Isuzu MU-X 4x4 AT ವೆರಿಯೆಂಟ್ ಬೆಲೆ ರೂ.1.51 ಲಕ್ಷ ಕಡಿತ: ಉಳಿದ ಮಾದರಿಗಳ ಬೆಲೆ ಏರಿಕೆ

ಹೊಸ ವರ್ಷದಲ್ಲಿ ಹಲವಾರು ಜನಪ್ರಿಯ ವಾಹನ ತಯಾರಿಕ ಕಂಪನಿಗೆಳು ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸಿದೆ. ಇದರಲ್ಲಿ ನಿಸ್ಸಾನ್, ಮಹೀಂದ್ರಾ, ಹ್ಯುಂಡೈ, ರೆನಾಲ್ಟ್, ಹೋಂಡಾ, ಟೊಯೋಟಾ, ಎಂಜಿ, ಫೋರ್ಸ್ ಮೋಟಾರ್ಸ್ ಮತ್ತು ಸಿಟ್ರನ್ ಕಂಪನಿಗಳ ಜೊತೆ ಇಸುಝು ಕೂಡ ಸೇರಿದೆ.

Isuzu MU-X 4x4 AT ವೆರಿಯೆಂಟ್ ಬೆಲೆ ರೂ.1.51 ಲಕ್ಷ ಕಡಿತ: ಉಳಿದ ಮಾದರಿಗಳ ಬೆಲೆ ಏರಿಕೆ

ಇಸುಝು ಇಂಡಿಯಾ ಕಂಪನಿಯು ಪ್ರಸ್ತುತ ಪ್ರಯಾಣಿಕ ವಾಹನ ವಿಭಾಗದಲ್ಲಿ ಡಿ-ಮ್ಯಾಕ್ಸ್ ರೇಂಜ್ ಮತ್ತು ಎಂಯು-ಎಕ್ಸ್ ಸೇರಿದಂತೆ ಎರಡು ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಈ ಎರಡು ವಾಹನಗಳ ಬೆಲೆಗಳ ಪರಿಷ್ಕರಣೆ ಮಾಡಿದೆ. ಎಂಯು-ಎಕ್ಸ್ ಮಾದರಿಯ 4x2 ರೂಪಾಂತರದ ಬೆಲೆಯನ್ನು ರೂ.14,727 ಗಳವರೆಗೆ ಹೆಚ್ಚಿಸಿದೆ. ಆದರೆ ಎಂಯು-ಎಕ್ಸ್ ಮಾದರಿಯ 4x4 ರೂಪಾಂತರದ ಬೆಲೆಯನ್ನು ರೂ.1.51 ಲಕ್ಷಗಳವರೆಗೆ ಕಡಿತಗೊಳಿಸಿದೆ.

Isuzu MU-X 4x4 AT ವೆರಿಯೆಂಟ್ ಬೆಲೆ ರೂ.1.51 ಲಕ್ಷ ಕಡಿತ: ಉಳಿದ ಮಾದರಿಗಳ ಬೆಲೆ ಏರಿಕೆ

ಇಸುಝು ಡಿ-ಮ್ಯಾಕ್ಸ್ ಶ್ರೇಣಿಗೆ ಬರುವುದಾದರೆ, ಈ ಮಾದರಿಯು ಹೈ-ಲ್ಯಾಂಡರ್, ಝಡ್ 4x2 ಎಟಿ, ವಿ-ಕ್ರಾಸ್ ಝಡ್ 4x4 ಎಂಟಿ ಮತ್ತು ವಿ-ಕ್ರಾಸ್ ಝಡ್ ಪ್ರೆಸ್ಟೀಜ್ 4x4 ಎಟಿ ಸೇರಿದಂತೆ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ. ವಿ-ಕ್ರಾಸ್ Zx2 ಎಟಿ ರೂಪಂತರಕ್ಕೆ ರೂ,2.09 ಲಕ್ಷಗಳವರೆಗೆ ಮಹತ್ವದ ಬೆಲೆ ಏರಿಕೆಯನ್ನು ಪಡೆದಿದೆ.

Isuzu MU-X 4x4 AT ವೆರಿಯೆಂಟ್ ಬೆಲೆ ರೂ.1.51 ಲಕ್ಷ ಕಡಿತ: ಉಳಿದ ಮಾದರಿಗಳ ಬೆಲೆ ಏರಿಕೆ

ನಂತರದ ಹೈ-ಲ್ಯಾಂಡರ್ ರೂಪಾಂತರವು ಈಗ ರೂ.2.07 ಲಕ್ಷಗಳಷ್ಟು ದುಬಾರಿಯಾಗಿದೆ. ವಿ-ಕ್ರಾಸ್ ಝಡ್ ಪ್ರೆಸ್ಟೀಜ್ 4x4 ಎಟಿ ಮತ್ತು ವಿ-ಕ್ರಾಸ್ ಝಡ್ 4x4 ಎಂಟಿ ರೂಪಾಂತರಗಳ ಬೆಲೆಗಳು ಕ್ರಮವಾಗಿ ರೂ.1.10 ಲಕ್ಷ ಮತ್ತು ರೂ.1.09 ಲಕ್ಷಗಳವರೆಗೆ ಹೆಚ್ಚಾಗಿದೆ,

Isuzu MU-X 4x4 AT ವೆರಿಯೆಂಟ್ ಬೆಲೆ ರೂ.1.51 ಲಕ್ಷ ಕಡಿತ: ಉಳಿದ ಮಾದರಿಗಳ ಬೆಲೆ ಏರಿಕೆ

ಈ ಬಿಎಸ್-6 ಇಸುಝು ಡಿ-ಕ್ರಾಸ್ ವಿ-ಕ್ರಾಸ್ ಮಾದರಿಯಲ್ಲಿ ಹೈ-ಲ್ಯಾಂಡರ್ ಮಾದರಿಯು ಬೆಸ್ ವೆರಿಯೆಂಟ್ ಆಗಿ ಮಾರಾಟಗುತ್ತಿದೆ. ಮ್ಯಾನುವಲ್ ಕಂಟ್ರೋಲ್ ಫೀಚರ್ಸ್ ಹೊಂದಿರುವ ಹೈ-ಲ್ಯಾಂಡರ್ ಪಿಕ್ಅಪ್ ಮಾದರಿಯು ಆರಂಭಿಕ ಪಿಕ್ಅಪ್ ಮಾದರಿಯನ್ನು ಖರೀದಿ ಬಯುಸುವ ಗ್ರಾಹಕರಿಗಾಗಿ ಸಿದ್ದಪಡಿಸಿದೆ.

Isuzu MU-X 4x4 AT ವೆರಿಯೆಂಟ್ ಬೆಲೆ ರೂ.1.51 ಲಕ್ಷ ಕಡಿತ: ಉಳಿದ ಮಾದರಿಗಳ ಬೆಲೆ ಏರಿಕೆ

ಡಿ-ಕ್ರಾಸ್ ವಿ-ಕ್ರಾಸ್ ಜೆಡ್ ಸರಣಿಯಲ್ಲಿ ಇಸುಝು ಕಂಪನಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಜೆಡ್ 2 ವೀಲ್ಹ್ ಡ್ರೈವ್ ಆಟೋಮ್ಯಾಟಿಕ್, ಜೆಡ್ 4 ವೀಲ್ಹ್ ಡ್ರೈವ್ ಮ್ಯಾನುವಲ್ ಮತ್ತು ಜೆಡ್ ಪ್ರೆಸ್ಟಿಜ್ 4 ವೀಲ್ಹ್ ಡ್ರೈವ್ ಆಟೋಮ್ಯಾಟಿಕ್ ಮಾದರಿಗಳನ್ನು ಒಳಗೊಂಡಿದೆ,

Isuzu MU-X 4x4 AT ವೆರಿಯೆಂಟ್ ಬೆಲೆ ರೂ.1.51 ಲಕ್ಷ ಕಡಿತ: ಉಳಿದ ಮಾದರಿಗಳ ಬೆಲೆ ಏರಿಕೆ

ಈ ಪಿಕ್‌ಅಪ್ ವಾಹನದಲ್ಲಿ ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಟೈಲ್‌ಗೆಟ್ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದ್ದು, ಹೊಸ ಪಿಕ್ಅಪ್ ಎಸ್‌ಯುವಿಯ ಒಳಭಾಗದ ತಾಂತ್ರಿಕ ಅಂಶಗಳಲ್ಲೂ ಬದಲಾವಣೆ ಮಾಡಲಾಗಿದೆ. ಬೆಸ್ ವೆರಿಯೆಂಟ್‌ ಸೇರಿದಂತೆ ಜೆಡ್ ಸರಣಿಯಲ್ಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿದೆ. ಇದರಲ್ಲಿ ಬಿ-ಎಲ್ಇಡಿ ಪ್ರೊಜೆಕ್ಟರ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲೈಟ್ಸ್, 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಸೇರಿದೆ.

Isuzu MU-X 4x4 AT ವೆರಿಯೆಂಟ್ ಬೆಲೆ ರೂ.1.51 ಲಕ್ಷ ಕಡಿತ: ಉಳಿದ ಮಾದರಿಗಳ ಬೆಲೆ ಏರಿಕೆ

ವಿ-ಕ್ರಾಸ್ ಮಾದರಿಯಲ್ಲಿ ಇಸುಝು ಕಂಪನಿಯು ಈ ಹಿಂದಿನ 2.5-ಲೀಟರ್ ಡೀಸೆಲ್ ಮಾದರಿಯನ್ನು ಸ್ಥಗಿತಗೊಳಿಸಲಾಗಿದ್ದು, ಹೈ ಎಂಡ್ ಮಾದರಿಯಲ್ಲಿದ್ದ 1.9-ಲೀಟರ್ 4-ಸಿಲಿಂಡರ್ ಕಾಮನ್ ರೈಲ್ ಡೀಸೆಲ್ ಎಂಜಿನ್‌ ಮಾದರಿಯನ್ನೇ ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಿದೆ.

Isuzu MU-X 4x4 AT ವೆರಿಯೆಂಟ್ ಬೆಲೆ ರೂ.1.51 ಲಕ್ಷ ಕಡಿತ: ಉಳಿದ ಮಾದರಿಗಳ ಬೆಲೆ ಏರಿಕೆ

1.9-ಲೀಟರ್ ಡೀಸೆಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 161-ಬಿಎಚ್‌ಪಿ ಮತ್ತು 360-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಆರಂಭಿಕ ಮಾದರಿಗಳಲ್ಲಿ 2 ವೀಲ್ಹ್ ಡ್ರೈವ್ ಮತ್ತು ಟಾಪ್ ಎಂಡ್ ಮಾದರಿಗಳಲ್ಲಿ ಶಿಫ್ಟ್ ಆನ್-ಫ್ಲೈ 4 ವೀಲ್ಹ್ ಡ್ರೈವ್ ಸಿಸ್ಟಂ ಹೊಂದಿರಲಿದೆ.

Isuzu MU-X 4x4 AT ವೆರಿಯೆಂಟ್ ಬೆಲೆ ರೂ.1.51 ಲಕ್ಷ ಕಡಿತ: ಉಳಿದ ಮಾದರಿಗಳ ಬೆಲೆ ಏರಿಕೆ

ಈ ಹೊಸ ಡಿ-ಮ್ಯಾಕ್ಸ್ ವಿ-ಕ್ರಾಸ್ ಟ್ರಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಕಾಯಿಲ್ ಸ್ಪ್ರಿಂಗ್ ಮತ್ತು ಆಂಟಿ-ರೋಲ್ ಬಾರ್ ಮತ್ತು ಸಾಫ್ಟ್ ರೈಡ್, ಹಿಂಭಾಗದಲ್ಲಿ ಲೀಫ್ ಸ್ಪಿರ್ಗ್ ಡಬಲ್ ವಿಷ್ಬೋನ್ ಅನ್ನು ಒಳಗೊಂಡಿದೆ. ಈ ವಾಹನ ಬ್ರೇಕಿಂಗ್ ಸಿಸ್ಟಂ ಕೂಡಾ ಉತ್ತಮವಾಗಿದ್ದು, ವ್ಯಾಕ್ಯೂಮ್ ಅಸಿಸ್ಟೆಡ್ ಹೈಡ್ರಾಲಿಕ್ ಬ್ರೇಕ್, ಮುಂಭಾಗದಲ್ಲಿ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಹೊಂದಿರಲಿದ್ದು, 3,095 ಎಂಎಂ ಉದ್ದದ ವ್ಹೀಲ್‌ಬೇಸ್‌‌ನೊಂದಿಗೆ 5,295 ಎಂಎಂ ಉದ್ದ, 1,860 ಎಂಎಂ ಅಗಲ ಮತ್ತು 1,840 ಎಂಎಂ ಎತ್ತರ ಹೊಂದಿದೆ.

Isuzu MU-X 4x4 AT ವೆರಿಯೆಂಟ್ ಬೆಲೆ ರೂ.1.51 ಲಕ್ಷ ಕಡಿತ: ಉಳಿದ ಮಾದರಿಗಳ ಬೆಲೆ ಏರಿಕೆ

ಇನ್ನು ಎಂಯು-ಎಕ್ಸ್ ಮಾದರಿಯಲ್ಲಿ 1.9-ಲೀಟರ್ ಡೀಸೆಲ್ ಮಾದರಿಯನ್ನು ಪರಿಚಯಿಸಿದೆ. ಈ ಎಸ್‍ಯುವಿ ಎರಡು ವೆರಿಯೆಂಟ್‌ಗಳೊಂದಿಗೆ 4x2 ಆಟೋಮ್ಯಾಟಿಕ್ ಮತ್ತು 4x4 ಆಟೋಮ್ಯಾಟಿಕ್ ಮಾದರಿಗಳೊಂದಿಗೆ ಫುಲ್ ಸೈಜ್ ಎಸ್‌ಯುವಿ ಮಾರಾಟದಲ್ಲಿ ಗಮನಸೆಳೆಯಲಿದೆ. ಹೊಸ ಎಮಿಷನ್ ಪ್ರೇರಿತ 1.9-ಲೀಟರ್ 4-ಸಿಲಿಂಡರ್ ಕಾಮನ್ ರೈಲ್ ಡೀಸೆಲ್ ಎಂಜಿನ್‌ ಮಾದರಿಯು 161 ಬಿಎಚ್‌ಪಿ ಪವರ್ ಮತ್ತು 360-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ, ಇಸುಝು ಕಂಪನಿಯು ಹೊಸ ಕಾರಿನಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಿದೆ.

Isuzu MU-X 4x4 AT ವೆರಿಯೆಂಟ್ ಬೆಲೆ ರೂ.1.51 ಲಕ್ಷ ಕಡಿತ: ಉಳಿದ ಮಾದರಿಗಳ ಬೆಲೆ ಏರಿಕೆ

ಎಂಯು-ಎಕ್ಸ್ ಮಾದರಿಯಲ್ಲಿ ಪ್ರಯಾಣಿಕರ ಸುರಕ್ಷಿತೆಗಾಗಿ ಆರು ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಸೋ ಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಹಲವಾರು ಹೊಸ ಫೀಚರ್ಸ್ ಗಳನ್ನು ನೀಡಿದ್ದಾರೆ.

Most Read Articles

Kannada
Read more on ಇಸುಝು isuzu
English summary
Isuzu india hiked prices of mu x and d max range for year 2022 details
Story first published: Friday, January 14, 2022, 15:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X