2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Kia India

ಕೊರಿಯಾ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಕಿಯಾ ಇಂಡಿಯಾ(Kia India) 2021ರ ಡಿಸೆಂಬರ್ ತಿಂಗಳ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳು ಕಿಯಾ ಕಂಪನಿಯು 7,797 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ.

2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Kia India

ಇದು ಭಾರತದಲ್ಲಿನ ಇತರ ಅನೇಕ ಕಾರು ತಯಾರಕರಿಗೆ ಹೋಲಿಸಿದರೆ ಪ್ರಭಾವಶಾಲಿಯಾಗಿದ್ದರೂ, ಬ್ರ್ಯಾಂಡ್‌ನ ಸ್ವಂತ ಮಾರಾಟದ ಕಾರ್ಯಕ್ಷಮತೆಯನ್ನು ಪರಿಗಣಿಸಿ ಕಡಿಮೆಯಾಗಿದೆ. 2020ರ ಡಿಸೆಂಬರ್ ತಿಂಗಳಿನಲ್ಲಿ 11,818 ಯುನಿಟ್ ಗಳನ್ನು ಮಾರಾಟಗೊಳಿಸಿದ್ದಾರೆ. ಇದನ್ನು ಕಳೆದ ತಿಂಗಳು ಮಾರಾಟಕ್ಕೆ ಹೋಲಿಸಿದರೆ 34 ರಷ್ಟು ಕುಸಿತವನ್ನು ಕಂಡಿದ್ದಾರೆ. ಇನ್ನು 2021ರ ನವೆಂಬರ್ ತಿಂಗಳಿನಲ್ಲಿ 14,214 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.45 ರಷ್ಟು ಮಾರಾಟದಲ್ಲಿ ಕುಸಿತ ಕಂಡಿದೆ.

2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Kia India

2021ರ ವರ್ಷದಲ್ಲಿ, ಅಂದರೆ, ಜನವರಿ ಮತ್ತು ಡಿಸೆಂಬರ್ ತಿಂಗಳುಗಳ ನಡುವೆ, ಕಿಯಾ ಕಂಪನಿಯು ಭಾರತದಲ್ಲಿ ಒಟ್ಟು 1,81,583 ವಾಹನಗಳನ್ನು ಮಾರಾಟ ಮಾಡಿದೆ. ಇದನ್ನು 2020ರ ಮಾರಾಟಕ್ಕೆ ಹೋಲಿಸಿದರೆ ಶೇ.29 ರಷ್ತು ಮಾರಾಟದಲ್ಲಿ ಬೆಳವಣಿಗೆಯನ್ನು ಕಂಡಿದೆ.

2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Kia India

ಕಿಯಾ ಇಂಡಿಯಾ ಕಂಪನಿಯು ಪ್ರಸ್ತುತ ತನ್ನ ಶ್ರೇಣಿಯಲ್ಲಿ ಮೂರು ವಾಹನಗಳನ್ನು ಹೊಂದಿದೆ, ಅವುಗಳೆಂದರೆ ಸೆಲ್ಟೋಸ್, ಕಾರ್ನಿವಲ್ ಮತ್ತು ಸೋನೆಟ್. ಸೆಲ್ಟೋಸ್ ಬ್ರ್ಯಾಂಡ್‌ನ ಮೊದಲ ಕೊಡುಗೆಯಾಗಿದೆ, ಇದನ್ನು 2019 ರಲ್ಲಿ ಪರಿಚಯಿಸಲಾಯಿತು.

2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Kia India

ಇನ್ನು ಕಿಯಾ ಕಂಪನಿಯು 2040ರ ವೇಳೆಗೆ ಸಂಪೂರ್ಣವಾಗಿ ಇವಿ ವಾಹನಗಳನ್ನು ಮಾತ್ರ ಉತ್ಪಾದನೆ ಮಾಡುವುದಾಗಿ ನಿರ್ಣಯ ಕೈಗೊಂಡಿದೆ. ಹೊಸ ಗುರಿಸಾಧನೆಗಾಗಿ ಈಗಿನಿಂದಲೇ ಹೊಸ ಯೋಜನೆಗಳತ್ತ ಗಮನಹರಿಸಿದೆ. 2025ರ ವೇಳೆ ವಿವಿಧ ರಾಷ್ಟ್ರಗಳಲ್ಲಿ ಸುಮಾರು 10ಕ್ಕೂ ಹೆಚ್ಚು ಹೊಸ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Kia India

ಭಾರತದಲ್ಲೂ ಕಿಯಾ ಕಂಪನಿಯು ವಿವಿಧ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ಸೊಲ್, ನಿರೋ ಮತ್ತು ಇವಿ6 ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಸೀಮಿತ ಮಾರುಕಟ್ಟೆಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ಪ್ರಸ್ತುತ ಇವಿ ಮಾದರಿಗಳು ಶೀಘ್ರದಲ್ಲೇ ವಿವಿಧ ರಾಷ್ಟ್ರಗಳಲ್ಲಿ ಮಾರಾಟವಾಗಲಿದೆ.

2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Kia India

ಚಾರ್ಜಿಂಗ್ ಸೌಲಭ್ಯಗಳ ಆಧಾರದ ಮೇಲೆ ಎಲೆಕ್ಟ್ರಿಕ್ ವಾಹನ ಮಾರಾಟವನ್ನು ಕೂಡ ವಿಸ್ತರಿಸುತ್ತಿರುವ ಕಾರು ಕಂಪನಿಗಳು ಹೆಚ್ಚಿನ ಸಂಖ್ಯೆಯ ಸಾರ್ವಜನಿಕ ಬಳಕೆಯ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣಕ್ಕೆ ಎದುರು ನೋಡುತ್ತಿದ್ದು, 2030ರ ವೇಳೆಗೆ ಭಾರತದಲ್ಲಿ ಸುಮಾರು ಶೇ.60 ರಷ್ಟು ಇವಿ ಮಾರಾಟವು ಹೆಚ್ಚಳವಾಗುವ ನೀರಿಕ್ಷೆಯಿದೆ.

2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Kia India

ಇನ್ನು ಕಿಯಾ ಇಂಡಿಯಾ ಕಂಪನಿಯ ಮಾರಾಟದ ದೊಡ್ಡ ಭಾಗವನ್ನು ಅದರ ಎಸ್‍ಯುವಿಗಳಾದ ಸೆಲ್ಟೋಸ್ ಮತ್ತು ಸೊನೆಟ್‌ನಿಂದ ಪಡೆದುಕೊಂಡಿದೆ .ಸೆಲ್ಟೋಸ್ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾದ ಮೊದಲ ಕೊಡುಗೆಯಾಗಿದೆ, ಇನ್ನು ಭಾರತೀಯ ಮಾರುಕಟ್ಟೆಯಲ್ಲಿ 3 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲನ್ನು ಕಳೆದ ವರ್ಷ ಕಿಯಾ ಸಾಧಿಸಿತು.

2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Kia India

ಕಿಯಾ ಇಂಡಿಯಾ 3 ಲಕ್ಷ ಯೂನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ತಲುಪಿದ ಭಾರತದ ಅತಿ ವೇಗದ ಕಾರು ತಯಾರಕವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬ್ಲಾಕ್‌ಬಸ್ಟರ್‌ ಆಗಿರುವ ಕಿಯಾ ಸೆಲ್ಟೋಸ್ ಎಸ್‍ಯುವಿಗೆ ಬೇಡಿಕೆ ಹೆಚ್ಚುತ್ತಿದೆ.ಮಾರಾಟದಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು. ಇನ್ನು ಕಿಯಾ ಸೆಲ್ಟೋಸ್ ಎಸ್‍ಯುವಿಯ ಎರಡು ಲಕ್ಷ ಯೂನಿಟ್‌ಗಳನ್ನು ಮಾರಾಟವಾಗಿ ಹೊಸ ಮೈಲಿಗಲ್ಲನ್ನು ಈಗಗಾಲೇ ಸಾಧಿಸಿದೆ.

2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Kia India

ಕಿಯಾ ಇಂಡಿಯಾ ಕಂಪನಿಯು ತನ್ನ ಹೊಸ ಎಸ್‌ಯುವಿ ಮಾದರಿಯಾದ ಕಾರೆನ್ಸ್ ಮಾದರಿಯನ್ನು ಮುಂದಿನ ತಿಂಗಳು ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಿದೆ. ಹೊಸ ಕಾರು ಬಿಡುಗಡೆಗೂ ಮುನ್ನ ಕಂಪನಿಯು ರೂ. 25 ಸಾವಿರ ಮುಂಗಡ ಹಣದೊಂದಿಗೆ ಅಧಿಕೃತ ಬುಕ್ಕಿಂಗ್ ಆರಂಭಿಸಿದೆ. ಈ ಕಾರು ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭಿಸಿದ ಮೊದಲ ದಿನವೇ ಸುಮಾರು 7,738 ಬುಕ್ಕಿಂಗ್ ಅನ್ನು ಪಡೆದುಕೊಂಡಿತ್ತು. ಈ ಹೊಸ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಮೊದಲ ದಿನವೇ ದಾಖಲೆ ಪ್ರಮಾಣದ ಬುಕ್ಕಿಂಗ್ ಸಂಖ್ಯೆ ಇದಾಗಿದೆ.

2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Kia India

ಹೊಸ ಕಾರು ಫೆಬ್ರವರಿ ಮಧ್ಯಂತರದಲ್ಲಿ ಬಿಡುಗಡೆಯಾಗಲಿದೆ. ಹೊಸ ಕಾರೆನ್ಸ್ ಕಾರು 6 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಲಭ್ಯವಿರುತ್ತದೆ. ಈ ಹೊಸ ಕಾರು ಮೂರು ಸಾಲಿನ ಆಸನ ಸೌಲಭ್ಯಗಳನ್ನು ಹೊಂದಿರುವ ಮಿಡ್ ಸೈಜ್ ಎಸ್‌ಯುವಿ ಮತ್ತು ಎಂಪಿವಿ ಕಾರು ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ. ಇನ್ನು ಕಿಯಾ ಕಂಪನಿಯು ಕಾರು ಮಾರಾಟ ಆರಂಭದಲ್ಲಿ ದಿನಗಳಲ್ಲಿ ಕೆಲವೇ ಕೆಲವು ನಗರಗಳಲ್ಲಿ ಮಾರಾಟ ಸೌಲಭ್ಯವನ್ನು ಹೊಂದಿತ್ತು. ಇದುವರೆಗೆ ಕಂಪನಿಯು ವಿವಿಧ ಹಂತದ ಹೂಡಿಕೆಯೊಂದಿಗೆ ಸುಮಾರು 100 ನಗರಗಳಲ್ಲಿ 180 ಕಾರು ಮಾರಟ ಮಳಿಗೆಗಳನ್ನು ತೆರೆದಿದೆ.

2021ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ Kia India

ಪ್ರೀಮಿಯಂ ಕಾರುಗಳ ಮಾರಾಟ ಹೆಚ್ಚುತ್ತಿರುವುದರಿಂದ ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯುವ ಯೋಜನೆಯಲ್ಲಿದೆ. ಕಂಪನಿಯು ಕೇವಲ ಮಹಾನಗರಗಳಲ್ಲಿ ಮಾತ್ರವಲ್ಲ ಟೈರ್ 1 ಮತ್ತು ಟೈರ್ 2 ನಗರಗಳಲ್ಲೂ ಹೆಚ್ಚಿನ ಮಾರಾಟ ಮಳಿಗೆಗಳನ್ನು ವಿಸ್ತರಿಸುವುದಾಗಿ ಹೇಳಿಕೊಂಡಿದೆ. ಇನ್ನು ಕಿಯಾ ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಮೂಲಕ ಮಾರಾಟವನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತಿದೆ.

Most Read Articles

Kannada
English summary
Kia india registers 34 percent drop in sales december 2021 details
Story first published: Friday, January 21, 2022, 19:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X