ವಿಶೇಷ ಸೌಲಭ್ಯಗಳನ್ನು ಒಳಗೊಂಡ ಜೀಪ್ ಕಂಪಾಸ್ ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಜೀಪ್ ಕಂಪಾಸ್ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಕಂಪಾಸ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿ ಯಶಸ್ವಿ 5 ವರ್ಷಗಳನ್ನು ಪೂರೈಸಿದ್ದು, 5ನೇ ವರ್ಷದ ಸಂಭ್ರಮಕ್ಕಾಗಿ ಕಂಪನಿಯು ಕಂಪಾಸ್ ಆ್ಯನಿವರ್ಸರಿ ಎಡಿಷನ್ ಬಿಡುಗಡೆ ಮಾಡಿದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಜೀಪ್ ಕಂಪಾಸ್ ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಕಂಪಾಸ್ ಎಸ್‌ಯುವಿಯನ್ನು ಮೊದಲ ಬಾರಿಗೆ 2017ರಲ್ಲಿ ಬಿಡುಗಡೆ ಮಾಡಿದ್ದ ಜೀಪ್ ಕಂಪನಿಯು ಈಗಾಗಲೇ ಹಲವಾರು ಬದಲಾವಣೆಗಳೊಂದಿಗೆ ಪ್ರಮುಖ ಆವೃತ್ತಿಗಳಲ್ಲಿ ಮಾರಾಟಗೊಳಿಸುತ್ತಿದ್ದು, ಇದೀದ 5ನೇ ವರ್ಷದ ಆ್ಯನಿವರ್ಸರಿ ಎಡಿಷನ್ ಬಿಡುಗಡೆ ಮಾಡಿದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಜೀಪ್ ಕಂಪಾಸ್ ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಹೊಸ ಆ್ಯನಿವರ್ಸರಿ ಎಡಿಷನ್ ಮಾದರಿಯು ಹೈ ಎಂಡ್ ಮಾದರಿಯನ್ನು ಆಧರಿಸಿ ಬಿಡುಗಡೆ ಮಾಡಲಾಗಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಆವೃತ್ತಿಯು ರೂ. 24.44 ಲಕ್ಷ ಆರಂಭಿಕ ಬೆಲೆ ಹೊಂದಿದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಜೀಪ್ ಕಂಪಾಸ್ ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಆ್ಯನಿವರ್ಸರಿ ಎಡಿಷನ್‌ನಲ್ಲಿ ಕಂಪನಿಯು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಪ್ರಮುಖ ಫೀಚರ್ಸ್‌ಗಳೊಂದಿಗೆ ಕೆಲವು ಹೆಚ್ಚುವರಿ ಸೌಲಭ್ಯಗಳನ್ನು ನೀಡಿದ್ದು, 5ನೇ ವಾರ್ಷಿಕೋತ್ಸವದ ಬ್ಯಾಡ್ಜಿಂಗ್ ಗಮನಸೆಳೆಯುತ್ತದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಜೀಪ್ ಕಂಪಾಸ್ ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಬ್ಯಾಡ್ಜಿಂಗ್ ಜೊತೆಗೆ ವಿಶೇಷ ಆವೃತ್ತಿಯಲ್ಲಿ ಕಂಪನಿಯು ಮುಂಭಾದಲ್ಲಿನ ಹೊಸ ಆಕರ್ಷಣೆಗಾಗಿ ಬಾಡಿ ಕಲರ್ ಹೊಂದಿರುವ ಸ್ಯಾಟಿನ್ ಗ್ರಾಫೈಟ್ ಕ್ರಿಸ್ಟಲ್ ಫಾಸಿಯಾ, ಫೆಂಡರ್ ಫ್ಲೈರ್, ಆಕ್ಸೆಂಟ್ ಕಲರ್ ಹೊಂದಿರುವ ರೂಫ್ ರೈಲ್ಸ್, ಬಾಡಿ ಕಲರ್ಡ್ ಕ್ಲಾಡಿಂಗ್ ಮತ್ತು ಸಿಲ್ ಮೊಲ್ಡಿಂಗ್, ಗ್ರೇ ಆಕ್ಸೆಂಟ್ ಹೊಂದಿರುವ ಬ್ಯಾಡ್ಜಿಂಗ್, ಗ್ಲಾಸ್ ಬ್ಲ್ಯಾಕ್ ಗ್ರಿಲ್ ಮತ್ತು ಗ್ರೇ ರಿಂಗ್ ನೀಡಲಾಗಿದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಜೀಪ್ ಕಂಪಾಸ್ ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಹೊರ ಭಾಗದಲ್ಲಿ ಮಾತ್ರವಲ್ಲದೆ ಒಳಭಾದ ತಾಂತ್ರಿಕ ಸೌಲಭ್ಯಗಳಲ್ಲೂ ಕೆಲವು ಬದಲಾವಣೆಗಳಾಗಿದ್ದು, ಲೈಟ್ ಟಂಗ್ಸ್ಟನ್ ಆಕ್ಸೆಂಟ್ ಹೊಂದಿರುಲ ಹೊಲಿಗೆಯಿಂದ ಕೂಡಿರುವ ಲೆದರ್ ಸೀಟ್‌ಗಳು, ಸ್ವಯಂಚಾಲಿತ ಡಿಮ್ ರಿಯರ್‌ವ್ಯೂ ಇಂಟಿರಿಯರ್ ಮಿರರ್, ಪಿಯಾನೋ ಬ್ಲ್ಯಾಕ್ ಮತ್ತು ಆನೋಡೈಸ್ಡ್ ಗನ್ ಮೆಟಲ್ ಇಂಟಿರಿಯರ್ ಆಕ್ಸೆಂಟ್ ಹೊಂದಿಲಿದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಜೀಪ್ ಕಂಪಾಸ್ ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಕಂಪಾಸ್ 5ನೇ ವಾರ್ಷಿಕೋತ್ಸವ ಆವೃತ್ತಿಯಲ್ಲಿ ಜೀಪ್ ಕಂಪನಿಯು ಎರಡು ಎಂಜಿನ್ ಆಯ್ಕೆಗಳನ್ನು ನೀಡುತ್ತಿದ್ದು, 4X2 ಕಾನ್ಫಿಗರೇಶನ್‌ನಲ್ಲಿ 1.4-ಲೀಟರ್ ಮಲ್ಟಿ ಏರ್ ಪೆಟ್ರೋಲ್ ಎಂಜಿನ್ ಮಾದರಿಯು 7 ಸ್ಪೀಡ್ ಡಿಡಿಸಿಟಿ ಎಟಿ ಯೊಂದಿಗೆ 2.0-ಲೀಟರ್ ಮಲ್ಟಿಜೆಟ್ ಡೀಸೆಲ್ 6 ಸ್ಪೀಡ್ ಮ್ಯಾನುವಲ್ ಮಾದರಿಯನ್ನು ಹೊಂದಿದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಜೀಪ್ ಕಂಪಾಸ್ ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಇದರ ಹೊರತಾಗಿ 4X4 ಕಾನ್ಫಿಗರೇಶನ್‌ನಲ್ಲಿ 2.0-ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್‌ನಲ್ಲಿ 9-ಸ್ಪೀಡ್ ಆಟೋಮ್ಯಾಟಿಕ್ ಸೆಲ್ಕ್-ಟೆರೈನ್‌ನೊಂದಿಗೆ ಟಾಪ್-ಆಫ್-ಲೈನ್ ಅನ್ನು ಸಹ ಪಡೆಯುತ್ತದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಜೀಪ್ ಕಂಪಾಸ್ ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಇದರಲ್ಲಿ ಪೆಟ್ರೋಲ್ ಎಂಜಿನ್ ಮಾದರಿಯು 163 ಬಿಎಚ್‌ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದರೆ ಡೀಸೆಲ್ ಎಂಜಿನ್ ಮಾಜದರಿಯ 170 ಬಿಎಚ್‌ಪಿ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಜೀಪ್ ಕಂಪಾಸ್ ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಇನ್ನು ಜೀಪ್ ಕಂಪನಿಯು ಮಧ್ಯಮ ಕ್ರಮಾಂಕದ ಪ್ರೀಮಿಯಂ ಎಸ್‌ಯುವಿ ವಿಭಾಗದಲ್ಲಿ ತನ್ನದೆ ಜನಪ್ರಿಯತೆ ಸಾಧಿಸಿದ್ದು, ಹೊಸ ಕಾರು ಮಾದರಿಯೊಂದಿಗೆ ಜೀಪ್ ಇಂಡಿಯಾ ಕಂಪನಿಯು ಇದುವರೆಗೆ ಹಲವಾರು ಮಾರಾಟ ಮೈಲಿಗಲ್ಲುಗಳನ್ನು ಸಾಧಿಸಿದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಜೀಪ್ ಕಂಪಾಸ್ ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಹೊಸ ಕಾರು ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿ 5 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಕಂಪನಿಯು ಸೀಮಿತ ಅವಧಿಗಾಗಿ 5ನೇ ವರ್ಷದ ಆ್ಯನಿವರ್ಸರಿ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿ ಖರೀದಿಗಾಗಿ ಕಂಪನಿಯು ಈಗಾಗಲೇ ಬುಕಿಂಗ್ ಪ್ರಕ್ರಿಯೆಗೂ ಚಾಲನೆ ನೀಡಿದೆ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಜೀಪ್ ಕಂಪಾಸ್ ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಮೊದಲೇ ಹೇಳಿದ ಹಾಗೆ ಇದು ವಿಶೇಷ ಆವೃತ್ತಿಯಾಗಿರುವುದರಿಂದ ಕಂಪನಿಯು ಸೀಮಿತ ಸಂಖ್ಯೆಯಲ್ಲಿ ಮಾತ್ರ ಮಾರಾಟ ಮಾಡಲಿದ್ದು, ಹೊಸ ಕಾರು ಬಿಡುಗಡೆಯ ನಂತರ ನಿಗದಿತ ಸಂಖ್ಯೆಯ ಯುನಿಟ್ ಮಾರಾಟದ ನಂತರ ಹೊಸ ಆವೃತ್ತಿಯು ಲಭ್ಯವಿರುವುದಿಲ್ಲ.

ವಿಶೇಷ ಸೌಲಭ್ಯಗಳನ್ನು ಒಳಗೊಂಡ ಜೀಪ್ ಕಂಪಾಸ್ ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಕಂಪಾಸ್ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಸ್ಪೋರ್ಟ್, ಲ್ಯಾಂಗಿಟ್ಯೂಡ್(ಆಪ್ಷನ್), ಲಿಮಿಟೆಡ್(ಆಪ್ಷನ್), ಮಾಡೆಲ್ ಎಸ್ ಮತ್ತು ನೈಟ್ ಈಗಲ್ ಎನ್ನುವ ಐದು ವೆರಿಯೆಂಟ್‌ಗಳನ್ನು ಹೊಂದಿದ್ದು, ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 18.39 ಲಕ್ಷದಿಂದ ರೂ.29.94 ಲಕ್ಷ ಬೆಲೆ ಹೊಂದಿದೆ.

Most Read Articles

Kannada
Read more on ಜೀಪ್ jeep
English summary
Jeep compass 5th anniversary edition launched in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X