ಮೇ ತಿಂಗಳಿನಲ್ಲಿ 18 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಕಿಯಾ ಇಂಡಿಯಾ(Kia India) 2022 ಮೇ ತಿಂಗಳ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳು ಕೊರಿಯಾದ ಕಾರು ತಯಾರಕರು ಒಟ್ಟು 18,718 ಯುನಿಟ್‌ಗಳ ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ.

ಮೇ ತಿಂಗಳಿನಲ್ಲಿ 18 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಹೀಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಐದನೇ-ಅತಿ ಹೆಚ್ಚು ಮಾರಾಟವಾದ ಕಾರು ಬ್ರಾಂಡ್‌ನ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ತಿಂಗಳು ಕಿಯಾ ಕಂಪನಿಯ ಸಾಲಿನಲ್ಲಿ ಹೆಚ್ಚು ಮಾರಾಟವಾದ ಮಾದರಿ ಸೊನೆಟ್ ಆಗಿದೆ. ಈ ಆಮಾದರಿಯ 7,899 ಯುನಿಟ್‌ಗಳು ಮಾರಾಟವಾಗಿವೆ. ಇನ್ನು ಕಳೆದ ತಿಂಗಳಿನಲ್ಲಿ ಕಿಯಾ ಸೆಲ್ಟೋಸ್ ಮಾದರಿಯ 5,953 ಯುನಿಟ್ ಮಾರಾಟವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಮೇ ತಿಂಗಳಿನಲ್ಲಿ 18 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಕಳೆದ ತಿಂಗಳು ಬ್ರ್ಯಾಂಡ್‌ನ ಎಂಪಿವಿಗಳಾದ, ಕಾರೆನ್ಸ್ ಮತ್ತು ಕಾರ್ನಿವಲ್ ಮಾದರಿಗಳು ಕ್ರಮವಾಗಿ 4,612 ಯುನಿಟ್‌ಗಳು ಮತ್ತು 239 ಯುನಿಟ್‌ಗಳ ಮಾರಾಟದ ಅಂಕಿಅಂಶವನ್ನು ನೋಂದಾಯಿಸಿದೆ. ಇನ್ನು ಕಿಯಾ ಕಂಪನಿಯು ಹೊಸ ಇವಿ6 ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಮೇ ತಿಂಗಳಿನಲ್ಲಿ 18 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

2022ರ ಮೊದಲ ಐದು ತಿಂಗಳುಗಳಲ್ಲಿ (ಜನವರಿ 2022 ರಿಂದ ಮೇ 2022 ರವರೆಗೆ), ಕಿಯಾ ಇಂಡಿಯಾ ಒಟ್ಟು 97,796 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ, ಹೀಗಾಗಿ ವರ್ಷದಿಂದ ದಿನಾಂಕದಂದು (YTD) ಶೇಕಡಾ 19 ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸಿದೆ.

ಮೇ ತಿಂಗಳಿನಲ್ಲಿ 18 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಬ್ರಾಂಡ್ ಭಾರತದಲ್ಲಿ 4.5 ಲಕ್ಷ ಕಾರುಗಳ ಸಂಚಿತ ಮಾರಾಟದ ಮೈಲಿಗಲ್ಲನ್ನು ಮೀರಿದೆ ಎಂದು ಘೋಷಿಸಿತು, ಸೊನೆಟ್ ಪರಿಚಯಿಸಿದಾಗಿನಿಂದ ಈ ಮಾದರಿಯು 1.5 ಲಕ್ಷ ಸಂಚಿತ ಮಾರಾಟವನ್ನು ದಾಟಿ ಹೊಸ ಮೈಲಿಗಲ್ಲನ್ನು ದಾಖಲಿಸಿದೆ.

ಮೇ ತಿಂಗಳಿನಲ್ಲಿ 18 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಕಿಯಾ ಇಂಡಿಯಾದ ವಿಪಿ ಮತ್ತು ಮಾರಾಟ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥ ಹರ್ದೀಪ್ ಸಿಂಗ್ ಬ್ರಾರ್ ಅವರು ಮಾತನಾಡಿ, ಇನ್ನೊಂದು ಬಲವಾದ ಮಾರಾಟದ ಕಾರ್ಯಕ್ಷಮತೆಯೊಂದಿಗೆ ನಮ್ಮ ಮಾರಾಟದ ವೇಗವನ್ನು ಉಳಿಸಿಕೊಳ್ಳಲು ನಾವು ಸಂತೋಷಪಡುತ್ತೇವೆ. ನಾವು 19 ಶೇಕಡಾ ಬೆಳೆಯುತ್ತಿದ್ದೇವೆ, ಇದು ಇಡೀ ವಾಹನ ಉದ್ಯಮವನ್ನು ಚಿಪಿ ಕೊರತೆ ಸಮಸ್ಯೆಗಳಿದ್ದರೂ ಸಹ ಉದ್ಯಮದ ಸರಾಸರಿ ಬೆಳವಣಿಗೆಯ ದರಕ್ಕಿಂತ ಹೆಚ್ಚಾಗಿದೆ.

ಮೇ ತಿಂಗಳಿನಲ್ಲಿ 18 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಕಿಯಾ ಈಗ 4.5 ಲಕ್ಷ ಭಾರತೀಯ ಕುಟುಂಬಗಳ ಭಾಗವಾಗಿದೆ, ಮತ್ತು ನಾವು ಇದನ್ನು ದಾಖಲೆಯ ಸಮಯದಲ್ಲಿ ಸಾಧಿಸಿದ್ದೇವೆ, ಇದು ಕಿಯಾ ಬ್ರ್ಯಾಂಡ್‌ನಲ್ಲಿ ಭಾರತೀಯ ಗ್ರಾಹಕರ ನಂಬಿಕೆಗೆ ಸಾಕ್ಷಿಯಾಗಿದೆ" ಎಂದು ಅವರು ಮುಂದುವರಿಸಿದರು. ಮಾರುಕಟ್ಟೆಯ ಮಂದಗತಿ ಮತ್ತು ಲಾಕ್‌ಡೌನ್‌ಗಳ ಸವಾಲುಗಳ ಹೊರತಾಗಿಯೂ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಕಾರ್ ಬ್ರ್ಯಾಂಡ್‌ಗಳಲ್ಲಿ ಕಿಯಾ ಒಂದಾಗಿದೆ ಎಂದು ಹೇಳಿದರು.

ಮೇ ತಿಂಗಳಿನಲ್ಲಿ 18 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಇನ್ನು ಕಿಯಾ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರಮುಖ ಕಾರು ಉತ್ಪನ್ನಗಳ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸುತ್ತಿದೆ. ಕಂಪನಿಯು ಶೀಘ್ರದಲ್ಲಿಯೇ ಸೊನೆಟ್ ಮತ್ತು ಕಾರೆನ್ಸ್ ಮಾದರಿಯನ್ನು ಸಿಎನ್‌ಜಿ ಆವೃತ್ತಿಯಲ್ಲೂ ಬಿಡುಗಡೆಯ ಸುಳಿವು ನೀಡಿದೆ.

ಮೇ ತಿಂಗಳಿನಲ್ಲಿ 18 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಸದ್ಯ ಮಾರುಕಟ್ಟೆಯಲ್ಲಿ ಸಿಎನ್‌ಜಿ ಮಾದರಿಗಳ ಮಾರಾಟವು ಸಾಕಷ್ಟು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಾರುತಿ ಸುಜುಕಿ ಮತ್ತು ಟಾಟಾ ಮೋಟಾರ್ಸ್ ಕಂಪನಿಗಳು ತಮ್ಮ ಪ್ರಮುಖ ಕಾರುಗಳಿಗೆ ಫ್ಯಾಕ್ಟರಿ ಫಿಟೆಡ್ ಸಿಎನ್‌ಜಿ ಕಿಟ್ ಅಳವಡಿಸುತ್ತಿವೆ. ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ)ವಾಹನಗಳು ಹೆಚ್ಚು ಮೈಲೇಜ್ ಖಾತ್ರಿಪಡಿಸುವುದಲ್ಲದೆ ವಾತಾವರಣಕ್ಕೆ ಹೊರಬಿಡುವ ಮಾಲಿನ್ಯದ ಪ್ರಮಾಣವೂ ಕಡಿಮೆ ಆಗಿದೆ,

ಮೇ ತಿಂಗಳಿನಲ್ಲಿ 18 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಇನ್ನು ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳಿಗೆ ಹೋಲಿಸಿದಾಗ ಸಿಎನ್‌ಜಿ ಕಾರುಗಳ ಕಾರ್ಯಕ್ಷಮತೆಯಲ್ಲಿ ಸ್ವಲ್ಪ ಕಡಿಮೆಯಾಗಿರುತ್ತದೆ. ಸಾಮಾನ್ಯ ಇಂಧನ ಚಾಲಿತ ಕಾರಿಗಿಂತಲೂ ಹೆಚ್ಚು ಮೈಲೇಜ್ ಪಡೆಯಲು ಸಿಎನ್‌ಜಿ ಕಾರುಗಳಿಂದ ಸಾಧ್ಯ. ಇವು ಸಾಮಾನ್ಯ ಡೀಸೆಲ್ ಮಾದರಿಗಿಂತಲೂ ಶೇ.30 ರಷ್ಟು ಮೈಲೇಜ್ ನೀಡಲಿದೆ. ಗ್ರಾಹಕರ ಬೇಡಿಕೆಯೆಂತೆ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಸಿಎನ್‌ಜಿ ಪೂರೈಕೆಯನ್ನು ವೇಗಗೊಳಿಸಲಾಗಿದೆ.

ಮೇ ತಿಂಗಳಿನಲ್ಲಿ 18 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆಯು ಹೆಚ್ಚಾಗುತ್ತಿದೆ. ಅಲ್ಲದೇ ದೇಶದಲ್ಲಿ ಇಂಧನ ಬೆಲೆಯು ಕೂಡ ದಾಖಲೆಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದರಿಂದ ಹೆಚ್ಚಿನ ಜನರು ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳ ಕಡೆ ಮೊರೆ ಹೋಗುತ್ತಿದ್ದಾರೆ. ಇದರಿಂದ ಬಹುತೇಕ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲು ಪ್ರಾರಂಭಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ಜನಪ್ರಿಯ ವಾಹನ ತಯಾರಕ ಕಂಪನಿಯು ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳ ಕಡೆ ಗಮನಹರಿಸುತ್ತಿದೆ.

ಮೇ ತಿಂಗಳಿನಲ್ಲಿ 18 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಇದರ ನಡುವೆ ಕಿಯಾ ಇಂಡಿಯಾ ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಕಿಯಾ ಇಂಡಿಯಾವು ಈ ಹೊಸ ವರ್ಷದಲ್ಲಿ ಕೈಗೆಟುಕವ ದರಲ್ಲಿ ಕ್ಯಾರೆನ್ಸ್ ಮೂರು-ಸಾಲಿನ ಯುವಿ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿ ಹೊಸ ಸಂಚಲವನ್ನು ಮೂಡಿಸಿತ್ತು. ಕಿಯಾ ಇಂಡಿಯಾ ತನ್ನ ಮೊದಲ ಎಲೆಕ್ಟ್ರಿಕ್ ವಾಹನವನ್ನು ದೇಶದಲ್ಲಿ ಪರಿಚಯಿಸಲು ಸಿದ್ಧವಾಗಿದೆ. ಈ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು 2022ರ ಜೂನ್ 2 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಮೇ ತಿಂಗಳಿನಲ್ಲಿ 18 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಇದೀಗ ಕಿಯಾ ಕಂಪನಿಯು ಇದೀಗ ಈ ಹೊಸ ಇವಿ6 ಎಲೆಕ್ಟ್ರಿಕ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಈ ಹೊಸ ಎಲೆಕ್ಟ್ರಿಕ್ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ.3 ಲಕ್ಷದ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಈ ಕಾರನ್ನು ಭಾರತದ 12 ನಗರಗಳಲ್ಲಿ 15 ಆಯ್ದ ಡೀಲರ್‌ಶಿಪ್‌ಗಳ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ಈ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಯೊಂದಿಗೆ ಮಾರಾಟದಲ್ಲೆ ಕಂಪನಿಗೆ ಹೆಚ್ಚಿನ ಕೊಡುಗೆ ನೀಡಲಿದೆ.

Most Read Articles

Kannada
English summary
Kia india sells 18718 unit in may 2022 details
Story first published: Wednesday, June 1, 2022, 17:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X