Just In
- 27 min ago
ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ
- 13 hrs ago
ಆಕರ್ಷಕ ವಿನ್ಯಾಸದ 2022ರ ಹ್ಯುಂಡೈ ಟ್ಯೂಸಾನ್ ಎಸ್ಯುವಿಯ ವಿಶೇಷತೆಗಳು
- 14 hrs ago
ಪಾಸ್ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..
- 14 hrs ago
ಬ್ರೇಕ್ ಫೇಲ್ ಆದಾಗ ಕೇವಲ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ? ಇಲ್ಲಿದೆ ಉಪಯುಕ್ತ ಸಲಹೆ
Don't Miss!
- Movies
ಮಗಳಿಗೆ ದುಬಾರಿ ಗಿಫ್ಟ್ ಕೊಟ್ಟ ನಟ ದುನಿಯಾ ವಿಜಯ್!
- News
ಏಡಿ ಕಣ್ಣಿಂದ ಕ್ಯಾಮೆರಾ- ಸೆಲ್ಫ್ ಡ್ರೈವಿಂಗ್ ಕಾರಿಗೆ ಭರ್ಜರಿ ಪುಷ್ಟಿ
- Lifestyle
ಶನಿದೋಷ ನಿವಾರಣೆ ಹಾಗೂ ಸಂಪತ್ತು ವೃದ್ಧಿಗೆ ಕೃಷ್ಣ ಜನ್ಮಾಷ್ಟಮಿಗೆ ಮಾಡಿ ಈ ವಿಶೇಷ ಪರಿಹಾರ
- Technology
ಧಮಾಕಾ ಕೊಡುಗೆ!..ಭರ್ಜರಿ ಡಿಸ್ಕೌಂಟ್ನಲ್ಲಿ ಹೊಸ ಸ್ಮಾರ್ಟ್ಟಿವಿ ನಿಮ್ಮದಾಗಿಸಿಕೊಳ್ಳಿ!
- Finance
ಆಗಸ್ಟ್ 17: ಭಾರತದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು
- Sports
ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಖರೀದಿಸುತ್ತೇನೆ ಎಂದ ಎಲಾನ್ ಮಸ್ಕ್!
- Education
Distance Education Courses And Colleges : ದೂರ ಶಿಕ್ಷಣ ಮೂಲಕ ಅಧ್ಯಯನಕ್ಕೆ ಉತ್ತಮ ಕೋರ್ಸ್ ಮತ್ತು ಕಾಲೇಜುಗಳ ವಿವರ
- Travel
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಆನೆಗಳ ಶಿಬಿರಕ್ಕೆ ಭೇಟಿ ಕೊಡಿ
IRDAI ಹೊಸ ನಿಯಮ: ವಾಹನ ವಿಮೆ ವಿಚಾರದಲ್ಲಿ ಮಾಲೀಕರಿಗೆ ಗುಡ್ನ್ಯೂಸ್!
ವಾಹನಗಳ ವಿಮೆ ವಿಚಾರವಾಗಿ ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರವು(IRDAI) ಮಹತ್ವದ ಬದಲಾವಣೆಯೊಂದು ಘೋಷಣೆ ಮಾಡಿದೆ.
ಹೊಸ ವಿಮಾ ನಿಯಮವು ವಾಹನ ಮಾಲೀಕರಿಗೆ ಅತ್ಯುತ್ತಮ ಆಯ್ಕೆಯಾಗಲಿದ್ದು, ಹೊಸ ನಿಯಮವು ವಿಮಾ ಮೊತ್ತವನ್ನು ನಿಮ್ಮ ಚಾಲನಾ ವಿಧಾನ ಅನುಸರಿಸಿ ನಿರ್ಧರಿಸುತ್ತದೆ.

ಭಾರತದಲ್ಲಿ ಪ್ರತಿಯೊಂದು ವಾಹನವು ಕೂಡಾ ಮೋಟಾರ್ ವೆಹಿಕಲ್ ಕಾಯ್ದೆ ಅನ್ವಯ ವಿವಿಧ ವರ್ಗಗಳಿಗೆ ಅನುಗುಣವಾಗಿ ವಿಮೆಯನ್ನು ಹೊಂದಿರಲೇಬೇಕಿರುವುದು ಕಡ್ಡಾಯವಾಗಿದೆ. ಇದು ವಾಹನಗಳಿಗೆ ಗರಿಷ್ಠ ಸುರಕ್ಷತೆ ಒದಗಿಸಲಿದ್ದು, ವಾಹನ ಮಾದರಿಗಳನ್ನು ಆಧರಿಸಿ ಪ್ರೀಮಿಯಂ ಪಾವತಿ ನಿರ್ಧಾರವಾಗುತ್ತದೆ. ಹಾಗೆಯೇ ಇನ್ಮುಂದೆ ನೀವು ವಾಹನವನ್ನು ಚಾಲನೆಯನ್ನು ಆಧರಿಸಿ ವಿಮಾ ಮೊತ್ತವು ನಿರ್ಧಾರವಾಗಲಿದ್ದು, 'ನೀವು ಚಾಲನೆ ಮಾಡಿದ ರೀತಿಯನ್ನು ಆಧರಿಸಿ ಪ್ರೀಮಿಯಂ ಪಾವತಿಸಿಸಬೇಕಾಗುತ್ತದೆ.

ಹೌದು, ಇನ್ಮುಂದೆ ಪ್ರತಿಯೊಬ್ಬ ವಾಹನ ಮಾಲೀಕರು ತಮ್ಮ ವಾಹನಗಳಿಗೆ ಪಾವತಿಸುವ ವಿಮೆಯು ಚಾಲನಾ ವೈಖರಿಯನ್ನು ಆಧರಿಸಿ ಮೊತ್ತ ನಿರ್ಧಾರವಾಗಲಿದ್ದು, ನೀವು ಚೆನ್ನಾಗಿ ಮತ್ತು ಸುರಕ್ಷಿತವಾಗಿ ವಾಹನ ಚಲಾಯಿಸಿದರೆ ನೀವು ಕಡಿಮೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ.

ಹಾಗೆಯೇ ನೀವು ಕಳಪೆಯಾಗಿ ಚಾಲನೆ ಮಾಡಿದ್ದಲ್ಲಿ ನೀವು ಹೆಚ್ಚು ಪ್ರೀಮಿಯಂ ಪಾವತಿಸಬೇಕಾಗುತ್ತದೆ. ವಾಹನ ಮಾಲೀಕರ ಚಾಲನಾ ವೈಖರಿಯನ್ನು ತಿಳಿಯಲು ವಾಹನಗಳಲ್ಲಿ ಕಡ್ಡಾಯವಾಗಿ ಜಿಪಿಎಸ್ ಅಳವಡಿಕೆಯಾಗಲಿದೆ.

ಖಾಸಗಿ ದ್ವಿಚಕ್ರ ವಾಹನಗಳು ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಈ ಹೊಸ ವಿಮಾ ಪಾಲಿಸಿ ಜಾರಿಗೆ ತರಲಾಗುತ್ತಿದ್ದು, ವಿಮಾ ಪ್ರೀಮಿಯಂ ದರವು ನಿಮ್ಮ ವಾಹನವನ್ನು ಚಾಲನೆ ಮಾಡುವ ವಿಧಾನವನ್ನು ಅವಲಂಬಿಸಿ ನಿರ್ಧಾರವಾಗುತ್ತದೆ.

ಹೊಸ ವಿಮಾ ಪಾಲಿಸಿ ಮೂಲಕ ಉತ್ತಮ ಸಂಚಾರಿ ಕೌಶಲ್ಯತೆಗೆ ಇದು ಸಹಕಾರಿಯಾಗಲಿದ್ದು, ಯಾರು ವಾಹನವನ್ನು ಬೇಕಾಬಿಟ್ಟಿ ಚಾಲನೆ ಮಾಡುತ್ತಾರೋ ಅವರು ಹೆಚ್ಚು ಪಾವತಿಸುತ್ತಾರೆ. ಉತ್ತಮ ಚಾಲನಾ ವಿಧಾನವನ್ನು ಅನುಸರಿಸವವರು ಕಡಿಮೆ ಪಾವತಿಸುತ್ತಾರೆ.

ಇದಲ್ಲದೆ ಹೊಸ ವಿಮಾ ಪಾಲಿಸಿ ಅಡಿಯಲ್ಲಿ ನೀವು ಒಂದಕ್ಕಿಂತ ಹೆಚ್ಚು ವಾಹನಗಳನ್ನು ಓಡಿಸಿದರೆ ಎಲ್ಲಾ ವಾಹನಗಳ ವಿಮೆಯನ್ನು ಒಂದೇ ಪ್ರೀಮಿಯಂನಲ್ಲಿ ಕವರ್ ಮಾಡಬಹುದಾಗಿದ್ದು, ವಿಮಾ ನಿಯಂತ್ರಕದ ಹೊಸ ನಿಯಮಗಳು ತಕ್ಷಣವೇ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ.

ಚಾಲನಾ ವಿಧಾನವನ್ನು ಲೆಕ್ಕಹಾಕಲು ವಿಮಾ ಕಂಪನಿಗಳು ಜಿಪಿಎಸ್ ಮೂಲಕ ಟ್ರ್ಯಾಕ್ ಮಾಡಲಿದ್ದು, ಇದಕ್ಕಾಗಿ ನಿಮ್ಮ ವಾಹನಗಳಲ್ಲಿ ಜಿಪಿಎಸ್ ಸಾಧನಗಳನ್ನು ಅಳವಡಿಸಲಿವೆ. ಇದರ ಮೂಲಕ ಆ ವಾಹನದ ಚಾಲನಾ ವಿಧಾನಗಳನ್ನು ಟ್ರ್ಯಾಕ್ ಮಾಡುವ ವಿಮಾ ಕಂಪನಿಗಳು ಚಾಲನಾ ವಿಧಾನ ಅನುಸರಿಸಿ ಪ್ರೀಮಿಯಂ ಅನ್ನು ವಿಧಿಸುತ್ತವೆ.

ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವ ಸಮಯದಲ್ಲಿಯೇ ನಿಮ್ಮ ವಾಹನದಲ್ಲಿ ಸಣ್ಣ ಗಾತ್ರದ ಜಿಪಿಎಸ್ ಸಾಧನವನ್ನು ಅಳವಡಿಸಲಿದ್ದು, ಅದು ನಿಮ್ಮ ಚಾಲನಾ ವೈಖರಿಯ ಕುರಿತಾಗಿ ಕಂಪನಿಗೆ ಮಾಹಿತಿ ನೀಡುತ್ತಿರುತ್ತದೆ.

ಈ ವೇಳೆ ನೀವು ಉತ್ತಮ ಚಾಲನಾ ವಿಧಾನವನ್ನು ಹೊಂದಿದ್ದರೆ ವಿಮಾ ಪ್ರೀಮಿಯಂ ಕಡಿಮೆಯಾಗುತ್ತದೆ ಮತ್ತು ಚಾಲನಾ ವಿಧಾನವು ಕಳಪೆಯಾಗಿದ್ದಲ್ಲಿ ಪ್ರೀಮಿಯಂ ಹೆಚ್ಚಾಗುತ್ತದೆ. ಇದಕ್ಕಾಗಿ ವಿಮಾ ಕಂಪನಿಗಳು ತಂತ್ರಜ್ಞಾನದ ಸಹಾಯದಿಂದ ಡ್ರೈವಿಂಗ್ ಸ್ಕೋರ್ ನೀಡುತ್ತವೆ.

ಹೊಸ ಮಾನದಂಡಗಳಿಗೆ ಅನುಗುಣವಾಗಿ ಈಗಾಗಲೇ ಎಡೆಲ್ವೀಸ್ ಜನರಲ್ ಇನ್ಶುರೆನ್ಸ್ (EGI) ಕಂಪನಿಯು ಹೊಸ ವಿಮಾ ಪ್ರೀಮಿಯಂಗಳನ್ನು ಆರಂಭಿಸಿದ್ದು, ಹೊಸ ಉಪಕ್ರಮದ ಅಡಿಯಲ್ಲಿ ವಾಹನ ಮಾಲೀರು ಸಮಗ್ರ ಮೋಟಾರು ವಿಮಾ ಉತ್ಪನ್ನವಾದ ಸ್ವಿಚ್(SWITCH) ಅನ್ನು ಸಹ ಖರೀದಿ ಮಾಡಬಹುದಾಗಿದೆ.

ಹೀಗಾಗಿ ಈ ಹೊಸ ಬಳಕೆಯ-ಆಧಾರಿತ ಮಾದರಿಯು ಡ್ರೈವಿಂಗ್ ಗುಣಮಟ್ಟವನ್ನೂ ಅಳೆಯುವುದಲ್ಲದೆ ನಮ್ಮ ಚಾಲನಾ ಅಭ್ಯಾಸವನ್ನು ಸುಧಾರಿಸಲು ಸಹಾಯ ಮಾಡುವುದಲ್ಲದೆ ಸುಧಾರಿಸಲು ಪ್ರೇರೇಪಿಸುತ್ತದೆ.

ಪ್ರಸ್ತುತ ಮೋಟಾರು ವಿಮಾ ವಿಭಾದಲ್ಲಿ ಎರಡು ವಿಧಗಳಿದ್ದು, ಸಮಗ್ರ ವಿಮೆ ಮತ್ತು ಮೂರನೇ ವ್ಯಕ್ತಿಯ ವಿಮೆ ಸಾಮಾನ್ಯವಾಗಿದೆ. ಇದರಲ್ಲಿ ಸಮಗ್ರ ವಾಹನ ವಿಮಾ ಯೋಜನೆಯಲ್ಲಿ ಥರ್ಡ್ ಪಾರ್ಟಿ ಮತ್ತು ಸ್ವಂತ ಹಾನಿ ರಕ್ಷಣೆಯನ್ನು ಒದಗಿಸಲಾಗುತ್ತದೆ.

ಆದರೆ ಮೂರನೇ ವ್ಯಕ್ತಿಯ ವಿಮಾ ರಕ್ಷಣೆಯಲ್ಲಿ ಇತರರ ವಾಹನಗಳಿಗೆ ಆಗುವ ಹಾನಿಯನ್ನು ಭರಿಸಲು ಮಾತ್ರ ನೀಡಲಾಗುತ್ತದೆ. ಸಮಗ್ರ ವಿಮೆ ಮತ್ತು ಮೂರನೇ ವ್ಯಕ್ತಿಯ ವಿಮೆಗಳು ವಿವಿಧ ವಾಹನ ಮಾದರಿಗಳನ್ನು ಆಧರಿಸಿದ್ದು, ಇನ್ಮುಂದೆ ಇದು ನಿಮ್ಮ ಚಾಲನಾ ವೈಖರಿ ಆಧರಿಸಿ ಹೆಚ್ಚು ಅಥವಾ ಕಡಿಮೆ ಆಗಬಹುದಾಗಿದೆ.

ಭಾರತೀಯ ಮೋಟಾರು ವಾಹನ ಕಾಯ್ದೆ 1988 ಪ್ರಕಾರ ಎಲ್ಲಾ ವಾಹನಗಳ ಮಾಲೀಕರು ವಿಮೆಯನ್ನು ಮಾಡಿಸತಕ್ಕದ್ದು. ಒಂದು ವೇಳೆ ಅಪಘಾತ ಸಂದರ್ಭದಲ್ಲಿ ವ್ಯಕ್ತಿಯ ಸುರಕ್ಷತೆ ಹಾಗೂ ಪರಿಹಾರ ಒದಗಿಸುವುದು ಮುಖ್ಯ. ಬಹುಶಃ ನಿಮ್ಮ ವಾಹನ ನೀವು ಖರೀದಿಸುವ ವಸ್ತುಗಳಲ್ಲಿ ಅತ್ಯಂತ ದುಬಾರಿಯಾಗಿರಬಹುದು. ಹೀಗಾಗಿ ವಿಮೆಯು ಈ ಸ್ವತ್ತಿಗೆ ರಕ್ಷಣೆ ಒದಗಿಸುವುದಲ್ಲದೆ ಅಪಘಾತ, ಹಾನಿ ಅಥವಾ ಕಳ್ಳತನ ಸಂಭವಿಸಿದ ಸಂದರ್ಭದಲ್ಲಿ ಆರ್ಥಿಕ ನಷ್ಟವನ್ನು ನಿಭಾಯಿಸಲು ಸಹಕಾರಿಯಾಗುತ್ತದೆ.