ಬಹುನಿರೀಕ್ಷಿತ ದುಬಾರಿ 'ಲ್ಯಾಂಬೋರ್ಗಿನಿ ಉರುಸ್ ಪರ್ಫಾರ್ಮಂಟೆ' ಭಾರತದಲ್ಲಿ ಬಿಡುಗಡೆ

ಇಟಾಲಿಯನ್ ಸೂಪರ್ ಕಾರ್ ತಯಾರಕ ಕಂಪನಿ 'ಲ್ಯಾಂಬೋರ್ಗಿನಿ' ಭಾರತೀಯ ಮಾರುಕಟ್ಟೆಯಲ್ಲಿ ತನ್ನ ದುಬಾರಿ 'ಉರುಸ್ ಪರ್ಫಾರ್ಮಂಟೆ' ಎಸ್‌ಯುವಿಯನ್ನು 4.22 ಕೋಟಿ ರೂ. (ಎಕ್ಸ್ ಶೋ ರೂಂ) ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈ ಎಸ್‌ಯುವಿ ಲೈಟ್ ವೇಟ್ ಮತ್ತು ಸ್ಪೋರ್ಟಿಯರ್ ಆವೃತ್ತಿಯಾಗಿದೆ. ಹಿಂದಿನ OG ಉರುಸ್‌ಗಿಂತ 47 ಕೆ.ಜಿ ಹಗುರವಾಗಿದೆ.

'ಲ್ಯಾಂಬೋರ್ಗಿನಿ ಉರುಸ್ ಪರ್ಫಾರ್ಮಂಟೆ' ಎಂಜಿನ್ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ ಮೂಲ ಸೂಪರ್ ಎಸ್‌ಯುವಿಯಲ್ಲಿ ಕಂಡುಬರುವ 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್‌ನ ಅಪ್ಡೇಟ್ ವರ್ಷನ್ ಆಗಿದೆ. ಈ ಲ್ಯಾಂಬೋರ್ಗಿನಿ ಉರುಸ್ ಪರ್ಫಾರ್ಮಂಟೆ ಫೊರ್ಸ್ಡ್ ಇಂಡಕ್ಷನ್ ಎಂಜಿನ್ 657bhp ಗರಿಷ್ಠ ಪವರ್ ಮತ್ತು 850Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟಾರ್ಕ್ ಒಂದೇ ಆಗಿದ್ದರೂ, OG ಉರುಸ್‌ಗೆ ಹೋಲಿಕೆ ಮಾಡಿದರೆ ಹೊಸ ಪರ್ಫಾರ್ಮೆಂಟೆ ತನ್ನ ಎಂಜಿನ್‌ನಿಂದ ಹೆಚ್ಚುವರಿ 16bhpಯನ್ನು ಪಡೆದಿದೆ.

ಬಹುನಿರೀಕ್ಷಿತ ದುಬಾರಿ ಲ್ಯಾಂಬೋರ್ಗಿನಿ ಉರುಸ್ ಪರ್ಫಾರ್ಮಂಟೆ ಭಾರತದಲ್ಲಿ ಬಿಡುಗಡೆ

ಲ್ಯಾಂಬೋರ್ಗಿನಿ ಉರುಸ್ ಪರ್ಫಾರ್ಮಂಟೆ ಎಸ್‌ಯುವಿಯ ಎಲ್ಲಾ ಫೋರ್‌ ವೀಲ್‌ಗಳಿಗೆ ಪವರ್ ಸಪ್ಲೈ ಮಾಡಲು 8-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ಗೆ ಎಂಜಿನ್ ಅನ್ನು ಹಿಂದಿನ ಮಾದರಿಗಳಂತೆ ಇಲ್ಲೂ ಅಳವಡಿಸಲಾಗಿದೆ. ಹೊಸ ಉರುಸ್ ಪರ್ಫಾರ್ಮೆಂಟೆ ಕೇವಲ 3.3 ಸೆಕೆಂಡ್‌ಗಳಲ್ಲಿ 0-100 ಕಿಲೋ ಮೀಟರ್/ಗಂ ಗರಿಷ್ಠ ವೇಗವನ್ನು ತಲುಪಬಲ್ಲದು (ಮೂಲ ಉರುಸ್‌ಗಿಂತ 0.3 ಸೆಕೆಂಡ್‌ಗಳು ಹೆಚ್ಚಿನ ಸ್ವೀಡ್ ಇದಾಗಿದೆ). 306 ಕಿ.ಮೀ/ಗಂ ಗರಿಷ್ಠ ವೇಗದಲ್ಲಿ ಚಾಲಕ ಈ ಕಾರನ್ನು ಡ್ರೈವ್ ಮಾಡಬಹುದು.

ಸ್ಟ್ರಾಡಾ (ಸ್ಟ್ರೀಟ್), ಸ್ಪೋರ್ಟ್, ಕೊರ್ಸಾ (ಟ್ರ್ಯಾಕ್), ಟೆರ್ರಾ (ಡರ್ಟ್), ಸಬ್ಬಿಯಾ (ಸ್ಯಾಂಡ್) ಮತ್ತು ನೆವ್ (ಸ್ನೋ) ಡ್ರೈವಿಂಗ್ ಮೋಡ್‌ಗಳ ಜೊತೆಗೆ ಹೊಸ ಲ್ಯಾಂಬೋರ್ಗಿನಿ ಉರುಸ್ ಪರ್ಫಾರ್ಮೆಂಟೆ ಹೊಸ ರ‍್ಯಾಲಿ ಮೋಡ್ ಸಹ ಪಡೆದುಕೊಂಡಿದೆ. ಹೊಸದಾಗಿರುವ ಈ ಮೋಡ್ ಆಂಟಿ-ರೋಲ್ ಬಾರ್ ಮತ್ತು ಡ್ಯಾಂಪಿಂಗ್ ಸಿಸ್ಟಮ್‌ಗಳನ್ನು ಟ್ವೀಕ್ ಮಾಡುವ ಮೂಲಕ ಉರಸ್ ಪರ್ಫಾರ್ಮಂಟೆಯ ಓವರ್‌ಸ್ಟಿಯರ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಲ್ಯಾಂಬೋರ್ಗಿನಿ ಕಂಪನಿ ಅಧಿಕೃತ ಮಾಹಿತಿ ನೀಡಿದೆ.

ಬಹುನಿರೀಕ್ಷಿತ ದುಬಾರಿ ಲ್ಯಾಂಬೋರ್ಗಿನಿ ಉರುಸ್ ಪರ್ಫಾರ್ಮಂಟೆ ಭಾರತದಲ್ಲಿ ಬಿಡುಗಡೆ

ಹೊಸ ಉರುಸ್ ಪರ್ಫಾರ್ಮೆಂಟೆಯು ಲೈಟ್ ವೇಟ್ ಆಗಿರುವ 22-ಇಂಚಿನ ವೀಲ್ ಸಹಾಯದಿಂದ ಚಲಿಸಲಿದೆ. ಅದು ಪಿರೆಲ್ಲಿ ಪಿ ಝೀರೋ ಟ್ರೋಫಿಯೊ R ಟೈರ್‌ಗಳೊಂದಿಗೆ (285/40 R22 - ಮುಂಭಾಗ ಮತ್ತು 325/35 R22 - ಹಿಂಭಾಗ) ಮೊದಲ ಬಾರಿಗೆ ಇಟಾಲಿಯನ್ ಟೈರ್ ಸಂಸ್ಥೆಯು ಸೆಮಿ-ಸ್ಲಿಕ್ ಟೈರ್ ಅನ್ನು ಅಭಿವೃದ್ಧಿಪಡಿಸಿದೆ. ಹೊಸ ಉರುಸ್ ಪರ್ಫಾರ್ಮೆಂಟೆ SUV ಅಲಾಯ್ ವೀಲ್ ಮಾಡಿಫೈ ಆಗಿರುವ ಮುಂಭಾಗ ಹಾಗೂ ಹಿಂಭಾಗದ ಬಂಪರ್ ಮತ್ತು ಡಿಫ್ಯೂಸರ್ ಅನ್ನು ಒಳಗೊಂಡಿದ್ದು, ಆಕರ್ಷಕವಾಗಿ ಕಾಣಿಸುತ್ತಿದೆ.

ನೂತನವಾಗಿ ಲಾಂಚ್ ಆಗಿರುವ ಲ್ಯಾಂಬೋರ್ಗಿನಿ ಉರುಸ್ ಪರ್ಫಾರ್ಮೆಂಟೆ ಹಗುರವಾದ ಅಕ್ರಾಪೋವಿಕ್ ಟೈಟಾನಿಯಂ ಎಕ್ಸಾಸ್ಟ್ ಸಿಸ್ಟಮ್ ಸಹ ಹೊಂದಿದೆ. ಹೊಸ ಪರ್ಫಾರ್ಮೆಂಟೆಯ ತೂಕವನ್ನು ಕಡಿಮೆ ಮಾಡಲು ಕಂಪನಿಯು ಕಾರಿನ ಕೆಲವು ಭಾಗಗಳಲ್ಲಿ ಕಾರ್ಬನ್ ಫೈಬರ್ ಅನ್ನು ಬಳಸಿದೆ. ಇದನ್ನು ಕಾರಿನ ಬಾನೆಟ್, ವೀಲ್‌ಗಳು, ಹಿಂಭಾಗದ ಡಿಫ್ಯೂಸರ್ ಮತ್ತು ಹೊಸದಾಗಿರುವ ಹಿಂಬದಿಯ ವಿಂಗ್‌ಗಳ ಮೇಲೆ ನೋಡಬಹುದಾಗಿದೆ. ಇಷ್ಟೆಲ್ಲ ವೈಶಿಷ್ಟಗಳೊಂದಿಗೆ ಉರುಸ್ ಪರ್ಫಾರ್ಮೆಂಟೆ ನೋಡಲು ಸ್ಪೋರ್ಟಿ ಲುಕ್ ಹೊಂದಿದೆ.

ಭಾರತದಲ್ಲಿ ಹೊಸ ಉರುಸ್ ಪರ್ಫಾರ್ಮೆಂಟೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಲ್ಯಾಂಬೋರ್ಗಿನಿ ಇಂಡಿಯಾದ ಮುಖ್ಯಸ್ಥ ಶರದ್ ಅಗರ್ವಾಲ್, 'ಭಾರತದಲ್ಲಿ ಬ್ರ್ಯಾಂಡ್‌ಗೆ ಹೊಸ ಮಾರುಕಟ್ಟೆಯನ್ನು ತೆರೆಯುವಲ್ಲಿ ಈ SUV ಪ್ರಮುಖ ಪಾತ್ರ ವಹಿಸಿದೆ ಎಂದು ನಂಬಿದ್ದೇವೆ. ಆದ್ದರಿಂದ ನಮ್ಮ ಗ್ರಾಹಕರಿಗೆ ಪರಿಚಯಿಸಲು ಹೆಚ್ಚು ಸಂತೋಷಪಡುತ್ತೇವೆ. ಈ ಕಾರು ಹಗುರವಾದ, ಏರೋಡೈನಾಮಿಕ್ ವಿನ್ಯಾಸದ ಜೊತೆಗೆ ಸ್ಪೋರ್ಟಿಯರ್ ಲುಕ್ ಹೊಂದಿದೆ. ರಸ್ತೆಯಲ್ಲಿ ಮಾತ್ರವಲ್ಲದೆ ಹಿಲ್, ಆಫ್‌ರೋಡ್ ಡ್ರೈವ್ ಮಾಡಬಹುದು ಎಂದು ಹೇಳಿದ್ದಾರೆ.

ಇಟಾಲಿಯನ್ ಸೂಪರ್ ಕಾರ್ ತಯಾರಿಕಾ ಕಂಪನಿ ಲ್ಯಾಂಬೋರ್ಗಿನಿ ತಯಾರಿಸಿರುವ ಉರಸ್ ಪರ್ಫಾರ್ಮೆಂಟೆ, ಆ ಕಂಪನಿಯ SUVಗಳಲ್ಲಿ ಅತ್ಯಂತ ಹಗುರವಾದ ಆವೃತ್ತಿಯಾಗಿದೆ. ದೇಶದ ಪ್ರಸಿದ್ಧ ಉದ್ಯಮಿಗಳು, ಶ್ರೀಮಂತರು, ಸಿನಿಮಾ ನಟ, ನಟಿಯರು ಹಾಗೂ ಕ್ರಿಕೆಟಿಗರು ಈ ಹಗುರವಾದ ಲ್ಯಾಂಬೋರ್ಗಿನಿ SUVಯನ್ನು ಖರೀದಿ ಮಾಡಿ, ದೇಶದ ರಸ್ತೆಗಳಲ್ಲಿ ಶೀಘ್ರದಲ್ಲೇ ಓಡಾಡಬಹುದು. ಯಾರು ಈ ಆಕರ್ಷಕ ಸ್ಪೋರ್ಟಿ ಲುಕ್ ಹೊಂದಿರುವ ಕಾರನ್ನು ಖರೀದಿ ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
English summary
Lamborghini urus performante launched in India
Story first published: Friday, November 25, 2022, 11:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X