Just In
- 1 hr ago
ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ
- 14 hrs ago
ಆಕರ್ಷಕ ವಿನ್ಯಾಸದ 2022ರ ಹ್ಯುಂಡೈ ಟ್ಯೂಸಾನ್ ಎಸ್ಯುವಿಯ ವಿಶೇಷತೆಗಳು
- 15 hrs ago
ಪಾಸ್ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..
- 16 hrs ago
ಬ್ರೇಕ್ ಫೇಲ್ ಆದಾಗ ಕೇವಲ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ? ಇಲ್ಲಿದೆ ಉಪಯುಕ್ತ ಸಲಹೆ
Don't Miss!
- News
Breaking: ಮಹಾರಾಷ್ಟ್ರದಲ್ಲಿ ಗೂಡ್ಸ್ ಮತ್ತು ಪ್ಯಾಸೆಂಜರ್ ರೈಲು ಡಿಕ್ಕಿ
- Travel
ವಿಶ್ವದ ಅತ್ಯಂತ ತೇವವಾದ ಸ್ಥಳಗಳು: ಭೂಮಿಯ ಮೇಲಿನ ಮಳೆಯ ಸ್ಥಳಗಳ ಪಟ್ಟಿ
- Education
UGC Scholarship : ಯುಜಿಸಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
- Movies
ಮಗಳಿಗೆ ದುಬಾರಿ ಗಿಫ್ಟ್ ಕೊಟ್ಟ ನಟ ದುನಿಯಾ ವಿಜಯ್!
- Lifestyle
ಶನಿದೋಷ ನಿವಾರಣೆ ಹಾಗೂ ಸಂಪತ್ತು ವೃದ್ಧಿಗೆ ಕೃಷ್ಣ ಜನ್ಮಾಷ್ಟಮಿಗೆ ಮಾಡಿ ಈ ವಿಶೇಷ ಪರಿಹಾರ
- Technology
ಧಮಾಕಾ ಕೊಡುಗೆ!..ಭರ್ಜರಿ ಡಿಸ್ಕೌಂಟ್ನಲ್ಲಿ ಹೊಸ ಸ್ಮಾರ್ಟ್ಟಿವಿ ನಿಮ್ಮದಾಗಿಸಿಕೊಳ್ಳಿ!
- Finance
ಆಗಸ್ಟ್ 17: ಭಾರತದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು
- Sports
ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಖರೀದಿಸುತ್ತೇನೆ ಎಂದ ಎಲಾನ್ ಮಸ್ಕ್!
ಭಾರತೀಯ ಕಾರುಗಳಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಳ: ಮೇ ತಿಂಗಳಲ್ಲಿ ಅತಿ ಹೆಚ್ಚು ರಫ್ತಾಗಿರುವ ಕಾರುಗಳಿವು!
ವಿಶ್ವ ಆಟೋಮೊಬೈಲ್ ಉದ್ಯಮದಲ್ಲಿ ನಾಲ್ಕನೇ ಅತಿದೊಡ್ಡ ವಾಹನ ಮಾರುಕಟ್ಟೆಯನ್ನು ಹೊಂದಿರುವ ಭಾರತವು ದೇಶೀಯವಾಗಿ ಮಾತ್ರವಲ್ಲದೇ ರಫ್ತಿನಲ್ಲೂ ಉತ್ತಮ ಮಾರುಕಟ್ಟೆಯನ್ನು ಹೊಂದಿದೆ. ಪ್ರಯಾಣಿಕ ವಾಹನ ವಿಭಾಗದಲ್ಲಿ ದೇಶೀಯ ಮಾರಾಟ ಮತ್ತು ರಫ್ತು ಎರಡೂ ಮೇ ತಿಂಗಳಲ್ಲಿ ಗಣನೀಯವಾಗಿ ಏರಿಕೆ ಕಂಡಿವೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಸೆಮಿಕಂಡಕ್ಟರ್ ಕೊರತೆಯಿಂದ ವಾಹನಗಳ ಉತ್ಪಾದನೆ ಕುಂಠಿತವಾಗಿರುವುದರಿಂದ ಕೆಲವು ಕಾರುಗಳ ಕಾಯುವ ಅವಧಿಯು ಹೆಚ್ಚಾಗಿದೆ. ಈ ನಡುವೆಯು ಕಳೆದ ಮೇ ತಿಂಗಳಲ್ಲಿ ಭಾರತದಿಂದ ಒಟ್ಟು 56,888 ಕಾರುಗಳನ್ನು ರಫ್ತು ಮಾಡಲಾಗಿದೆ.

ಮೇ 2021 ರಲ್ಲಿ 31,810 ರಫ್ತುಗಳಿಗೆ ಹೋಲಿಸಿದರೆ ಇದು ಶೇಕಡಾ 78.84 ರಷ್ಟು ಹೆಚ್ಚಳವಾಗಿದೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮಾರುತಿ ಸುಜುಕಿಯ ಸ್ವಿಫ್ಟ್ ಕಾರಿದ್ದು, ಕಂಪನಿಯು ಕಳೆದ ಮೇ ತಿಂಗಳೊಂದರಲ್ಲೇ ಒಟ್ಟು 6,347 ವಾಹನಗಳನ್ನು ರಫ್ತು ಮಾಡಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಕೇವಲ 1,116 ಕಾರುಗಳನ್ನು ರಫ್ತು ಮಾಡಿತ್ತು. ಪ್ರಸ್ತುತ ರಫ್ತು ಶೇ 468.73 ರಷ್ಟು ಮತ್ತು ಮಾರುಕಟ್ಟೆ ಪಾಲು ಶೇ 11.16 ರಷ್ಟು ಬೆಳವಣಿಗೆಯಾಗಿದೆ.

ನಿಸ್ಸಾನ್ ಸನ್ನಿ ಕಾರು ಎರಡನೇ ಸ್ಥಾನದಲ್ಲಿದ್ದು, ಒಟ್ಟು 5,062 ಕಾರುಗಳನ್ನು ರಫ್ತು ಮಾಡಲಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ರಫ್ತು ಮಾಡಲಾದ ಕೇವಲ 6 ಕಾರುಗಳಿಗೆ ಹೋಲಿಸಿದರೆ ಇದು ಶೇ.84266.67ರಷ್ಟು ಬೆಳವಣಿಗೆ ಕಂಡಿದೆ. ಮಾರುಕಟ್ಟೆಯ ಶೇ.8.90 ಪಾಲನ್ನು ಹೊಂದಿದೆ.

ಮೂರನೇ ಸ್ಥಾನದಲ್ಲಿ ಮಾರುತಿ ಸುಜುಕಿಯ ವಿಟಾರಾ ಬ್ರೆಝಾ ಕಾರಿದ್ದು, ಇದು ಒಟ್ಟು 4,473 ಕಾರುಗಳನ್ನು ರಫ್ತು ಮಾಡಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಕೇವಲ 489 ಕಾರುಗಳನ್ನು ರಫ್ತು ಮಾಡಲಾಗಿತ್ತು. ಶೇ 814.72 ರಷ್ಟು ರಫ್ತು ಬೆಳವಣಿಗೆ ಕಂಡಿದ್ದು, ಈ ಕಾರು ಮಾರುಕಟ್ಟೆಯ ಶೇಕಡಾ 7.86 ರಷ್ಟು ಪಾಲನ್ನು ಪಡೆದುಕೊಂಡಿದೆ.

ಮುಂದಿನ ಸಾಲಿನಲ್ಲಿ ಮಾರುತಿ ಸುಜುಕಿಯ ಬಲೆನೊ ಕಾರಿದೆ. ಇದು ಒಟ್ಟು 4,214 ಕಾರುಗಳನ್ನು ರಫ್ತು ಮಾಡಿದೆ. ಕಳೆದ ವರ್ಷ ಮೇ ತಿಂಗಳಲ್ಲಿ 2,531 ಕಾರುಗಳನ್ನು ಮಾತ್ರ ರಫ್ತು ಮಾಡಿತ್ತು. ಈ ಮೂಲಕ ಕಾರು ಶೇ.66.5ರಷ್ಟು ಬೆಳವಣಿಗೆ ಕಂಡಿದ್ದು, ಶೇ.7.41ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

ಮುಂದೆ ಮಾರುತಿ ಸುಜುಕಿ ಎಸ್ಪ್ರೆಸೊ ಕಾರಿದ್ದು, ಕಳೆದ ಮೇ ತಿಂಗಳೊಂದರಲ್ಲೇ 3,692 ಕಾರುಗಳನ್ನು ರಫ್ತು ಮಾಡಲಾಗಿದೆ. ಕಳೆದ ವರ್ಷ ಮೇ ತಿಂಗಳಿನಲ್ಲಿ 2,048 ಕಾರುಗಳ ರಫ್ತು ಮಾಡಲಾಗಿದೆ. ಈ ವರ್ಷದಲ್ಲಿ ಶೇ.80.27ರಷ್ಟು ಬೆಳವಣಿಗೆ ಕಂಡಿದೆ. ಕಂಪನಿಯು 6.49% ಮಾರುಕಟ್ಟೆ ಪಾಲನ್ನು ಹೊಂದಿದೆ.

ಮುಂದೆ ಮತ್ತೆ ಮಾರುತಿ ಸುಜುಕಿಯ ಡಿಸೈರ್ ಕಾರಿದೆ. ಒಟ್ಟು 3,672 ಕಾರುಗಳನ್ನು ರಫ್ತು ಮಾಡಲಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಕೇವಲ 1,737 ಕಾರುಗಳನ್ನು ಮಾತ್ರ ರಫ್ತು ಮಾಡಲಾಗಿತ್ತು. ಒಂದೇ ವರ್ಷದಲ್ಲಿ ಶೇ.111.40ರಷ್ಟು ಬೆಳವಣಿಗೆ ಕಂಡಿದೆ. ಇದು ಮಾರುಕಟ್ಟೆಯ ಶೇಕಡಾ 6.45 ಪಾಲನ್ನು ಹೊಂದಿದೆ.

ಮುಂದಿನದು ಕಿಯಾ ಸಾನೆಟ್, ಒಟ್ಟು 3,326 ಕಾರುಗಳನ್ನು ರಫ್ತು ಮಾಡಲಾಗಿದೆ. ಕಳೆದ ವರ್ಷ 2,460 ಕಾರುಗಳನ್ನು ರಫ್ತು ಮಾಡಿದ್ದು, ಒಂದೇ ವರ್ಷದಲ್ಲಿ ಶೇ.35.20ರಷ್ಟು ಬೆಳವಣಿಗೆ ಕಂಡಿದೆ. ನಂತರದ ಸಾಲಿನಲ್ಲಿ ಹ್ಯುಂಡೈ ವೆರ್ನಾ ಇದ್ದು, ಇದು ಒಟ್ಟು 2,838 ಕಾರುಗಳನ್ನು ರಫ್ತು ಮಾಡಿದೆ. ಅದರಲ್ಲಿ 1,401 ಕಾರುಗಳನ್ನು ಕಳೆದ ವರ್ಷ ಮೇ ತಿಂಗಳಲ್ಲಿ ರಫ್ತು ಮಾಡಲಾಗಿತ್ತು. ಈ ಮೂಲಕ ಶೇ.102.57ರಷ್ಟು ಬೆಳವಣಿಗೆ ಕಂಡಿದೆ. ಇದು 4.99% ಮಾರುಕಟ್ಟೆ ಪಾಲನ್ನು ಹೊಂದಿದೆ.

ಮುಂದಿನದು ಫೋಕ್ಸ್ವ್ಯಾಗನ್ ವೆಂಟೊ ಕಾರು. ಕಳೆದ ಮೇ ತಿಂಗಳಲ್ಲಿ ಒಟ್ಟು 2,456 ಕಾರುಗಳನ್ನು ರಫ್ತು ಮಾಡಲಾಗಿದೆ. ಆದರೆ ಕಳೆದ ವರ್ಷ ಮೇ ತಿಂಗಳಲ್ಲಿ ಒಟ್ಟು 2,787 ಕಾರುಗಳನ್ನು ರಫ್ತು ಮಾಡಲಾಗಿತ್ತು. ಈ ಮೂಲಕ ರಫ್ತು ಶೇ.11.88ರಷ್ಟು ಕುಸಿದಿದೆ. ಇದು 4.32% ಮಾರುಕಟ್ಟೆ ಪಾಲನ್ನು ಹೊಂದಿದೆ.

10ನೇ ಸ್ಥಾನದಲ್ಲಿ ಹೋಂಡಾ ಸಿಟಿ ಕಾರಿದೆ. ಒಟ್ಟು 1,995 ಕಾರುಗಳನ್ನು ರಫ್ತು ಮಾಡಲಾಗಿದೆ. ಕಳೆದ ವರ್ಷ ಕೇವಲ 180 ಕಾರುಗಳನ್ನು ರಫ್ತು ಮಾಡಲಾಗಿತ್ತು. ಒಂದೇ ವರ್ಷದಲ್ಲಿ ಶೇ.1008.33ರಷ್ಟು ಬೆಳವಣಿಗೆ ಕಂಡಿದೆ. ಇದು ಮಾರುಕಟ್ಟೆಯ ಶೇ.3.51 ಪಾಲನ್ನು ಹೊಂದಿದೆ.

ನಂತರದ ಪಟ್ಟಿಯಲ್ಲಿ ರೆನಾಲ್ಟ್ ಕಿರ್ಗಿಜ್ ಇದ್ದು, ಇದು 1,763 ಕಾರುಗಳಾದರೆ, ಹ್ಯುಂಡೈ ಸ್ಯಾಂಟ್ರೊ 1,573 ಕಾರುಗಳು, ಗ್ರ್ಯಾಂಡ್ ಐ10 1,551 ಕಾರುಗಳು, ಹ್ಯುಂಡೈ ಕ್ರೆಟಾ 1,517 ಕಾರುಗಳು, ಕಿಯಾ ಸೆಲ್ಟೋಸ್ 1,471 ಕಾರುಗಳು, ಮಾರು ಸುಜುಕಿ ಸೆಲೆರಿಯೊ 1,364 ಕಾರುಗಳು ಮತ್ತು ಸುಜುಕಿ 1,364 ಕಾರುಗಳು ರಫ್ತಾಗಿವೆ.

ಇನ್ನು ರೆನಾಲ್ಟ್ ಟ್ರಿಪ್ಪರ್ 992 ಕಾರುಗಳು, ಮಾರುತಿ ಸುಜುಕಿ ಎರ್ಟಿಗಾ 756 ಕಾರುಗಳು, ಮಾರುತಿ ಸುಜುಕಿ ಆಲ್ಟೊ 635 ಕಾರುಗಳು, ರೆನಾಲ್ಟ್ ಮ್ಯಾಗ್ನ್ಯೂಟ್ 631 ಕಾರುಗಳು, ಕಿಯಾ ಗೇರ್ಸ್ 579 ಕಾರುಗಳು ಮತ್ತು ಹುಂಡೈ ವೆನ್ಯೂ 553 ಕಾರುಗಳನ್ನು ರಫ್ತು ಮಾಡಿದೆ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ವೆಂಟೊ ಕಾರನ್ನು ಹೊರತುಪಡಿಸಿ ಟಾಪ್ 10 ಪಟ್ಟಿಯಲ್ಲಿರುವ ಇತರ ಎಲ್ಲ ಕಾರುಗಳು ಬೆಳವಣಿಗೆ ಕಂಡಿವೆ. ವೆಂಟೊ ಕಾರು ಶೇ.11.88ರಷ್ಟು ಕುಸಿದಿದೆ. ಒಟ್ಟಾರೆಯಾಗಿ ನೋಡುವುದಾದರೆ ಭಾರತೀಯ ಆಟೋಮೊಬೈಲ್ ಉದ್ಯಮವು ರಫ್ತಿನಲ್ಲಿ ಭಾರೀ ಅಭಿವೃದ್ಧಿ ಕಂಡಿದ್ದು, ಕಳೆದ ಮೇ ತಿಂಗಳಿನಲ್ಲಿ ಭಾರತಕ್ಕೆ ಒಟ್ಟಾರೆ ರಫ್ತು ಹೆಚ್ಚಾಗಿದೆ.