ಲಂಬೋರ್ಗಿನಿ ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ಮೊದಲ ಯುನಿಟ್ ಭಾರತದಲ್ಲಿ ವಿತರಣೆ

ಇಟಾಲಿಯನ್ ಸೂಪರ್ ಕಾರು ತಯಾರಕ ಕಂಪನಿಯಾಗಿರುವ ಲಂಬೋರ್ಗಿನಿಯು ತನ್ನ ಹೊಸ ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ಕಾರಿನ ವಿತರಣೆಗೆ ಅಧಿಕೃತವಾಗಿ ಚಾಲನೆ ನೀಡಿದ್ದು, ಮೊದಲ ಯುನಿಟ್ ಅನ್ನು ಭಾರತದಲ್ಲಿ ವಿತರಣೆ ಮಾಡಿದೆ.

ಲಂಬೋರ್ಗಿಸಿ ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ಮೊದಲ ಯುನಿಟ್ ಭಾರತದಲ್ಲಿ ವಿತರಣೆ

ಅವೆಂಟಡಾರ್ ಅಲ್ಟಿಮೇ ಮಾದರಿಯನ್ನು ಲಂಬೋರ್ಗಿನಿ ಕಂಪನಿಯು ರೋಡ್‌ಸ್ಟರ್ ಮತ್ತು ಕೂಪೆ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಿದ್ದು, ಸೀಮಿತ ಸಂಖ್ಯೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ಹೊಸ ಕಾರು ಮಾದರಿಯು ಮೊದಲ ಬಾರಿಗೆ ಭಾರತದಲ್ಲಿ ವಿತರಣೆಗೊಂಡಿವೆ.

ಲಂಬೋರ್ಗಿಸಿ ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ಮೊದಲ ಯುನಿಟ್ ಭಾರತದಲ್ಲಿ ವಿತರಣೆ

ಲಂಬೋರ್ಗಿನಿ ಕಂಪನಿಯು ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ವೆರಿಯೆಂಟ್‌ಗಳಲ್ಲಿ ವಿಶ್ವಾದ್ಯಂತ ಕೇವಲ 250 ಯುನಿಟ್‌ಗಳನ್ನು ಮಾತ್ರವೇ ವಿತರಣೆ ಮಾಡುತ್ತಿದ್ದು, ಹೊಸ ಕಾರು ಮಾದರಿಯು ವಿ12 ನ್ಯಾಚುರಲ್ ಆಸ್ಪೆರೆಟೆಡ್ ಸರಣಿಯಲ್ಲಿ ಬಿಡುಗಡೆ ಮಾಡಲಾಗುತ್ತಿರುವ ಕೊನೆಯ ಕಾರು ಮಾದರಿ ಇದಾಗಿದೆ.

ಲಂಬೋರ್ಗಿಸಿ ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ಮೊದಲ ಯುನಿಟ್ ಭಾರತದಲ್ಲಿ ವಿತರಣೆ

ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ವಿ12 ಎಂಜಿನ್ ಪ್ರೇರಿತ ಹೊಸ ಕಾರು ಮಾದರಿಗಳಿಗಾಗಿ ಕಂಪನಿಯು ಹೈಬ್ರಿಡ್ ಪವರ್‌ಟ್ರೇನ್ ಬಳಕೆ ಮಾಡಲಿದ್ದು, ಕಂಪನಿಯು ಹೊಸ ಕಾರು ಮಾದರಿಯ ಬೆಲೆ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಲಂಬೋರ್ಗಿಸಿ ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ಮೊದಲ ಯುನಿಟ್ ಭಾರತದಲ್ಲಿ ವಿತರಣೆ

ಹೊಸ ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ಮಾದರಿಯು ಮೆಂಟಲ್ ಎಸ್‌ವಿಜೆ ಆವೃತ್ತಿಯಲ್ಲಿರುವ 6.5-ಲೀಟರ್ ವಿ12 ಎಂಜಿನ್‌ ಅನ್ನು ಪಡೆದುಕೊಂಡಿದ್ದು, ಹೊಸ ಕಾರು 7-ಸ್ಪೀಡ್ ಆಟೋಮ್ಯಾಟೆಡ್ ಮ್ಯಾನುವಲ್ ಟ್ರಾನ್‌ಮಿಷನ್ ಮೂಲಕ 770 ಬಿಎಚ್‌ಪಿ ಮತ್ತು 720 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಲಂಬೋರ್ಗಿಸಿ ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ಮೊದಲ ಯುನಿಟ್ ಭಾರತದಲ್ಲಿ ವಿತರಣೆ

ಹೊಸ ಕಾರಿನಲ್ಲಿರುವ ವಿ12 ಎಂಜಿನ್‌ ಮಾದರಿಯು ನಾಲ್ಕು ಚಕ್ರಗಳಿಗೂ ಶಕ್ತಿ ಪೂರೈಕೆ ಮಾಡಲಿದ್ದು, ಇದು ಮಧ್ಯಮ ಕ್ರಮಾಂಕದ ಸೂಪರ್ ಕಾರು ಮಾದರಿಗಳಲ್ಲಿಯೇ ಅತ್ಯುತ್ತಮವಾದ 1-12-4-9-2-11-6-7-3-10-5-8 ಫೈರಿಂಗ್ ಆರ್ಡರ್ ಹೊಂದಿದೆ.

ಲಂಬೋರ್ಗಿಸಿ ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ಮೊದಲ ಯುನಿಟ್ ಭಾರತದಲ್ಲಿ ವಿತರಣೆ

ಈ ಮೂಲಕ ಇದು ಕಡಿಮೆ ವೇಗದಲ್ಲೂ ಚುರುಕುತನವನ್ನು ಹೆಚ್ಚಿಸಲಿದ್ದು, ಹೆಚ್ಚಿನ ವೇಗದಲ್ಲಿ ನಿಯಂತ್ರಣ ಮತ್ತು ಸ್ಥಿರತೆಯನ್ನು ಉತ್ತಮಗೊಳಿಸುತ್ತದೆ. ಇದರೊಂದಿಗೆ ಹೊಸ ಕಾರು 2.8 ಸೆಕೆಂಡುಗಳಲ್ಲಿ ಸೊನ್ನೆಯಿಂದ -100 ಕಿ.ಮೀ ವೇಗವನ್ನು ಪಡೆಯಲಿದ್ದು, 8.7 ಸೆಕೆಂಡುಗಳಲ್ಲಿ ಸೊನ್ನೆಯಿಂದ 200 ಕಿ.ಮೀ ವೇಗ ತಲುಪಬಲ್ಲದು.

ಲಂಬೋರ್ಗಿಸಿ ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ಮೊದಲ ಯುನಿಟ್ ಭಾರತದಲ್ಲಿ ವಿತರಣೆ

ಹೊಸ ಕಾರು ಅತ್ಯುತ್ತಮ ಎಂಜಿನ್ ಪರ್ಫಾಮೆನ್ಸ್ ಪ್ರತಿ ಗಂಟೆಗೆ ಗರಿಷ್ಠ 355 ಕಿ.ಮೀ ಟಾಪ್ ಸ್ಪೀಡ್ ತಲುಪಲಿದ್ದು, ಈ ಹಿಂದಿನ ಅವೆಂಟಡಾರ್‌ಗಳಂತೆ ಅಲ್ಟಿಮೇ ಮಾದರಿಯಲ್ಲೂ ಮುಂಭಾಗದಲ್ಲಿ ಅಲ್ಯೂಮಿನಿಯಂ ಮತ್ತು ರಿಯಾ ಫ್ರೇಮ್‌ಗಳೊಂದಿಗೆ ಕಾರ್ಬನ್ ಫೈಬರ್ ಮೊನೊಕೊಕ್ ಅನ್ನು ಹೊಂದಿದೆ.

ಲಂಬೋರ್ಗಿಸಿ ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ಮೊದಲ ಯುನಿಟ್ ಭಾರತದಲ್ಲಿ ವಿತರಣೆ

ಹಾಗೆಯೇ ಎಂಜಿನ್ ಕವರ್, ಹಿಂಬದಿಯ ಗಾಳಿಯ ಒಳಹರಿನ ಮಾರ್ಗವನ್ನು ಮತ್ತು ಸ್ಪಾಯ್ಲರ್ ಅನ್ನು ಕಾರ್ಬನ್ ಫೈಬರ್‌ನಲ್ಲಿ ಪೂರ್ಣಗೊಳಿಸಲಾಗಿದೆ ಆದರೆ ಇತರೆ ಪ್ಯಾನಲ್‌ಗಳು ಅಲ್ಯೂಮಿನಿಯಂ ಮತ್ತು ಇತರೆ ಕೃತಕ ವಸ್ತುಗಳೊಂದಿಗೆ ಕಾರ್ಬನ್-ಫೈಬರ್ ಹಾರ್ಡ್ ಟಾಪ್ ಅನ್ನು ಸಹ ಹೊಂದಿದೆ.

ಲಂಬೋರ್ಗಿಸಿ ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ಮೊದಲ ಯುನಿಟ್ ಭಾರತದಲ್ಲಿ ವಿತರಣೆ

ಅದರ ಹಿಂದಿನ ಎಲ್ಲಾ ಅವೆಂಟಡಾರ್‌ಗಳಂತೆ, ಅಲ್ಟಿಮೇ ಅಲ್ಯೂಮಿನಿಯಂ ಮುಂಭಾಗ ಮತ್ತು ರಿಯಾ ಫ್ರೇಮ್‌ಗಳೊಂದಿಗೆ ಕಾರ್ಬನ್ ಫೈಬರ್ ಮೊನೊಕೊಕ್ ಅನ್ನು ಹೊಂದಿದೆ. ಎಂಜಿನ್ ಕವರ್, ಹಿಂಬದಿಯ ಗಾಳಿಯ ಒಳಹರಿವು ಮತ್ತು ಸ್ಪಾಯ್ಲರ್ ಅನ್ನು ಕಾರ್ಬನ್ ಫೈಬರ್‌ನಲ್ಲಿ ಪೂರ್ಣಗೊಳಿಸಿದರೆ ಇತರ ಪ್ಯಾನಲ್‌ಗಳು ಅಲ್ಯೂಮಿನಿಯಂ ಮತ್ತು ಇತರ ಕೃತಕ ವಸ್ತುಗಳನ್ನು ಬಳಸುತ್ತವೆ. ಅಲ್ಟಿಮೇ ರೋಡ್‌ಸ್ಟರ್ ಕಾರ್ಬನ್-ಫೈಬರ್ ಹಾರ್ಡ್ ಟಾಪ್ ಅನ್ನು ಸಹ ಹೊಂದಿದೆ.

ಲಂಬೋರ್ಗಿಸಿ ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ಮೊದಲ ಯುನಿಟ್ ಭಾರತದಲ್ಲಿ ವಿತರಣೆ

ಇನ್ನು ಹೊಸ ಅವೆಂಟಡರ್ ಅಲ್ಟಿಮೇ ರೋಡ್‌ಸ್ಟರ್ ಮಾದರಿಯಲ್ಲಿ 20-ಇಂಚಿನ ಚಕ್ರಗಳನ್ನು ಮುಂಭಾಗದಲ್ಲಿ ಜೋಡಣೆ ಮಾಡಿದ್ದು, ಇದು ಪೆರಿಲ್ಲಿ ಪಿ ಝೀರೋ ಕೊರ್ಸಾ 255/30 ZR 20 92Y ಟೈರ್‌ಗಳನ್ನು ಹೊಂದಿದೆ. ಹಾಗೆಯೇ ಹಿಂಬದಿಯಲ್ಲಿ 21-ಇಂಚಿನ ಚಕ್ರಗಳನ್ನು ಜೋಡಣೆ ಮಾಡಲಾಗಿದ್ದು, ಇವು 355/25 ZR 21 107Y ಪ್ರೊಪೈಲ್ ಹೊಂದಿವೆ.

ಲಂಬೋರ್ಗಿಸಿ ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ಮೊದಲ ಯುನಿಟ್ ಭಾರತದಲ್ಲಿ ವಿತರಣೆ

ಇನ್ನು ಹೊಸ ಲಂಬೋರ್ಗಿನಿ ಅವೆಂಟಡಾರ್ ಅಲ್ಟಿಮೇ ಮಾದರಿಯಲ್ಲಿ ಸ್ಪೋರ್ಟ್ಸ್ ಪುಶ್ ರಾಡ್ ಮ್ಯಾಗ್ನೆಟೋರಿಯೋಲಾಜಿಕ್ ಆಕ್ಟಿವ್ ಫ್ರಂಟ್ ಮತ್ತು ರಿಯರ್ ಸಸ್ಪೆನ್ಶನ್ ಸೆಟಪ್ ಜೊತೆಗೆ ಸಮತಲಾದ ಡ್ಯಾಂಪರ್‌ ಮತ್ತು ಸ್ಪ್ರಿಂಗ್‌ಗಳನ್ನು ಹೊಂದಿದ್ದು, 6-ಪಿಸ್ಟನ್ ಸ್ಥಿರ ಮೊನೊಬ್ಲಾಕ್ ಅಲ್ಯೂಮಿನಿಯಂ ಕ್ಯಾಲಿಪರ್‌ಗಳನ್ನು ಒಳಗೊಂಡಿರುವ 400ಎಂಎಂ ಫ್ರಂಟ್ ಕಾರ್ಬನ್ ಸೆರಾಮಿಕ್ ಡಿಸ್ಕ್‌ ಬ್ರೇಕಿಂಗ್ ಹೊಂದಿದೆ.

ಲಂಬೋರ್ಗಿಸಿ ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ಮೊದಲ ಯುನಿಟ್ ಭಾರತದಲ್ಲಿ ವಿತರಣೆ

ಹಾಗೆಯೇ ಹಿಂಬದಿಯಲ್ಲಿ ಅಲ್ಯೂಮಿನಿಯಂ ಹೊಂದಿರುವ 4-ಪಿಸ್ಟನ್ ಫಿಕ್ಸ್ ಮೊನೊಬ್ಲಾಕ್ ಕ್ಯಾಲಿಪರ್‌ಗಳೊಂದಿಗೆ 380 ಎಂಎಂ ಕಾರ್ಬನ್ ಸೆರಾಮಿಕ್ ಡಿಸ್ಕ್‌ ಬ್ರೇಕ್ ಹೊಂದಿದ್ದು, ಕಾರಿನ ಒಳಭಾಗದಲ್ಲಿ ಕಾರ್ಬನ್-ಫೈಬರ್ ಪ್ಲೇಕ್ ಅನ್ನು ಜೋಡಿಸಲಾಗಿದೆ.

ಲಂಬೋರ್ಗಿಸಿ ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ಮೊದಲ ಯುನಿಟ್ ಭಾರತದಲ್ಲಿ ವಿತರಣೆ

ಜೊತೆಗೆ ಹೊಸ ಕಾರು ಮಾದರಿಯನ್ನು ವ್ಯಯಕ್ತಿರಣಗೊಳಿಸಲು ಕಂಪನಿಯು ಪರ್ಸೊನಾಮ್ ವಿಭಾಗವನ್ನು ಹೊಂದಿದ್ದು, ವ್ಯಯಕ್ತಿರಣ ಸೌಲಭ್ಯಗಳೊಂದಿಗೆ ಪ್ರತಿಯೊಂದು ಅವೆಂಟಡಾರ್ ಅಲ್ಟಿಮೇ ಕೂಪೆ ಮತ್ತು ರೋಡ್‌ಸ್ಟರ್‌ಗಳು ಗ್ರಾಹಕರ ಅಭಿರುಚಿ ತಕ್ಕಂತೆ ಹೊಸ ವಿನ್ಯಾಸವನ್ನು ಹೊಂದಿರಲಿವೆ.

ಲಂಬೋರ್ಗಿಸಿ ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ಮೊದಲ ಯುನಿಟ್ ಭಾರತದಲ್ಲಿ ವಿತರಣೆ

ಡ್ರೈವ್‌ಸ್ಪಾರ್ಕ್ ಕನ್ನಡ ಅಭಿಪ್ರಾಯ

ಅವೆಂಟಡಾರ್ ಅಲ್ಟಿಮೇ ರೋಡ್‌ಸ್ಟರ್ ಮೂಲಕ ಲಂಬೋರ್ಗಿನಿ ಕಂಪನಿಯು ಸೂಪರ್ ಕಾರು ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಜಗತ್ತಿನಾದ್ಯಂತ ಕೇವಲ 250 ಯುನಿಟ್‌ಗಳನ್ನು ಮಾತ್ರ ಹೊಂದಿರುವ ಹೊಸ ಕಾರು ಭಾರತದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ವಿತರಣೆಗೊಳ್ಳುವ ಸಾಧ್ಯತೆಗಳಿದ್ದು, ಇದು ಕಂಪನಿಯ ನ್ಯಾಚುರಲಿ ಆಸ್ಪೆರೆಟೆಡ್ ವಿ12 ಎಂಜಿನ್ ಹೊಂದಿರುವ ಕೊನೆಯ ಮಾದರಿಯಾಗಿದೆ.

Most Read Articles

Kannada
English summary
Lamborghini aventador ultimae roadster delivered start in india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X