ಸೂಪರ್ ಕಾರ್ ಕ್ರೇಜ್: ಆರು ತಿಂಗಳಿನಲ್ಲಿ 5 ಸಾವಿರ ಕಾರುಗಳನ್ನು ಮಾರಾಟ ಮಾಡಿದ ಲ್ಯಾಂಬೋರ್ಗಿನಿ

ಇಟಾಲಿಯನ್ ಸೂಪರ್ ಕಾರು ಉತ್ಪಾದನಾ ಕಂಪನಿಯಾಗಿರುವ ಲ್ಯಾಂಬೋರ್ಗಿನಿ ಹೊಸ ಉತ್ಪನ್ನಗಳೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯ ಮಾರಾಟವು ಈ ಮೊದಲಾರ್ಧದಲ್ಲಿ ಶೇ.4.90 ರಷ್ಟು ಬೆಳವಣಿಗೆ ಸಾಧಿಸಿದೆ.

ಸೂಪರ್ ಕಾರ್ ಕ್ರೇಜ್: ಆರು ತಿಂಗಳಿನಲ್ಲಿ 5 ಸಾವಿರ ಕಾರುಗಳನ್ನು ಮಾರಾಟ ಮಾಡಿದ ಲ್ಯಾಂಬೋರ್ಗಿನಿ

ಸೂಪರ್ ಕಾರುಗಳ ಮಾರಾಟದಲ್ಲಿ ತನ್ನದೆ ಆದ ಜನಪ್ರಿಯತೆಯೊಂದಿಗೆ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಲ್ಯಾಂಬೋರ್ಗಿನಿ ಕಂಪನಿಯು ಈ ವರ್ಷದ ಮೊದಲಾರ್ಧದಲ್ಲಿ ಬರೋಬ್ಬರಿ 5,090 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದು, 2021ರ ಮೊದಲ ಆರು ತಿಂಗಳಿನಲ್ಲಿ ಮಾರಾಟ ಮಾಡಲಾದ ಕಾರುಗಳಿಂತಲೂ ಶೇ. 30.6 ರಷ್ಟು ಹೆಚ್ಚಳವಾಗಿದೆ.

ಸೂಪರ್ ಕಾರ್ ಕ್ರೇಜ್: ಆರು ತಿಂಗಳಿನಲ್ಲಿ 5 ಸಾವಿರ ಕಾರುಗಳನ್ನು ಮಾರಾಟ ಮಾಡಿದ ಲ್ಯಾಂಬೋರ್ಗಿನಿ

ಹೊಸ ಕಾರು ಮಾದರಿಯೊಂದಿಗೆ ಉತ್ತಮ ಬೇಡಿಕೆ ದಾಖಲಿಸಿರುವ ಲ್ಯಾಂಬೋರ್ಗಿನಿ ಕಂಪನಿಯ ನಿರ್ವಹಣಾ ಲಾಭವು ಶೇ. 69.6 ರಷ್ಟು ಹೆಚ್ಚಳವಾಗಿದ್ದರೆ ಕಾರು ಮಾರಾಟ ಲಾಭಾಂಶ ಪ್ರಮಾಣ ಶೇ. 31.9ಕ್ಕೆ ಏರಿಕೆಯಾಗಿದೆ.

ಸೂಪರ್ ಕಾರ್ ಕ್ರೇಜ್: ಆರು ತಿಂಗಳಿನಲ್ಲಿ 5 ಸಾವಿರ ಕಾರುಗಳನ್ನು ಮಾರಾಟ ಮಾಡಿದ ಲ್ಯಾಂಬೋರ್ಗಿನಿ

ಹೊಸ ಕಾರು ಮಾರಾಟದಲ್ಲಿನ ಲಾಭಾಂಶ ಪ್ರಮಾಣವು ಹಿಂದಿನ ವರ್ಷದ ಅವಧಿಯಲ್ಲಿನ ಲಾಭಾಂಶಕ್ಕಿಂತಲೂ ಶೇ. 24.6 ರಷ್ಟು ಹೆಚ್ಚಳವಾಗಿದ್ದು, ಭೌಗೋಳಿಕ ರಾಜಕೀಯ ಅನಿಶ್ಚಿತತೆ ಮತ್ತು ನೈಸರ್ಗಿಕ ವಿಕೋಪಗಳ ಹೊರತಾಗಿಯೂ ಹೊಸ ಕಾರು ಮಾರಾಟದಲ್ಲಿ ಲ್ಯಾಂಬೋರ್ಗಿನಿ ಕಾರು ಮಾರಾಟವು ಮುಂಚೂಣಿ ಸಾಧಿಸಿದೆ.

ಸೂಪರ್ ಕಾರ್ ಕ್ರೇಜ್: ಆರು ತಿಂಗಳಿನಲ್ಲಿ 5 ಸಾವಿರ ಕಾರುಗಳನ್ನು ಮಾರಾಟ ಮಾಡಿದ ಲ್ಯಾಂಬೋರ್ಗಿನಿ

ಹೊಸ ಕಾರುಗಳ ಮಾರಾಟ ಲಾಭಾಂಶದ ಕುರಿತು ಮಾತನಾಡಿರುವ ಲ್ಯಾಂಬೋರ್ಗಿನಿ ಅಧ್ಯಕ್ಷ ಮತ್ತು ಸಿಇಒ ಸ್ಟೀಫನ್ ವಿಂಕೆಲ್ಮನ್ ಅವರು ಕಂಪನಿಯ ದೃಷ್ಟಿಕೋನವು ಸಮಾನವಾಗಿ ಧನಾತ್ಮಕವಾಗಿದ್ದು, ಮುಂದಿನ ವರ್ಷ ನಿರ್ಮಾಣವಾಗಲಿರುವ ಹೊಸ ಕಾರುಗಳು ಕಂಪನಿಯ ಮಾರಾಟವನ್ನು ಮತ್ತೊಂದು ಹಂತದ ಯಶಸ್ವಿಗೆ ಕಾರಣವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೂಪರ್ ಕಾರ್ ಕ್ರೇಜ್: ಆರು ತಿಂಗಳಿನಲ್ಲಿ 5 ಸಾವಿರ ಕಾರುಗಳನ್ನು ಮಾರಾಟ ಮಾಡಿದ ಲ್ಯಾಂಬೋರ್ಗಿನಿ

ಜಾಗತಿಕ ಮಾರುಕಟ್ಟೆಯಲ್ಲಿ ಲ್ಯಾಂಬೋರ್ಗಿನಿ ಕಂಪನಿಯಯು ಹಲವಾರು ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಇದರಲ್ಲಿ ಉಳಿದೆಲ್ಲಾ ಮಾದರಿಗಿಂತಲೂ ಉರುಸ್ ಎಸ್‌ಯುವಿಯು ಶೇ. 61 ರಷ್ಟು ಮಾರಾಟದಲ್ಲಿ ಪ್ರಾಬಲ್ಯ ಸಾಧಿಸಿದೆ.

ಸೂಪರ್ ಕಾರ್ ಕ್ರೇಜ್: ಆರು ತಿಂಗಳಿನಲ್ಲಿ 5 ಸಾವಿರ ಕಾರುಗಳನ್ನು ಮಾರಾಟ ಮಾಡಿದ ಲ್ಯಾಂಬೋರ್ಗಿನಿ

ಉರುಸ್ ನಂತರ ಹ್ಯುರಾಕನ್ ಮತ್ತು ಅವೆಂಟಡಾರ್ ಸೂಪರ್ ಕಾರುಗಳು ಶೇ.39 ರಷ್ಟು ಮಾರಾಟ ಪಾಲನ್ನು ಹೊಂದಿದ್ದು, ಇನ್ನುಳಿದ ಹಲವು ವಿಶೇಷ ಆವೃತ್ತಿಗಳು ಸಹ ಉತ್ತಮ ಬೇಡಿಕೆ ಪಡೆದುಕೊಂಡಿವೆ.

ಸೂಪರ್ ಕಾರ್ ಕ್ರೇಜ್: ಆರು ತಿಂಗಳಿನಲ್ಲಿ 5 ಸಾವಿರ ಕಾರುಗಳನ್ನು ಮಾರಾಟ ಮಾಡಿದ ಲ್ಯಾಂಬೋರ್ಗಿನಿ

2018ರ ಜನವರಿಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಉರುಸ್ ಎಸ್‌ಯುವಿ ಕಾರು ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟಗೊಳ್ಳುತ್ತಿದ್ದು, ಲ್ಯಾಂಬೋರ್ಗಿನಿ ಕಂಪನಿಯು ಹೊಸ ಕಾರಿನ ಉತ್ಪಾದನಾ ಪ್ರಮಾಣದಲ್ಲಿ ಹಲವು ಮೈಲಿಗಲ್ಲು ಸಾಧಿಸಿದೆ.

ಸೂಪರ್ ಕಾರ್ ಕ್ರೇಜ್: ಆರು ತಿಂಗಳಿನಲ್ಲಿ 5 ಸಾವಿರ ಕಾರುಗಳನ್ನು ಮಾರಾಟ ಮಾಡಿದ ಲ್ಯಾಂಬೋರ್ಗಿನಿ

ಉರುಸ್ ಕಾರು ಇದುವರೆಗೆ 25 ಸಾವಿಕ್ಕೂ ಹೆಚ್ಚು ಯುನಿಟ್‌ಗಳು ವಿಶ್ವಾದ್ಯಂತ ಮಾರಾಟಗೊಂಡಿದ್ದು, ಲ್ಯಾಂಬೋರ್ಗಿನಿ ಕಂಪನಿಗೆ ಈ ಹೊಸ ಕಾರು ಭಾರೀ ಪ್ರಮಾಣದ ಆದಾಯ ತಂದುಕೊಡುತ್ತಿದೆ.

ಸೂಪರ್ ಕಾರ್ ಕ್ರೇಜ್: ಆರು ತಿಂಗಳಿನಲ್ಲಿ 5 ಸಾವಿರ ಕಾರುಗಳನ್ನು ಮಾರಾಟ ಮಾಡಿದ ಲ್ಯಾಂಬೋರ್ಗಿನಿ

ಆಕರ್ಷಕ ಬೆಲೆಯೊಂದಿಗೆ ಅತ್ಯುತ್ತಮ ಎಂಜಿನ್ ಆಯ್ಕೆಯನ್ನು ಹೊಂದಿರುವ ಉರುಸ್ ಐಷಾರಾಮಿ ಎಸ್‌ಯುವಿ ಕಾರು ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದು, ಲ್ಯಾಂಬೋರ್ಗಿನಿ ನಿರ್ಮಾಣದ ಮೊದಲ ಎಸ್‌ಯುವಿ ಕಾರು ಮಾದರಿ ಇದಾಗಿದೆ.

ಸೂಪರ್ ಕಾರ್ ಕ್ರೇಜ್: ಆರು ತಿಂಗಳಿನಲ್ಲಿ 5 ಸಾವಿರ ಕಾರುಗಳನ್ನು ಮಾರಾಟ ಮಾಡಿದ ಲ್ಯಾಂಬೋರ್ಗಿನಿ

ಉರುಸ್ ಐಷಾರಾಮಿ ಎಸ್‌ಯುವಿಯು ಪ್ರಮುಖ ಎರಡು ವೆರಿಯೆಂಟ್‌ಗಳನ್ನು ಹೊಂದಿದ್ದು, ಸ್ಟ್ಯಾಂಡರ್ಡ್ ಮತ್ತು ಪರ್ಲ್ ಕ್ಯಾಪ್ಸಲ್ ಎನ್ನುವ ಎರಡು ವೆರಿಯೆಂಟ್‌ಗಳೊಂದಿಗೆ ಐಷಾರಾಮಿ ಎಸ್‌ಯುವಿ ಕಾರು ಖರೀದಿದಾರರಲ್ಲಿ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಸೂಪರ್ ಕಾರ್ ಕ್ರೇಜ್: ಆರು ತಿಂಗಳಿನಲ್ಲಿ 5 ಸಾವಿರ ಕಾರುಗಳನ್ನು ಮಾರಾಟ ಮಾಡಿದ ಲ್ಯಾಂಬೋರ್ಗಿನಿ

ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಭಾರತದಲ್ಲಿ ರೂ. 3.15 ಕೋಟಿಯಿಂದ ರೂ. 3.43 ಕೋಟಿ ಬೆಲೆ ಹೊಂದಿದ್ದು, ಹೊಸ ಕಾರು ಇದುವರೆಗೆ ಭಾರತದಲ್ಲಿ 200ಕ್ಕೂ ಹೆಚ್ಚು ಯುನಿಟ್‌ ಮಾರಾಟಗೊಂಡಿದೆ.

ಸೂಪರ್ ಕಾರ್ ಕ್ರೇಜ್: ಆರು ತಿಂಗಳಿನಲ್ಲಿ 5 ಸಾವಿರ ಕಾರುಗಳನ್ನು ಮಾರಾಟ ಮಾಡಿದ ಲ್ಯಾಂಬೋರ್ಗಿನಿ

ಸೂಪರ್ ಕಾರುಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಲ್ಯಾಂಬೋರ್ಗಿನಿ ಕಂಪನಿಯು ಮೊದಲ ಬಾರಿಗೆ ಉರುಸ್ ಮೂಲಕ ಐಷಾರಾಮಿ ಎಸ್‌ಯುವಿ ವಿಭಾಗಕ್ಕೆ ಹೆಜ್ಜೆಯಿರಿಸಿದ್ದು, ಉರುಸ್ ಎಸ್‌ಯುವಿ ಮಾದರಿಯು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ 4.0-ಲೀಟರ್ ಟ್ವಿನ್ ಟರ್ಬೊ ವಿ8 ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ.

ಸೂಪರ್ ಕಾರ್ ಕ್ರೇಜ್: ಆರು ತಿಂಗಳಿನಲ್ಲಿ 5 ಸಾವಿರ ಕಾರುಗಳನ್ನು ಮಾರಾಟ ಮಾಡಿದ ಲ್ಯಾಂಬೋರ್ಗಿನಿ

ಈ ಮೂಲಕ ಪ್ರತಿ ಗಂಟೆಗೆ 305 ಕಿ.ಮಿ ಟಾಪ್ ಸ್ಪೀಡ್‌ನಲ್ಲಿ ಕ್ರಮಿಸಬಲ್ಲ ಶಕ್ತಿ ಹೊಂದಿರುವ ಉರುಸ್ ಎಸ್‌ಯುವಿಯು ಕೇವಲ 3.6 ಸೇಕೆಂಡ್‌ಗಳಲ್ಲಿ 100 ಕಿಮಿ ವೇಗ ಪಡೆಯಬಲ್ಲದು. ಜೊತಗೆ ವಿವಿಧ ಡ್ರೈವಿಂಗ್ ಮೂಡ್‌ಗಳನ್ನು ಹೊಂದಿರುವ ಹೊಸ ಕಾರು ಲೈಫ್‌ಸ್ಟೈಲ್ ಜೊತೆಗೆ ಅಡ್ವೆಂಚರ್ ಡ್ರೈವ್‌ನಲ್ಲೂ ಮುಂಚೂಣಿ ಹೊಂದಿದೆ.

ಸೂಪರ್ ಕಾರ್ ಕ್ರೇಜ್: ಆರು ತಿಂಗಳಿನಲ್ಲಿ 5 ಸಾವಿರ ಕಾರುಗಳನ್ನು ಮಾರಾಟ ಮಾಡಿದ ಲ್ಯಾಂಬೋರ್ಗಿನಿ

ಸ್ಟ್ರೀಟ್, ಟ್ರ್ಯಾಕ್ ಮತ್ತು ಆಫ್ ರೋಡಿಂಗ್ ಮೋಡ್‌ಗಳಾದ ಸ್ಯಾಂಡ್, ಗ್ರಾವೆಲ್, ಸ್ನೋ ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, ಎಲ್ಲಾ ಕಠಿಣ ಪರಿಸ್ಥಿತಿಗಳಲ್ಲೂ ಸುಲಭ ಚಾಲನೆ ಮಾಡುವಂತಹ ಸೌಲಭ್ಯಗಳನ್ನು ಹೊಂದಿದೆ. ಹೀಗಾಗಿ ಇದು ಐಷಾರಾಮಿ ಕಾರು ಪ್ರಿಯರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿದ್ದು, ಹಲವು ವಿಶೇಷ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಸೂಪರ್ ಕಾರ್ ಕ್ರೇಜ್: ಆರು ತಿಂಗಳಿನಲ್ಲಿ 5 ಸಾವಿರ ಕಾರುಗಳನ್ನು ಮಾರಾಟ ಮಾಡಿದ ಲ್ಯಾಂಬೋರ್ಗಿನಿ

ಸೂಪರ್ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನ ಹೊಂದಿರುವ ಲ್ಯಾಂಬೋರ್ಗಿನಿ ಕಂಪನಿಯು ಕಳೆದ 25 ವರ್ಷಗಳ ಹಿಂದೆಯೇ ಸೂಪರ್ ಕಾರುಗಳ ಜೊತೆಗೆ ಪ್ರಮುಖ 2 ಎಸ್‌ಯುವಿಗಳನ್ನು ಪರಿಚಯಿಸಿತ್ತು. ಆದ್ರೆ ಮಾರಾಟದಲ್ಲಿ ಆದ ಹಿನ್ನಡೆಯಿಂದಾಗಿ ಎಸ್‌ಯುವಿ ಮಾರಾಟವನ್ನು ಕೆಲ ವರ್ಷಗಳ ಹಿಂದೆ ಕೈಬಿಟ್ಟಿತ್ತು. ಆದ್ರೆ ಇದೀಗ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಉರುಸ್ ಮೂಲಕ ಕಂಪನಿಯು ಹೊಸ ದಾಖಲೆಗೆ ಕಾರಣವಾಗಿದೆ.

Most Read Articles

Kannada
English summary
Lamborghini sold 5090 units in six months worldwide details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X