Just In
- 53 min ago
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 2 hrs ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 16 hrs ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- 18 hrs ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
Don't Miss!
- News
Breaking: ಯುಪಿ ಉಪಚುನಾವಣೆ: ರಾಂಪುರದಲ್ಲಿ ಎಸ್ಪಿ ಅಭ್ಯರ್ಥಿ, ಅಜಂಗಢದಲ್ಲಿ ಬಿಜೆಪಿ ಮುನ್ನಡೆ
- Sports
IND vs IRE: ಮೊದಲ ಟಿ20 ಪಂದ್ಯಕ್ಕೂ ಮುನ್ನ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆ
- Movies
ನವೀನ್ ಸಜ್ಜು ಮೈಸೂರು ಮನೆ ಹೇಗಿದೆ ಗೊತ್ತಾ?
- Technology
LED ಡಿಸ್ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Finance
ಜೂನ್ 26: ಕಚ್ಚಾತೈಲ ದರ ಚೇತರಿಕೆ, ಭಾರತದಲ್ಲಿ ಇಂಧನ ದರ ಆಗಿಲ್ಲ ಏರಿಕೆ!
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಜೂನ್ನಲ್ಲಿ ಆರಂಭವಾಗಲಿದೆ ಫಾರ್ಚೂನರ್ ಪ್ರತಿಸ್ಪರ್ಧಿ ಜೀಪ್ ಮೆರಿಡಿಯನ್ ಎಸ್ಯುವಿ ವಿತರಣೆ
ಜೀಪ್ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಬಹುನೀರಿಕ್ಷಿತ ಮೆರಿಡಿಯನ್ ಎಸ್ಯುವಿ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಭಾರತದಲ್ಲಿ ಫುಲ್ ಸೈಜ್ ಎಸ್ಯುವಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.

ಮೆರಿಡಿಯನ್ ಬಿಡುಗಡೆ ಮಾಡಿರುವ ಜೀಪ್ ಕಂಪನಿಯು ರೂ.50 ಸಾವಿರ ಮುಂಗಡ ಪಾವತಿಯೊಂದಿಗೆ ಬುಕಿಂಗ್ ಅರಂಭಿಸಿದ್ದು, ಹೊಸ ಕಾರಿನ ವಿತರಣೆಯು ಮುಂದಿನ ತಿಂಗಳು ಮೊದಲ ವಾರದಲ್ಲಿ ಆರಂಭವಾಗಲಿದೆ. ಕಂಪನಿಯ ಮಾಹಿತಿ ಮಾಹಿತಿಯ ಪ್ರಕಾರ ಹೊಸ ಕಾರು ಖರೀದಿಗಾಗಿ ಸುಮಾರು 5 ಸಾವಿರ ಗ್ರಾಹಕರು ಈಗಾಗಲೇ ಬುಕಿಂಗ್ ಸಲ್ಲಿಸಿರುವುದಾಗಿ ಹೇಳಿಕೊಂಡಿದ್ದು, ಹೊಸ ಟೊಯೊಟಾ ಫಾರ್ಚೂನರ್ ಮತ್ತು ಎಂಜಿ ಹೆಕ್ಟರ್ ಮಾದರಿಗಳಿಗೆ ಉತ್ತಮ ಪೈಪೋಟಿಯಾಗಲಿದೆ.

ಹೊಸ ಮೆರಿಡಿಯನ್ ಕಾರು ವಿವಿಧ ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಲಿಮಿಟೆಡ್ ಮ್ಯಾನುವಲ್, ಲಿಮಿಟೆಡ್(ಆಪ್ಷನ್) ಮ್ಯಾನುವಲ್, ಲಿಮಿಟೆಡ್ ಆಟೋಮ್ಯಾಟಿಕ್, ಲಿಮಿಟೆಡ್(ಆಪ್ಷನ್) ಆಟೋಮ್ಯಾಟಿಕ್ ಮತ್ತು ಲಿಮಿಟೆಡ್(ಆಪ್ಷನ್) ಆಟೋಮ್ಯಾಟಿಕ್ 4x4 ಎನ್ನುವ ಐದು ವೆರಿಯೆಂಟ್ ಹೊಂದಿದೆ.

ಎಕ್ಸ್ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 29.90 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 36.95 ಲಕ್ಷಕ್ಕೆ ನಿಗದಿಪಡಿಸಿದ್ದು, ಮೊದಲ ನಾಲ್ಕು ವೆರಿಯೆಂಟ್ಗಳಲ್ಲಿ ಜೀಪ್ ಕಂಪನಿಯ 4x2 ಫ್ರಂಟ್ ವ್ಹೀಲ್ ಡ್ರೈವ್ ಸಿಸ್ಟಂ ನೀಡಿದ್ದರೆ ಟಾಪ್ ಎಂಡ್ ಮಾದರಿಯಲ್ಲಿ ಮಾತ್ರವೇ 4x4 ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಜೋಡಣೆ ಮಾಡಿದೆ.

ಹೀಗಾಗಿ ಹೊಸ ಕಾರು ಬೆಲೆ ವಿಚಾರವಾಗಿ ಟೊಯೊಟಾ ಫಾರ್ಚೂನರ್ ಮತ್ತು ಎಂಜಿ ಗ್ಲೊಸ್ಟರ್ ಎಸ್ಯುವಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಹೊಸ ಕಾರು ಫಾರ್ಚೂನರ್ ಡೀಸೆಲ್ ಮಾದರಿಗಿಂತಲೂ ರೂ.4.39 ಲಕ್ಷ ಮತ್ತು ಗ್ಲೊಸ್ಟರ್ ಎಸ್ಯುವಿಗಿಂತ ರೂ.4.59 ಲಕ್ಷಕ್ಕೆ ಕಡಿಮೆ ಬೆಲೆ ಹೊಂದಿದೆ.

ಇದರೊಂದಿಗೆ ಹೊಸ ಕಾರು ಫುಲ್ ಸೈಜ್ ಎಸ್ಯುವಿ ಮಾದರಿಗಳಲ್ಲಿ ಹೆಚ್ಚಿನ ಬೇಡಿಕೆ ಹೊಂದಿದ್ದ ಫೋರ್ಡ್ ಎಂಡೀವರ್ ಮಾದರಿಯು ಸದ್ಯ ಮಾರಾಟಕ್ಕೆ ಲಭ್ಯವಿಲ್ಲದಿರುವುದು ಕೂಡಾ ಜೀಪ್ ಮೆರಿಡಿಯನ್ ಮಾದರಿಗೆ ಅನುಕೂಲಕರವಾಗಲಿದ್ದು, ಆಟೋಮ್ಯಾಟಿಕ್ 4x4 ಆಫ್ ರೋಡ್ ಎಸ್ಯುವಿ ಕಾರು ಬಯಸುವ ಗ್ರಾಹಕರಿಗೆ ಇದು ಪ್ರತಿಸ್ಪರ್ಧಿ ಮಾದರಿಗಿಂತಲೂ ಕಡಿಮೆ ಬೆಲೆಯ ಮಾದರಿಯಾಗಿದೆ.

ಜೀಪ್ ಮೆರಿಡಿಯನ್ ಮೂಲತಃ ಕಂಪಾಸ್ ಕಾರಿನ 7-ಸೀಟರ್ ಆವೃತ್ತಿಯಾಗಿದ್ದು, ಇದು ಈಗಾಗಲೇ ಕಮಾಂಡರ್ ಹೆಸರಿನಲ್ಲಿ ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟಗೊಳ್ಳುತ್ತಿದೆ. ಭಾರತದಲ್ಲಿ ಇದೀಗ ಮೆರಿಡಿಯನ್ ಹೆಸರಿನಲ್ಲಿ ಲಗ್ಗೆಯಿಟ್ಟಿದ್ದು, ಹೊಸ ಕಾರು ಸಂಪೂರ್ಣವಾಗಿ 'ಮೇಡ್-ಇನ್-ಇಂಡಿಯಾ' ಯೋಜನೆ ಅಡಿ ನಿರ್ಮಾಣಗೊಂಡಿದೆ.

ಮೆರಿಡಿಯನ್ ಎಸ್ಯುವಿಯಲ್ಲಿ ಜೀಪ್ ಕಂಪನಿಯು ಕಂಪಾಸ್ ಮಾದರಿಯಲ್ಲಿರುವ 2.0 ಲೀಟರ್ ನಾಲ್ಕು-ಸಿಲಿಂಡರ್ ಮಲ್ಟಿಜೆಟ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಸ ಮಾದರಿಗಾಗಿ ಟ್ಯೂನ್ ಮಾಡಿದ್ದು, ಈ ಎಂಜಿನ್ 6 ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯೊಂದಿಗೆ 168 ಬಿಹೆಚ್ಪಿ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಟ್ಯೂನ್ ಮಾಡಲಾದ ಎಂಜಿನ್ನಲ್ಲಿ ಕಂಪನಿಯು ಮೈಲ್ಡ್-ಹೈಬ್ರಿಡ್ ಸಿಸ್ಟಂ ಅನ್ನು ಜೋಡಣೆ ಮಾಡಿದ್ದು, ಫ್ರಂಟ್ ವ್ವೀಲ್ ಡ್ರೈವ್ ಮಾದರಿಯಲ್ಲಿ ಮ್ಯಾನುವಲ್ ಮತ್ತು ಆಟೋ ಮ್ಯಾಟಿಕ್ ಮಾದರಿಗಳಿದ್ದರೆ ಆಲ್ ವ್ಹೀಲ್ ಡ್ರೈವ್ ಮಾದರಿಯಲ್ಲಿ ಕೇವಲ ಆಟೋಮ್ಯಾಟಿಕ್ ಮಾದರಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ.

ಹೊಸ ಎಸ್ಯುವಿಯು 4,769 ಎಂಎಂ ಉದ್ದ, 1,859 ಅಗಲ, 1,682 ಎಂಎಂ ಎತ್ತರ ಮತ್ತು 2,794 ಎಂಎಂ ವ್ಹೀಲ್ಬೆಸ್ ಹೊಂದಿದ್ದು, ಇದು ಸ್ಟ್ಯಾಂಡರ್ಡ್ ಕಂಪಾಸ್ ಮಾದರಿಗಿಂತ ಸುಮಾರು 364 ಎಂಎಂ ಉದ್ದ, 41 ಎಂಎಂ ಅಗಲ ಮತ್ತು 42 ಎಂಎಂ ಎತ್ತರವನ್ನು ಹೊಂದಿದೆ.

ಮೆರಿಡಿಯನ್ನಲ್ಲಿ ಜೀಪ್ ಕಂಪನಿಯು ತನ್ನ ಸಾಂಪ್ರದಾಯಿಕ 7 ಸ್ಲಾಟ್ ಫ್ರಂಟ್ ಗ್ರಿಲ್ ಜೊತೆಗೆ ಸ್ಲಿಕ್ ಎಲ್ಇಡಿ ಹೆಡ್ಲ್ಯಾಂಪ್ಗಳನ್ನು ನೀಡಲಾಗಿದ್ದು, ಬಲಿಷ್ಠ ಬಂಪರ್, ದೊಡ್ಡ ವಿನ್ಯಾಸದ ಏರ್ಇನ್ಟೆಕ್, ವ್ಹೀಲ್ ಆರ್ಚ್, 18 ಇಂಚಿನ ಅಲಾಯ್ ವ್ಹೀಲ್, ಸ್ಲಿಡ್ ಎಲ್ಇಡಿ ಟೈಲ್ಲೈಟ್ ಮತ್ತು ಸೈಡ್ ಸಿಲ್ಲ್ ಜೊತೆಗೆ ಸ್ಪೋರ್ಟಿ ರಿಯರ್ ಬಂಪರ್ ಜೋಡಣೆ ಮಾಡಿದೆ.

ಮೆರಿಡಿಯನ್ ಎಸ್ಯುವಿಯ ಒಳಭಾಗವು ಬ್ರೌನ್ ಥೀಮ್ ಅನ್ನು ಹೊಂದಿದ್ದು, 10.1-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದು ಕನೆಕ್ಟ್ ಟೆಕ್ನಾಲಜಿಯೊಂದಿಗೆ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ಆಲ್-ಡಿಜಿಟಲ್ ಇನ್ಸ್ಟ್ರೂಮೆಂಟ್ ಕನ್ಸೋಲ್, ಸನ್ರೂಫ್, ಲೆದರ್ ಅಪ್ಹೋಲ್ಸ್ಟರಿ, ಅಡ್ಜೆಸ್ಟ್ ಮಾಡಬಹುದಾದ ಹೆಡ್ರೆಸ್ಟ್ಗಳು, ಮೆಟಾಲಿಕ್ ಆಕ್ಸೆಂಟ್ಗಳೊಂದಿಗೆ ಲೇಯರ್ಡ್ ಡ್ಯಾಶ್ಬೋರ್ಡ್ ಹೊಂದಿದೆ.

ಹಾಗೆಯೇ ಹೊಸ ಕಾರಿನಲ್ಲಿ 8 ಏರ್ಬ್ಯಾಗ್, ಎಬಿಎಸ್ ಜೊತೆ ಇಬಿಡಿ, 360 ಡಿಗ್ರಿ ಕ್ಯಾಮೆರಾ, ಟ್ರಾಕ್ಷನ್ ಕಂಟ್ರೊಲ್, ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ ಸೇರಿದಂತೆ 60ಕ್ಕೂ ಹೆಚ್ಚು ಸುರಕ್ಷಾ ಫೀಚರ್ಸ್ ನೀಡಲಾಗಿದೆ.