ಭಾರತದ ಮೊದಲ ಮತ್ತು ವಿಶಿಷ್ಟ ವಿದ್ಯುತ್‌ಚಾಲಿತ ಡಬಲ್ ಡೆಕ್ಕರ್ ಬಸ್ ಅನಾವರಣ

ಆಧುನಿಕ ಸಾರಿಗೆ ಭರಾಟೆಯಲ್ಲಿ ಮೂಲೆಗುಂಪಾಗಿದ್ದ ಸಾಂಪ್ರದಾಯಿಕ ಡಬಲ್ ಡೆಕ್ಕರ್ ಬಸ್ ಸೇವೆಗೆ ಹೊಸ ರೂಪ ನೀಡಲಾಗುತ್ತಿದೆ.

Recommended Video

New Maruti Brezza Kannada Review | ಎಎಂಟಿ ಮಾದರಿಯ ಕಾರ್ಯಕ್ಷಮತೆ, 360 ಡಿಗ್ರಿ ಕ್ಯಾಮೆರಾ ಜೊತೆ ಮತ್ತಷ್ಟು..

ಡಬಲ್ ಡೆಕ್ಕರ್ ಬಸ್ ಸೇವೆಯನ್ನು ಪುನಾರಂಭಿಸಲು ಮುಂದಾಗಿರುವ ಮುಂಬೈ ನಗರ ಸಾರಿಗೆ ಸಂಸ್ಥೆಯ ಬೃಹತ್ ಯೋಜನೆಗಾಗಿ ಸ್ವಿಚ್ ಮೊಬಿಲಿಟಿ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಬಸ್ ಮಾದರಿಗಳನ್ನು ಅನಾವರಣಗೊಳಿಸಿದೆ.

ಭಾರತದ ಮೊದಲ ಮತ್ತು ವಿಶಿಷ್ಟ ವಿದ್ಯುತ್‌ಚಾಲಿತ ಡಬಲ್ ಡೆಕ್ಕರ್ ಬಸ್ ಅನಾವರಣ

ಭಾರತದಲ್ಲಿ ಕಳೆದ ಏಳು ದಶಕಗಳಿಂದ ಡಬಲ್ ಡೆಕ್ಕರ್ ಬಸ್‌ ಸೇವೆಗಳೊಂದಿಗೆ ಜನಪ್ರಿಯತೆ ಹೊಂದಿರುವ ಮುಂಬೈನ ನಗರ ಸಾರಿಗೆ ಸಂಸ್ಥೆಯು (ಬೆಸ್ಟ್‌) ಆಧುನಿಕ ತಂತ್ರಜ್ಞಾನ ಪ್ರೇರಿತ ಬಸ್ ಮಾದರಿಗಳಿಗೆ ಆದ್ಯತೆ ನೀಡುತ್ತಿದ್ದು, ಪ್ರವಾಸಿಗರಿಗೆ ನಗರದ್ಯಾಂತ ಪ್ರಯಾಣಕ್ಕಾಗಿ ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ಡಬಲ್ ಡೆಕ್ಕರ್ ಬಸ್‌ಗಳನ್ನು ಅಳವಡಿಸಿಕೊಳ್ಳುತ್ತಿದೆ.

ಸುಧಾರಿತ ಮತ್ತು ಎಲೆಕ್ಟ್ರಿಕ್ ತಂತ್ರಜ್ಞಾನ ಉತ್ಪನ್ನದ ಮೂಲಕ ಸಾಂಪ್ರದಾಯಿಕ ಡಬಲ್ ಡೆಕ್ಕರ್ ಬಸ್‌ ಸೇವೆಯನ್ನು ಪುನಾರಂಭಿಸಲು ಉತ್ಸುಕವಾಗಿರುವ ಮುಂಬೈ ನಗರ ಸಾರಿಗೆ ಸಂಸ್ಥೆಯು ಹೊಸ ಯೋಜನೆಗಾಗಿ ಅಶೋಕ್ ಲೇಲ್ಯಾಂಡ್‌ನ ಅಂಗಸಂಸ್ಥೆಯಾಗಿರುವ ಸ್ವಿಚ್ ಮೊಬಿಲಿಟಿ ಜೊತೆ ಪಾಲುದಾರಿಕೆ ಪ್ರಕಟಿಸಿದೆ.

ಭಾರತದ ಮೊದಲ ಮತ್ತು ವಿಶಿಷ್ಟ ವಿದ್ಯುತ್‌ಚಾಲಿತ ಡಬಲ್ ಡೆಕ್ಕರ್ ಬಸ್ ಅನಾವರಣ

ಹೊಸ ಪಾಲುದಾರಿಕೆ ಯೋಜನೆ ಅಡಿ ಸ್ವಿಚ್ ಮೊಬಿಲಿಟಿ ಕಂಪನಿಯು ಮುಂಬೈ ನಗರ ಸಾರಿಗೆ ಸಂಸ್ಥೆಯ ಬೇಡಿಕೆಗೆ ಅನುಗುಣವಾಗಿ ಹೊಸ ತಲೆಮಾರಿನ ವಿನ್ಯಾಸದೊಂದಿಗೆ ವಿದ್ಯುತ್ ಚಾಲಿತ ಸ್ವಿಚ್ ಇಐವಿ 22 ಡಬಲ್ ಡೆಕ್ಕರ್ ಬಸ್ ನಿರ್ಮಾಣಗೊಳಿಸಿ ಅನಾವರಣಗೊಳಿಸಿದೆ.

ಭಾರತದ ಮೊದಲ ಮತ್ತು ವಿಶಿಷ್ಟ ವಿದ್ಯುತ್‌ಚಾಲಿತ ಡಬಲ್ ಡೆಕ್ಕರ್ ಬಸ್ ಅನಾವರಣ

1967 ರಲ್ಲಿ ಮೊದಲ ಬಾರಿಗೆ ಮುಂಬೈನಲ್ಲಿ ಡಬಲ್ ಡೆಕ್ಕರ್ ಬಸ್‌ ಅನ್ನು ಪರಿಚಯಿಸಿದ್ದ ಸಂದರ್ಭದಲ್ಲೂ ಅಶೋಕ್‌ ಲೇಲ್ಯಾಂಡ್‌ ಕಂಪನಿಯೇ ಮುಂಚೂಣಿಯಲ್ಲಿತ್ತು. ಇದೀಗ ಅಶೋಕ್ ಲೇಲ್ಯಾಂಡ್ ಅಂಗಸಂಸ್ಥೆಯಾದ ಸ್ವಿಚ್ ಮೊಬಿಲಿಟಿ ಕಂಪನಿಯು ಹಳೆಯ ಪರಂಪರೆಯನ್ನು ಹೊಸ ರೂಪದೊಂದಿಗೆ ಮುಂದುವರಿಸಲು ಸಿದ್ದವಾಗಿದೆ. ಡಬಲ್ ಡೆಕ್ಕರ್‌ ಬಸ್‌‌ಗಳ ನಿರ್ಮಾಣದಲ್ಲಿ ವ್ಯಾಪಕ ಪರಿಣತಿ ಹೊಂದಿರುವ ಅಶೋಕ್ ಲೇಲ್ಯಾಂಡ್ ಕಂಪನಿಯು ಭಾರತದಲ್ಲಿ ಮಾತ್ರವಲ್ಲ ಇಂಗ್ಲೆಂಡ್‌ನಲ್ಲೂ 100ಕ್ಕೂ ಸ್ವಿಚ್ ಎಲೆಕ್ಟ್ರಿಕ್ ಡಬಲ್ ಡೆಕ್ಕರ್‌ ಬಸ್‌ಗಳನ್ನು ಪರಿಚಯಿಸಿದೆ.

ಭಾರತದ ಮೊದಲ ಮತ್ತು ವಿಶಿಷ್ಟ ವಿದ್ಯುತ್‌ಚಾಲಿತ ಡಬಲ್ ಡೆಕ್ಕರ್ ಬಸ್ ಅನಾವರಣ

ಇದೀಗ ಮುಂಬೈ ನಗರ ಸಾರಿಗೆ ಸಂಸ್ಥೆಯು ಕೂಡಾ ಹೊಸ ಯೋಜನೆ ಅಡಿಯಲ್ಲಿ ಒಟ್ಟು 200 ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್‌ಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದ್ದು, ಹೊಸ ಯೋಜನೆಗಾಗಿ ಜಾಗತಿಕ ಅನುಭವ ಬಳಸಿಕೊಂಡು ಭಾರತದಲ್ಲಿಯೇ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ ‘ಸ್ವಿಚ್ ಇಐವಿ 22' ಇವಿ ಬಸ್‌ ನಿರ್ಮಾಣ ಮಾಡಲಾಗಿದೆ.

ಭಾರತದ ಮೊದಲ ಮತ್ತು ವಿಶಿಷ್ಟ ವಿದ್ಯುತ್‌ಚಾಲಿತ ಡಬಲ್ ಡೆಕ್ಕರ್ ಬಸ್ ಅನಾವರಣ

ಆಕರ್ಷಕ ವಿನ್ಯಾಸ, ಸುಧಾರಿತ ತಂತ್ರಜ್ಞಾನ, ಗರಿಷ್ಠ ಸುರಕ್ಷತೆ, ಐಷಾರಾಮಿ ಸೌಕರ್ಯ ಮತ್ತು ಪರಿಸರ ಸ್ನೇಹಿ ಸ್ವಿಚ್ ಇಐವಿ 22 ಇವಿ ಬಸ್‌‌ಗಳನ್ನು ಅನಾವರಣಗೊಳಿಸಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಸ್ವಿಚ್ ಮೊಬಿಲಿಟಿ ಹೊಸ ತಂತ್ರಜ್ಞಾನ ಪ್ರೇರಿತ ಡಬಲ್ ಡೆಕ್ಕರ್ ಬಸ್ ನಿರ್ಮಾಣಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಭಾರತದ ಮೊದಲ ಮತ್ತು ವಿಶಿಷ್ಟ ವಿದ್ಯುತ್‌ಚಾಲಿತ ಡಬಲ್ ಡೆಕ್ಕರ್ ಬಸ್ ಅನಾವರಣ

ಹೊಸ ಇವಿ ಬಸ್ ಅನಾವರಣದ ನಂತರ ಮಾತನಾಡಿದ ಸಚಿವ ನಿತಿನ್ ಗಡ್ಕರಿಯವರು, ದೇಶದ ಸಾರಿಗೆ ವ್ಯವಸ್ಥೆಯನ್ನು ದೀರ್ಘಾವಧಿಯ ದೃಷ್ಟಿಕೋನದಿಂದ ಬದಲಾಯಿಸುವ ಅಗತ್ಯವಿದ್ದು, ನಗರ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಗಮನಹರಿಸುವುದರೊಂದಿಗೆ ಕಡಿಮೆ ಸ್ಥಳಾವಕಾಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಸಾಗಿಸುವ ಸಮಗ್ರ ಸ್ವರೂಪದ ವಿದ್ಯುತ್‌ಚಾಲಿತ ವಾಹನಗಳ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಕೇಂದ್ರ ಸರ್ಕಾರವು ಕಾರ್ಯೋನ್ಮುಖವಾಗಿದೆ ಎಂದಿದ್ದಾರೆ.

ಭಾರತದ ಮೊದಲ ಮತ್ತು ವಿಶಿಷ್ಟ ವಿದ್ಯುತ್‌ಚಾಲಿತ ಡಬಲ್ ಡೆಕ್ಕರ್ ಬಸ್ ಅನಾವರಣ

ಹಾಗೆಯೇ ವಾಯು ಮಾಲಿನ್ಯವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಪರಿಸರ ಸ್ನೇಹಿ ವಾಹನಗಳ ಬಗೆಗೆ ಹೆಚ್ಚುತ್ತಿದ್ದು, ಡಬಲ್ ಡೆಕ್ಕರ್ ಬಸ್‌ಗಳ ಪರಿಕಲ್ಪನೆ ಪುನರುಜ್ಜೀವನಗೊಳಿಸಲು, ಪ್ರಯಾಣಿಕರು ಮತ್ತು ಸಮಾಜದ ಪ್ರಯೋಜನಕ್ಕಾಗಿ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುತ್ತಿರುವ ಸ್ವಿಚ್ ಮೊಬಿಲಿಟಿ ಅಭಿನಂದಿಸಲು ಬಯಸುತ್ತೇನೆ ಎಂದಿದ್ದಾರೆ.

ಭಾರತದ ಮೊದಲ ಮತ್ತು ವಿಶಿಷ್ಟ ವಿದ್ಯುತ್‌ಚಾಲಿತ ಡಬಲ್ ಡೆಕ್ಕರ್ ಬಸ್ ಅನಾವರಣ

ಮುಂಬೈನಲ್ಲಿ ಪ್ರವಾಸಿಗರ ಸಾರಿಗೆ ಸೇವೆಗಾಗಿ ಆರಂಭಿಸಲು 200 ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್‌ಗಳನ್ನು ಪೂರೈಸುವ ಯೋಜನೆ ಪಡೆದುಕೊಂಡ ನಂತರ ಸ್ವಿಚ್ ಮೊಬಿಲಿಟಿ ಕಂಪನಿಗೆ ವಿವಿಧ ನಗರಗಳ ಸಾರಿಗೆ ಮತ್ತಷ್ಟು ಬೇಡಿಕೆ ಹರಿದುಬರುತ್ತಿದೆ.

ಭಾರತದ ಮೊದಲ ಮತ್ತು ವಿಶಿಷ್ಟ ವಿದ್ಯುತ್‌ಚಾಲಿತ ಡಬಲ್ ಡೆಕ್ಕರ್ ಬಸ್ ಅನಾವರಣ

ಸ್ವಿಚ್‌ಇಐವಿ 22 ಮೂಲಕ ಮುಂಬೈ ಮಹಾನಗರದ ನಿವಾಸಿಗಳಿಗೆ ಹಳೆಯ ದಿನಗಳ ನೆನಪನ್ನು ಮತ್ತೊಮ್ಮೆ ಹೊಸ ರೂಪದಲ್ಲಿ ನೆನಪಿಸಲು ಸಜ್ಜಾಗಿರುವ ಸ್ವಿಚ್ ಮೊಬಿಲಿಟಿ ಕಂಪನಿಯು ಹೊಸ ಇವಿ ಬಸ್ ಮಾದರಿಯನ್ನು ಸಮಕಾಲಿನ ಆಕರ್ಷಕ ವಿನ್ಯಾಸ ಮತ್ತು ಹಿತಾನುಭವ ನೀಡುವ ಒಳಾಂಗಣ ಹಾಗೂ ಹೊರಾಂಗಣದ ವಿನ್ಯಾಸದೊಂದಿಗೆ ಅಭಿವೃದ್ದಿಪಡಿಸಿದೆ.

ಭಾರತದ ಮೊದಲ ಮತ್ತು ವಿಶಿಷ್ಟ ವಿದ್ಯುತ್‌ಚಾಲಿತ ಡಬಲ್ ಡೆಕ್ಕರ್ ಬಸ್ ಅನಾವರಣ

ಸಿಂಗಲ್‌ ಡೆಕ್ಕರ್ ಬಸ್‌ನಲ್ಲಿ ಕುಳಿತುಕೊಂಡು ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದರೆ ಸ್ವಿಚ್‌ ಹೊಸ ಎಲೆಕ್ಟ್ರಿಕ್‌ ಡಬಲ್‌ ಡೆಕ್ಕರ್ ಬಸ್‌ನ ತೂಕವು ಕೇವಲ ಶೇ. 18ರಷ್ಟು ಹೆಚ್ಚಳಗೊಂಡಿದ್ದು, ಅದೇ ಸಮಯದಲ್ಲಿ ಅದು ಎರಡು ಪಟ್ಟು ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.

ಭಾರತದ ಮೊದಲ ಮತ್ತು ವಿಶಿಷ್ಟ ವಿದ್ಯುತ್‌ಚಾಲಿತ ಡಬಲ್ ಡೆಕ್ಕರ್ ಬಸ್ ಅನಾವರಣ

ಹೊಸ ಡಬಲ್ ಡೆಕ್ಕರ್ ಬಸ್ ಮಾದರಿಯಲ್ಲಿ ಕಂಪನಿಯು ಸ್ವಿಚ್‌ ಇ1 (Switch e1) ಬಸ್‌ನಲ್ಲಿರುವ ‘650 ವಿ ಸಿಸ್ಟಮ್‌' ಬಳಸಲಾಗಿದ್ದು, ವಿಶಾಲವಾದ ಮುಂಭಾಗ ಮತ್ತು ಹಿಂಭಾಗದ ಬಾಗಿಲುಗಳು, ಎರಡು ಬದಿಯಲ್ಲಿ ಮೆಟ್ಟಿಲುಗಳು ಮತ್ತು ಇತ್ತೀಚಿನ ಹೊಸ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ತುರ್ತು ಬಾಗಿಲು ಸೌಲಭ್ಯ ಹೊಂದಿದೆ. ಬಸ್‌ನಲ್ಲಿರುವ ಹವಾನಿಯಂತ್ರಿತ ಸೌಲಭ್ಯವು ಅರಾಮದಾಯಕ ಪ್ರಯಾಣಕ್ಕೆ ಪೂರಕವಾಗಿದ್ದು, ಬಸ್‌ನಲ್ಲಿರುವ ಗರಿಷ್ಠ ಸ್ಥಳಾವಕಾಶದೊಂದಿಗೆ ಒಟ್ಟು 65 ಪ್ರಯಾಣಿಕರು ಕುಳಿತುಕೊಳ್ಳುವ ಸೌಲಭ್ಯ ಹೊಂದಿದೆ.

ಭಾರತದ ಮೊದಲ ಮತ್ತು ವಿಶಿಷ್ಟ ವಿದ್ಯುತ್‌ಚಾಲಿತ ಡಬಲ್ ಡೆಕ್ಕರ್ ಬಸ್ ಅನಾವರಣ

ಇದರಲ್ಲಿ ಪ್ರತಿಯೊಂದು ಆಸನವು ಹಗುರವಾದ ದಿಂಬು ಹೊಂದಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಒಳಭಾಗದಲ್ಲಿ ಕಾರುಗಳಲ್ಲಿ ಇರುವಂತಹ ಸೌಕರ್ಯಗಳನ್ನು ಅಳವಡಿಸಲಾಗಿದೆ. ಹೀಗಾಗಿ ಹೊಸ ಬಸ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳು ನಗರ ಪ್ರಯಾಣವನ್ನು ಅರಾಮದಾಯಕಗೊಳಿಸಲಿದ್ದು, ಹೊಸ ವಿನ್ಯಾಸದೊಂದಿಗೆ ಕಿರಿದಾದ ರಸ್ತೆಗಳು, ಟರ್ಮಿನಲ್ ಮತ್ತು ಡಿಪೊಗಳಲ್ಲಿ ಕಡಿಮೆ ಜಾಗ ಬಳಸಿಕೊಳ್ಳಲಿವೆ.

ಭಾರತದ ಮೊದಲ ಮತ್ತು ವಿಶಿಷ್ಟ ವಿದ್ಯುತ್‌ಚಾಲಿತ ಡಬಲ್ ಡೆಕ್ಕರ್ ಬಸ್ ಅನಾವರಣ

ಸ್ವಿಚ್ ಇಐವಿ 22 ಇವಿ ಬಸ್‌ಗಳು 231 ಕೆಡಬ್ಲ್ಯುಎಚ್‌ ಸಾಮರ್ಥ್ಯದ 2-ಸ್ಟ್ರಿಂಗ್, ಲಿಕ್ವಿಡ್ ಕೂಲ್ಡ್, ಡ್ಯುಯಲ್ ಗನ್ ಚಾರ್ಜಿಂಗ್ ಸಿಸ್ಟಮ್‌ನೊಂದಿಗೆ ಹೆಚ್ಚು ಸಾಂದ್ರತೆಯ ಎನ್‌ಎಂಸಿ ಕೆಮಿಸ್ಟ್ರಿ ಬ್ಯಾಟರಿ ಸೌಲಭ್ಯ ಒಳಗೊಂಡಿರಲಿದ್ದು, ಇದು ಪ್ರತಿಚಾರ್ಜ್‌ಗೆ ಗರಿಷ್ಠ 250 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

Most Read Articles

Kannada
English summary
India first electric double decker bus switch eiv 22 unveiled
Story first published: Friday, August 19, 2022, 20:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X