ಮಹೀಂದ್ರಾ ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಮಹೀಂದ್ರಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹಲವು ಹೊಸ ಮಾದರಿಯ ಎಲೆಕ್ಟ್ರಿಕ್ ಕಾರುಗಳ ಮಾರಾಟಕ್ಕೆ ಸಿದ್ದವಾಗುತ್ತಿದ್ದು, ಕಂಪನಿಯು ಮುಂದಿನ ಕೆಲವೇ ತಿಂಗಳಿನಲ್ಲಿ ಬಹುನೀರಿಕ್ಷಿತ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದೆ.

ಮಹೀಂದ್ರಾ ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

75ನೇ ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾಗಿ ನಿನ್ನಯಷ್ಟೇ ತನ್ನ ಹೊಸ ತಲೆಮಾರಿನ ಇವಿ ಮಾದರಿಗಳನ್ನು ಅಧಿಕೃತವಾಗಿ ಅನಾವರಣಗೊಳಿಸಿದ ಮಹೀಂದ್ರಾ ಕಂಪನಿಯು ಹೊಸ ತಲೆಮಾರಿನ ಇವಿ ಕಾರುಗಳ ಬಿಡುಗಡೆಗೂ ಮುನ್ನ ಎಕ್ಸ್‌ಯುವಿ400 ಇವಿ ಮತ್ತು ಇಕೆಯುವಿ100 ಇವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ.

ಮಹೀಂದ್ರಾ ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಭವಿಷ್ಯದ ಕಾರು ಮಾದರಿಗಳ ಮೇಲೆ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಹೊಸ ತಲೆಮಾರಿನ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿರುವ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ400 ಇವಿ ಮಾದರಿಯನ್ನು ಹಲವಾರು ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆ ಮಾಡುತ್ತಿದೆ.

ಮಹೀಂದ್ರಾ ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಮಾಹಿತಿಗಳ ಪ್ರಕಾರ ಹೊಸ ಕಾರು ಮುಂಬರುವ 2023ರ ಸೆಪ್ಟೆಂಬರ್ ಹೊತ್ತಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಮುಂಬರುವ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಉತ್ಪಾದನಾ ಮಾದರಿಯೊಂದಿಗೆ ಅನಾವರಣಗೊಳ್ಳುವ ಸಾಧ್ಯತೆಗಳಿವೆ.

ಮಹೀಂದ್ರಾ ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಕಾರು ಅನಾವರಣದೊಂದಿಗೆ ಪ್ರಮುಖ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದು, ಹೊಸ ಎಕ್ಸ್‌ಯುವಿ400 ಮತ್ತು ಇಕೆಯುವಿ100 ಮಾದರಿಗಳು ಸಾಮಾನ್ಯ ಇವಿ ಕಾರು ಮಾದರಿಗಳಾದರೆ ಬಾರ್ನ್ ಇವಿ ಕಾನ್ಸೆಪ್ಟ್ ಮಾದರಿಗಳು ತುಸು ಹೆಚ್ಚಿನ ಮಟ್ಟದ ತಂತ್ರಜ್ಞಾನ ಪ್ರೇರಣೆ ಹೊಂದಿರಲಿವೆ.

ಮಹೀಂದ್ರಾ ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿರುವ ಮಹೀಂದ್ರಾ ಕಂಪನಿಯು ಬಾರ್ನ್ ಇವಿ ಕಾನ್ಸೆಪ್ಟ್ ಆಧರಿಸಿ ಒಟ್ಟು ಐದು ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಅನಾವರಣಗೊಳಿಸಿದೆ.

ಮಹೀಂದ್ರಾ ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಇವಿ ಕಾರು ಮಾದರಿಗಳನ್ನು ಕಂಪನಿಯು ಎಕ್ಸ್‌ಯುವಿ.ಇ(XUV.e) ಮತ್ತು ಬಿಇ (BE) ಎನ್ನುವ ಎರಡು ಬ್ರಾಂಡ್‌ಗಳ ಅಡಿಯಲ್ಲಿ ಮಾರಾಟ ಮಾಡಲಿದ್ದು, ಹೊಸ ಇವಿ ಕಾರುಗಳಲ್ಲಿ ಮೂರು ಎಸ್‌ಯುವಿ ಮಾದರಿಗಳಾಗಿದ್ದರೆ ಎರಡು ಎಸ್‌ಯುವಿ ಕೂಪೆ ಶೈಲಿಯಲ್ಲಿ ಆಧರಿಸಿರಲಿವೆ.

ಮಹೀಂದ್ರಾ ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಮಹೀಂದ್ರಾ ಕಂಪನಿಯು ಮೊದಲ ಹಂತದಲ್ಲಿ ಎಕ್ಸ್‌ಯುವಿ.ಇ ಬ್ರಾಂಡ್ ಕಾರುಗಳನ್ನು ಮಾರಾಟಗೊಳಿಸಲಿದ್ದು, ತದನಂತರವಷ್ಟೇ ಬಿಇ ಬ್ರಾಂಡ್ ಇವಿ ಕಾರುಗಳನ್ನು ಬಿಡುಗಡೆ ಮಾಡಲಿದೆ. 2024ರ ಕೊನೆಯಲ್ಲಿ ಎಕ್ಸ್‌ಯುವಿ.ಇ ಕಾರುಗಳ ಮಾರಾಟ ಆರಂಭವಾಗಲಿದ್ದು, ಬಿಇ ಬ್ರಾಂಡ್ ಕಾರುಗಳ ಮಾರಾಟವು 2025ರ ಕೊನೆಯಲ್ಲಿ ಆರಂಭವಾಗಲಿದೆ.

ಮಹೀಂದ್ರಾ ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಎಕ್ಸ್‌ಯುವಿ.ಇ ಮತ್ತು ಬಿಇ ಬ್ರಾಂಡ್ ಇವಿ ಕಾರುಗಳ ಬಿಡುಗಡೆಗೂ ಮುನ್ನ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ400 ಮತ್ತು ಇಕೆಯುವಿ100 ಮಾದರಿಗಳನ್ನು ಬಿಡುಗಡೆ ಮಾಡಲಿದ್ದು, ಈ ಎರಡು ಕಾರು ಮಾದರಿಗಳು ಸಾಮಾನ್ಯ ಕಾರುಗಳ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಆಧರಿಸಿರಲಿವೆ.

ಮಹೀಂದ್ರಾ ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಆದರೆ ಹೊಸ ಎಕ್ಸ್‌ಯುವಿ.ಇ ಮತ್ತು ಬಿಇ ಬ್ರಾಂಡ್ ಇವಿ ಕಾರುಗಳ ನಿರ್ಮಾಣಕ್ಕಾಗಿ ಕಂಪನಿಯು ಪ್ರತ್ಯೇಕವಾದ ಇನ್‌ಗ್ಲೊ(INGLO) ಪ್ಲ್ಯಾಟ್‌ಫಾರ್ಮ್ ಸಿದ್ದಪಡಿಸಿದ್ದು, ಹೊಸ ಪ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿರುವ ಇವಿ ಕಾರುಗಳು 60 ರಿಂದ 80 kWh ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರಲಿವೆ. ಹಾಗೆಯೇ ಹೊಸ ಕಾರುಗಳು 175kW ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಕೇವಲ 30 ನಿಮಿಷಗಳಲ್ಲಿ ಸೊನ್ನೆಯಿಂದ ಶೇ.80ರಷ್ಟು ರೀಚಾರ್ಜ್ ವೈಶಿಷ್ಟ್ಯತೆ ಹೊಂದಿವೆ.

ಮಹೀಂದ್ರಾ ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಇದರೊಂದಿಗೆ ಮಹೀಂದ್ರಾ ಕಂಪನಿಯು ಹೊಸ ಪ್ಲ್ಯಾಟ್‌ಫಾರ್ಮ್ ನಿರ್ಮಾಣಗೊಳಿಸಿದ ಐದು ಇವಿ ಕಾರು ಮಾದರಿಗಳಿಗೂ ಸುರಕ್ಷತೆಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್‌ ಒದಗಿಸುವ ಭರವಸೆ ವ್ಯಕ್ತಪಡಿಸಿದ್ದು, ಇವುಗಳಲ್ಲಿ ರಿಯರ್ ವ್ಹೀಲ್ ಡ್ರೈವ್ ಮತ್ತು ಆಲ್ ವೀಲ್ ಡ್ರೈವ್ ಮಾದರಿಗಳನ್ನು ಒಳಗೊಂಡಿದೆ.

ಮಹೀಂದ್ರಾ ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಈ ಮೂಲಕ ಹೊಸ ಮಾದರಿಗಳು ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್‌ಗಳ ಜೊತೆಗೆ ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿದ್ದು, ರಿಯಲ್ ವ್ಹೀಲ್ ಮಾದರಿಗಳು 231 ಬಿಎಚ್‌ಪಿಯಿಂದ 285 ಬಿಎಚ್‌ಪಿ ಉತ್ಪಾದಿಸಲಿದ್ದರೆ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿರುವ ಕಾರು ಮಾದರಿಗಳು 340 ಬಿಎಚ್‌ಪಿಯಿಂದ 394 ಬಿಎಚ್‌ಪಿ ಉತ್ಪಾದಿಸಬಲ್ಲವು.

ಮಹೀಂದ್ರಾ ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ವೈಶಿಷ್ಟ್ಯತೆಗಳ ವಿಷಯದಲ್ಲಿ ಹೊಸ ಇವಿ ಕಾರು ಮಾದರಿಗಳು ಐಷಾರಾಮಿ ಕಾರುಗಳಲ್ಲೂ ಇಲ್ಲದ ಹಲವು ಹೊಸ ಫೀಚರ್ಸ್‌ಗಳೊಂದಿಗೆ ಲೆವಲ್ 2 ಎಡಿಎಎಸ್ ಸೇರಿದಂತೆ ಹಲವಾರು ಫೀಚರ್ಸ್ ಹೊಂದಿರಲಿದ್ದು, ಎಲ್ಲಾ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಹೊಸ ಉತ್ಪನ್ನಗಳನ್ನು ಸಿದ್ದಪಡಿಸಲಾಗುತ್ತಿದೆ.

ಮಹೀಂದ್ರಾ ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಹೀಗಾಗಿ ಹೊಸ ಮಾದರಿಗಳಿಗೆ ಪೂರಕವಾಗಿ ಕಳೆದ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಗಿದ್ದ ಇಎಕ್ಸ್‌ಯುವಿ300 ಮಾದರಿಯನ್ನೇ ಕಂಪನಿಯು ಇದೀಗ ಎಕ್ಸ್‌ಯುವಿ400 ಹೆಸರಿನಲ್ಲಿ ಬಿಡುಗಡೆ ಮಾಡುತ್ತಿದ್ದು, ಸಾಮಾನ್ಯ ಎಕ್ಸ್‌ಯುವಿ300 ಮಾದರಿಗಿಂತಲೂ ಇವಿ ಕಾರು ಮಾದರಿಯು ವಿಭಿನ್ನವಾದ ವಿನ್ಯಾಸ ಹೊಂದಿರಲಿದೆ.

ಮಹೀಂದ್ರಾ ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಎಕ್ಸ್‌ಯುವಿ400 ಮಾದರಿಯು ವಿವಿಧ ವೆರಿಯೆಂಟ್‌ಗಳೊಂದಿಗೆ ಎರಡು ರೀತಿಯ ಬ್ಯಾಟರಿ ಆಯ್ಕೆ ಪೆಡೆದುಕೊಳ್ಳಲಿದ್ದು, ಇದು ಪ್ರತಿ ಚಾರ್ಜ್‌ಗೆ ಕನಿಷ್ಠ 350 ಕಿ.ಮೀ ನಿಂದ 480 ಕಿ.ಮೀ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್‌‌ಗಳನ್ನು ಹೊಂದಿರಲಿದೆ.

ಮಹೀಂದ್ರಾ ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಇದು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12 ಲಕ್ಷದಿಂದ ಆರಂಭವಾಗಿ ಟಾಪ್ ಎಂಡ್ ಮಾದರಿಯು ರೂ. 20 ಲಕ್ಷ ಬೆಲೆ ಹೊಂದಬಹುದಾಗಿದ್ದು, ಸ್ಟ್ಯಾಂಡರ್ಡ್ ಮತ್ತು ಎಕ್ಸ್ಸೆಂಡ್ ಮಾದರಿಗಳೊಂದಿಗೆ ನೆಕ್ಸಾನ್ ಇವಿ ಮತ್ತು ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಗಳಿಗೆ ಪೈಪೋಟಿಯಾಗಿದೆ.

Most Read Articles

Kannada
English summary
Mahindra all new xuv400 electric suv to be launched in next year details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X