ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಇವಿ6 ಜಿಟಿ ಅನಾವರಣಗೊಳಿಸಿದ ಕಿಯಾ

ಕಿಯಾ ಕಂಪನಿಯು ತನ್ನ ಹೊಸ ಇವಿ6 ಎಲೆಕ್ಟ್ರಿಕ್ ಎಸ್‌ಯುವಿ ಮೂಲಕ ಉತ್ತಮ ಬೇಡಿಕೆ ಹೊಂದಿದ್ದು, ಕಂಪನಿಯು ಹೊಸ ಕಾರಿನಲ್ಲಿ ಇದೀಗ ಪರ್ಫಾಮೆನ್ಸ್ ಆವೃತ್ತಿಯನ್ನು ಅನಾವರಣಗೊಳಿಸಿದೆ.

Recommended Video

Kia EV6 ಎಸ್‌ಯುವಿ ಭಾರತದಲ್ಲಿ ಬಿಡುಗಡೆ | Price Rs 59.95 Lakh | Warranty, Deliveries, Variants #Launch

ಇವಿ6 ಮೂಲಕ ಎಲೆಕ್ಟ್ರಿಕ್ ಕಾರು ಮಾರಾಟ ಹೊಸ ಸಂಚಲನ ಮೂಡಿಸಿರುವ ಕಿಯಾ ಕಂಪನಿಯು ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಇವಿ6 ಜಿಟಿ ಆವೃತ್ತಿಯನ್ನು ಪರಿಚಯಿಸುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಇವಿ6 ಜಿಟಿ ಅನಾವರಣಗೊಳಿಸಿದ ಕಿಯಾ

ಇವಿ6 ಮಾದರಿಯ ಮೂಲಕ ಜಾಗತಿಕ ಮಾರುಕಟ್ಟೆಗಳಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವ ಕಿಯಾ ಕಂಪನಿಯು ಪರ್ಫಾಮೆನ್ಸ್ ಪ್ರಿಯರಿಗಾಗಿ ಜಿಟಿ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಆವೃತ್ತಿಯು ಈ ವರ್ಷಾಂತ್ಯಕ್ಕೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಖರೀದಿಗೆ ಲಭ್ಯವಾಗುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಇವಿ6 ಜಿಟಿ ಅನಾವರಣಗೊಳಿಸಿದ ಕಿಯಾ

ಹೊಸ ಇವಿ6 ಜಿಟಿ ಪರ್ಫಾಮೆನ್ಸ್ ಆವೃತ್ತಿಯು 577 ಹಾರ್ಸ್ ಪವರ್ ಮತ್ತು 740 ಎನ್ಎಂ ಟಾರ್ಕ್ ಸಾಮರ್ಥ್ಯವನ್ನು ಹೊಂದಿದ್ದು, ಇದು ಫೋರ್-ವೀಲ್ ಡ್ರೈವ್ ಸೌಲಭ್ಯದೊಂದಿಗೆ ಕೇವಲ 3.4 ಸೆಕೆಂಡುಗಳಲ್ಲಿ ಸೊನ್ನೆಯಿಂದ-60 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಇವಿ6 ಜಿಟಿ ಅನಾವರಣಗೊಳಿಸಿದ ಕಿಯಾ

ಕೆಲವೇ ಸೆಕೆಂಡುಗಳಲ್ಲಿ ಗರಿಷ್ಠ ವೇಗದ ಹೊರತಾಗಿ ಹೊಸ ಕಾರು ಗಂಟೆಗೆ 260 ಕಿ.ಮೀ ಟಾಪ್ ಸ್ಪೀಡ್‌ಗೆ ಸೀಮಿತವಾಗಿದ್ದು, ಜಿಟಿ ಮಾದರಿಯಲ್ಲ ಕಂಪನಿಯು 77.4 kWh ನಿಕಲ್-ಕೋಬಾಲ್ಟ್-ಮ್ಯಾಂಗನೀಸ್ ಬ್ಯಾಟರಿ ಪ್ಯಾಕ್‌ ಜೋಡಣೆ ಮಾಡಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಇವಿ6 ಜಿಟಿ ಅನಾವರಣಗೊಳಿಸಿದ ಕಿಯಾ

ಹೊಸ ಕಾರಿನಲ್ಲಿ 800V ಆರ್ಕಿಟೆಕ್ಚರ್ ಪವರ್‌ಟ್ರೇನ್ ನೀಡಲಾಗಿದ್ದು, 350 kW ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಕೇವಲ 18 ನಿಮಿಷಗಳಲ್ಲಿ ಶೇ.70 ರಷ್ಟು ಚಾರ್ಜಿಂಗ್ ಮೂಲಕ ಗರಿಷ್ಠ ಮಿತಿ ಖಾತ್ರಿಪಡಿಸುತ್ತದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಇವಿ6 ಜಿಟಿ ಅನಾವರಣಗೊಳಿಸಿದ ಕಿಯಾ

ಜಿಟಿ ಆವೃತ್ತಿಯಲ್ಲಿ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸಲು ಸ್ಪೋರ್ಟಿಯರ್ ಆಕ್ಟಿವ್ ಸಸ್ಷೆಂಷನ್, ಇ-ಎಲ್ಎಸ್‌ಡಿ, ದೊಡ್ಡದಾದ ಡಿಸ್ಕ್ ಬ್ರೇಕ್‌ಗಳು, ಜಿಟಿ ಮತ್ತು ಮೈ ನಂತಹ ಹೆಚ್ಚುವರಿ ಡ್ರೈವಿಂಗ್ ಮೋಡ್‌ಗಳನ್ನು ಸಹ ಪಡೆಯುತ್ತದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಇವಿ6 ಜಿಟಿ ಅನಾವರಣಗೊಳಿಸಿದ ಕಿಯಾ

ಜೊತೆಗೆ ದೊಡ್ಡದಾದ 21-ಇಂಚಿನ ಚಕ್ರಗಳು, ಮುಂಭಾಗದ ಬಂಪರ್‌ನಲ್ಲಿ ಲಂಬವಾದ ಕ್ರೋಮ್ ಉಚ್ಚಾರಣೆಗಳು, ಹಿಂಭಾಗದ ಬಂಪರ್‌ನಲ್ಲಿ ಲಂಬವಾದ ಪ್ರತಿಫಲಕಗಳು ಮತ್ತು ನಿಯಾನ್ ಬಣ್ಣದ ಬ್ರೇಕ್ ಕ್ಯಾಲಿಪರ್‌ಗಳಂತಹ ಹಲವಾರು ಕಾಸ್ಮೆಟಿಕ್ ನವೀಕರಣಗಳನ್ನು ಪಡೆದುಕೊಂಡಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಇವಿ6 ಜಿಟಿ ಅನಾವರಣಗೊಳಿಸಿದ ಕಿಯಾ

ಆದರೆ ಕ್ಯಾಬಿನ್‌ ಒಳಗಿನ ಬದಲಾವಣೆಗಳು ಹೊಸ ಬಕೆಟ್ ಸೀಟ್‌ಗಳಿಗೆ ಸೀಮಿತವಾಗಿರುವುದು ಗ್ರಾಹಕರನ್ನು ನಿರಾಶೆಗೊಳಿಸಬಹುದಾಗಿದ್ದು, ಹೊಸ ಮಾದರಿಯು ಸ್ಟ್ಯಾಂಡರ್ಡ್ ಮಾದರಿಗಳಿಂತಲೂ ತುಸು ದುಬಾರಿಯಾಗಲಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಇವಿ6 ಜಿಟಿ ಅನಾವರಣಗೊಳಿಸಿದ ಕಿಯಾ

ಹೊಸ ಮಾದರಿಯು ಸದ್ಯ ಭಾರತದಲ್ಲಿ ಬಿಡುಗಡೆಯಾಗುವ ಬಗೆಗೆ ಯಾವುದೇ ಸಾಧ್ಯತೆಗಳಿಲ್ಲವಾದರೂ ಮುಂಬರುವ ವರ್ಷಗಳಲ್ಲಿ ಬಿಡುಗಡೆಯ ನೀರಿಕ್ಷೆಗಳಿದ್ದು, ಭಾರತದಲ್ಲಿ ಸದ್ಯಕ್ಕೆ ಸ್ಟ್ಯಾಂಡರ್ಡ್ ಇವಿ6 ಮಾದರಿಯು ಮಾತ್ರ ಖರೀದಿಗೆ ಲಭ್ಯವಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಇವಿ6 ಜಿಟಿ ಅನಾವರಣಗೊಳಿಸಿದ ಕಿಯಾ

ಇವಿ6 ಮಾದರಿಯು ಭಾರತದಲ್ಲಿ ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಿದ್ದು, ಜಿಟಿ ಲೈನ್ ಫ್ರಂಟ್ ವ್ಹೀಲ್ ಡ್ರೈವ್ ವೆರಿಯೆಂಟ್ ಎಕ್ಸ್‌ಶೋರೂಂ ಪ್ರಕಾರ ರೂ. 59.95 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ವೆರಿಯೆಂಟ್ ಜಿಟಿ ಲೈನ್ ಆಲ್ ವ್ಹೀಲ್ ಡ್ರೈವ್ ಮಾದರಿಯು ರೂ. 64.95 ಲಕ್ಷ ಬೆಲೆ ಹೊಂದಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಇವಿ6 ಜಿಟಿ ಅನಾವರಣಗೊಳಿಸಿದ ಕಿಯಾ

ಹೊಸ ಇವಿ6 ಎಲೆಕ್ಟ್ರಿಕ್ ಕಾರು ಎಲೆಕ್ಟ್ರಿಕ್-ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್(E-GMP) ಅನ್ನು ಆಧರಿಸಿ ನಿರ್ಮಾಣಗೊಂಡಿದ್ದು, ಇದು ಬ್ರ್ಯಾಂಡ್‌ನ ಭವಿಷ್ಯದ ಶ್ರೇಣಿಯ ಎಲೆಕ್ಟ್ರಿಕ್ ಕೊಡುಗೆಗಳ ಆಧಾರವಾಗಿದೆ. ಹೊಸ ಕಾರಿನಲ್ಲಿ ಕಂಪನಿಯು 77.4kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಅತ್ಯಧಿಕ ಮೈಲೇಜ್ ನೀಡಿದ್ದು, ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 528 ಕಿ.ಮೀ ಮೈಲೇಜ್ ರೇಂಜ್ ಖಚಿತಪಡಿಸುತ್ತದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಇವಿ6 ಜಿಟಿ ಅನಾವರಣಗೊಳಿಸಿದ ಕಿಯಾ

ಹೊಸ ಕಾರಿನ ಬ್ಯಾಟರಿ ಪ್ಯಾಕ್ ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದ್ದು, ಸೂಪರ್ ಚಾರ್ಜಿಂಗ್ ಮೂಲಕ ಕೇವಲ 4.5 ನಿಮಿಷಗಳ ಚಾರ್ಜಿಂಗ್ ಮೂಲಕ ಕನಿಷ್ಠ 100 ಕಿ.ಮೀ ಕ್ರಮಿಸುವಷ್ಟು ಚಾರ್ಜ್ ಮಾಡಬಹುದು. ಜೊತೆಗೆ ಹೊಸ ಕಾರಿನಲ್ಲಿ 350kW ಫಾಸ್ಟ್ ಚಾರ್ಜರ್ ಸೌಲಭ್ಯದೊಂದಿಗೆ 50kWh ಡಿಸಿ ಫಾಸ್ಟ್ ಚಾರ್ಜರ್‌ ಆಯ್ಕೆಗಳಿದ್ದು, ಇವು ಕ್ರಮವಾಗಿ 18 ನಿಮಿಷ ಮತ್ತು 73 ನಿಮಿಷಗಳಲ್ಲಿ ಶೇ. 10 ರಿಂದ ಶೇ. 80ರ ವರೆಗಿನ ಬ್ಯಾಟರಿಯನ್ನು ಚಾರ್ಜ್ ಮಾಡಬಹುದಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಇವಿ6 ಜಿಟಿ ಅನಾವರಣಗೊಳಿಸಿದ ಕಿಯಾ

ಕಿಯಾ ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರಿನಲ್ಲಿ ಡ್ಯುಯಲ್ ಮೋಟಾರ್ ಸೆಟಪ್ ಅನ್ನು ಜೋಡಿಸಿದ್ದು, ರಿಯರ್ ವ್ಹೀಲ್ ಡ್ರೈವ್ ಮಾದರಿಯು 350 ಎನ್ಎಂ ಮತ್ತು 225 ಬಿಎಚ್‌ಪಿ ಉತ್ಪಾದನೆ ಮಾಡಲಿದ್ದರೆ ಆಲ್ ವ್ಹೀಲ್ ಡ್ರೈವ್ ಮಾದರಿಯು 321 ಬಿಹೆಚ್‍ಪಿ ಮತ್ತು 605 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಇವಿ6 ಜಿಟಿ ಅನಾವರಣಗೊಳಿಸಿದ ಕಿಯಾ

ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನಲ್ಲಿ ಸ್ನೋ ವೈಟ್ ಪರ್ಲ್, ಅರೋರಾ ಬ್ಲ್ಯಾಕ್ ಪರ್ಲ್, ಮೊನೊಸ್ಕೇಪ್, ರನ್ವೇ ರೆಡ್ ಮತ್ತು ಯಾಚ್ ಬ್ಲೂ ಸೇರಿದಂತೆ ಐದು ಬಾಹ್ಯ ಬಣ್ಣದ ಆಯ್ಕೆ ನೀಡಲಾಗಿದ್ದು, ಹೊಸ ಎಲೆಕ್ಟ್ರಿಕ್ ಕಾರು 4690 ಎಂಎಂ ಉದ್ದ, 1890 ಎಂಎಂ ಅಗಲ ಮತ್ತು 1550 ಎಂಎಂ ಎತ್ತರದೊಂದಿಗೆ ಅತ್ಯುತ್ತಮ ಕ್ಯಾಬಿನ್ ಸ್ಥಳವಾಕಾಶ ಹೊಂದಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಇವಿ6 ಜಿಟಿ ಅನಾವರಣಗೊಳಿಸಿದ ಕಿಯಾ

ಹಾಗೆಯೇ ಹೊಸ ಕಾರಿನಲ್ಲಿ ಡ್ಯುಯಲ್ 12.3-ಇಂಚಿನ ಡಿಸ್ಪ್ಪೇ, ಡ್ಯುಯಲ್ ಜೋನ್ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, 10 ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಪವರ್ ಅಡ್ಜೆಸ್ಟ್ ಫ್ರಂಟ್ ಸೀಟ್‌ಗಳು, ಪ್ಯಾಡಲ್ ಶಿಫ್ಟರ್‌, ರೈನ್ ಸೆನ್ಸಿಂಗ್ ವೈಪರ್‌, ಮಲ್ಟಿ ಡ್ರೈವ್ ಮೋಡ್‌ಗಳು, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, 4 ಸ್ಪೀಕರ್ ಆಡಿಯೋ ಸಿಸ್ಟಂ, 60ಕ್ಕೂ ಹೆಚ್ಚು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರುವ ಕಿಯಾ ಕನೆಕ್ಟ್ ಸೌಲಭ್ಯವನ್ನು ಕೂಡಾ ಹೊಂದಿರಲಿದೆ.

Most Read Articles

Kannada
English summary
Kia unveiled new ev6 gt performance variant for international markets
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X