ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಟ್ಯೂಸಾನ್ ಹೆಸರು: ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಾದರಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಇಂಡಿಯಾ ತನ್ನ ವೆಬ್‌ಸೈಟ್‌ನಿಂದ ಪ್ರಸ್ತುತ ಜನರೇಷನ್ ಟ್ಯೂಸಾನ್ ಎಸ್‍ಯುವಿಯ ಹೆಸರನ್ನು ತೆಗೆದುಹಾಕಿದೆ. ಈ ಹೊಸ ನ್ಯೂ ಜನರೇಷನ್ ಟ್ಯೂಸಾನ್ ಎಸ್‍ಯುವಿಯನ್ನು ಬಿಡುಗಡೆಗೊಳಿಸುವುದರಿಂದ ಪ್ರಸ್ತುತ ಮಾದರಿಯ ಹೆಸರನ್ನು ತೆಗೆದುಹಾಕಿರಬಹುದು ಎಂದು ನಿರೀಕ್ಷಿಸುತ್ತೇವೆ.

ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಟ್ಯೂಸಾನ್ ಎಸ್‍ಯುವಿಯ ಹೆಸರು

ಪ್ರಸ್ತುತ ಜನರೇಷನ್ ಟ್ಯೂಸಾನ್ ಎಸ್‍ಯುವಿಯು ಕೊನೆಯದಾಗಿ ಜುಲೈ 2020 ರಲ್ಲಿ ನವೀಕರಿಸಲಾಗಿದೆ. ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ನ್ಯೂ ಜನರೇಷನ್ ಟ್ಯೂಸಾನ್ ಎಸ್‍ಯುವಿಯನ್ನು 2020 ರಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಿತು. ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಪ್ರಪಂಚದಾದ್ಯಂತ ಆಯ್ದ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ಆದರೆ ಭಾರತೀಯ ಮಾರುಕಟ್ಟೆಯು ಇನ್ನೂ ಹಿಂದಿನ ಜನರೇಷನ್ ಮಾದರಿಯನ್ನು ಮಾರಾಟದಲ್ಲಿದೆ. ಇದೀಗ ಹ್ಯುಂಡೈ ಕಂಪನಿಯು ತನ್ನ ನ್ಯೂ ಜನರೇಷನ್ ಟ್ಯೂಸಾನ್ ಎಸ್‍ಯುವಿಯನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ ಎಂದು ಹೇಳಿದೆ.

ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಟ್ಯೂಸಾನ್ ಎಸ್‍ಯುವಿಯ ಹೆಸರು

ಈ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಆವೃತ್ತಿಯು ಹಲವಾರು ಹೊಸ ಅಪ್ದೇಟ್ ಗಳೊಂದಿಗೆ ಬಿಡುಗಡೆಯಾಗಲಿದೆ. ಪ್ರಸ್ತುತ ಅಂತಿಮ ಪರೀಕ್ಷೆಯ ಹಂತದಲ್ಲಿರುವ ಹ್ಯುಂಡೈ ಟ್ಯೂಸಾನ್ ಮಾದರಿಯು ಗಮನಾರ್ಹ ವಿನ್ಯಾಸ ಮತ್ತು ವೈಶಿಷ್ಟ್ಯದ ನವೀಕರಣಗಳನ್ನು ಪಡೆಯುತ್ತದೆ

ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಟ್ಯೂಸಾನ್ ಎಸ್‍ಯುವಿಯ ಹೆಸರು

ಈ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.25 ಲಕ್ಷದಿಂದ ರೂ.35 ಲಕ್ಷದವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಎಸ್‍ಯುವಿಯನ್ನು ಸಿಕೆಡಿ (ಸಂಪೂರ್ಣವಾಗಿ ನಾಕ್ಡ್ ಡೌನ್) ಯುನಿಟ್ ಆಗಿ ಬರುತ್ತದೆ. ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಭಾರತದಲ್ಲಿ ಕಾಣಿಸಿಕೊಂಡ ಸ್ಪೈ ಚಿತ್ರಗಳು ಇತ್ತೀಚೆಗೆ ಬಹಿರಂಗವಾಗಿತ್ತು.

ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಟ್ಯೂಸಾನ್ ಎಸ್‍ಯುವಿಯ ಹೆಸರು

ಈ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಮುಂಭಾಗ ಆಕರ್ಷಕ ಲುಕ್ ಅನ್ನು ಹೊಂದಿದ, ಈ ಹೊಸ ಎಸ್‍ಯುವಿಯು ಸ್ಪೋರ್ಟಿ ಲುಕ್ ನಲ್ಲಿ ಕಾಣುವಂತೆ ಅಗ್ರೇಸಿವ್ ವಿನ್ಯಾಸದಿಂದ ಕೂಡಿದೆ. ಈ ಹೂಸ ಟ್ಯೂಸಾನ್ ಎಸ್‍ಯುವಿಯು ಹೆಡ್‌ಲ್ಯಾಂಪ್ ಯುನಿಟ್ ಹೆಚ್ಚು ಆಕರ್ಷಕವಾಗಿದೆ.

ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಟ್ಯೂಸಾನ್ ಎಸ್‍ಯುವಿಯ ಹೆಸರು

ಈ ಹೊಸ ಟ್ಯೂಸಾನ್ ಎಸ್‍ಯುವಿಯಲ್ಲಿ ಕ್ರೋಮ್ ಸ್ಟ್ರಿಪ್ ಅನ್ನು ಹೊಂದಿದೆ. ಈ ಎಸ್‍ಯುವಿಯ ಕೊನೆಯಲ್ಲಿ ವಿಶಿಷ್ಟವಾದ ಸಿ-ಪಿಲ್ಲರ್ ಆಕಾರವನ್ನು ರೂಪಿಸಿದೆ. ಈ ಹೊಸ ಎಸ್‍ಯುವಿಯ ಹಿಂದಿನ ಪ್ರೊಫೈಲ್‌ನಲ್ಲಿ ಉದ್ದವಾದ ಬೆಲ್ಟ್‌ಲೈನ್ಗಳಿವೆ. ಈ ಎಸ್‍ಯುವಿಯಲ್ಲಿ 19 ಇಂಚಿನ ವ್ಹೀಲ್ಸ್ ಅನ್ನು ಹೊಂದಿದೆ. ಈ ವ್ಹೀಲ್ ಗಳು ವಿಭಿನ್ನವಾದ ವಿನ್ಯಾಸವನ್ನು ಹೊಂದಿದೆ.

ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಟ್ಯೂಸಾನ್ ಎಸ್‍ಯುವಿಯ ಹೆಸರು

ಈ ಹ್ಯುಂಡೈ ಟ್ಯೂಸಾನ್ 7-ಸೀಟರ್ ಎಸ್‍ಯುವಿಯು ಶಾರ್ಕ್ ಫಿನ್ ಆಂಟೆನಾ, ಬಾಡಿ ಕಲರ್‌ನಲ್ಲಿ ರೂಫ್-ರೈಲ್ ಮತ್ತು ಫ್ಲೋಟಿಂಗ್ ರೂಫ್‌ಲೈನ್ ಹೊಂದಿದೆ. ಹಿಂಭಾಗದಲ್ಲಿ ಅಗಲವಾಗಿ ಉದ್ದಕೂ ರೆಡ್ ಎಲ್ಇಡಿ ಲೈಟ್ ಅನ್ನು ಅಳವಡಿಸಿದೆ. ಇದು ಟೈಲ್-ಲ್ಯಾಂಪ್‌ಗಳನ್ನು ಕನೆಕ್ಟ್ ಆಗಿದೆ. ಇನ್ನು ಟ್ಯೂಸನ್ ಎಸ್‍ಯುವಿಯಲಿರುವ ಟೈಲ್-ಲೈಟ್ ಕ್ರೆಟಾದ ಟೈಲ್-ಲ್ಯಾಂಪ್‌ನ ವಿಕಾಸಗೊಂಡ ಆವೃತ್ತಿಯಂತೆ ಕಾಣುತ್ತದೆ.

ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಟ್ಯೂಸಾನ್ ಎಸ್‍ಯುವಿಯ ಹೆಸರು

ಈ ಹೊಸ ಟ್ಯೂಸಾನ್ ಎಸ್‍ಯುವಿಯ ಕೆಳಗಿನ ಬಂಪರ್ ಸಿಲ್ವರ್ ಸ್ಕಿಡ್ ಪ್ಲೇಟ್, ಸ್ಟಾಪ್ ಲ್ಯಾಂಪ್‌ಗಳು ಮತ್ತು ಏರ್ ವೆಂಟ್ಸ್ ಗಳನ್ನು ಹೊಂದಿರುತ್ತದೆ. ಇದು ಇಂಟಿಗ್ರೇಟೆಡ್ ಬ್ರೇಕ್ ಲೈಟ್ ಗಳೊಂದಿಗೆ ರೂಫ್ ಸ್ಪಾಯ್ಲರ್ ಅನ್ನು ಹೊಂದಿದೆ. ಈ ಹೊಸ ಟ್ಯೂಸಾನ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿರುತ್ತದೆ,

ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಟ್ಯೂಸಾನ್ ಎಸ್‍ಯುವಿಯ ಹೆಸರು

ಇದರೊಂದಿಗೆ ಟ್ಯೂಸಾನ್ ಎಸ್‍ಯುವಿಯ ಎಸಿ ಮತ್ತು ಇತರ ಕಂಟ್ರೋಲ್ ಗಳಿಗಾಗಿ ಟಚ್-ಪ್ಯಾನೆಲ್‌ಗಳು, ಅನನ್ಯವಾಗಿ ವಿನ್ಯಾಸಗೊಳಿಸಲಾದ ಮಲ್ಟಿ-ಫಂಕ್ಷನಲ್ ಸ್ಟೀಯರಿಂಗ್ ವ್ಹೀಲ್, ಪಾರ್ಕಿಂಗ್ ಬ್ರೇಕ್, ಗೇರ್‌ಬಾಕ್ಸ್ ಮತ್ತು ಇತರ ಫೀಚರ್ ಗಳನ್ನು ಒಳಗೊಂಡಿದೆ. ವೈರ್‌ಲೆಸ್ ಚಾರ್ಜಿಂಗ್ ಮತ್ತು ನೂತನ ಕನೆಕ್ಟಿವಿಟಿ ಫೀಚರ್ ಗಳನ್ನು ಹೊಂದಿರಲಿವೆ.

ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಟ್ಯೂಸಾನ್ ಎಸ್‍ಯುವಿಯ ಹೆಸರು

ಈ ಹೊಸ ಎಸ್‍ಯುವಿಯಲ್ಲಿ 2.0-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು ಟರ್ಬೊ-ಡೀಸೆಲ್ ಎಂಜಿನ್ ಆಯ್ಕೆಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಜೀಪ್ ಕಂಪಾಸ್, ಫೋಕ್ಸ್‌ವ್ಯಾಗನ್ ಟಿಗ್ವಾನ್ ಮತ್ತು ಸಿಟ್ರೊಯೆನ್ ಸಿ5 ಏರ್‌ಕ್ರಾಸ್‌ಗಳ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಟ್ಯೂಸಾನ್ ಎಸ್‍ಯುವಿಯ ಹೆಸರು

ಹ್ಯುಂಡೈ ಕಂಪನಿಯು ತನ್ನ ಹೊಸ ಟ್ಯೂಸಾನ್ ಎಸ್‍ಯುವಿಯನ್ನು ಯುರೋ NCAP ಕ್ರ್ಯಾಶ್ ಟೆಸ್ಟ್‌ಗೆ ಇತ್ತೀಚೆಗೆ ಒಳಪಡಿಸಿತ್ತು. ಈ ಕ್ರ್ಯಾಶ್ ಟೆಸ್ಟ್‌ನಲ್ಲಿ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಯುರೋ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಟ್ಯೂಸಾನ್ ಎಸ್‍ಯುವಿಯು ವಯಸ್ಕ ಪ್ರಯಾಣಿಕರ ವಿಭಾಗದಲ್ಲಿ ಶೇ.86 ರಷ್ಟು ಮತ್ತು ಮಕ್ಕಳ ಸುರಕ್ಷತಾ ವಿಭಾಗದಲ್ಲಿ ಶೇ.87 ರಷ್ಟು ಅಂಕಗಳನ್ನು ಗಳಿಸಿದೆ. ಈ ಯುರೋ NCAP ಪ್ರಕಾರ, ಟ್ಯೂಸಾನ್ ಎಸ್‍ಯುವಿ ಮುಂಭಾಗದ ಆಫ್‌ಸೆಟ್ ಪರೀಕ್ಷೆಯಲ್ಲಿ ಸ್ಥಿರವಾಗಿತ್ತು. ಕಾರು ಚಾಲಕ ಮತ್ತು ಪ್ರಯಾಣಿಕ ಇಬ್ಬರ ಮೊಣಕಾಲುಗಳು ಮತ್ತು ತೊಡೆಗಳಿಗೆ ಉತ್ತಮ ರಕ್ಷಣೆ ನೀಡಿತು.ಇನ್ನು ಚಾಲಕನ ಎದೆಗೆ ರಕ್ಷಣೆಯು ಕನಿಷ್ಠವಾಗಿತ್ತು. ಪೂರ್ಣ-ಅಗಲದ ಕಟ್ಟುನಿಟ್ಟಿನ ತಡೆಗೋಡೆ ಟೆಸ್ಟ್‌ನಲ್ಲಿ, ದೇಹದ ಅತ್ಯಂತ ಪ್ರಮುಖ ಅಂಗಗಳಿಗೆ ಸಾಕಷ್ಟು ಉತ್ತಮ ರಕ್ಷಣೆ ಒದಗಿಸಲಾಗಿದೆ.

ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಟ್ಯೂಸಾನ್ ಎಸ್‍ಯುವಿಯ ಹೆಸರು

ಆದರೆ ಚಾಲಕ ಎದೆಯ ರಕ್ಷಣೆಯನ್ನು ಕನಿಷ್ಠ ಎಂದು ರೇಟ್ ಮಾಡಲಾಗಿದೆ. ಅಡ್ಡ ತಡೆ ಟೆಸ್ಟ್‌ನಲ್ಲಿ, ದೇಹದ ಪ್ರಮುಖ ಅಂಗಗಳಿಗೂ ರಕ್ಷಣೆ ಉತ್ತಮ ಅಥವಾ ಸಮರ್ಪಕವಾಗಿದೆ ಇನ್ನು ಸೈಡ್ ಪೋಲ್ ಇಂಪ್ಯಾಕ್ಟ್ ಟೆಸ್ಟ್‌ನಲ್ಲಿ, ಪ್ರಯಾಣಿಕರಿಗೆ ರಕ್ಷಣೆ ಉತ್ತಮವಾಗಿತ್ತು ಮತ್ತು ಕಾರು ಗರಿಷ್ಠ ಅಂಕಗಳನ್ನು ಗಳಿಸಿತು. ಮುಂಭಾಗದ ಆಫ್‌ಸೆಟ್ ಟೆಸ್ಟ್ ಮತ್ತು ಅಡ್ಡ ತಡೆ ಪರಿಣಾಮ ಎರಡರಲ್ಲೂ, ಎರಡೂ ಮಕ್ಕಳ ಡಮ್ಮಿಗಳಿಗೆ ರಕ್ಷಣೆ ಉತ್ತಮವಾಗಿತ್ತು. ಒಟ್ಟಾರೆಯಾಗಿ ಈ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಗರಿಷ್ಠ ಸುರಕ್ಷತೆಯನ್ನು ಹೊಂದಿದೆ.

ಹುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಟ್ಯೂಸಾನ್ ಎಸ್‍ಯುವಿಯ ಹೆಸರು

ಈ ನ್ಯೂ ಜನರೇಷನ್ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಈಗಾಗಲೇ ಹಲವು ವಿದೇಶಗಳಲ್ಲಿನ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ. ಇದೀಗ ಈ ಹೊಸ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ಹೊಸ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಗಳಿದೆ.

Most Read Articles

Kannada
English summary
Hyundai tucson suv delisted from official website read to find the reason here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X