಾರತದ ನಿಮ್ಮ ನಗರದಲ್ಲಿ ಪೆಟ್ರೋಲ್-ಡೀಸೆಲ್ ದರ ತಿಳಿಯಿರಿ
- Movies
ಮಗಳಿಗೆ ದುಬಾರಿ ಗಿಫ್ಟ್ ಕೊಟ್ಟ ನಟ ದುನಿಯಾ ವಿಜಯ್!
- Lifestyle
ಶನಿದೋಷ ನಿವಾರಣೆ ಹಾಗೂ ಸಂಪತ್ತು ವೃದ್ಧಿಗೆ ಕೃಷ್ಣ ಜನ್ಮಾಷ್ಟಮಿಗೆ ಮಾಡಿ ಈ ವಿಶೇಷ ಪರಿಹಾರ
- Technology
ಧಮಾಕಾ ಕೊಡುಗೆ!..ಭರ್ಜರಿ ಡಿಸ್ಕೌಂಟ್ನಲ್ಲಿ ಹೊಸ ಸ್ಮಾರ್ಟ್ಟಿವಿ ನಿಮ್ಮದಾಗಿಸಿಕೊಳ್ಳಿ!
- Finance
ಆಗಸ್ಟ್ 17: ಭಾರತದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು
- Sports
ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಖರೀದಿಸುತ್ತೇನೆ ಎಂದ ಎಲಾನ್ ಮಸ್ಕ್!
- Travel
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಆನೆಗಳ ಶಿಬಿರಕ್ಕೆ ಭೇಟಿ ಕೊಡಿ
2022ರ ವೆನ್ಯೂ ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಹ್ಯುಂಡೈ
ಹ್ಯುಂಡೈ ಕಂಪನಿಯು 2022ರ ವೆನ್ಯೂ ಕಂಪ್ಯಾಕ್ಟ್ ಎಸ್ಯುವಿ ಬಿಡುಗಡೆಯೊಂದಿಗೆ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಹೊಸ ಕಾರಿನ ವಿತರಣೆಗೂ ಮುನ್ನ ಆಕ್ಸೆಸರಿಸ್ ಪ್ಯಾಕೇಜ್ ಪ್ರಕಟಿಸಿದೆ.

ಹೊಸ ವೆನ್ಯೂ ಕಾರು ಮಾದರಿಯಲ್ಲಿ ಹ್ಯುಂಡೈ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ಗಳನ್ನು ಅಳವಡಿಸಿದ್ದು, ಕಂಪನಿಯು ಇದೀಗ ಆಸಕ್ತ ಗ್ರಾಹಕರಿಗಾಗಿ ಹೆಚ್ಚುವರಿ ತಾಂತ್ರಿಕ ಸೌಲಭ್ಯಗಳ ಹೊಂದಿರುವ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದೆ.

ಹ್ಯುಂಡೈ ಕಂಪನಿಯು ಬಿಡುಗಡೆ ಮಾಡಿರುವ ಬೇಸಿಕ್, ಅಡ್ವಾನ್ಸ್ ಮತ್ತು ಸುಪ್ರೀಂ ಆಕ್ಸೆಸರಿಸ್ ಪ್ಯಾಕೇಜ್ನಲ್ಲಿ ಹಲವಾರು ತಾಂತ್ರಿಕ ಸೌಲಭ್ಯಗಳಿದ್ದು, ಹೊಸ ಆಕ್ಸೆಸರಿಸ್ನಲ್ಲಿರುವ ಬಿಡಿಭಾಗಗಳು ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ ಕಾರು ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸುತ್ತವೆ.

ವೆನ್ಯೂ ಕಾರು ಮಾದರಿಗಾಗಿ ಬಿಡುಗಡೆ ಮಾಡಲಾಗಿರುವ ಬೇಸಿಕ್ ಆಕ್ಸೆಸರಿಸ್ ಪ್ಯಾಕೇಜ್ ರೂ. 14,943 ದರದಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಡೋರ್ ವೈಸರ್ ಜೊತೆಗೆ ಕ್ರೋಮ್ ಇನ್ಸರ್ಟ್, ಫ್ರಂಟ್ ಮತ್ತು ರಿಯರ್ ಬಂಪರ್ ಇನ್ಸರ್ಟ್, ಬ್ಲಾಕ್ ಬಂಪರ್ ಕಾರ್ನರ್ ಪ್ರೊಟೆಕ್ಟರ್, ಡೋರ್ ಸಿಲ್ ಗಾರ್ಡ್, ಡೋರ್ ಎಡ್ಜ್ ಗಾರ್ಡ್, ಫಿಂಗರ್ ಗಾರ್ಡ್, 3ಡಿ ಮತ್ತು ಡಿಸೈನ್ ಫ್ಲೋರ್ ಮ್ಯಾಟ್, ಹೆಡ್ರೆಸ್ಟ್ ಕುಶನ್, ಕಾರ್ ಪರ್ಫ್ಯೂಮ್ ಮತ್ತು ಒನ್ಫರ್ಟ್ ಕಿಟ್ ಕುತ್ತಿಗೆಯ ಕುಶನ್, ಡಿಸೈನ್ ಹೊಂದಿರುವ ಒಂದು ದಿಂಬು ಮತ್ತು ಟಿಶ್ಯೂ ಬಾಕ್ಸ್ ನೀಡಲಾಗುತ್ತದೆ.

ಅಡ್ವಾನ್ಸ್ ಆಕ್ಸೆಸರಿಸ್ ಪ್ಯಾಕೇಜ್ ಸುಮಾರು ರೂ. 21,040 ಬೆಲೆ ಹೊಂದಿದ್ದು, ಇದರಲ್ಲಿ ಗ್ರಾಹಕರಿಗೆ ಡೋರ್ ವೈಸರ್ ಜೊತೆಗೆ ಕ್ರೋಮ್ ಇನ್ಸರ್ಟ್ಗಳು, ಫ್ರಂಟ್ ಮತ್ತು ರಿಯರ್ ಬಂಪರ್ ಇನ್ಸರ್ಟ್ಗಳು, ಕ್ರೋಮ್ ವಿಂಡೋ ಬೆಲ್ಟ್ಲೈನ್, ಡಾರ್ಕ್ ಕ್ರೋಮ್ ಹೆಡ್ಲೈಟ್ ಮತ್ತು ಟೈಲ್ಲೈಟ್ ಗಾರ್ನಿಶ್, ಡೋರ್ ಎಡ್ಜ್ ಗಾರ್ಡ್, ಫಿಂಗರ್ ಗಾರ್ಡ್, 3D ಫ್ಲೋರ್ ಮತ್ತು ಬೂಟ್ ಮ್ಯಾಟ್, ಸ್ಪೋರ್ಟ್ಸ್ ಪೆಡಲ್ ಕವರ್, ಹೆಡ್ ಪರ್ಫ್ಯೂಮ್ ಡೋರ್ ಸಿಲ್ ಗಾರ್ಡ್ ಮತ್ತು ಕಂಫರ್ಟ್ ಕಿಟ್ ನೀಡಲಾಗುತ್ತದೆ.

ಇನ್ನು ಕೊನೆಯದಾಗಿ ಸುಪ್ರೀಂ ಆಕ್ಸೆಸರಿಸ್ ಪ್ಯಾಕೇಜ್ನಲ್ಲಿ ಕಂಪನಿಯು ರೂ. 39,339 ಬೆಲೆಯೊಂದಿಗೆ ಸೈಡ್ ಸ್ಟೆಪ್ಸ್, ಕ್ರೋಮ್ ಇನ್ಸರ್ಟ್ಗಳೊಂದಿಗೆ ಡೋರ್ ವಿಸರ್, ಕ್ರೋಮ್ ವಿಂಡೋ ಬೆಲ್ಟ್ಲೈನ್, ಡಾರ್ಕ್ ಕ್ರೋಮ್ ರಿಯರ್ ವ್ಯೂ ಮಿರರ್ಗಳು, ಹೆಡ್ಲೈಟ್ ಮತ್ತು ಟೈಲ್ಲೈಟ್ ಗಾರ್ನಿಶ್, ಡೋರ್ ಸಿಲ್ ಗಾರ್ಡ್, ಡೋರ್ ಎಡ್ಜ್ ಗಾರ್ಡ್, ಫಿಂಗರ್ ಗಾರ್ಡ್, ಸ್ಪೋರ್ಟ್ಸ್ ಪೆಡಲ್ ಕವರ್, ಫ್ಲೋರ್ ಮತ್ತು ಬೂಟ್ ಮ್ಯಾಟ್, ಹೆಡ್ರೆಸ್ಟ್ ಕಾರ್ ಪರ್ಫ್ಯೂಮ್ ಮತ್ತು ಕಂಫರ್ಟ್ ಕಿಟ್ ನೀಡಲಾಗುತ್ತದೆ.

ಆಕ್ಸೆಸರಿಸ್ ಪ್ಯಾಕೇಜ್ ಹೊರತಾಗಿ ಕಂಪನಿಯು ಹೊಸ ಕಾರಿನಲ್ಲಿ ಫಾಸ್ಟ್ ಚಾರ್ಜರ್, ಸೀಟ್ಬೆಲ್ಟ್ ಕವರ್, ಹೈಟ್ ಅಡ್ಜಸ್ಟರ್, ಸೀಟ್ ಗ್ಯಾಪ್ ಫಿಲ್ಲರ್, ಟೈರ್ ಪಂಕ್ಚರ್ ಕಿಟ್, ಟೈರ್ ಇನ್ಫ್ಲೆಕ್ಟರ್, ಕಾರ್ ಡಾಕ್ಯುಮೆಂಟ್ ಆರ್ಗನೈಸರ್, ಬ್ಯಾಕ್ ಸೀಟ್ ಆರ್ಗನೈಸರ್, ಬೂಟ್ ಆರ್ಗನೈಸರ್, ಎಮರ್ಜೆನ್ಸಿ ಸೇಫ್ಟಿ ಜೊತೆಗೆ ಹೆಚ್ಚಿನ ಪರಿಕರಗಳನ್ನು ಪ್ರತ್ಯೇಕವಾಗಿ ಒದಗಿಸಲಾಗುತ್ತದೆ.

ಇನ್ನು ಹೊಸ ವೆನ್ಯೂ ಕಂಪ್ಯಾಕ್ಟ್ ಎಸ್ಯುವಿ ಮಾದರಿಯು ವಿವಿಧ ಎಂಜಿನ್ ಆಯ್ಕೆಗಳಿಗೆ ಅನುಗುಣವಾಗಿ ಇ, ಎಸ್, ಎಸ್(ಒ), ಎಸ್ಎಕ್ಸ್ ಮತ್ತು ಎಸ್ಎಕ್ಸ್(ಒ) ವೆರಿಯೆಂಟ್ಗಳನ್ನು ಹೊಂದಿದ್ದು, ಹೊಸ ಕಾರು ಆರಂಭಿಕವಾಗಿ ಪ್ಯಾನ್ ಇಂಡಿಯಾ ಎಕ್ಸ್ಶೋರೂಂ ಪ್ರಕಾರ ರೂ. 7.53 ಲಕ್ಷ ಮತ್ತು ಟಾಪ್ ಎಂಡ್ ಬೆಲೆಯು ರೂ. 12.57 ಲಕ್ಷ ಬೆಲೆ ಹೊಂದಿದೆ.

ಹ್ಯುಂಡೈ ಕಂಪನಿಯು ಹೊಸ ಕಾರು ಮಾದರಿಯನ್ನು ಈ ಹಿಂದಿನಂತೆ 1.2 ಲೀಟರ್ ಪೆಟ್ರೋಲ್, 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ವೆರಿಯೆಂಟ್ಗಳಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ನವೀಕೃತ ವಿನ್ಯಾಸದೊಂದಿಗೆ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಹೊಸ ಕಾರನಲ್ಲಿ ಮುಂಭಾಗದ ಗ್ರಿಲ್ ಅನ್ನು ಡಾರ್ಕ್ ಕ್ರೋಮ್ಗಳೊಂದಿಗೆ ಅಭಿವೃದ್ದಿಪಡಿಸಲಾಗಿದ್ದು, ಮುಂಭಾಗದ ಬಂಪರ್ ಅನ್ನು ಕೂಡಾ ಸಾಕಷ್ಟು ಪರಿಷ್ಕರಣೆ ಮಾಡಲಾಗಿದೆ. ಹೊಸ ಬಂಪರ್ ಜೊತೆ ಈ ಬಾರಿ ದೊಡ್ಡದಾದ ಏರ್ ಡ್ಯಾಮ್ ನೀಡಲಾಗಿದ್ದು, ಇದರಲ್ಲಿ ಸಿಲ್ವರ್ ಫಾಕ್ಸ್ ಬ್ಯಾಷ್ ಪ್ಲೇಟ್ ಕೂಡಾ ಕಂಡುಬರುತ್ತದೆ.

ಹಾಗೆಯೇ ಕಾರಿನ ಎರಡು ಬದಿಯಲ್ಲೂ ಹೊಸ ವಿನ್ಯಾಸದ 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ಗಳನ್ನು ನೀಡಲಾಗಿದ್ದು, ಎಲ್ಇಡಿ ಟೈಲ್ಲೈಲ್, ಸಿಲ್ವರ್ ಫಾಕ್ಸ್ ಬ್ಯಾಷ್ ಪ್ಲೇಟ್ ಜೊತೆಗೆ ಸ್ಕೂಪ್-ಔಟ್ನೊಂದಿಗೆ ನವೀಕೃತಗೊಂಡಿರುವ ಹಿಂಭಾಗದ ಬಂಪರ್ ಮತ್ತು ನಂಬರ್ ಪ್ಲೇಟ್ ವಿಭಾಗವನ್ನು ಕಪ್ಪು ಬಣ್ಣದ ಪ್ಲಾಸ್ಟಿಕ್ನೊಂದಿಗೆ ಜೋಡಿಸಲಾಗಿದೆ.

ಹೊಸ ಇನ್ಫೋಟೈನ್ಮೆಂಟ್ ಸಿಸ್ಟಂ ಇದೀಗ ಗೂಗಲ್ ಅಸಿಸ್ಟ್ ಮತ್ತು ಅಮೆಜಾನ್ ಅಲೆಕ್ಸಾಗೆ ಬೆಂಬಲ ಹೊಂದಿದ್ದು, ವೆನ್ಯೂ ಹೊಸ ಕಾರು ಮಾದರಿಗಾಗಿ ಹ್ಯುಂಡೈ ಕಂಪನಿಯು ಬ್ಲೂಲಿಂಕ್ ಸಂಪರ್ಕಿತ ಕಾರ್ ಸೂಟ್ ಮೂಲಕ 60ಕ್ಕೂ ಹೆಚ್ಚು ಸಂಪರ್ಕಿತ ಕಾರ್ ವೈಶಿಷ್ಟ್ಯಗಳನ್ನು ನೀಡಿದೆ.

ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಕಂಪನಿಯು ಈ ಬಾರಿ ಹಲವಾರು ಫೀಚರ್ಸ್ ಜೋಡಣೆ ಮಾಡಿದ್ದು, ಹೈ ಎಂಡ್ ಮಾದರಿಗಳಲ್ಲಿ 6 ಏರ್ಬ್ಯಾಗ್ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಕಂಟ್ರೋಲ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ(TPMS) ಸೇರಿದಂತೆ 30ಕ್ಕೂ ಹೆಚ್ಚು ಸುರಕ್ಷತಾ ಸೌಲಭ್ಯಗಳನ್ನು ನೀಡಿದೆ.

ಹೈ ಎಂಡ್ ಮಾದರಿಗಳಲ್ಲಿ ಬೆಸ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ನೋಡಬಹುದಾಗಿದ್ದು, ಹೈ ಎಂಡ್ ಮಾದರಿಗಳಲ್ಲಿ ಡ್ರೈವರ್ ಸೈಡ್ ಡಿಜಿಟಲ್ ಡಿಸ್ಪ್ಲೇ, ವೈರ್ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ಏರ್ ಪ್ಯೂರಿಫೈಯರ್, ಕೂಲ್ಡ್ ಗ್ಲೋ ಬಾಕ್ಸ್, ಕ್ರೂಸ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಸನ್ರೂಫ್ ಸೌಲಭ್ಯಗಳಿರಲಿವೆ.