ಭಾರತಕ್ಕೆ ಬಂತು ಲ್ಯಾಂಬೋರ್ಗಿನಿಯ ಮತ್ತೊಂದು ಲಿಮಿಟೆಡ್ ಎಡಿಷನ್‌ ಸೂಪರ್‌ ಕಾರ್‌ !

ಇಟಲಿಯ ಸೂಪರ್‌ಕಾರ್‌ ನಿರ್ಮಾಣ ಕಂಪನಿಯಾದಂತಹ ಲ್ಯಾಂಬೋರ್ಗಿನಿಯು ಭಾರತದ ಮೊದಲ ಅವೆಂಟಡಾರ್‌ ಅಲ್ಟಿಮೇಟ್‌ ಕೂಪೆ ಯನ್ನು ಭಾರತದ ಗ್ರಾಹಕರೊಬ್ಬರಿಗೆ ವಿತರಣೆ ಮಾಡಿದೆ. ಇದಕ್ಕೂ ಮುಂಚೆ ಲ್ಯಾಂಬೋರ್ಗಿನಿಯು ಭಾರತಕ್ಕೆ ಲಿಮಿಟೆಡ್ ಎಡಿಷನ್‌ನ 2 ಅವೆಂಟಡಾರ್‌ ಅಲ್ಟಿಮೇಟ್‌ ರೋಡ್‌ಸ್ಟರ್‌ ಕಾರನ್ನು ವಿತರಿಸಿತ್ತು.

ಭಾರತಕ್ಕೆ ಬಂತು ಲ್ಯಾಂಬೋರ್ಗಿನಿಯ ಮತ್ತೊಂದು ಲಿಮಿಟೆಡ್ ಎಡಿಷನ್‌ ಸೂಪರ್‌ ಕಾರ್‌!

ಭಾರತಕ್ಕೆ ಬಂದಿರುವಂತಹ ಮೊದಲ ಲ್ಯಾಂಬೋರ್ಗಿನಿ ಅವೆಂಟಡಾರ್‌ ಅಲ್ಟಿಮೇಟ್‌ ಕೂಪೆ ಕಾರು ಇಟಾಲಿಯನ್‌ ಮಾರ್ಕ್‌ನ ಕಡು ನೇರಳೆ ಬಣ್ಣ ಹೊಂದಿದ್ದು, ಇದನ್ನು ಕಂಪನಿಯು ಐಕಾನಿಕ್ ವೋಯಿಲಾ ಪೆಸಿಫೆ ಪರ್ಪಲ್‌ ಕಲರ್‌ ಎಂದು ಹೆಸರಿಸಿದ್ದಾರೆ.ಈ ಲ್ಯಾಂಬೋರ್ಗಿನಿ ಅವೆಂಟಡಾರ್‌ ಅಲ್ಟಿಮೇಟ್‌ ಕೂಪೆ ಕಾರನ್ನು ಮುಂಬೈನ ಗ್ರಾಹಕರೊಬ್ಬರು ಖರೀದಿಸಿದ್ದು, ಭಾರತೀಯರ ಲ್ಯಾಂಬೋರ್ಗಿನಿ ಕಾರಿನ ಮೇಲಿರುವ ಪ್ರೀತಿ ಮತ್ತೆ ಮತ್ತೆ ಸಾಬೀತಾಗುತ್ತಿದೆ.

ಭಾರತಕ್ಕೆ ಬಂತು ಲ್ಯಾಂಬೋರ್ಗಿನಿಯ ಮತ್ತೊಂದು ಲಿಮಿಟೆಡ್ ಎಡಿಷನ್‌ ಸೂಪರ್‌ ಕಾರ್‌!

ಕಳೆದ ವಾರವಷ್ಟೇ ಭಾರತದಲ್ಲಿ ಕಂಪನಿಯು ಲ್ಯಾಂಬೋರ್ಗಿನಿ ಅವೆಂಟಡಾರ್‌ ಅಲ್ಟಿಮೇಟ್‌ ರೋಡ್‌ಸ್ಟರ್‌ ನ 2 ಕಾರನ್ನು ವಿತರಣೆ ಮಾಡಿತ್ತು. ಈ ಕಾರು ಲಿಮಿಟೆಡ್‌ ಆಗಿದ್ದು ಕಂಪನಿಯು ಕೇವಲ 250 ಕಾರ್‌ಗಳನ್ನು ಮಾತ್ರ ಉತ್ಪಾದಿಸಿತ್ತು. ಆ 250 ಕಾರ್‌ಗಳಲ್ಲಿ 2 ಕಾರುಗಳು ಈಗಾಗಲೇ ಭಾರತೀಯರ ತೆಕ್ಕೆಗೆ ಬಂದಿರುವುದು ಕಾರ್‌ಪ್ರೇಮಿಗಳಿಗೆ ಹೆಮ್ಮೆಯ ಸಂಗತಿ.

ಭಾರತಕ್ಕೆ ಬಂತು ಲ್ಯಾಂಬೋರ್ಗಿನಿಯ ಮತ್ತೊಂದು ಲಿಮಿಟೆಡ್ ಎಡಿಷನ್‌ ಸೂಪರ್‌ ಕಾರ್‌!

ಇನ್ನು ಭಾರತಕ್ಕೆ ಬಂದಿರುವ ಲ್ಯಾಂಬೋರ್ಗಿನಿ ಅವೆಂಟಡಾರ್‌ ಅಲ್ಟಿಮೇಟ್‌ ಕೂಪೆ ಕಾರಿನ ಇಂಟೀರಿಯರ್‌ ವೀಭಾಗವು ನೆರೋ ಆಡ್‌ ಅಥವಾ ಕಪ್ಪು ಹಾಗೂ ಕಂದು ಕಂಚಿನ ಬಣ್ಣದಿಂದ ಕೂಡಿದೆ. ಇವೆರಡೂ ಬಣ್ಣಗಳ ಕಾಂಬೀನೇಷನ್‌ನಿಂದಾಗಿ ಕಾರಿನ ಒಳಾಂಗಣಕ್ಕೆ ಅಲ್ಟ್ರಾ ಪ್ರೀಮಿಯಂ ಫೀಲ್‌ ಕೊಡುತ್ತದೆ. ಕಾರಿನ ಒಳಾಂಗಣ ಈ ಎರಡೂ ಬಣ್ಣಗಳ ಸಮ್ಮಿಲನದಿಂದ ಗ್ರಾಹಕರಂತೂ ಖುಷಿಯಾಗಿರುವುದು ನಿಜ.

ಭಾರತಕ್ಕೆ ಬಂತು ಲ್ಯಾಂಬೋರ್ಗಿನಿಯ ಮತ್ತೊಂದು ಲಿಮಿಟೆಡ್ ಎಡಿಷನ್‌ ಸೂಪರ್‌ ಕಾರ್‌!

ಅವೆಂಟಡಾರ್‌ ಅಲ್ಟಿಮೇಟ್‌ ರೋಡ್‌ಸ್ಟರ್‌ ಕಾರಿನಂತೆ ಈ ಲ್ಯಾಂಬೋರ್ಗಿನಿ ಅವೆಂಟಡಾರ್‌ ಅಲ್ಟಿಮೇಟ್‌ ಕೂಪೆ ಯೂ ಸಹ ಲಿಮಿಟೆಡ್‌ ಆಗಿದೆ. ಕಂಪನಿಯು ಕೇವಲ 350 ಲ್ಯಾಂಬೋರ್ಗಿನಿ ಅವೆಂಟಡಾರ್‌ ಅಲ್ಟಿಮೇಟ್‌ ಕೂಪೆ ಕಾರನ್ನು ನಿರ್ಮಿಸಿದ್ದು 350 ಅವೆಂಟಡಾರ್‌ ಅಲ್ಟಿಮೇಟ್‌ ರೋಡ್‌ಸ್ಟರ್‌ ಕಾರನ್ನು ನಿರ್ಮಿಸಿತ್ತು. ಇದರಿಂದಾಗಿ ಲ್ಯಾಂಬೋರ್ಗಿನಿ ಪ್ರೀಯರು ತಮ್ಮಲ್ಲೂ ಈ ಕಾರಿನ ಒಂದು ಕಲೆಕ್ಷನ್‌ ಇರಲಿ ಎಂದು ಕೊಂಡುಕೊಳ್ಳುವ ಸಾಧ್ಯತೆಗಳು ತುಂಬಾನೇ ಹೆಚ್ಚು.

ಭಾರತಕ್ಕೆ ಬಂತು ಲ್ಯಾಂಬೋರ್ಗಿನಿಯ ಮತ್ತೊಂದು ಲಿಮಿಟೆಡ್ ಎಡಿಷನ್‌ ಸೂಪರ್‌ ಕಾರ್‌!

ಲ್ಯಾಂಬೋರ್ಗಿನಿ ಅವೆಂಟಡಾರ್‌ ಅಲ್ಟಿಮೇಟ್‌ ರೋಡ್‌ಸ್ಟರ್‌ ಕಾರ್‌ನಂತೆ ಈ ಅವೆಂಟಡಾರ್‌ ಅಲ್ಟಿಮೇಟ್‌ ಕೂಪೆಯಲ್ಲೂ ಸಹ ಲ್ಯಾಂಬೋರ್ಗಿನಿಯ V12 ಇಂಜಿನ್‌ ಹೊಂದಿದೆ. ಇದರ 6.5 ಲೀಟರ್‌ನ V12 ಇಂಜಿನ್‌ 8500 ರ ಆರ್‌ಪಿಎಂನಲ್ಲಿ 770 ಬಿಹೆಚ್‌ಪಿ ಪವರನ್ನು ಉತ್ಪಾದಿಸುತ್ತದೆ.

ಭಾರತಕ್ಕೆ ಬಂತು ಲ್ಯಾಂಬೋರ್ಗಿನಿಯ ಮತ್ತೊಂದು ಲಿಮಿಟೆಡ್ ಎಡಿಷನ್‌ ಸೂಪರ್‌ ಕಾರ್‌!

ವೇಗವನ್ನು ಇಷ್ಟಪಡುವ ಲ್ಯಾಂಬೋರ್ಗಿನಿ ಫ್ಯಾನ್ಸ್‌ ಮತ್ತಷ್ಟು ಖುಷಿಯಾಗುವುದಂತೂ ಖಂಡಿತ. ಇಷ್ಟು ಮಾತ್ರವಲ್ಲದೇ, ಲ್ಯಾಂಬೋರ್ಗಿನಿಯ V12 ಇಂಜಿನ್‌ 6750 ಆರ್‌ಪಿಎಂನಲ್ಲಿ ಸುಮಾರು 720 ನ್ಯೂಟನ್ ಮೀಟರ್‌ ಟಾರ್ಕನ್ನು ಉತ್ಪಾದಿಸುತ್ತಿರುವುದು ಈ ಕಾರಿನ ಪರ್ಫಾಮೆನ್ಸ್‌ಗೆ ಮತ್ತಷ್ಟು ಇಂಬು ನೀಡುತ್ತಿದೆ.

ಭಾರತಕ್ಕೆ ಬಂತು ಲ್ಯಾಂಬೋರ್ಗಿನಿಯ ಮತ್ತೊಂದು ಲಿಮಿಟೆಡ್ ಎಡಿಷನ್‌ ಸೂಪರ್‌ ಕಾರ್‌!

ಇನ್ನು V12 ಎಂಜಿನ್‌ನಲ್ಲಿ ಉತ್ಪಾದನೆಯಾಗುವ ಇಷ್ಟೊಂದು ದೊಡ್ಡ ಮೊತ್ತದ ಶಕ್ತಿಯನ್ನು ಇದರ 7 ಸ್ಪೀಡ್‌ ಗೇರ್‌ ಬಾಕ್ಸ್‌, ಕಾರಿನ ನಾಲ್ಕೂ ಚಕ್ರಗಳಿಗೂ ಸಮಾನವಾಗಿ ಹಂಚುತ್ತಾ ಕಾರಿನ ವೇಗದ ಸಮತೋಲನವನ್ನು ಕಾಪಾಡುತ್ತದೆ. ಇನ್ನು ಈ ಲ್ಯಾಂಬೋರ್ಗಿನಿ ಅವೆಂಟಡಾರ್‌ ಅಲ್ಟಿಮೇಟ್‌ ಕೂಪೆಯು 0-100 ಕಿಮೀ ವೇಗವನ್ನು ತಲುಪಲು ಕೇವಲ 2.8 ಸೆಕೆಂಡ್‌ಗಳನ್ನು ತೆಗೆದುಕೊಳ್ಳುತ್ತದೆ. ಮತ್ತು ಇದರ ಗರಿಷ್ಟ ವೇಗ ಪ್ರತಿ ಗಂಟೆಗೆ 355 ಕಿಮೀ.

ಭಾರತಕ್ಕೆ ಬಂತು ಲ್ಯಾಂಬೋರ್ಗಿನಿಯ ಮತ್ತೊಂದು ಲಿಮಿಟೆಡ್ ಎಡಿಷನ್‌ ಸೂಪರ್‌ ಕಾರ್‌!

ಅವೆಂಟಡಾರ್‌ ಅಲ್ಟಿಮೇಟ್‌ ಕೂಪೆಯು 20 ಇಂಚಿನ ಟೈರ್‌ಗಳನ್ನು ಮುಂಭಾಗದಲ್ಲಿಯೂ ಮತ್ತು 21 ಇಂಚಿನ ಟೈರ್‌ಗಳನ್ನು ಹಿಂಬಾಗದಲ್ಲಿ ಹೊಂದಿದೆ. ಇದು ವಾಹನ ಚಲಾಯಿಸುವಾಗ ಗರಿಷ್ಠ ಮಟ್ಟದ ರೋಡ್‌ ಗ್ರಿಪ್‌ ಹೊಂದಲು ಸಹಕಾರಿಯಾಗಿದೆ.

ಭಾರತಕ್ಕೆ ಬಂತು ಲ್ಯಾಂಬೋರ್ಗಿನಿಯ ಮತ್ತೊಂದು ಲಿಮಿಟೆಡ್ ಎಡಿಷನ್‌ ಸೂಪರ್‌ ಕಾರ್‌!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಕಂಪನಿಯು ಲ್ಯಾಂಬೋರ್ಗಿನಿ ಅವೆಂಟಡಾರ್‌ ಅಲ್ಟಿಮೇಟ್‌ ರೋಡ್‌ಸ್ಟರ್‌ ಭಾರತದಲ್ಲಿ ವಿತರಣೆ ಮಾಡಿದ ಕೆಲವೇ ಕೆಲವು ದಿನಗಳಲ್ಲಿ ಭಾರತಕ್ಕೆ ಲ್ಯಾಂಬೋರ್ಗಿನಿ ಅವೆಂಟಡಾರ್‌ ಅಲ್ಟಿಮೇಟ್‌ ಕೂಪೆಯೂ ಸಹ ವಿತರಣೆಯಾಗಿದೆ. ಇದರಿಂದ ಭಾರತದಲ್ಲಿ ಸೂಪರ್‌ ಕಾರ್‌ಗಳ ಮೇಲಿನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಲಿಮಿಟೆಡ್‌ ಸೂಪರ್‌ ಕಾರುಗಳ ಮೇಲೀನ ಭಾರತೀಯರ ವ್ಯಾಮೋಹ ಹೆಚ್ಚಾಗುತ್ತಿದೆ. ನೀವೇನಾದರೂ ನಿಮ್ಮ ಕಣ್ಣಮುಂದೆ ಕಡು ನೇರಳೆ ಅಥವಾ ಐಕಾನಿಕ್ ವೋಯಿಲಾ ಪೆಸಿಫೆ ಪರ್ಪಲ್‌ ಬಣ್ಣದ ಲ್ಯಾಂಬೋರ್ಗಿನಿ ಕಾರೇನಾದರೂ ಮಿಂಚಿನ ವೇಗದಲ್ಲಿ ಓಡಿ ಮರೆಯಾದರೆ ಅದನ್ನು ಲ್ಯಾಂಬೋರ್ಗಿನಿ ಅವೆಂಟಡಾರ್‌ ಅಲ್ಟಿಮೇಟ್‌ ಕೂಪೆ ಎಂದು ಖಚಿತಪಡಿಸಿಕೊಳ್ಳಿ.

Most Read Articles

Kannada
English summary
Lamborghini aventador ultimate coupe delivered indian customer
Story first published: Thursday, July 7, 2022, 10:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X