ಡೆಲಿವರಿ ಪಡೆದ ದಿನವೇ 3 ಬಾರಿ ಕೈಕೊಟ್ಟ ಕಿಯಾ ಸೆಲ್ಟೋಸ್: ನಿಮ್ಮ ಕಾರು ಬೇಡವೇ ಬೇಡೆಂದ ಮಾಲೀಕ

ಡೆಲಿವರಿ ಪಡೆದ ಹಲವರು ಕಿಯಾ ಗ್ರಾಹಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಹಿಂದೆಯು ಸರ್ವಿಸ್ ಸೆಂಟರ್‌ನಿಂದ ರಿಪೆರಿಯಾಗಿ ಹೊರಬಂದ ನಂತರ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಯು ಭಾರೀ ಸುದ್ದಿಯಾಗಿತ್ತು. ಅಲ್ಲದೇ ಎಲ್ಲಂದರಲ್ಲಿ ಕಾರು ನಿಲ್ಲುತ್ತಿದೆ ಎಂದು ಹಲವೆಡೆ ಕತ್ತೆಗಳಿಗೆ ಕಾರನ್ನು ಕಟ್ಟಿ ಎಳೆಸಿದ್ದರು.

ಡೆಲಿವರಿ ಪಡೆದ ದಿನವೇ 3 ಬಾರಿ ಕೈಕೊಟ್ಟ ಕಿಯಾ ಸೆಲ್ಟೋಸ್: ನಿಮ್ಮ ಕಾರು ಬೇಡವೇ ಬೇಡೆಂದ ಮಾಲೀಕ

ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ಹೊಸ ಕಾರನ್ನು ಡೆಲಿವರಿ ಪಡೆದ ದಿನವೇ ಮೂರು ಬಾರಿ ಕೈಕೊಟ್ಟಿದೆ. ಪುಣೆಯ ಬಾರಾಮತಿಯ ಧೋನೆ ಕಿಯಾ ಡೀಲರ್‌ಶಿಪ್‌ನಿಂದ ಹೊಸ ಕಿಯಾ ಸೆಲ್ಟೋಸ್ ಅನ್ನು ವಿತರಣೆ ಪಡೆದ ಬಾಲಸೊ ಬಬನ್‌ರಾವ್ ಎಂಬುವವರು ಈ ಕುರಿತು ಅಸಮಾಧಾನ ಹೊರಹಾಕಿದ್ದಾರೆ.

ಡೆಲಿವರಿ ಪಡೆದ ದಿನವೇ 3 ಬಾರಿ ಕೈಕೊಟ್ಟ ಕಿಯಾ ಸೆಲ್ಟೋಸ್: ನಿಮ್ಮ ಕಾರು ಬೇಡವೇ ಬೇಡೆಂದ ಮಾಲೀಕ

ಬಲಸೊ ತಮ್ಮ ಹೊಸ ಕಾರನ್ನು ಡೆಲಿವರಿ ಪಡೆಯುತ್ತಿರುವ ಹಿನ್ನೆಲೆ ಸ್ನೇಹಿತರೊಂದಿಗೆ ಡೀಲರ್‌ಶಿಪ್‌ಗೆ ಹೋಗಿದ್ದರು. ಬಳಿಕ ಎಂದಿನಂತೆ ಶೋರೂಂನಲ್ಲಿ ಕೆಂಪು ಬಟ್ಟೆಯನ್ನು ಎಳೆದು ತಮ್ಮಿಷ್ಟದ ಕಾರನ್ನು ಸುಮಾರು 2:30 ಕ್ಕೆ ಹೊರತಂದಿದ್ದಾರೆ. ಆದರೆ ಡೆಲಿವರಿಯಾದ ಕೂಡಲೇ ಸಮಸ್ಯೆ ಶುರುವಾಗಿದೆ. ಹೊಚ್ಚಹೊಸ ಕಿಯಾ ಸೆಲ್ಟೋಸ್ ಸ್ಟಾರ್ಟ್‌ ಆಗಿಲ್ಲ ಎಂದು ಬಾಲಸೊ ದೂರಿದ್ದಾರೆ.

ಡೆಲಿವರಿ ಪಡೆದ ದಿನವೇ 3 ಬಾರಿ ಕೈಕೊಟ್ಟ ಕಿಯಾ ಸೆಲ್ಟೋಸ್: ನಿಮ್ಮ ಕಾರು ಬೇಡವೇ ಬೇಡೆಂದ ಮಾಲೀಕ

ನಂತರ ಸೇಲ್ಸ್ ಮನ್ ಹಾಗೂ ಶಾಖಾ ವ್ಯವಸ್ಥಾಪಕರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಟ್ಯಾಂಕ್‌ನಲ್ಲಿ ಇಂಧನ ಇಲ್ಲ, ಹಾಗಾಗಿಯೇ ಕಾರು ಸ್ಟಾರ್ಟ್ ಆಗುತ್ತಿಲ್ಲ ಎಂದು ಶೋರೂಂ ಸಿಬ್ಬಂದಿ ಕ್ಷಮೆ ಕೇಳಿದ್ದರು. ಆದರೆ ಇಂಧನ ತುಂಬಿದ ನಂತರವೂ ಕಿಯಾ ಸೆಲ್ಟೋಸ್ ಪ್ರಾರಂಭಿಸಲು ನಿರಾಕರಿಸಿದೆ. ನಂತರ ಸೇವಾ ತಂತ್ರಜ್ಞರು ಕಾರನ್ನು ಕಾರ್ಯಾಗಾರಕ್ಕೆ ಕೊಂಡೊಯ್ದಿದ್ದಾರೆ.

ಡೆಲಿವರಿ ಪಡೆದ ದಿನವೇ 3 ಬಾರಿ ಕೈಕೊಟ್ಟ ಕಿಯಾ ಸೆಲ್ಟೋಸ್: ನಿಮ್ಮ ಕಾರು ಬೇಡವೇ ಬೇಡೆಂದ ಮಾಲೀಕ

ಬಳಿಕ ಇಂಧನ ಪೂರೈಕೆ ಮಾರ್ಗಗಳನ್ನು ಪರಿಶೀಲಿಸಿ ಟ್ಯಾಂಕ್‌ನಲ್ಲಿ ಇಂಧನ ಮಟ್ಟವನ್ನು ಅಳೆಯುವ ಇಂಧನ ಫ್ಲೋಟರ್ ಅನ್ನು ಸಹ ತೆಗೆದುಹಾಕಿದ್ದಾರೆ. ನಂತರ ಸೇವಾ ತಂತ್ರಜ್ಞರು ಬ್ಯಾಟರಿಯನ್ನು ಬದಲಾಯಿಸಿದ್ದಾರೆ. ಆದರೂ ಹೊಚ್ಚಹೊಸ ಸೆಲ್ಟೋಸ್ ಸ್ಟಾರ್ಟ್ ಆಗಲೇ ಇಲ್ಲ. ಕೊನೆಗೂ ಸೇವಾ ಕೇಂದ್ರವು ವಾಹನವನ್ನು ಪ್ರಾರಂಭಿಸಲು ಸಾಧ್ಯವಾಗದ ಕಾರಣ ಗ್ರಾಹಕ ಬಲಸೊ ಸುಮಾರು 7 ಗಂಟೆಗೆ ಸೇವಾ ಕೇಂದ್ರದಿಂದ ಹೊರಟುಬಿಟ್ಟರು.

ಡೆಲಿವರಿ ಪಡೆದ ದಿನವೇ 3 ಬಾರಿ ಕೈಕೊಟ್ಟ ಕಿಯಾ ಸೆಲ್ಟೋಸ್: ನಿಮ್ಮ ಕಾರು ಬೇಡವೇ ಬೇಡೆಂದ ಮಾಲೀಕ

ಅದೇ ದಿನ ಸುಮಾರು 7:45 PM ಕ್ಕೆ, ವಾಹನ ಸಿದ್ಧವಾಗಿದೆ ಮರುದಿನ ಬೆಳಿಗ್ಗೆ 9:30 AMಗೆ ಡೀಲರ್‌ಶಿಪ್‌ಗೆ ತಲುಪಿಸುತ್ತೇವೆ ಬಂದು ಡೆಲಿವರಿ ಪಡಿಯಿರಿ ಎಂದು ಶಾಖಾ ವ್ಯವಸ್ಥಾಪಕರಿಂದ ಬಲಸೊಗೆ ಕರೆ ಬಂದಿದೆ. ಆದರೆ ಗ್ರಾಹಕ ಬಲಸೊಗೆ ಮಾತ್ರ ಹೊಸ ಕಾರು ಈ ರೀತಿ ಕೈಕೊಟ್ಟಿರುವುದು ಬೇಸರ ಮೂಡಿಸಿತ್ತು.

ಡೆಲಿವರಿ ಪಡೆದ ದಿನವೇ 3 ಬಾರಿ ಕೈಕೊಟ್ಟ ಕಿಯಾ ಸೆಲ್ಟೋಸ್: ನಿಮ್ಮ ಕಾರು ಬೇಡವೇ ಬೇಡೆಂದ ಮಾಲೀಕ

ಎಂಜಿನ್ ಸದ್ದು ಮಾಡತೊಡಗಿತು

ಮರುದಿನ ಮ್ಯಾನೇಜರ್ ಭರವಸೆ ನೀಡಿದಂತೆ ಗ್ರಾಹಕ ಬಲಸೊ ಸೆಲ್ಟೋಸ್ ಅನ್ನು ಸ್ವೀಕರಿಸಲು 10:45 AM ಗೆ ಡೀಲರ್‌ಶಿಪ್‌ಗೆ ಬಂದಿದ್ದಾರೆ. ಆ ವೇಳೆ ಕಾರಿನ ಎಂಜಿನ್ ವಿಚಿತ್ರವಾದ ಶಬ್ದಗಳನ್ನು ಮಾಡುತ್ತಿದೆ, ಉಳಿದಂತೆ ಎಲ್ಲವೂ ಸರಿಯಿದೆ. ಆದರೆ ಎಂಜಿನ್ ಶಬ್ದದ ಸಮಸ್ಯೆ ಪರಿಹರಿಸಲು ನಮ್ಮ ತಜ್ಞರು ಕೆಲಸ ಮಾಡುತ್ತಿದ್ದಾರೆ ಎಂದು ಶೋರೂಮ್ ಸಿಬ್ಬಂದಿ ತಿಳಿಸಿದ್ದಾರೆ.

ಡೆಲಿವರಿ ಪಡೆದ ದಿನವೇ 3 ಬಾರಿ ಕೈಕೊಟ್ಟ ಕಿಯಾ ಸೆಲ್ಟೋಸ್: ನಿಮ್ಮ ಕಾರು ಬೇಡವೇ ಬೇಡೆಂದ ಮಾಲೀಕ

ಈ ಮಧ್ಯೆ ಶಾಖಾ ವ್ಯವಸ್ಥಾಪಕರು ಗ್ರಾಹಕರಿಗೆ ಕರೆ ಮಾಡಿ, ಸಮಸ್ಯೆಯ ಕುರಿತು ತನಿಖೆ ನಡೆಸಲು ಪುಣೆಯಿಂದ ತಂಡವನ್ನು ಕೋರಿರುವುದಾಗಿ ಹೇಳಿದರು. ಬಳಿಕ ಬಾಲಾಸೊ ಸೆಲ್ಟೋಸ್‌ನಿಂದ ಟೆಸ್ಟ್ ಡ್ರೈವ್ ಪಡೆದು ಪರಿಶೀಲಿಸಿದ್ದಾರೆ. ಬಳಿಕ ಎಲ್ಲವೂ ಓಕೆ ಎಂದು ಮ್ಯಾನೇಜರ್ ಫೋನ್ ಮಾಡಿ ಕಾರ್ ರೆಡಿ ಮಾಡಿ ಬಲಾಸೋ ನಿವಾಸಕ್ಕೆ ತಲುಪಿಸಿದ್ದಾರೆ.

ಡೆಲಿವರಿ ಪಡೆದ ದಿನವೇ 3 ಬಾರಿ ಕೈಕೊಟ್ಟ ಕಿಯಾ ಸೆಲ್ಟೋಸ್: ನಿಮ್ಮ ಕಾರು ಬೇಡವೇ ಬೇಡೆಂದ ಮಾಲೀಕ

ಆದರೆ ಸಮಸ್ಯೆಗಳು ಇನ್ನೂ ಇವೆ ಎಂದು ಗ್ರಾಹಕ ಬಲಸೊ ಗಮನಿಸಿದ್ದರು. ಹಾಗಾಗಿ ಹೆಚ್ಚಿನ ತಪಾಸಣೆಗಾಗಿ ಕಾರನ್ನು ಹಡಪ್ಸರ್ ಸೇವಾ ಕೇಂದ್ರಕ್ಕೆ ತೆಗೆದುಕೊಂಡು ಹೋದರು. ಜುಲೈ 16 ರಂದು ಹಡಪ್ಸರ್ ಸೇವಾ ಕೇಂದ್ರವು ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಲಾಗಿದೆ ಎಂದು ಬಾಲಸಾವೊಗೆ ತಿಳಿಸಿತು.

ಡೆಲಿವರಿ ಪಡೆದ ದಿನವೇ 3 ಬಾರಿ ಕೈಕೊಟ್ಟ ಕಿಯಾ ಸೆಲ್ಟೋಸ್: ನಿಮ್ಮ ಕಾರು ಬೇಡವೇ ಬೇಡೆಂದ ಮಾಲೀಕ

ವಾಹನದ ಇಂಧನ ಮಾರ್ಗವನ್ನು ಬದಲಾಯಿಸಿದ್ದೇವೆ ಎಂದು ಸೇವಾ ಕೇಂದ್ರವು ಹೇಳಿದ ನಂತರ ಬಲಾಸೊ ಕಾರನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ನಾನು ಹೊಸ ಕಾರಿಗೆ ಹಣ ಪಾವತಿಸಿದ್ದೇನೆ, ಬದಲಿ ಮತ್ತು ದುರಸ್ತಿ ಮಾಡಿದ ಭಾಗಗಳನ್ನು ಹೊಂದಿರುವ ವಾಹನವನ್ನು ಸ್ವೀಕರಿಸುವುದಿಲ್ಲ ಎಂದು ಅವರು ವಾದಿಸಿದರು.

ಡೆಲಿವರಿ ಪಡೆದ ದಿನವೇ 3 ಬಾರಿ ಕೈಕೊಟ್ಟ ಕಿಯಾ ಸೆಲ್ಟೋಸ್: ನಿಮ್ಮ ಕಾರು ಬೇಡವೇ ಬೇಡೆಂದ ಮಾಲೀಕ

ಡ್ರೈವಿಂಗ್ ಮಾಡುವಾಗ ಈ ಕಾರಿನಲ್ಲಿ ನನಗೆ ಸಂಪೂರ್ಣ ನಂಬಿಕೆ ಬರುವುದಿಲ್ಲ. ಭವಿಷ್ಯದಲ್ಲಿ ಸಮಸ್ಯೆ ಮರುಕಳಿಸದಂತೆ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ? ತುರ್ತು ಸಮಯದಲ್ಲಿ ಕಾರು ಸ್ಟಾರ್ಟ್ ಆಗದಿದ್ದರೆ ಏನು ಮಾಡಬೇಕು? ಇದು 2 ದಿನಗಳಲ್ಲಿ ಮೂರು ಬಾರಿ ಸಮಸ್ಯೆಯನ್ನು ತಂದೊಡ್ಡಿದೆ ಎಂದು ವಾಗ್ವಾದಕ್ಕಿಳಿದ್ದಾರೆ. ಈ ನಡುವೆ ಡೀಲರ್‌ಶಿಪ್‌ ಅವರು ಕಂಪನಿಯೊಂದಿಗೆ ಚರ್ಚಿಸುತ್ತಿದ್ದು, ಈ ಸಮಸ್ಯೆಯನ್ನು ಯಾವ ರೀತಿ ಪರಿಹರಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಡೆಲಿವರಿ ಪಡೆದ ದಿನವೇ 3 ಬಾರಿ ಕೈಕೊಟ್ಟ ಕಿಯಾ ಸೆಲ್ಟೋಸ್: ನಿಮ್ಮ ಕಾರು ಬೇಡವೇ ಬೇಡೆಂದ ಮಾಲೀಕ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಕೆಟ್ಟ ಉತ್ಪನ್ನಗಳಿಂದ ಗ್ರಾಹಕರನ್ನು ರಕ್ಷಿಸಲು ಯಾವುದೇ ಕಾನೂನು ಇಲ್ಲ. ಗ್ರಾಹಕ ನ್ಯಾಯಾಲಯಗಳಿದ್ದರೂ ಗ್ರಾಹಕರು ದೂರು ನೀಡಬಹುದು ಆದರೆ ವಾಹನವನ್ನು ಹೊಸದರೊಂದಿಗೆ ಬದಲಾಯಿಸಲು ತಯಾರಕರಿಗೆ ನಿರ್ದೇಶಿಸುವ ಯಾವುದೇ ಕಾನೂನು ಇಲ್ಲ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇಂತಹ ಕಾನೂನುಗಳು ಇವೆಯಷ್ಟೆ. ಅಂತಹ ಕಾನೂನುಗಳ ಪ್ರಕಾರ, ಯಾವುದೇ ಸಾಧನ, ಕಾರು, ಟ್ರಕ್ ಅಥವಾ ಮೋಟಾರ್‌ಸೈಕಲ್ ದೋಷಯುಕ್ತವೆಂದು ಕಂಡುಬಂದರೆ ತಕ್ಷಣವೇ ಬದಲಾಯಿಸಬೇಕು ಅಥವಾ ಗ್ರಾಹಕರಿಗೆ ಪರಿಹಾರವನ್ನು ನೀಡಬೇಕಾಗಿರುತ್ತದೆ.

Source: MotorBeam

Most Read Articles

Kannada
English summary
Kia Seltos breakdown over 3 times on the day of delivery Owner upset
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X