India
YouTube

ಐದನೇ ವರ್ಷದ ಸಂಭ್ರಮಕ್ಕಾಗಿ ಕಂಪಾಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಜೀಪ್ ಇಂಡಿಯಾ

ಜೀಪ್ ಇಂಡಿಯಾ ತನ್ನ ಯಶಸ್ವಿ ಕಂಪಾಸ್ ಎಸ್‌ಯುವಿ ಮಾದರಿಯೊಂದಿಗೆ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದ್ದು, ಕಂಪನಿಯು ಭಾರತದಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡಿದ 5 ವರ್ಷಗಳ ಸಂಭ್ರಮಕ್ಕಾಗಿ ಶೀಘ್ರದಲ್ಲಿಯೇ ಸ್ಪೆಷಲ್ ಎಡಿಷನ್ ಬಿಡುಗಡೆಗಾಗಿ ಸಿದ್ದವಾಗಿದೆ.

ಐದನೇ ವರ್ಷದ ಸಂಭ್ರಮಕ್ಕಾಗಿ ಕಂಪಾಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಜೀಪ್ ಇಂಡಿಯಾ

ಭಾರತದಲ್ಲಿ 2017ರಲ್ಲಿ ಮೊದಲ ಬಾರಿಗೆ ಕಂಪಾಸ್ ಎಸ್‌ಯುವಿ ಬಿಡುಗಡೆ ಮಾಡಿದ್ದ ಜೀಪ್ ಕಂಪನಿಯು ಮಧ್ಯಮ ಕ್ರಮಾಂಕದ ಪ್ರೀಮಿಯಂ ಎಸ್‌ಯುವಿ ವಿಭಾಗದಲ್ಲಿ ತನ್ನದೆ ಜನಪ್ರಿಯತೆ ಸಾಧಿಸಿದ್ದು, ಹೊಸ ಕಾರು ಮಾದರಿಯೊಂದಿಗೆ ಜೀಪ್ ಇಂಡಿಯಾ ಕಂಪನಿಯು ಇದುವರೆಗೆ ಹಲವಾರು ಮಾರಾಟ ಮೈಲಿಗಲ್ಲುಗಳನ್ನು ಸಾಧಿಸಿದೆ.

ಐದನೇ ವರ್ಷದ ಸಂಭ್ರಮಕ್ಕಾಗಿ ಕಂಪಾಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಜೀಪ್ ಇಂಡಿಯಾ

ಹೊಸ ಕಾರು ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿ 5 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಕಂಪನಿಯು ಸೀಮಿತ ಅವಧಿಗಾಗಿ 5ನೇ ವರ್ಷದ ಆ್ಯನಿವರ್ಸರಿ ಎಡಿಷನ್ ಬಿಡುಗಡೆ ಮಾಡುತ್ತಿದ್ದು, ಹೊಸ ಮಾದರಿಯ ಟೀಸರ್ ಬಹಿರಂಗಪಡಿಸಲಾಗಿದೆ.

ಐದನೇ ವರ್ಷದ ಸಂಭ್ರಮಕ್ಕಾಗಿ ಕಂಪಾಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಜೀಪ್ ಇಂಡಿಯಾ

ವಿಶೇಷ ಆವೃತ್ತಿಯು ಮಧ್ಯಮ ಕ್ರಮಾಂಕದ ವೆರಿಯೆಂಟ್ ಮತ್ತು ಹೈ ಎಂಡ್ ವೆರಿಯೆಂಟ್ ಆಧರಿಸಿ ನಿರ್ಮಾಣಗೊಂಡಿರಲಿದ್ದು, ಹೊಸ ಕಾರಿನಲ್ಲಿ ಕಂಪನಿಯು ಆ್ಯನಿವರ್ಸರಿ ಬ್ಯಾಡ್ಜ್ ಸೇರಿದಂತೆ ಕೆಲವು ಹೊಸ ಪ್ರೀಮಿಯಂ ಫೀಚರ್ಸ್ ನೀಡಲಿದೆ.

ಐದನೇ ವರ್ಷದ ಸಂಭ್ರಮಕ್ಕಾಗಿ ಕಂಪಾಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಜೀಪ್ ಇಂಡಿಯಾ

ಮೊದಲೇ ಹೇಳಿದ ಹಾಗೆ ಇದು ವಿಶೇಷ ಆವೃತ್ತಿಯಾಗಿರುವುದರಿಂದ ಕಂಪನಿಯು ಸೀಮಿತ ಸಂಖ್ಯೆಯಲ್ಲಿ ಮಾತ್ರ ಮಾರಾಟ ಮಾಡಲಿದ್ದು, ಹೊಸ ಕಾರು ಬಿಡುಗಡೆಯ ನಂತರ ನಿಗದಿತ ಸಂಖ್ಯೆಯ ಯುನಿಟ್ ಮಾರಾಟದ ನಂತರ ಹೊಸ ಆವೃತ್ತಿಯು ಲಭ್ಯವಿರುವುದಿಲ್ಲ.

ಐದನೇ ವರ್ಷದ ಸಂಭ್ರಮಕ್ಕಾಗಿ ಕಂಪಾಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಜೀಪ್ ಇಂಡಿಯಾ

ವಿಶೇಷ ಆವೃತ್ತಿ ಮಾರಾಟ ಮುಕ್ತಾಯದ ನಂತರ ಸ್ಟ್ಯಾಂಡರ್ಡ್ ಮಾದರಿಗಳು ಎಂದಿನಂತೆ ಮಾರಾಟಕ್ಕೆ ಲಭ್ಯವಿರಲಿದ್ದು, ಹೊಸ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ದುಬಾರಿಯಾಗಲಿದೆ.

ಐದನೇ ವರ್ಷದ ಸಂಭ್ರಮಕ್ಕಾಗಿ ಕಂಪಾಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಜೀಪ್ ಇಂಡಿಯಾ

ಕಂಪಾಸ್ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಸ್ಪೋರ್ಟ್, ಲ್ಯಾಂಗಿಟ್ಯೂಡ್(ಆಪ್ಷನ್), ಲಿಮಿಟೆಡ್(ಆಪ್ಷನ್), ಮಾಡೆಲ್ ಎಸ್ ಮತ್ತು ನೈಟ್ ಈಗಲ್ ಎನ್ನುವ ಐದು ವೆರಿಯೆಂಟ್‌ಗಳನ್ನು ಹೊಂದಿದ್ದು, ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 18.39 ಲಕ್ಷದಿಂದ ರೂ.29.94 ಲಕ್ಷ ಬೆಲೆ ಹೊಂದಿದೆ.

ಐದನೇ ವರ್ಷದ ಸಂಭ್ರಮಕ್ಕಾಗಿ ಕಂಪಾಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಜೀಪ್ ಇಂಡಿಯಾ

ಕಂಪಾಸ್‌ನಲ್ಲಿ ಸದ್ಯ ಜೀಪ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡಿದ್ದು, ಪೆಟ್ರೋಲ್ ಆವೃತ್ತಿಯು 163-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಡೀಸೆಲ್ ಮಾದರಿಯು 173-ಬಿಎಚ್‌ಪಿ, 350-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಐದನೇ ವರ್ಷದ ಸಂಭ್ರಮಕ್ಕಾಗಿ ಕಂಪಾಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಜೀಪ್ ಇಂಡಿಯಾ

ಹೊಸ ಕಾರಿನ ಆರಂಭಿಕ ಆವೃತ್ತಿಗಳಲ್ಲಿ 4x2 ಡ್ರೈವ್ ಸಿಸ್ಟಂ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಿರುವ ಜೀಪ್ ಕಂಪನಿಯು ಹೈ ಎಂಡ್ ಮಾದರಿಗಳಾದ ಲಿಮಿಟೆಡ್, ಮಾಡೆಲ್ ಎಸ್ ಮತ್ತು ಆ್ಯನಿವರ್ಸರಿ ಎಡಿಷನ್‌ಗಳಲ್ಲಿ 4x4 ಡ್ರೈವ್ ಸಿಸ್ಟಂ ಸೌಲಭ್ಯವನ್ನು ಜೋಡಣೆ ಮಾಡಲಿದೆ.

ಐದನೇ ವರ್ಷದ ಸಂಭ್ರಮಕ್ಕಾಗಿ ಕಂಪಾಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಜೀಪ್ ಇಂಡಿಯಾ

ಕಂಪಾಸ್ ಫೇಸ್‌ಲಿಫ್ಟ್ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್, 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಮತ್ತು 9-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಒಟ್ಟು 7 ಬಣ್ಣಗಳ ಆಯ್ಕೆ ಹೊಂದಿದ್ದು, ಹೊಸ ಕಾರು ಮಾರುಕಟ್ಟೆಯಲ್ಲಿರುವ ಎಂಜಿ ಹೆಕ್ಟರ್, ಕಿಯಾ ಸೆಲ್ಟೊಸ್, ಹ್ಯುಂಡೈ ಕ್ರೆಟಾ, ಫೋಕ್ಸ್‌ವ್ಯಾಗನ್ ಟಿ ರಾಕ್ ಮತ್ತು ಟಾಟಾ ಹ್ಯಾರಿಯರ್ ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

ಐದನೇ ವರ್ಷದ ಸಂಭ್ರಮಕ್ಕಾಗಿ ಕಂಪಾಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಜೀಪ್ ಇಂಡಿಯಾ

ಹೊಸ ನೈಟ್ ಈಗಲ್ ಎಡಿಷನ್ ಒಳಭಾಗದಲ್ಲಿ, ಪಿಯಾನೋ ಬ್ಲ್ಯಾಕ್ ಅಂಶಗಳೊಂದಿಗೆ ಬ್ಲ್ಯಾಕ್ ವಿನೈಲ್ ಸೀಟ್‌ಗಳೊಂದಿಗೆ ಲೈಟ್ ಟಂಗ್‌ಸ್ಟನ್ ಸ್ಟಿಚಿಂಗ್ ಮತ್ತು ಡೋರ್ ಟ್ರಿಮ್ ಮತ್ತು ಐಪಿಗಾಗಿ ಬ್ಲ್ಯಾಕ್ ನೈಲ್ ಇನ್‌ಸರ್ಟ್‌ಗಳೊಂದಿಗೆ ಬರುತ್ತದೆ.

ಐದನೇ ವರ್ಷದ ಸಂಭ್ರಮಕ್ಕಾಗಿ ಕಂಪಾಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಿದೆ ಜೀಪ್ ಇಂಡಿಯಾ

ಇಂಟಿರಿಯರ್ ನಲ್ಲಿ 10.1-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, 7-ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಡ್ಯುಯಲ್-ಝೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಆಲ್-ಸ್ಪೀಡ್ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಅನ್ನು ಪಡೆಯುತ್ತದೆ.

Most Read Articles

Kannada
Read more on ಜೀಪ್ jeep
English summary
Jeep india planning to launch compass fifth anniversary edition
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X