ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತದಲ್ಲಿ ಕಾರು ಉತ್ಪಾದನೆ: ಸ್ಕೋಡಾ ಕುಶಾಕ್ ರಫ್ತು ಪ್ರಾರಂಭ

ಭಾರತೀಯ ಮಾರುಕಟ್ಟೆಯಲ್ಲಿ ಆಡಿ, ಲ್ಯಾಂಬೋರ್ಗಿನಿ, ಪೋರ್ಷೆ, ಸ್ಕೋಡಾ ಮತ್ತು ಫೊಕ್ಸ್‌ವ್ಯಾಗನ್ ಸೇರಿದಂತೆ ಕಂಪನಿಗಳು ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SAVWIPL) ಅಡಿಯಲ್ಲಿ ನಿರ್ವಹಿಸುತ್ತಿದೆ.

ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತದಲ್ಲಿ ಕಾರು ಉತ್ಪಾದನೆ: ಸ್ಕೋಡಾ ಕುಶಾಕ್ ರಫ್ತು ಪ್ರಾರಂಭ

ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SAVWIPL) ಗ್ರೂಪ್ ಈಗಾಗಲೇ ತನ್ನ 5,50,000 ಯುನಿಟ್ ಕಾರುಗಳನ್ನು ದಕ್ಷಿಣ ಅಮೇರಿಕಾ, ಮಧ್ಯ ಅಮೇರಿಕಾ, ಆಫ್ರಿಕಾ, ಗಲ್ಫ್ ಸಹಕಾರ ಮಂಡಳಿ (GCC) ಮತ್ತು ಕೆರಿಬಿಯನ್ ಪ್ರದೇಶದ 44 ದೇಶಗಳಿಗೆ ರಫ್ತು ಮಾಡಿದೆ. ಇದೀಗ ಈ ಗ್ರೂಪ್ ಸ್ಕೋಡಾ ಕುಶಾಕ್ ಎಸ್‍ಯುವಿಯೊಂದಿಗೆ ತನ್ನ ರಫ್ತು ಬಂಡವಾಳವನ್ನು ವಿಸ್ತರಿಸಿದೆ. ಸ್ಥಳೀಯವಾಗಿ ನಿರ್ಮಿಸಲಾದ ಎಡಗೈ-ಡ್ರೈವ್ ಕುಶಾಕ್‌ನ ಮೊದಲ ಬ್ಯಾಚ್ ಅನ್ನು ಅರಬ್ ಗಲ್ಫ್ ಸಹಕಾರ ದೇಶಗಳಿಗೆ (ಎಜಿಸಿಸಿ) ರಫ್ತು ಮಾಡಿದೆ.

ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತದಲ್ಲಿ ಕಾರು ಉತ್ಪಾದನೆ: ಸ್ಕೋಡಾ ಕುಶಾಕ್ ರಫ್ತು ಪ್ರಾರಂಭ

ಫೊಕ್ಸ್‌ವ್ಯಾಗನ್ ಟೈಗನ್ ಮತ್ತು ಫೋಕ್ಸ್‌ವ್ಯಾಗನ್ ವರ್ಟಸ್ ನಂತರ, ಕುಶಾಕ್ ಭಾರತದಿಂದ ರಫ್ತು ಮಾಡಲಾದ ಮೂರನೇ ಮಾದರಿಯಾಗಿದೆ. ಭಾರತದಲ್ಲಿ ಸ್ಕೋಡಾ ಕಂಪನಿಯು ತನ್ನ ಕುಶಾಕ್ ಎಸ್‍ಯುವಿಯನ್ನು ದಾಖಲೆಯ ಮಟ್ಟದಲ್ಲಿ ಮಾರಾಟ ಮಾಡುತ್ತಿಡೆ. ಈ ಜನಪ್ರಿಯ ಕುಶಾಕ್ ಎಸ್‍ಯುವಿಯು ಸ್ಕೋಡಾ ಕಂಪನಿಗೆ ಗೇಮ್‌ ಚೇಂಜರ್ ಮಾದರಿಯಾಗಿದೆ.

ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತದಲ್ಲಿ ಕಾರು ಉತ್ಪಾದನೆ: ಸ್ಕೋಡಾ ಕುಶಾಕ್ ರಫ್ತು ಪ್ರಾರಂಭ

ಸ್ಕೋಡಾ ಭಾರತದಲ್ಲಿ ಕುಶಾಕ್ ಎಸ್‌ಯುವಿಯನ್ನು ಬಿಡುಗಡೆ ಮಾಡಿ ಒಂದು ವರ್ಷಕ್ಕೂ ಹೆಚ್ಚು ಆಗಿದೆ. ಮಾರಾಟವನ್ನು ಇನ್ನಷ್ಟು ಸುಧಾರಿಸುವ ಪ್ರಯತ್ನದಲ್ಲಿ, ಸ್ಕೋಡಾ ಭಾರತದಲ್ಲಿ ಸ್ಕೋಡಾ ಕುಶಾಕ್ ಎಸ್‌ಯುವಿಯ ಮತ್ತೊಂದು ರೂಪಾಂತರವನ್ನು ಹೆಚ್ಚು ಕೈಗೆಟುಕುವ ಬೆಲೆಯೊಂದಿಗೆ ಇತ್ತೀಚೆಗೆ ಪರಿಚಯಿಸಿತ್ತು.

ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತದಲ್ಲಿ ಕಾರು ಉತ್ಪಾದನೆ: ಸ್ಕೋಡಾ ಕುಶಾಕ್ ರಫ್ತು ಪ್ರಾರಂಭ

ಬೆಲೆ ಏರಿಕೆ ಮತ್ತು ಸೆಮಿಕಂಡಕ್ಟರ್ ಕೊರತೆ ನೀಗಿಸಲು ಇದೊಂದು ಜಾಣ ನಡೆ. ಹೊಸದಾಗಿ ಸೇರಿಸಲಾದ ರೂಪಾಂತರವನ್ನು ಸ್ಕೋಡಾ ಕುಶಾಕ್ ಎನ್‌ಎಸ್‌ಆರ್ ಎಂದು ಕರೆಯಲಾಗುತ್ತದೆ. ಹೆಸರಿನಲ್ಲಿರುವ 'ಎನ್‌ಎಸ್‌ಆರ್' ಎಂದರೆ "ಸನ್‌ರೂಫ್ ಅಲ್ಲದ" ಮತ್ತು ಈ ಇತ್ತೀಚಿನ ರೂಪಾಂತರವು ಎಸ್‌ಯುವಿಯ ಸ್ಟೈಲ್ ಟ್ರಿಮ್ ಮಟ್ಟವನ್ನು ಆಧರಿಸಿದೆ.

ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತದಲ್ಲಿ ಕಾರು ಉತ್ಪಾದನೆ: ಸ್ಕೋಡಾ ಕುಶಾಕ್ ರಫ್ತು ಪ್ರಾರಂಭ

ಸನ್‌ರೂಫ್, ಆಟೋ-ಡಿಮ್ಮಿಂಗ್ ರಿಯರ್ ವ್ಯೂ ಮಿರರ್‌ಗಳು, ರೈನ್-ಸೆನ್ಸಿಂಗ್ ವೈಪರ್‌ಗಳು ಮತ್ತು ದೊಡ್ಡದಾದ ಸ್ಪೇರ್ ವ್ಹೀಲ್ ಅನುಪಸ್ಥಿತಿಯಿಂದಾಗಿ, ಹೊಸ NSR ರೂಪಾಂತರವು ಸ್ಕೋಡಾ ಕುಶಾಕ್ ಎಸ್‍ಯುವಿಯ ಪ್ರಮಾಣಿತ 'ಸ್ಟೈಲ್' ರೂಪಾಂತರಕ್ಕಿಂತ ಸುಮಾರು 20,000 ರೂ ಅಗ್ಗವಾಗಿದೆ.

ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತದಲ್ಲಿ ಕಾರು ಉತ್ಪಾದನೆ: ಸ್ಕೋಡಾ ಕುಶಾಕ್ ರಫ್ತು ಪ್ರಾರಂಭ

ಈ ಹೊಸ ಸ್ಕೋಡಾ ಕುಶಾಕ್ ಎನ್‌ಎಸ್‌ಆರ್‌ ಎಸ್‍ಯುವಿಯಲ್ಲಿನ ಉಳಿದ ವೈಶಿಷ್ಟ್ಯಗಳು ಎಸ್‌ಯುವಿಯ 'ಸ್ಟೈಲ್' ರೂಪಾಂತರಕ್ಕೆ ಹೋಲುತ್ತವೆ ಮತ್ತು ದೊಡ್ಡ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋ ಕ್ಲೈಮೇಟ್ ಕಂಟ್ರೋಲ್, ರಿಯರ್ ಎಸಿ ವೆಂಟ್‌ಗಳು, ತಂಪಾಗಿರುವಂತಹ ಇತರ ವೈಶಿಷ್ಟ್ಯಗಳನ್ನು ಮುಂದುವರೆಸಿದೆ.

ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತದಲ್ಲಿ ಕಾರು ಉತ್ಪಾದನೆ: ಸ್ಕೋಡಾ ಕುಶಾಕ್ ರಫ್ತು ಪ್ರಾರಂಭ

ಗ್ಲೋವ್ ಬಾಕ್ಸ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ವೈರ್‌ಲೆಸ್ ಚಾರ್ಜರ್, ಕ್ರೂಸ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಆಟೋ ಹೆಡ್‌ಲ್ಯಾಂಪ್‌ಗಳು, ಆಂಬಿಯೆಂಟ್ ಲೈಟಿಂಗ್ ಮತ್ತು ಇನ್ನಷ್ಟು ಫೀಚರ್ಸ್ ಗಳನ್ನು ನೀಡಲಾಗಿದೆ.

ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತದಲ್ಲಿ ಕಾರು ಉತ್ಪಾದನೆ: ಸ್ಕೋಡಾ ಕುಶಾಕ್ ರಫ್ತು ಪ್ರಾರಂಭ

ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಮಲ್ಟಿಪಲ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, TCS, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್-ಸ್ಟಾರ್ಟ್ ಅಸಿಸ್ಟ್, ISOFIX ಪಾಯಿಂಟ್‌ಗಳು, ಬ್ರೇಕ್ ಡಿಸ್ಕ್ ವೈಪಿಂಗ್, ಮತ್ತು ಇನ್ನೂ ಹೆಚ್ಚಿನವುಗಳನ್ನು ನೀಡಿದೆ.

ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತದಲ್ಲಿ ಕಾರು ಉತ್ಪಾದನೆ: ಸ್ಕೋಡಾ ಕುಶಾಕ್ ರಫ್ತು ಪ್ರಾರಂಭ

ಭಾರತದಲ್ಲಿ ಸ್ಕೋಡಾ ಕುಶಾಕ್ ಎಸ್‍ಯುವು ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಮೂಲ ಪವರ್‌ಟ್ರೇನ್ ಯುನಿಟ್ 1.0-ಲೀಟರ್, 3-ಸಿಲಿಂಡರ್ ಎಂಜಿನ್ ಆಗಿದ್ದು, ಇದು 115 ಬಿಹೆಚ್‍ಪಿ ಪವರ್ ಮತ್ತು 178 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮತ್ತೊಂದೆಡೆ, ಹೆಚ್ಚು ಶಕ್ತಿಶಾಲಿ 1.5-ಲೀಟರ್ TSI ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತದಲ್ಲಿ ಕಾರು ಉತ್ಪಾದನೆ: ಸ್ಕೋಡಾ ಕುಶಾಕ್ ರಫ್ತು ಪ್ರಾರಂಭ

ಈ ಎರಡೂ ಎಂಜಿನ್‌ಗಳನ್ನು ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ ಎಂದು ನಮೂದಿಸುವುದು ಯೋಗ್ಯವಾಗಿದೆ. ಆದರೆ 1.0 TSI ಎಂಜಿನ್ 1.5 TSI ರೂಪಾಂತರದಲ್ಲಿ ಕಂಡುಬರುವ 7-ಸ್ಪೀಡ್ DCT ಗೇರ್‌ಬಾಕ್ಸ್ ಬದಲಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಒಳಗೊಂಡಿದೆ.

ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತದಲ್ಲಿ ಕಾರು ಉತ್ಪಾದನೆ: ಸ್ಕೋಡಾ ಕುಶಾಕ್ ರಫ್ತು ಪ್ರಾರಂಭ

ಈ ಸ್ಕೋಡಾ ಕುಶಾಕ್ ಮತ್ತು ಸ್ಕೋಡಾ ಸ್ಲಾವಿಯಾ ಬಿಡುಗಡೆಯೊಂದಿಗೆ, ಸ್ಕೋಡಾ ಕಂಪನಿಯ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆಯನ್ನು ಸಾಧಿಸಿದೆ. ಇದಲ್ಲದೆ, ಸ್ಕೋಡಾ ಕುಶಾಕ್ ಫೋಕ್ಸ್‌ವ್ಯಾಗನ್ ಗ್ರೂಪ್‌ನ ಅಡಿಯಲ್ಲಿ ಭಾರತ 2.0 ವ್ಯಾಪಾರ ತಂತ್ರದೊಂದಿಗೆ ಭಾರತದಲ್ಲಿ ತಯಾರಿಸಲಾದ ಮೊದಲ ವಾಹನವಾಗಿದೆ. ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸಲು ಮತ್ತು ವಾಹನ ತಯಾರಕರಿಗೆ ಲಾಭವನ್ನು ಹೆಚ್ಚಿಸಲು 95 ಪ್ರತಿಶತದಷ್ಟು ವಾಹನವನ್ನು ಸ್ಥಳೀಯವಾಗಿ ತಯಾರಿಸಲಾಗುತ್ತದೆ. ಈ ಮೊದಲೇ ಹೇಳಿದಂತೆ, ಸ್ಕೋಡಾ ಕುಶಾಕ್ ಮತ್ತು ಸ್ಕೋಡಾ ಸ್ಲಾವಿಯಾ ಬಿಡುಗಡೆಯು ಭಾರತೀಯ ಮಾರುಕಟ್ಟೆಯಲ್ಲಿ ಸ್ಕೋಡಾ ಕಂಪನಿಗೆ ಕಾರು ಮಾರಾಟದಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ.

ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತದಲ್ಲಿ ಕಾರು ಉತ್ಪಾದನೆ: ಸ್ಕೋಡಾ ಕುಶಾಕ್ ರಫ್ತು ಪ್ರಾರಂಭ

ಸ್ಕೋಡಾ ಕುಶಾಕ್ ಮತ್ತು ಸ್ಕೋಡಾ ಸ್ಲಾವಿಯಾ ಬಿಡುಗಡೆಯೊಂದಿಗೆ, ಸ್ಕೋಡಾ ಕಂಪನಿಯ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆಯನ್ನು ಸಾಧಿಸಿದೆ. ಇದಲ್ಲದೆ, ಸ್ಕೋಡಾ ಕುಶಾಕ್ ಫೋಕ್ಸ್‌ವ್ಯಾಗನ್ ಗ್ರೂಪ್‌ನ ಅಡಿಯಲ್ಲಿ ಭಾರತ 2.0 ವ್ಯಾಪಾರ ತಂತ್ರದೊಂದಿಗೆ ಭಾರತದಲ್ಲಿ ತಯಾರಿಸಲಾದ ಮೊದಲ ವಾಹನವಾಗಿದೆ. ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸಲು ಮತ್ತು ವಾಹನ ತಯಾರಕರಿಗೆ ಲಾಭವನ್ನು ಹೆಚ್ಚಿಸಲು 95 ಪ್ರತಿಶತದಷ್ಟು ವಾಹನವನ್ನು ಸ್ಥಳೀಯವಾಗಿ ತಯಾರಿಸಲಾಗುತ್ತದೆ. ಈ ಮೊದಲೇ ಹೇಳಿದಂತೆ, ಸ್ಕೋಡಾ ಕುಶಾಕ್ ಮತ್ತು ಸ್ಕೋಡಾ ಸ್ಲಾವಿಯಾ ಬಿಡುಗಡೆಯು ಭಾರತೀಯ ಮಾರುಕಟ್ಟೆಯಲ್ಲಿ ಸ್ಕೋಡಾ ಕಂಪನಿಗೆ ಕಾರು ಮಾರಾಟದಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ.

ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತದಲ್ಲಿ ಕಾರು ಉತ್ಪಾದನೆ: ಸ್ಕೋಡಾ ಕುಶಾಕ್ ರಫ್ತು ಪ್ರಾರಂಭ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕುಶಾಕ್ ಎಸ್‌ಯುವಿಯು ದೀರ್ಘವಾದ ವೈಶಿಷ್ಟ್ಯಗಳ ಪಟ್ಟಿ, ವಿಶಾಲವಾದ ಒಳಾಂಗಣಗಳು ಮತ್ತು ಇಂಧನ-ಸಮರ್ಥ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಸುಸಜ್ಜಿತ ಮಾದರಿಯಾಗಿದೆ. ಆದರೆ ಇದರ ವಿಭಾಗದಲ್ಲಿ ಸ್ಪರ್ಧೆಯು ಹೆಚ್ಚು ತೀವ್ರವಾಗಿದೆ ಮತ್ತು ಎಸ್‍ಯುವಿಯ ಮಾರಾಟವನ್ನು ಇನ್ನಷ್ಟು ಸುಧಾರಿಸಲು ಸ್ಕೋಡಾ ವಿಭಿನ್ನ ತಂತ್ರಗಳೊಂದಿಗೆ ಬರಬೇಕಾಗಿದೆ.

Most Read Articles

Kannada
Read more on ಸ್ಕೋಡಾ skoda
English summary
Made in india skoda kushaq suvs export started to global markets details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X