ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಕಿಯಾ ಇಂಡಿಯಾ

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಕಿಯಾ ಇಂಡಿಯಾ(Kia India) 2022 ಜೂನ್ ತಿಂಗಳ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ ಕಂಪನಿಯು 2022ರ ಜೂನ್ ತಿಂಗಳಿನಲ್ಲಿ ಅತ್ಯಧಿಕ ಮಾಸಿಕ ಮಾರಾಟವನ್ನು ಮಾಡಿದೆ.

ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಕಿಯಾ ಇಂಡಿಯಾ

ಕಳೆದ ತಿಂಗಳು ಕೊರಿಯಾದ ಕಾರು ತಯಾರಕರು ಒಟ್ಟು 24,024 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಕಿಯಾ ಕಂಪನಿಯು 15,015 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.60 ಪ್ರತಿಶತದಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇನ್ನು 2022ರ ಮೇ ತಿಂಗಳಿನಲ್ಲಿ ಕಿಯಾ ಕಂಪನಿಯು 18,718 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.28.35 ರಷ್ಟು ಹೆಚ್ಚಾಗಿದೆ.

ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಕಿಯಾ ಇಂಡಿಯಾ

ಕಳೆದ ತಿಂಗಳ ಮಾರಾಟದಲ್ಲಿ ಸೆಲ್ಟೋಸ್, ಕ್ಯಾರೆನ್ಸ್ ಮತ್ತು ಸೋನೆಟ್ ಮಾರಾಟಕ್ಕೆ ಹೆಚ್ಚಿನ ಕೊಡುಗೆ ನೀಡಿದೆ. ಕಾರ್ನಿವಲ್‌ಗೆ ಹೆಚ್ಚಿನ ಬೇಡಿಕೆ ಕಂಡುಬಂದಿಲ್ಲ ಆದರೆ ಇವಿ ಅದರ ಶ್ರೇಣಿಗೆ ಹೊಸದಾಗಿ ಪ್ರವೇಶಿಸಿದೆ

ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಕಿಯಾ ಇಂಡಿಯಾ

2022ರ ಜೂನ್ ತಿಂಗಳಿನಲ್ಲಿ ಕಂಪನಿಯ ಶ್ರೇಣಿಯಲ್ಲಿ ಕಿಯಾ ಸೆಲ್ಟೋಸ್ ಹೆಚ್ಚು ಮಾರಾಟವಾದ ಮಾದರಿಯಾಗಿದೆ. ಕಳೆದ ತಿಂಗಳು ಈ ಮಾದರಿಯ 8,388 ಯುನಿಟ್‌ಗಳು ಮಾರಾಟವಾಗಿತ್ತು. 2021ರ ಜೂನ್ ತಿಂಗಳಿನಲ್ಲಿ ಈ ಮಾದರಿಯ 8,549 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.1.88 ರಷ್ಟು ಕಡಿಮೆಯಾಗಿದೆ. ಸೆಲ್ಟೋಸ್ ಪ್ರಸ್ತುತ ಕಂಪನಿಯ ಶ್ರೇಣಿಯಲ್ಲಿ 34.92 ಶೇಕಡಾ ಪಾಲನ್ನು ಹೊಂದಿದೆ.

ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಕಿಯಾ ಇಂಡಿಯಾ

2022ರ ಸೆಲ್ಟೋಸ್ ಫೇಸ್‌ಲಿಫ್ಟ್ ಇತ್ತೀಚೆಗೆ ಜಾಗತಿಕವಾಗಿ ಪಾದಾರ್ಪಣೆ ಮಾಡಿದೆ. ಇನ್ನು ಕಳೆದ ತಿಂಗಳ ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿ ಕಾರೆನ್ಸ್ 6 ಸೀಟರುಗಳ ಎಂಪಿವಿ ಇದೆ. ಕಳೆದ ತಿಂಗಳು ಈ ಮಾದರಿಯ 4,612 ಯುನಿಟ್‌ಗಳು ಮಾರಾಟವಾಗಿತ್ತು.

ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಕಿಯಾ ಇಂಡಿಯಾ

2022ರ ಜೂನ್ ತಿಂಗಳಿನಲ್ಲಿ ಕಿಯಾ ಸೊನೆಟ್ ಮಾದರಿಯ 7,455 ಯೂನಿಟ್‌ಗಳನ್ನು ಸೇರಿಸಿದೆ. ಇನ್ನು 2021ರ ಜೂನ್ ತಿಂಗಳಿನಲ್ಲಿ 5,963 ಯೂನಿಟ್‌ಗಳಿಗಿಂತ 25.02 ಪ್ರತಿಶತದಷ್ಟು ವಾರ್ಷಿಕ ಬೆಳವಣಿಗೆಯಾಗಿದೆ. ಇದು 1,492 ಯುನಿಟ್ ಪರಿಮಾಣದ ಬೆಳವಣಿಗೆಗೆ ಸಂಬಂಧಿಸಿದೆ ಮತ್ತು ಮೇ ತಿಂಗಳಲ್ಲಿ ನಡೆದ 42.40 ಶೇಕಡಾ ಪಾಲಿನಿಂದ 31.03 ಶೇಕಡಾ ಪಾಲಲು ಕಡಿಮೆಯಾಗಿದೆ.

ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಕಿಯಾ ಇಂಡಿಯಾ

ಇನ್ನು ಕಿಯಾ ಸೊನೆಟ್ ಬಿಡುಗಡೆಯಾದ ಎರಡು ವರ್ಷದೊಳಗೆ ದೇಶೀಯ ಮಾರುಕಟ್ಟೆಯಲ್ಲಿ 1.5 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲನ್ನು ಇತ್ತೀಚೆ ಸಾಧಿಸಿದೆ. ಈ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯು ಭಾರತ ಮಾರುಕಟ್ಟೆಯಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಈ ಎಸ್‍ಯುವಿಯು ಅದರ ಬೆಲೆ ಮತ್ತು ವೈಶಿಷ್ಟ್ಯಗಳ ಕಾರಣದಿಂದಾಗಿ ಸಾಕಷ್ಟು ಗಮನ ಸೆಳೆಯಿತು .

ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಕಿಯಾ ಇಂಡಿಯಾ

ಹೆಚ್ಚು ಸ್ಥಳೀಯವಾಗಿರುವ ಈ ಎಸ್‍ಯುವಿ ಕಳೆದ 21 ತಿಂಗಳುಗಳಲ್ಲಿ ಕಂಪನಿಗೆ ಅಗ್ರ ಮಾರಾಟಗಾರ ಎಂದು ಸಾಬೀತಾಗಿದೆ. ಇದು ಸ್ಥಳೀಯವಾಗಿ ಒಟ್ಟು ಮಾರಾಟದ 32 ಪ್ರತಿಶತಕ್ಕೆ ಕೊಡುಗೆ ನೀಡಿದೆ. 26 ಪ್ರತಿಶತ ಗ್ರಾಹಕರು ಸೊನೆಟ್‌ನ ಟಾಪ್-ಸ್ಪೆಕ್ ಎಕ್ಸ್ ಪ್ಲಸ್ ರೂಪಾಂತರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಕಿಯಾ ಸೊನೆಟ್ ಎಸ್‌ಯುವಿಯ ಆರಂಭಿಕ ಬೆಲೆಯು ರೂ.7.15 ಲಕ್ಷವಾಗಿದೆ.

ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಕಿಯಾ ಇಂಡಿಯಾ

ಈ ಕಿಯಾ ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್‍ಯುವಿಯ ಪೆಟ್ರೋಲ್ ಮತ್ತು ಎರಡು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.2-ಲೀಟರ್ ಯುನಿಟ್ ಮತ್ತು 1.0-ಲೀಟರ್ ಟರ್ಬೊ-ಚಾರ್ಜ್ಡ್ ಪೆಟ್ರೋಲ್ ಅನ್ನು ಹೊಂದಿದೆ. ಇದರಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ 84 ಬಿಹೆಚ್‌ಪಿ ಪವರ್ ಮತ್ತು 115 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್‌ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ

ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಕಿಯಾ ಇಂಡಿಯಾ

ಇನ್ನು ಟಾಪ್ ಸ್ಪೆಕ್ ಮಾದರಿಯಲ್ಲಿರುವ 1.0-ಲೀಟರ್ ಪೆಟ್ರೋಲ್ ಎಂಜಿನ್ 119 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7 ಅಥವಾ 6-ಸ್ಪೀಡ್ ಐಎಂಟಿ ಅನ್ನು ಕೂಡ ಜೋಡಿಸಲಾಗಿದೆ. ಈ ಕಿಯಾ ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್‍ಯುವಿಯ ಡೀಸೆಲ್ ಎಂಜಿನ್ ಬಗ್ಗೆ ಹೇಳುವುದಾದರೆ, 1.5-ಲೀಟರ್ ಡೀಸೆಲ್ ಡಬ್ಲ್ಯುಜಿಟಿ ಎಂಜಿನ್ 99 ಬಿಹೆಚ್‌ಪಿ ಪವರ್ ಮತ್ತು 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ವಿಜಿಟಿ ಎಂಜಿನ್ 114 ಬಿಹೆಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ,

ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಕಿಯಾ ಇಂಡಿಯಾ

ಇನ್ನು ಮಾರಾಟದಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು. ಸೆಲ್ಟೋಸ್ ಯಶಸ್ಸು ದೇಶದಲ್ಲಿ ದಕ್ಷಿಣ ಕೊರಿಯಾದ ವಾಹನ ತಯಾರಕರಾದ ಕಿಯಾಗೆ ಅಡಿಪಾಯ ಹಾಕಿತು. ಈಗ, ಕಿಯಾ ಮಾದರಿಯನ್ನು ತಾಜಾವಾಗಿರಿಸಲು ಮತ್ತು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಸೆಲ್ಟೋಸ್ ಎಸ್‌ಯುವಿಯ ನವೀಕರಿಸಲು ಯೋಜಿಸುತ್ತಿದೆ ಎಂದು ತೋರುತ್ತಿದೆ. ಇತ್ತೀಚೆಗೆ, ಕಿಯಾ ಸೆಲ್ಟೋಸ್ ಎಸ್‍ಯುವಿಯು ಭಾರೀ ಮರೆಮಾಚುವಿಕೆಯೊಂದಿಗೆ ಸ್ಪಾಟ್ ಟೆಸ್ಟ್ ನಡೆಸಿದೆ. ಕಿಯಾ ಸೆಲ್ಟೋಸ್ ಎಸ್‍ಯುವಿಯನ್ನು ಹೊಸ ನವೀಕರಣಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು. ಹೊಸ ನವೀಕರಣಗಳೊಂದಿಗೆ ಸೆಲ್ಟೋಸ್ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

ಜೂನ್ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಕಿಯಾ ಇಂಡಿಯಾ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕಿಯಾ ಕಂಪನಿಯು 2022ರ ಜೂನ್ ತಿಂಗಳಿನಲ್ಲಿ ಅತ್ಯಧಿಕ ಮಾಸಿಕ ಮಾರಾಟವನ್ನು ಮಾಡಿದೆ, ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಕಾರುಗಳ ಮಾರಾಟವು ಹೆಚ್ಚಾಗುತ್ತಿದೆ. ಕಿಯಾ ಕಂಪನಿಯ ಜನಪ್ರಿಯ ಮಾದರಿಗಳ ಬೇಡಿಕೆ ಹೆಚ್ಚಾಗುತ್ತಿದೆ.

Most Read Articles

Kannada
English summary
Kia india sells 24024 unit in june 2022 details
Story first published: Friday, July 1, 2022, 17:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X