ಒಂದೇ ದಿನದಲ್ಲಿ ಬರೋಬ್ಬರಿ 60 ಮೆರಿಡಿಯನ್ ಕಾರುಗಳನ್ನು ವಿತರಿಸಿದ ಜೀಪ್ ಡೀಲರ್

ಜೀಪ್ ಇಂಡಿಯಾ ಕಂಪನಿಯು ತನ್ನ ಹೊಚ್ಚ ಹೊಸ ಮೆರಿಡಿಯನ್ ಕಾರು ಬಿಡುಗಡೆಯ ಮೂಲಕ ಆಫ್ ರೋಡ್ ಎಸ್‌ಯುವಿ ಪ್ರಿಯರನ್ನು ಸೆಳೆಯುತ್ತಿದ್ದು, ಹೊಸ ಕಾರು ಮಾದರಿಯು ಟೊಯೊಟಾ ಫಾರ್ಚೂನರ್ ಮಾದರಿಗೆ ಪೈಪೋಟಿಯಾಗಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಒಂದೇ ದಿನದಲ್ಲಿ ಬರೋಬ್ಬರಿ 60 ಮೆರಿಡಿಯನ್ ಕಾರುಗಳನ್ನು ವಿತರಿಸಿದ ಜೀಪ್ ಡೀಲರ್

ಹೊಸ ಮೆರಿಡಿಯನ್ ಮಾದರಿಯನ್ನು ಜೀಪ್ ಕಂಪನಿಯು ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಭಾರತದಲ್ಲಿ ನಿರ್ಮಾಣ ಮಾಡಿ ಮಾರಾಟ ಮಾಡುತ್ತಿದ್ದು, ಹೊಸ ಕಾರನ್ನು ಕಳೆದ ಕೆಲ ದಿನಗಳಷ್ಟೇ ವಿತರಣೆ ಆರಂಭಿಸಲಾಗಿದೆ. ಬುಕಿಂಗ್‌ಗೆ ಅನುಗುಣವಾಗಿ ದೇಶಾದ್ಯಂತ ಲಭ್ಯವಿರುವ ತನ್ನ ಪ್ರಮುಖ ಡೀಲರ್ಸ್‌ಗಳಲ್ಲಿ ಹೊಸ ಕಾರಿನ ವಿತರಣೆ ಆರಂಭಿಸಿದ್ದು, ದೆಹಲಿ ಎನ್‌ಸಿಆರ್‌ನಲ್ಲಿರುವ ಲ್ಯಾಂಡ್‌ಮಾರ್ಕ್ ಜೀಪ್ ಮಾರಾಟ ಮಳಿಗೆಯು ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಮೆರಿಡಿಯನ್ ಕಾರುಗಳನ್ನು ವಿತರಣೆ ಮಾಡಿದೆ.

ಒಂದೇ ದಿನದಲ್ಲಿ ಬರೋಬ್ಬರಿ 60 ಮೆರಿಡಿಯನ್ ಕಾರುಗಳನ್ನು ವಿತರಿಸಿದ ಜೀಪ್ ಡೀಲರ್

ಲ್ಯಾಂಡ್‌ಮಾರ್ಕ್ ಜೀಪ್ ಮಾರಾಟ ಮಳಿಗೆಯು ಒಂದೇ ದಿನದಲ್ಲಿ ಸುಮಾರು 60 ಕಾರುಗಳನ್ನು ವಿತರಣೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯ ಕಾರುಗಳನ್ನು ವಿತರಣೆ ಮಾಡುವ ಯೋಜನೆ ಹೊಂದಿದೆಯೆಂತೆ.

ಒಂದೇ ದಿನದಲ್ಲಿ ಬರೋಬ್ಬರಿ 60 ಮೆರಿಡಿಯನ್ ಕಾರುಗಳನ್ನು ವಿತರಿಸಿದ ಜೀಪ್ ಡೀಲರ್

ಹೊಸ ಮೆರಿಡಿಯನ್ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಿಂತಲೂ ಸಾಕಷ್ಟು ಕಡಿಮೆ ಬೆಲೆ ಅಂತರದಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದು, ಬಿಡುಗಡೆಯಾದ ಮೊದಲ ತಿಂಗಳಿನಲ್ಲಿಯೇ ಹೊಸ ಕಾರು ಸುಮಾರು 8 ಸಾವಿರಕ್ಕೂ ಹೆಚ್ಚು ಗ್ರಾಹಕರಿಂದ ಬುಕಿಂಗ್ ಪಡೆದುಕೊಂಡಿದೆ.

ಒಂದೇ ದಿನದಲ್ಲಿ ಬರೋಬ್ಬರಿ 60 ಮೆರಿಡಿಯನ್ ಕಾರುಗಳನ್ನು ವಿತರಿಸಿದ ಜೀಪ್ ಡೀಲರ್

ಮೆರಿಡಿಯನ್ ಕಾರು ಪ್ರತಿಸ್ಪರ್ಧಿ ಮಾದರಿಗಳಾದ ಟೊಯೊಟಾ ಫಾರ್ಚೂನರ್ ಮತ್ತು ಎಂಜಿ ಹೆಕ್ಟರ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದ್ದು, ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಹೊಸ ಕಾರು ಲಿಮಿಟೆಡ್(ಆಪ್ಷನ್) ಮ್ಯಾನುವಲ್, ಲಿಮಿಟೆಡ್ ಆಟೋಮ್ಯಾಟಿಕ್, ಲಿಮಿಟೆಡ್(ಆಪ್ಷನ್) ಆಟೋಮ್ಯಾಟಿಕ್ ಮತ್ತು ಲಿಮಿಟೆಡ್(ಆಪ್ಷನ್) ಆಟೋಮ್ಯಾಟಿಕ್ 4x4 ಎನ್ನುವ ಐದು ವೆರಿಯೆಂಟ್ ಹೊಂದಿದೆ.

ಒಂದೇ ದಿನದಲ್ಲಿ ಬರೋಬ್ಬರಿ 60 ಮೆರಿಡಿಯನ್ ಕಾರುಗಳನ್ನು ವಿತರಿಸಿದ ಜೀಪ್ ಡೀಲರ್

ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 29.90 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 36.95 ಲಕ್ಷ ಬೆಲೆ ಹೊಂದಿದ್ದು, ಮೊದಲ ನಾಲ್ಕು ವೆರಿಯೆಂಟ್‌ಗಳಲ್ಲಿ ಜೀಪ್ ಕಂಪನಿಯ 4x2 ಫ್ರಂಟ್ ವ್ಹೀಲ್ ಡ್ರೈವ್ ಸಿಸ್ಟಂ ನೀಡಿದ್ದರೆ ಟಾಪ್ ಎಂಡ್ ಮಾದರಿಯಲ್ಲಿ ಮಾತ್ರವೇ 4x4 ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಜೋಡಣೆ ಮಾಡಿದೆ.

ಒಂದೇ ದಿನದಲ್ಲಿ ಬರೋಬ್ಬರಿ 60 ಮೆರಿಡಿಯನ್ ಕಾರುಗಳನ್ನು ವಿತರಿಸಿದ ಜೀಪ್ ಡೀಲರ್

ಹೀಗಾಗಿ ಹೊಸ ಕಾರು ಬೆಲೆ ವಿಚಾರವಾಗಿ ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದ್ದು, ಹೊಸ ಕಾರು ಫಾರ್ಚೂನರ್ ಡೀಸೆಲ್ ಮಾದರಿಗಿಂತಲೂ ರೂ. 4.39 ಲಕ್ಷ ಮತ್ತು ಗ್ಲೊಸ್ಟರ್ ಎಸ್‌ಯುವಿಗಿಂತ ರೂ. 4.59 ಲಕ್ಷಕ್ಕೆ ಕಡಿಮೆ ಬೆಲೆ ಹೊಂದಿದೆ.

ಒಂದೇ ದಿನದಲ್ಲಿ ಬರೋಬ್ಬರಿ 60 ಮೆರಿಡಿಯನ್ ಕಾರುಗಳನ್ನು ವಿತರಿಸಿದ ಜೀಪ್ ಡೀಲರ್

ಫುಲ್ ಸೈಜ್ ಎಸ್‌ಯುವಿ ಮಾದರಿಗಳಲ್ಲಿ ಹೆಚ್ಚಿನ ಬೇಡಿಕೆ ಹೊಂದಿದ್ದ ಫೋರ್ಡ್ ಎಂಡೀವರ್ ಮಾದರಿಯು ಸದ್ಯ ಮಾರಾಟಕ್ಕೆ ಲಭ್ಯವಿಲ್ಲದಿರುವುದು ಜೀಪ್ ಮೆರಿಡಿಯನ್ ಮಾದರಿಗೆ ಅನುಕೂಲಕರವಾಗಲಿದ್ದು, ಆಟೋಮ್ಯಾಟಿಕ್ 4x4 ಆಫ್ ರೋಡ್ ಎಸ್‌ಯುವಿ ಕಾರು ಬಯಸುವ ಗ್ರಾಹಕರಿಗೆ ಇದು ಪ್ರತಿಸ್ಪರ್ಧಿ ಮಾದರಿ ಟೊಯೊಟಾ ಫಾರ್ಚೂನರ್‌ಗಿಂತಲೂ ಸಾಕಷ್ಟು ಕಡಿಮೆ ಬೆಲೆ ಹೊಂದಿದೆ.

ಒಂದೇ ದಿನದಲ್ಲಿ ಬರೋಬ್ಬರಿ 60 ಮೆರಿಡಿಯನ್ ಕಾರುಗಳನ್ನು ವಿತರಿಸಿದ ಜೀಪ್ ಡೀಲರ್

ಜೀಪ್ ಮೆರಿಡಿಯನ್ ಮೂಲತಃ ಕಂಪಾಸ್‌ ಕಾರಿನ 7-ಸೀಟರ್ ಆವೃತ್ತಿಯಾಗಿದ್ದು, ಇದು ಈಗಾಗಲೇ ಕಮಾಂಡರ್ ಹೆಸರಿನಲ್ಲಿ ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟಗೊಳ್ಳುತ್ತಿದೆ. ಭಾರತದಲ್ಲಿ ಇದೀಗ ಮೆರಿಡಿಯನ್ ಹೆಸರಿನಲ್ಲಿ ಲಗ್ಗೆಯಿಟ್ಟಿದ್ದು, ಹೊಸ ಕಾರು ಸಂಪೂರ್ಣವಾಗಿ 'ಮೇಡ್-ಇನ್-ಇಂಡಿಯಾ' ಯೋಜನೆ ಅಡಿ ನಿರ್ಮಾಣಗೊಂಡಿದೆ.

ಒಂದೇ ದಿನದಲ್ಲಿ ಬರೋಬ್ಬರಿ 60 ಮೆರಿಡಿಯನ್ ಕಾರುಗಳನ್ನು ವಿತರಿಸಿದ ಜೀಪ್ ಡೀಲರ್

ಮೆರಿಡಿಯನ್‌ ಎಸ್‍ಯುವಿಯಲ್ಲಿ ಜೀಪ್ ಕಂಪನಿಯು ಕಂಪಾಸ್ ಮಾದರಿಯಲ್ಲಿರುವ 2.0 ಲೀಟರ್ ನಾಲ್ಕು-ಸಿಲಿಂಡರ್ ಮಲ್ಟಿಜೆಟ್ ಟರ್ಬೊ ಡೀಸೆಲ್ ಎಂಜಿನ್‌ ಅನ್ನು ಹೊಸ ಮಾದರಿಗಾಗಿ ಟ್ಯೂನ್ ಮಾಡಿದ್ದು, ಈ ಎಂಜಿನ್ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 168 ಬಿಹೆಚ್‍ಪಿ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಒಂದೇ ದಿನದಲ್ಲಿ ಬರೋಬ್ಬರಿ 60 ಮೆರಿಡಿಯನ್ ಕಾರುಗಳನ್ನು ವಿತರಿಸಿದ ಜೀಪ್ ಡೀಲರ್

ಟ್ಯೂನ್ ಮಾಡಲಾದ ಎಂಜಿನ್‌ನಲ್ಲಿ ಕಂಪನಿಯು ಮೈಲ್ಡ್-ಹೈಬ್ರಿಡ್ ಸಿಸ್ಟಂ ಅನ್ನು ಜೋಡಣೆ ಮಾಡಿದ್ದು, ಫ್ರಂಟ್ ವ್ವೀಲ್ ಡ್ರೈವ್ ಮಾದರಿಯಲ್ಲಿ ಮ್ಯಾನುವಲ್ ಮತ್ತು ಆಟೋ ಮ್ಯಾಟಿಕ್ ಮಾದರಿಗಳಿದ್ದರೆ ಆಲ್ ವ್ಹೀಲ್ ಡ್ರೈವ್ ಮಾದರಿಯಲ್ಲಿ ಕೇವಲ ಆಟೋಮ್ಯಾಟಿಕ್ ಮಾದರಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ.

ಒಂದೇ ದಿನದಲ್ಲಿ ಬರೋಬ್ಬರಿ 60 ಮೆರಿಡಿಯನ್ ಕಾರುಗಳನ್ನು ವಿತರಿಸಿದ ಜೀಪ್ ಡೀಲರ್

ಹೊಸ ಎಸ್‍ಯುವಿಯು 4,769 ಎಂಎಂ ಉದ್ದ, 1,859 ಅಗಲ, 1,682 ಎಂಎಂ ಎತ್ತರ ಮತ್ತು 2,794 ಎಂಎಂ ವ್ಹೀಲ‌್‌ಬೆಸ್ ಹೊಂದಿದ್ದು, ಇದು ಸ್ಟ್ಯಾಂಡರ್ಡ್ ಕಂಪಾಸ್ ಮಾದರಿಗಿಂತ ಸುಮಾರು 364 ಎಂಎಂ ಉದ್ದ, 41 ಎಂಎಂ ಅಗಲ ಮತ್ತು 42 ಎಂಎಂ ಎತ್ತರವನ್ನು ಹೊಂದಿದೆ.

ಒಂದೇ ದಿನದಲ್ಲಿ ಬರೋಬ್ಬರಿ 60 ಮೆರಿಡಿಯನ್ ಕಾರುಗಳನ್ನು ವಿತರಿಸಿದ ಜೀಪ್ ಡೀಲರ್

ಮೆರಿಡಿಯನ್‌ನಲ್ಲಿ ಜೀಪ್ ಕಂಪನಿಯು ತನ್ನ ಸಾಂಪ್ರದಾಯಿಕ 7 ಸ್ಲಾಟ್ ಫ್ರಂಟ್ ಗ್ರಿಲ್ ಜೊತೆಗೆ ಸ್ಲಿಕ್ ಎಲ್ಇಡಿ ಹೆಡ್‌ಲ್ಯಾಂಪ್‌‌ಗಳನ್ನು ನೀಡಲಾಗಿದ್ದು, ಬಲಿಷ್ಠ ಬಂಪರ್, ದೊಡ್ಡ ವಿನ್ಯಾಸದ ಏರ್‌ಇನ್‌ಟೆಕ್, ವ್ಹೀಲ್ ಆರ್ಚ್, 18 ಇಂಚಿನ ಅಲಾಯ್ ವ್ಹೀಲ್, ಸ್ಲಿಡ್ ಎಲ್ಇಡಿ ಟೈಲ್‌ಲೈಟ್ ಮತ್ತು ಸೈಡ್ ಸಿಲ್ಲ್ ಜೊತೆಗೆ ಸ್ಪೋರ್ಟಿ ರಿಯರ್ ಬಂಪರ್ ಜೋಡಣೆ ಮಾಡಿದೆ.

ಒಂದೇ ದಿನದಲ್ಲಿ ಬರೋಬ್ಬರಿ 60 ಮೆರಿಡಿಯನ್ ಕಾರುಗಳನ್ನು ವಿತರಿಸಿದ ಜೀಪ್ ಡೀಲರ್

ಮೆರಿಡಿಯನ್ ಎಸ್‍ಯುವಿಯ ಒಳಭಾಗವು ಬ್ರೌನ್ ಥೀಮ್ ಅನ್ನು ಹೊಂದಿದ್ದು, 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದು ಕನೆಕ್ಟ್ ಟೆಕ್ನಾಲಜಿಯೊಂದಿಗೆ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ಆಲ್-ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕನ್ಸೋಲ್, ಸನ್‌ರೂಫ್, ಲೆದರ್ ಅಪ್ಹೋಲ್ಸ್ಟರಿ, ಅಡ್ಜೆಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳು, ಮೆಟಾಲಿಕ್ ಆಕ್ಸೆಂಟ್‌ಗಳೊಂದಿಗೆ ಲೇಯರ್ಡ್ ಡ್ಯಾಶ್‌ಬೋರ್ಡ್ ಹೊಂದಿದೆ.

ಒಂದೇ ದಿನದಲ್ಲಿ ಬರೋಬ್ಬರಿ 60 ಮೆರಿಡಿಯನ್ ಕಾರುಗಳನ್ನು ವಿತರಿಸಿದ ಜೀಪ್ ಡೀಲರ್

ಹಾಗೆಯೇ ಹೊಸ ಕಾರಿನಲ್ಲಿ 8 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, 360 ಡಿಗ್ರಿ ಕ್ಯಾಮೆರಾ, ಟ್ರಾಕ್ಷನ್ ಕಂಟ್ರೊಲ್, ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ ಸೇರಿದಂತೆ 60ಕ್ಕೂ ಹೆಚ್ಚು ಸುರಕ್ಷಾ ಫೀಚರ್ಸ್ ನೀಡಲಾಗಿದೆ.

Most Read Articles

Kannada
Read more on ಜೀಪ್ jeep
English summary
Jeep dealer delivered 60 meridian suvs in single day details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X