ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕಿಯಾ ಕಂಪನಿ

ಕಿಯಾ ಇಂಡಿಯಾ ಕಂಪನಿಯು ಭಾರತದಲ್ಲಿ ಕಾರು ಉತ್ಪಾದನೆ ಆರಂಭಿಸಿದ ಕೆಲವೇ ವರ್ಷಗಳಲ್ಲಿ ಹಲವಾರು ದಾಖಲೆಗಳಿಗೆ ಕಾರಣವಾಗಿದ್ದು, ಕಂಪನಿಯು ಇದೀಗ ಕಾರುಗಳ ರಫ್ತು ಪ್ರಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ.

ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕಿಯಾ ಕಂಪನಿ

ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಕಾರು ಉತ್ಪಾದನಾ ಘಟಕಗಳನ್ನು ಹೊಂದಿರುವ ಕಿಯಾ ಕಂಪನಿಯು ಭಾರತದಿಂದ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ರಫ್ತು ಸೌಲಭ್ಯವನ್ನು ಹೊಂದಿದ್ದು, ಉತ್ಪಾದನೆ ಆರಂಭಿಸಿದ ಕೇವಲ 3 ವರ್ಷಗಳಲ್ಲಿ ಕಂಪನಿಯು ಇದುವರೆಗೆ ಸುಮಾರು 1.50 ಲಕ್ಷ ಯುನಿಟ್ ಕಾರುಗಳನ್ನು ರಫ್ತುಗೊಳಿಸಿದೆ.

ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕಿಯಾ ಕಂಪನಿ

2019ರ ಮಧ್ಯಂತರದಲ್ಲಿ ಆಂಧ್ರಪ್ರದೇಶದ ಪೆನುಕೊಂಡದಲ್ಲಿರುವ ಹೊಸ ಕಾರು ಉತ್ಪಾದನಾ ಘಟಕದಲ್ಲಿ ಉತ್ಪಾದನೆ ಆರಂಭಿಸಿದ ಕಿಯಾ ಕಂಪನಿಯು ಇದುವರೆಗೆ ಭಾರತದಿಂದ 1,50,395 ಯುನಿಟ್ ಕಾರುಗಳನ್ನು ರಫ್ತುಗೊಳಿಸಿದೆ.

ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕಿಯಾ ಕಂಪನಿ

ಭಾರತದಿಂದ ಸುಮಾರು 95 ರಾಷ್ಟ್ರಗಳಿಗೆ 'ಮೇಡ್ ಇನ್ ಇಂಡಿಯಾ' ಕಾರುಗಳನ್ನು ರಫ್ತು ಮಾಡುತ್ತಿರುವ ಕಿಯಾ ಕಂಪನಿಯು ಸೆಲ್ಟೊಸ್ ಎಸ್‌ಯುವಿಯಿಂದ ಹೆಚ್ಚಿನ ಬೇಡಿಕೆ ಹೊಂದಿದ್ದು, ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಸ ಕಾರು ಮಾದರಿಗಳನ್ನು ರಫ್ತು ಮಾಡುವ ಯೋಜನೆಯಲ್ಲಿದೆ.

ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕಿಯಾ ಕಂಪನಿ

ಹೊಸ ಯೋಜನೆಗಾಗಿ ಕಂಪನಿಯು ಕಾರು ಉತ್ಪಾದನಾ ಘಟಕವನ್ನು ನಿರಂತರವಾಗಿ ವಿಸ್ತರಿಸುತ್ತಿದ್ದು, ಹೊಸ ಕಾರು ಮಾದರಿಗಳು ಕಂಪನಿಗೆ ಉತ್ತಮ ಬೇಡಿಕೆ ತಂದುಕೊಡುತ್ತಿವೆ.

ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕಿಯಾ ಕಂಪನಿ

ಭಾರತದಲ್ಲಿ ಕಾರು ಉತ್ಪಾದನೆ ಆರಂಭಿಸಿದ ನಂತರ ಕಿಯಾ ಇಂಡಿಯಾ ಕಂಪನಿಯು ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದು, ಇದೀಗ ಕಂಪನಿಯು ಅತಿ ಕಡಿಮೆ ಅವಧಿಯಲ್ಲಿ ಬರೋಬ್ಬರಿ 5 ಲಕ್ಷ ಕಾರುಗಳ ಮಾರಾಟ ಮೈಲಿಗಲ್ಲು ಸಹ ಸಾಧಿಸಿದೆ.

ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕಿಯಾ ಕಂಪನಿ

ಕಿಯಾ ಕಂಪನಿಯು ಭಾರತದಲ್ಲಿ ಇದುವರೆಗೆ ಸುಮಾರು 5 ಲಕ್ಷ ಕಾರುಗಳನ್ನು ಮಾರಾಟ ಮಾಡಿದ್ದು, ಪ್ರೀಮಿಯಂ ಕಾರುಗಳ ವಿಭಾಗದಲ್ಲಿ ಮುಂಚೂಣಿ ಸಾಧಿಸುತ್ತಿದೆ. ಸೆಲ್ಟೊಸ್ ಮೂಲಕ ಭಾರತದಲ್ಲಿ ಕಾರು ಮಾರಾಟ ಆರಂಭಿಸಿದ ಕಿಯಾ ಕಂಪನಿಯು ಸದ್ಯ ಸೊನೆಟ್, ಕಾರ್ನಿವಾಲ್ ಮತ್ತು ಕಾರೆನ್ಸ್ ಕಾರುಗಳನ್ನು ಮಾರಾಟ ಮಾಡುತ್ತಿದೆ.

ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕಿಯಾ ಕಂಪನಿ

ಕಿಯಾ ಕಂಪನಿಯು ಸೆಲ್ಟೊಸ್, ಸೊನೆಟ್, ಕಾರ್ನಿವಾಲ್ ಮತ್ತು ಕಾರೆನ್ಸ್ ಮಾದರಿಗಳನ್ನು ಭಾರತದಲ್ಲಿಯೇ ನಿರ್ಮಾಣ ಮಾಡುತ್ತಿದ್ದರೆ ಇತ್ತೀಚೆಗೆ ಬಿಡುಗಡೆ ಮಾಡಲಾದ ಇವಿ6 ಎಲೆಕ್ಟ್ರಿಕ್ ಕಾರು ಮಾದರಿಯನ್ನು ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಂಡು ಮಾರಾಟ ಮಾಡುತ್ತಿದೆ.

ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕಿಯಾ ಕಂಪನಿ

ಇವಿ6 ಹೊರತುಪಡಿಸಿ ಇನ್ನುಳಿದ ನಾಲ್ಕು ಕಾರು ಮಾದರಿಗಳನ್ನು ಭಾರತದಲ್ಲಿಯೇ ನಿರ್ಮಿಸುತ್ತಿರುವ ಕಿಯಾ ಕಂಪನಿಯು ಸೆಗ್ಮೆಂಟ್ ಫಸ್ಟ್ ಫೀಚರ್ಸ್ ಮೂಲಕ ಕಾರು ಮಾರಾಟದಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದು, ಸೆಲ್ಟೊಸ್, ಸೊನೆಟ್ ಮತ್ತು ಕಾರೆನ್ಸ್ ಕಾರುಗಳು ಕಂಪನಿಯ ಮಾರಾಟ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ.

ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕಿಯಾ ಕಂಪನಿ

ಕಿಯಾ ಕಾರುಗಳ ಮಾರಾಟ ಪಟ್ಟಿಯಲ್ಲಿ ಸೆಲ್ಟೊಸ್ ಮತ್ತು ಸೊನೆಟ್ ಕಾರುಗಳೇ ನಾಲ್ಕು ಲಕ್ಷಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡಿದ್ದು, ಇತ್ತೀಚೆಗೆ ಬಿಡುಗಡೆಯಾದ ಕಾರೆನ್ಸ್ ಎಂಯುವಿ ಕೂಡಾ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ.

ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕಿಯಾ ಕಂಪನಿ

ಕಾರ್ನಿವಾಲ್ ಮತ್ತು ಇವಿ6 ಮಾದರಿಗಳು ತುಸು ದುಬಾರಿ ಬೆಲೆ ಹೊಂದಿದ್ದರೂ ಆಯಾ ವಿಭಾಗದಲ್ಲಿ ಉತ್ತಮ ಬೇಡಿಕೆ ಹೊಂದಿದ್ದು, ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆ ಆಧರಿಸಿ ಕಂಪನಿಯು ಉತ್ಪಾದನಾ ಪ್ರಮಾಣವನ್ನು ಹಂತ-ಹಂತವಾಗಿ ಹೆಚ್ಚಳ ಮಾಡುತ್ತಿದೆ.

ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕಿಯಾ ಕಂಪನಿ

ಹೊಸ ಕಾರು ಉತ್ಪಾದನಾ ಘಟಕಕ್ಕಾಗಿ ಆರಂಭದಲ್ಲಿ ರೂ. 8 ಸಾವಿರ ಕೋಟಿ ಹೂಡಿಕೆ ಮಾಡಿದ್ದ ಕಿಯಾ ಕಂಪನಿಯು ಹಂತ-ಹಂತವಾಗಿ ಕಾರು ಉತ್ಪಾದನಾ ಘಟಕ ವಿಸ್ತರಣೆಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಲೇ ಇದ್ದು, ಸೆಲ್ಟೊಸ್ ಮಾದರಿಯನ್ನು ಕಂಪನಿಯು ಭಾರತದಲ್ಲಿ ಮಾತ್ರವಲ್ಲದೇ ಪ್ರಮುಖ ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತುಗೊಳ್ಳುತ್ತಿದೆ.

ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕಿಯಾ ಕಂಪನಿ

ಸೆಲ್ಟೊಸ್ ನಂತರ ಸೊನೆಟ್ ಮತ್ತು ಕಾರೆನ್ಸ್ ಕಾರುಗಳು ಸಹ ಪ್ರಮುಖ ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶಿಸುವ ತವಕದಲ್ಲಿದ್ದು, ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಭಾರೀ ಪ್ರಮಾಣದ ಕಾರು ಉತ್ಪಾದನಾ ಗುರಿ ಸಾಧಿಸುತ್ತಿದೆ.

ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕಿಯಾ ಕಂಪನಿ

ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾದ ಕಿಯಾ ಕಾರೆನ್ಸ್ ಎಂಯುವಿ ಮಾದರಿಯು ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಕಾರೆನ್ಸ್ ಕಾರು ಬಿಡುಗಡೆಯಾದ ಕೆಲವೇ ತಿಂಗಳಿನಲ್ಲಿ ದಾಖಲೆ ಮಟ್ಟದ ಬೇಡಿಕೆ ಪಡೆದುಕೊಂಡಿದೆ.

ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕಿಯಾ ಕಂಪನಿ

ಹೊಸ ಕಾರು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಮಧ್ಯಮ ಕ್ರಮಾಂಕದ ಎಂಪಿವಿ ಮತ್ತು ಎಸ್‌ಯುವಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು, ಹೊಸ ಕಾರು ಪ್ರೀಮಿಯಂ, ಪ್ರೆಸ್ಟಿಜ್, ಪ್ರೆಸ್ಟಿಜ್ ಪ್ಲಸ್, ಲಗ್ಷುರಿ ಮತ್ತು ಲಗ್ಷುರಿ ಪ್ಲಸ್ ಎನ್ನುವ ಐದು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕಿಯಾ ಕಂಪನಿ

ಕಿಯಾ ಕಂಪನಿಯು ಸೆಲ್ಟೊಸ್ ಎಸ್‌ಯುವಿ ಮಾದರಿಯುವಂತೆಯೇ ಹೊಸ ಕಾರೆನ್ಸ್ ಕಾರಿನಲ್ಲೂ 1.5-ಲೀಟರ್ ಸಾಮಾನ್ಯ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಜೋಡಣೆ ಮಾಡಿದ್ದು, ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಈ ವಿಭಾಗದಲ್ಲಿಯೇ ಅತಿ ಹೆಚ್ಚು ಮೈಲೇಜ್ ನೀಡುವ ಮಾದರಿ ಇದಾಗಿದೆ.

Most Read Articles

Kannada
English summary
Kia india achieves new overseas export milestone details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X