India
YouTube

ಬಹುನೀರಿಕ್ಷಿತ 7 ಸೀಟರ್ ಸೌಲಭ್ಯದ ಜೀಪ್ ಮೆರಿಡಿಯನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಜೀಪ್ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಮೆರಿಡಿಯನ್ 7 ಸೀಟರ್ ಫುಲ್ ಸೈಜ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಪ್ರಮುಖ ಐದು ವೆರಿಯೆಂಟ್‌ಗಳಲ್ಲಿ ಮಾರುಕಟ್ಟೆ ಪ್ರವೇಶಿಸಿದೆ.

ಬಹುನೀರಿಕ್ಷಿತ 7 ಸೀಟರ್ ಸೌಲಭ್ಯದ ಜೀಪ್ ಮೆರಿಡಿಯನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಭಾರತದಲ್ಲಿ ಮಧ್ಯಮ ಕ್ರಮಾಂಕದಲ್ಲಿರುವ ಫುಲ್ ಸೈಜ್ ಎಸ್‌ಯುವಿ ಮಾದರಿಗಳಿಗೆ ಪೈಪೋಟಿಯಾಗಿ ಜೀಪ್ ಮೆರಿಡಿಯನ್ ಬಿಡುಗಡೆಗೊಂಡಿದ್ದು, ಹೊಸ ಕಾರು ಹಲವಾರು ವಿಭಿನ್ನತೆಗಳೊಂದಿಗೆ ಗ್ರಾಹಕರನ್ನು ಸೆಳೆಯಲಿದೆ. ಮೆರಿಡಿಯನ್ ಎಸ್‌ಯುವಿ ಜನಪ್ರಿಯ ಎಸ್‌ಯುವಿ ಮಾದರಿಯಾದ ಕಂಪಾಸ್ ಆಧರಿಸಿದ್ದು, ಮೂರು ಸಾಲಿನ ಆಸನ ಸೌಲಭ್ಯದೊಂದಿಗೆ 7 ಸೀಟರ್ ಸೌಲಭ್ಯವನ್ನು ಪಡೆದುಕೊಂಡಿದೆ.

ಬಹುನೀರಿಕ್ಷಿತ 7 ಸೀಟರ್ ಸೌಲಭ್ಯದ ಜೀಪ್ ಮೆರಿಡಿಯನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಹೊಸ ಕಾರಿನ ವಿವಿಧ ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಮೆರಿಡಿಯನ್ ಮಾದರಿಯನ್ನು ಲಿಮಿಟೆಡ್ ಮ್ಯಾನುವಲ್, ಲಿಮಿಟೆಡ್(ಆಪ್ಷನ್) ಮ್ಯಾನುವಲ್, ಲಿಮಿಟೆಡ್ ಆಟೋಮ್ಯಾಟಿಕ್, ಲಿಮಿಟೆಡ್(ಆಪ್ಷನ್) ಆಟೋಮ್ಯಾಟಿಕ್ ಮತ್ತು ಲಿಮಿಟೆಡ್(ಆಪ್ಷನ್) ಆಟೋಮ್ಯಾಟಿಕ್ 4x4 ವೆರಿಯೆಂಟ್ ಹೊಂದಿದೆ.

ಬಹುನೀರಿಕ್ಷಿತ 7 ಸೀಟರ್ ಸೌಲಭ್ಯದ ಜೀಪ್ ಮೆರಿಡಿಯನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಹೊಸ ಕಾರನ್ನು ಎಕ್ಸ್‌ಶೋರೂಂ ಪ್ರಕಾರ ರೂ. 29.90 ಲಕ್ಷದಿಂದ ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ. 36.95 ಲಕ್ಷಕ್ಕೆ ನಿಗದಿಪಡಿಸಿದ್ದು, ಮೊದಲ ನಾಲ್ಕು ವೆರಿಯೆಂಟ್‌ಗಳಲ್ಲಿ ಜೀಪ್ ಕಂಪನಿಯ 4x2 ಫ್ರಂಟ್ ವ್ಹೀಲ್ ಡ್ರೈವ್ ಸಿಸ್ಟಂ ನೀಡಿದ್ದರೆ ಟಾಪ್ ಎಂಡ್ ಮಾದರಿಯಲ್ಲಿ ಮಾತ್ರವೇ 4x4 ಆಲ್ ವ್ಹೀಲ್ ಡ್ರೈವ್ ಸಿಸ್ಟಂ ನೀಡಿದೆ.

ಬಹುನೀರಿಕ್ಷಿತ 7 ಸೀಟರ್ ಸೌಲಭ್ಯದ ಜೀಪ್ ಮೆರಿಡಿಯನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಬೆಲೆ ವಿಚಾರವಾಗಿ ಹೊಸ ಮೆರಿಡಿಯನ್ ಕಾರು ಟೊಯೊಟಾ ಫಾರ್ಚೂನರ್ ಮತ್ತು ಎಂಜಿ ಗ್ಲೊಸ್ಟರ್ ಎಸ್‌ಯುವಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಫಾರ್ಚೂನರ್ ಡೀಸೆಲ್ ಮಾದರಿಗಿಂತಲೂ ರೂ.4.39 ಲಕ್ಷ ಮತ್ತು ಗ್ಲೊಸ್ಟರ್ ಎಸ್‌ಯುವಿಗಿಂತ ರೂ.4.59 ಲಕ್ಷಕ್ಕೆ ಕಡಿಮೆ ಬೆಲೆ ಹೊಂದಿದೆ.

ಬಹುನೀರಿಕ್ಷಿತ 7 ಸೀಟರ್ ಸೌಲಭ್ಯದ ಜೀಪ್ ಮೆರಿಡಿಯನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಜೊತೆಗೆ ಫುಲ್ ಸೈಜ್ ಎಸ್‌ಯುವಿಯಲ್ಲಿ ಹೆಚ್ಚಿನ ಬೇಡಿಕೆ ಹೊಂದಿದ್ದ ಫೋರ್ಡ್ ಎಂಡೀವರ್ ಮಾದರಿಯು ಸದ್ಯ ಮಾರಾಟಕ್ಕೆ ಲಭ್ಯವಿಲ್ಲದಿರುವುದು ಜೀಪ್ ಮೆರಿಡಿಯನ್ ಮಾದರಿಗೆ ಅನುಕೂಲಕರವಾಗಲಿದ್ದು, ಆಟೋಮ್ಯಾಟಿಕ್ 4x4 ಆಫ್ ರೋಡ್ ಎಸ್‌ಯುವಿ ಕಾರು ಬಯಸುವ ಗ್ರಾಹಕರಿಗೆ ಇದು ಪ್ರತಿಸ್ಪರ್ಧಿ ಮಾದರಿಗಿಂತಲೂ ಕಡಿಮೆ ಬೆಲೆಗೆ ಲಭ್ಯವಿದೆ.

ಬಹುನೀರಿಕ್ಷಿತ 7 ಸೀಟರ್ ಸೌಲಭ್ಯದ ಜೀಪ್ ಮೆರಿಡಿಯನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಹೊಸ ಮೆರಿಡಿಯನ್‌ ಎಸ್‍ಯುವಿಯಲ್ಲಿ ಜೀಪ್ ಕಂಪನಿಯು ಕಂಪಾಸ್ ಮಾದರಿಯಲ್ಲಿರುವ 2.0 ಲೀಟರ್ ನಾಲ್ಕು-ಸಿಲಿಂಡರ್ ಮಲ್ಟಿಜೆಟ್ ಟರ್ಬೊ ಡೀಸೆಲ್ ಎಂಜಿನ್‌ ಅನ್ನು ಹೊಸ ಮಾದರಿಗಾಗಿ ಟ್ಯೂನ್ ಮಾಡಿದ್ದು, ಈ ಎಂಜಿನ್ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 168 ಬಿಹೆಚ್‍ಪಿ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಬಹುನೀರಿಕ್ಷಿತ 7 ಸೀಟರ್ ಸೌಲಭ್ಯದ ಜೀಪ್ ಮೆರಿಡಿಯನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಟ್ಯೂನ್ ಮಾಡಲಾದ ಎಂಜಿನ್‌ನಲ್ಲಿ ಕಂಪನಿಯು ಮೈಲ್ಡ್-ಹೈಬ್ರಿಡ್ ಸಿಸ್ಟಂ ಅನ್ನು ಜೋಡಣೆ ಮಾಡಿದ್ದು, ಫ್ರಂಟ್ ವ್ವೀಲ್ ಡ್ರೈವ್ ಮಾದರಿಯಲ್ಲಿ ಮ್ಯಾನುವಲ್ ಮತ್ತು ಆಟೋ ಮ್ಯಾಟಿಕ್ ಮಾದರಿಗಳಿದ್ದರೆ ಆಲ್ ವ್ಹೀಲ್ ಡ್ರೈವ್ ಮಾದರಿಯಲ್ಲಿ ಕೇವಲ ಆಟೋಮ್ಯಾಟಿಕ್ ಮಾದರಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ.

ಬಹುನೀರಿಕ್ಷಿತ 7 ಸೀಟರ್ ಸೌಲಭ್ಯದ ಜೀಪ್ ಮೆರಿಡಿಯನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಹೊಸ ಎಸ್‍ಯುವಿಯು 4,769 ಎಂಎಂ ಉದ್ದ, 1,859 ಅಗಲ, 1,682 ಎಂಎಂ ಎತ್ತರ ಮತ್ತು 2,794 ಎಂಎಂ ವ್ಹೀಲ‌್‌ಬೆಸ್ ಹೊಂದಿದ್ದು, ಇದು ಸ್ಟ್ಯಾಂಡರ್ಡ್ ಕಂಪಾಸ್ ಮಾದರಿಗಿಂತ ಸುಮಾರು 364 ಎಂಎಂ ಉದ್ದ, 41 ಎಂಎಂ ಅಗಲ ಮತ್ತು 42 ಎಂಎಂ ಎತ್ತರವನ್ನು ಹೊಂದಿದೆ.

ಬಹುನೀರಿಕ್ಷಿತ 7 ಸೀಟರ್ ಸೌಲಭ್ಯದ ಜೀಪ್ ಮೆರಿಡಿಯನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಜೀಪ್ ಮೆರಿಡಿಯನ್ ಮೂಲತಃ ಕಂಪಾಸ್‌ 7-ಸೀಟರ್ ಆವೃತ್ತಿಯಾಗಿದ್ದು, ಇದು ಈಗಾಗಲೇ ಕಮಾಂಡರ್ ಹೆಸರಿನಲ್ಲಿ ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ಭಾರತದಲ್ಲಿ ಇದೀಗ ಮೆರಿಡಿಯನ್ ಹೆಸರಿನಲ್ಲಿ ಲಗ್ಗೆಯಿಟ್ಟಿದ್ದು, ಹೊಸ ಸಂಪೂರ್ಣವಾಗಿ 'ಮೇಡ್-ಇನ್-ಇಂಡಿಯಾ' ಮಾದರಿಯಾಗಿ ಅಭಿವೃದ್ದಿಗೊಂಡು ಮಾರಾಟಗೊಳ್ಳಲಿದೆ.

ಬಹುನೀರಿಕ್ಷಿತ 7 ಸೀಟರ್ ಸೌಲಭ್ಯದ ಜೀಪ್ ಮೆರಿಡಿಯನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಹೊಸ ಎಸ್‌ಯುವಿಯಲ್ಲಿ ಜೀಪ್ ಕಂಪನಿಯು ತನ್ನ ಸಾಂಪ್ರದಾಯಿಕ 7 ಸ್ಲಾಟ್ ಫ್ರಂಟ್ ಗ್ರಿಲ್ ಜೊತೆಗೆ ಸ್ಲಿಕ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು, ಬಲಿಷ್ಠ ಬಂಪರ್, ದೊಡ್ಡ ವಿನ್ಯಾಸದ ಏರ್‌ಇನ್‌ಟೆಕ್, ವ್ಹೀಲ್ ಆರ್ಚ್, 18 ಇಂಚಿನ ಅಲಾಯ್ ವ್ಹೀಲ್, ಸ್ಲಿಡ್ ಎಲ್ಇಡಿ ಟೈಲ್‌ಲೈಟ್ ಮತ್ತು ಸೈಡ್ ಸಿಲ್ಲ್ ಜೊತೆಗೆ ಸ್ಪೋರ್ಟಿ ರಿಯರ್ ಬಂಪರ್ ಜೋಡಣೆ ಮಾಡಿದೆ.

ಬಹುನೀರಿಕ್ಷಿತ 7 ಸೀಟರ್ ಸೌಲಭ್ಯದ ಜೀಪ್ ಮೆರಿಡಿಯನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಮೆರಿಡಿಯನ್ ಎಸ್‍ಯುವಿಯ ಒಳಭಾಗವು ಬ್ರೌನ್ ಥೀಮ್ ಅನ್ನು ಹೊಂದಿದ್ದು, 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದು ಕನೆಕ್ಟ್ ಟೆಕ್ನಾಲಜಿಯೊಂದಿಗೆ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ಆಲ್-ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕನ್ಸೋಲ್, ಸನ್‌ರೂಫ್, ಲೆದರ್ ಅಪ್ಹೋಲ್ಸ್ಟರಿ, ಅಡ್ಜೆಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳು, ಮೆಟಾಲಿಕ್ ಆಕ್ಸೆಂಟ್‌ಗಳೊಂದಿಗೆ ಲೇಯರ್ಡ್ ಡ್ಯಾಶ್‌ಬೋರ್ಡ್ ಹೊಂದಿದೆ.

ಬಹುನೀರಿಕ್ಷಿತ 7 ಸೀಟರ್ ಸೌಲಭ್ಯದ ಜೀಪ್ ಮೆರಿಡಿಯನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಹಾಗೆಯೇ ಹೊಸ ಕಾರಿನಲ್ಲಿ 8 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, 360 ಡಿಗ್ರಿ ಕ್ಯಾಮೆರಾ, ಟ್ರಾಕ್ಷನ್ ಕಂಟ್ರೊಲ್, ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ ಸೇರಿದಂತೆ 60ಕ್ಕೂ ಹೆಚ್ಚು ಸುರಕ್ಷಾ ಫೀಚರ್ಸ್ ನೀಡಲಾಗಿದೆ.

ಬಹುನೀರಿಕ್ಷಿತ 7 ಸೀಟರ್ ಸೌಲಭ್ಯದ ಜೀಪ್ ಮೆರಿಡಿಯನ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಈ ಮೂಲಕ ಹೊಸ ಕಾರು ಐಷಾರಾಮಿ ಕಾರು ಚಾಲನಾ ಅನುಭವದೊಂದಿಗೆ ಕಠಿಣವಾದ ಆಫ್ ರೋಡ್ ಪ್ರಯಾಣದಲ್ಲೂ ಹೊಸ ಥ್ರೀಲ್ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
Read more on ಜೀಪ್ jeep
English summary
Jeep meridian suv launched in india at rs 29 90 lakh details
Story first published: Thursday, May 19, 2022, 20:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X