ಐಫೋನ್ ತಯಾರಕರ ಮೊದಲ ಆಪಲ್ ಎಲೆಕ್ಟ್ರಿಕ್ ಕಾರಿನ ಬೆಲೆ ಬಹಿರಂಗ

ಟೆಕ್ ದೈತ್ಯ ಆಪಲ್ ಕಂಪನಿಯು ಎಲೆಕ್ಟ್ರಿಕ್ ಪ್ರಯಾಣಿಕ ಕಾರಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಕಂಪನಿಯೇ ಅಧಿಕೃತವಾಗಿ ಘೋಷಣೆ ಮಾಡಾಗಿದೆ. ಅಲ್ಲದೇ ಇತ್ತೀಚೆಗೆ ತನ್ನ ಹೊಸ ಹ್ಯಾಚ್‌ಬ್ಯಾಕ್ ಮಾದರಿಯನ್ನು ಅನಾವರಣಗೊಳಿಸಿತ್ತು. ಈ ಮುಂಬರುವ ಎಲೆಕ್ಟ್ರಿಕ್ ಮಾದರಿಯ ಕುರಿತು ಹೆಚ್ಚಿನ ವಿವರಗಳು ಅಂತರ್ಜಾಲದಲ್ಲಿ ಈಗಾಗಲೇ ಹರಿದಾಡುತ್ತಿವೆ. ಇದೀಗ ಬೆಲೆ ಹಾಗೂ ಬಿಡುಗಡೆ ಕುರಿತ ಮಾಹಿತಿ ಬಹಿರಂಗವಾಗಿದೆ.

ಈ ಹಿಂದೆ ಆಪಲ್ ಎಲೆಕ್ಟ್ರಿಕ್ ಕಾರ್ ಅನ್ನು 2025 ರಲ್ಲಿ ಕಂಪನಿ ಬಿಡುಗಡೆ ಮಾಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದನ್ನು ಈಗ 2026ಕ್ಕೆ ಮುಂದೂಡಲಾಗಿದೆ. ಜೊತೆಗೆ ಇದು ಸಂಪೂರ್ಣ ಆಟೋಮ್ಯಾಟಿಕ್ ವಾಹನವಾಗಬೇಕಿತ್ತು, ಆದರೆ ಈಗ ಪ್ರಸ್ತುತ ವಿನ್ಯಾಸವು ಪೆಡಲ್ ಮತ್ತು ಸ್ಟೀರಿಂಗ್ ವೀಲ್‌ನಂತಹ ಸಾಂಪ್ರದಾಯಿಕ ಅಂಶಗಳನ್ನು ಒಳಗೊಂಡಿದೆ. ಅಲ್ಲದೇ ಇತ್ತೀಚಿನ ವರದಿಯ ಪ್ರಕಾರ ಮೊದಲ ಆಪಲ್ ಇವಿ ಕಾರಿನ ಬೆಲೆ USD 100,000 (ರೂ. 82.51 ಲಕ್ಷ) ಕ್ಕಿಂತ ಕಡಿಮೆ ಇರುತ್ತದೆ ಎಂದು ಹೇಳಲಾಗುತ್ತಿದೆ.

ಐಫೋನ್ ತಯಾರಕರ ಮೊದಲ ಆಪಲ್ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಬೆಲೆ ಬಹಿರಂಗ

ಈ ಕಾರಿನ ಮೇಲೆ ಹೆಚ್ಚು ನಿರೀಕ್ಷೆಗಳಿದ್ದವು, ಏಕೆಂದರೆ ಮೊದಲಿನಿಂದಲೂ ಆಪಲ್ ಕಾರು ಸಾಕಷ್ಟು ಅತ್ಯಾಧುನಿಕ ಟೆಕ್ನಾಲಜಿಯೊಂದಿಗೆ ಬರುವುದಾಗಿ ವರದಿಯಾಗಿತ್ತು. ಆದರೆ ಆಪಲ್ ತಂತ್ರಜ್ಞಾನ ಸಂಸ್ಥೆಯು ಬಹುಶಃ ಟೆಸ್ಲಾದಂತೆ ಆಟೋಮ್ಯಾಟಿಕ ಚಾಲನಾ ಸಾಮರ್ಥ್ಯದೊಂದಿಗೆ ತೊಂದರೆಗೆ ಸಿಲುಕುವ ಅವಕಾಶವಿರುವುದರಿಂದ ಇದನ್ನು ಕಡೆಗಣಿಸಿದೆ. ಜೊತೆಗೆ ಆಪಲ್ ಆಂತರಿಕವಾಗಿ ಡೆನಾಲಿ ಎಂಬ ಸಂಕೇತನಾಮ ಹೊಂದಿರುವ ತಂತ್ರಜ್ಞಾನ ವ್ಯವಸ್ಥೆಯನ್ನು ಬಳಸಲು ಯೋಜಿಸಿದೆ ಎಂದು ವರದಿಯು ಹೇಳುತ್ತಿದೆ.

ಇದು "ಆಪಲ್‌ನ ನಾಲ್ಕು ಅತ್ಯುನ್ನತ ಮ್ಯಾಕ್ ಚಿಪ್‌ಗಳನ್ನು ಸಂಯೋಜಿಸಿ" ಶಕ್ತಿಯುತವಾದ ಪ್ರೊಸೆಸರ್ ಅನ್ನು ಒಳಗೊಂಡಿರಲಿದೆ. ಆದರೆ ಟೆಸ್ಲಾ ತನ್ನ ಆಟೋಮ್ಯಾಟಿಕ್ ಡ್ರೈವ್ ಸಹಾಯಕ್ಕಾಗಿ ಅಲ್ಟ್ರಾಸಾನಿಕ್ ಸೆನ್ಸಾರ್‌ಗಳ ಬದಲಿಗೆ ಕ್ಯಾಮೆರಾಗಳನ್ನು ಬಳಸುವುದನ್ನು ಆರಿಸಿಕೊಂಡಿದೆ. ಒಟ್ಟಾರೆ ಟೆಕ್ನಾಲಜಿಯಲ್ಲಿ ಟೆಸ್ಲಾವನ್ನು ಹಿಂದಿಕ್ಕುವಂತೆ ಆಪಲ್ ಕಾರು ಮಾರುಕಟ್ಟೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಆಪಲ್ ಕಾರು ಬಿಡುಗಡೆ ಬಳಿಕ ಅಮೆರಿಕಾದ ಟೆಸ್ಲಾ ಹಾಗೂ ಚೀನಾದ ಬಿವೈಡಿ ಎಲೆಕ್ಟ್ರಿಕ್ ಕಂಪನಿಗಳೊಂದಿಗೆ ಸ್ಪರ್ಧಿಸಲಿದೆ.

ಆಪಲ್ ಕಾರು ಆರಂಭದಲ್ಲಿ USD 120,000 (ರೂ. 99 ಲಕ್ಷ) ಗಿಂತ ಹೆಚ್ಚು ವೆಚ್ಚವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಸಂಪೂರ್ಣ ಆಟೋಮ್ಯಾಟಿಕ್ ಚಾಲನಾ ತಂತ್ರಜ್ಞಾನ ಮತ್ತು ಹೆಚ್ಚು ಸುಧಾರಿತ ವೈಶಿಷ್ಟ್ಯಗಳ ಅನುಪಸ್ಥಿತಿಯಿಂದಾಗಿ ಈಗ ಆಪಲ್ ಎಲೆಕ್ಟ್ರಿಕ್ ಕಾರಿನ ಬೆಲೆಯು USD 20,000 ಕ್ಕಿಂತ ಕಡಿಮೆಯಾಗಲಿದೆ. ಇನ್ನು ಆಪಲ್‌ನ ಟೈಟಾನ್ ಎಂಬ ಮತ್ತೊಂದು ಎಲೆಕ್ಟ್ರಿಕ್ ಕಾರ್ ಯೋಜನೆಯು ಹಲವಾರು ಬದಲಾವಣೆಗಳನ್ನು ಕಂಡಿದೆ. ಇದನ್ನು ಎಂಟು ವರ್ಷಗಳ ಹಿಂದೆ ಕಲ್ಪಿಸಲಾಗಿತ್ತು.

ಈ ಯೋಜನೆಯು ಟೈಟಾನ್ ಮತ್ತು ಆಪಲ್‌ನ ಜಂಟಿ ಉದ್ಯಮವಾಗಿದ್ದು, ಹಲವು ವದಂತಿಗಳಿಂದಾಗಿ ಯೋಜನೆಯು ಆರಂಭಿಕ ಹಂತದಲ್ಲೇ ಇದೆ. ಆದರೆ ಎರಡನೆಯದು ಅಂತಿಮವಾಗಿ ಮುಂದಿನ ವರ್ಷ ಬರಲಿದೆ. ಇದಕ್ಕೆ ಪೈಪೋಟಿಯಾಗಿ ಟೆಕ್ ದೈತ್ಯರಾದ Xiaomi ಮತ್ತು Sony ಕೂಡ ಎಲೆಕ್ಟ್ರಿಕ್ ಕಾರ್ ರಂಗಕ್ಕೆ ಪ್ರವೇಶಿಸಲು ಕೆಲಸ ಮಾಡುತ್ತಿವೆ. ಈ ಮೂಲಕ ಟೆಕ್ ವಿಭಾಗದಲ್ಲಿ ಸಣ್ಣ ಉತ್ಪನ್ನಗಳೊಂದಿಗೆ ಪೈಪೋಟಿ ನಡೆಸುತ್ತಿದ್ದ ಕಂಪನಿಗಳು ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನ ರಂಗದಲ್ಲಿ ತಮ್ಮ ಪೈಪೋಟಿಯೊಂದಿಗೆ ಕ್ರಾಂತಿ ತರಲಿವೆ.

ಐಫೋನ್ ತಯಾರಕ ಫಾಕ್ಸ್‌ಕಾನ್‌ನಿಂದ ಕಾರು ತಯಾರಿ
ಬಹುತೇಕರು ಫಾಕ್ಸ್‌ಕಾನ್ ಅನ್ನು ವಿಶ್ವದಾದ್ಯಂತ ಅನೇಕ ಕಾರ್ಖಾನೆಗಳಲ್ಲಿ ಆ್ಯಪಲ್ ಕಂಪನಿಗಾಗಿ ಮಾತ್ರ ಐಫೋನ್‌ಗಳನ್ನು ಉತ್ಪಾದಿಸುವ ಕಂಪನಿ ಎಂದು ತಿಳಿದಿದ್ದಾರೆ. ಆದರೆ ಅತಿ ಕಡಿಮೆ ಜನಕ್ಕೆ ತಿಳಿದಿರುವ ಸಂಗತಿಯೆಂದರೆ ಫಾಕ್ಸ್‌ಕಾನ್ ತೈವಾನ್‌ ಮೂಲದ ಟೆಕ್ ದೈತ್ಯವಾಗಿದ್ದು, ವಿಶ್ವದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ತಯಾರಕ ಕಂಪನಿಯಾಗಿದೆ. ಫಾಕ್ಸ್‌ಕಾನ್ ವಿಶ್ವ ಟೆಕ್‌ ದೈತ್ಯವಾಗಿರುವುದರಿಂದ ಎಲೆಕ್ಟ್ರಿಕ್ ವಾಹನಗಳನ್ನು ಯಶಸ್ವಿಯಾಗಿ ನಿರ್ಮಿಸಿ ಇವಿ ವಿಭಾಗದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸಾಧಿಸುವ ತವಕದಲ್ಲಿದೆ.

ಟೆಕ್‌ ವಿಷಯದಲ್ಲಿ ಯಾವುದೇ ರಾಜಿಯಿಲ್ಲ, ಹಾಗೆಂದು ಟೆಸ್ಲಾದಂತಹ ಕಾರುಗಳಲ್ಲಿ ನೀಡಿರುವ ಆಟೋ ಪೈಲಟ್ ತಂತ್ರಜ್ಞಾನವನ್ನು ನಮ್ಮ ಮುಂಬರುವ ಕಾರಿನಲ್ಲಿ ನೀಡುವುದಿಲ್ಲ. ಏಕೆಂದರೆ ಟೆಸ್ಲಾದ ಆಟೋ ಪೈಲಟ್ ತಂತ್ರಜ್ಞಾನದಿಂದಾಗಿ ಈಗಾಗಲೇ ಹಲವೆಡೆ ಅಪಘಾತಗಳು ಸಂಭವಿಸಿವೆ. ಇಂತಹ ತಂತ್ರಜ್ಞಾನವು ನಮ್ಮಲ್ಲಿ ಪ್ರಮಾಣಿತವಾಗಿದೆ, ಆದರೆ ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಮುಂಬರುವ ಕಾರಿನಲ್ಲಿ ಅಲ್ಲದೇ ಆ ಬಳಿಕ ಬರುವ ಕಾರುಗಳಲ್ಲಿ ನೀಡಲು ಯೋಜಿಸಿರುವುದಾಗಿ ಫಾಕ್ಸ್‌ಕಾನ್‌ ಕಂಪನಿ ಹೇಳಿಕೊಂಡಿದೆ.

Most Read Articles

Kannada
English summary
Iphone makers first apple electric hatchback price revealed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X