ಹೊಸ ಮಾದರಿಗಳೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡ ಮಹೀಂದ್ರಾ

ಮಹೀಂದ್ರಾ ಕಂಪನಿಯು ತನ್ನ ಹೊಸ ತಲೆಮಾರಿನ ಎಸ್‌ಯುವಿ ಮಾದರಿಗಳೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ಹೊಸ ಕಾರುಗಳ ಮಾರಾಟವು ಮಹೀಂದ್ರಾ ಕಂಪನಿಯ ಮಾರಾಟ ಪಟ್ಟಿಯನ್ನು ಸಾಕಷ್ಟು ಸುಧಾರಿಸಿವೆ.

ಹೊಸ ಮಾದರಿಗಳೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡ ಮಹೀಂದ್ರಾ

ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ತನ್ನದೇ ಆದ ವೈಶಿಷ್ಟ್ಯತೆಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿರುವ ಮಹೀಂದ್ರಾ ಕಂಪನಿಯು ಕಳೆದ ತಿಂಗಳು ಒಟ್ಟು 34,508 ಯುನಿಟ್ ಕಾರು ಮಾರಾಟದೊಂದಿಗೆ ಶೇ. 163 ರಷ್ಟು ಬೆಳವಣಿಗೆ ಸಾಧಿಸಿದ್ದು, ಕಂಪನಿಯ ಹೊಸ ಕಾರು ಮಾರಾಟದಲ್ಲಿ ಸ್ಕಾರ್ಪಿಯೋ-ಎನ್, ಎಕ್ಸ್‌ಯುವಿ700 ಮತ್ತು ಥಾರ್ ಎಸ್‌ಯುವಿ ಅಗ್ರಸ್ಥಾನದಲ್ಲಿವೆ.

ಹೊಸ ಮಾದರಿಗಳೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡ ಮಹೀಂದ್ರಾ

2021ರ ಸೆಪ್ಟೆಂಬರ್ ಅವಧಿಯಲ್ಲಿ 13,134 ಯುನಿಟ್ ಮಾರಾಟ ಮಾಡಿದ್ದ ಮಹೀಂದ್ರಾ ಕಂಪನಿಯು ಇದೀಗ 34,508 ಯುನಿಟ್ ಮಾರಾಟದೊಂದಿಗೆ ಶೇ. 163 ರಷ್ಟು ಬೆಳವಣಿಗೆ ಸಾಧಿಸಿದ್ದು, ಎಸ್‌ಯುವಿ ಕಾರುಗಳ ಬೇಡಿಕೆಯು ಕಂಪನಿಗೆ ಭಾರೀ ಪ್ರಮಾಣದ ಲಾಭಾಂಶ ತಂದುಕೊಡುತ್ತಿದೆ.

ಹೊಸ ಮಾದರಿಗಳೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡ ಮಹೀಂದ್ರಾ

ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಥಾರ್, ಎಕ್ಸ್‌ಯುವಿ700 ಮತ್ತು ಸ್ಕಾರ್ಪಿಯೋ-ಎನ್ ಮಾದರಿಗಳೇ ಸುಮಾರು 4 ಲಕ್ಷಕ್ಕೂ ಅಧಿಕ ಬುಕಿಂಗ್ ಪಡೆದುಕೊಂಡಿದ್ದು, ಇದರಲ್ಲಿ ಉತ್ಪಾದನೆಗೆ ಅನುಗುಣವಾಗಿ ಇದುವರೆಗೆ ಸುಮಾರು 1.20 ಲಕ್ಷ ಯುನಿಟ್ ಮಾರಾಟ ಮಾಡಿದೆ.

ಹೊಸ ಮಾದರಿಗಳೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡ ಮಹೀಂದ್ರಾ

ಥಾರ್, ಎಕ್ಸ್‌ಯುವಿ700 ಮತ್ತು ಸ್ಕಾರ್ಪಿಯೋ-ಎನ್ ಎಸ್‌ಯುವಿ ಮಾದರಿಗಳ ಮಾರಾಟದಲ್ಲಿ ಹೆಚ್ಚಿನ ಬೇಡಿಕೆ ಕಾಯ್ದುಕೊಂಡಿದ್ದು, ಇದರಲ್ಲಿ ಶೇ.80 ರಷ್ಟು ಫುಲ್ ಸೈಜ್ ಎಸ್‌ಯುವಿ ಮಾದರಿಗಳನ್ನು ಮಾರಾಟ ಮಾಡಿದೆ.

ಹೊಸ ಮಾದರಿಗಳೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡ ಮಹೀಂದ್ರಾ

ಹೊಸ ಎಕ್ಸ್‌ಯುವಿ700 ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಬೇಡಿಕೆಯೆಂತೆ 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರಿನಲ್ಲಿ ಕಂಪನಿಯು 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ.

ಹೊಸ ಮಾದರಿಗಳೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡ ಮಹೀಂದ್ರಾ

2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್(6-ಸ್ಪೀಡ್ ಎಂಟಿ),450-ಎನ್ಎಂ ಟಾರ್ಕ್(6-ಸ್ಪೀಡ್ ಎಟಿ) ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.

ಹೊಸ ಮಾದರಿಗಳೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡ ಮಹೀಂದ್ರಾ

ಆಫ್-ರೋಡ್ ಪ್ರಿಯರಿಗಾಗಿ ವಿಶೇಷವಾಗಿ ಸಿದ್ದಗೊಂಡಿರುವ ಥಾರ್ ಕಾರು ಮಾದರಿಯು ಇದುವರೆಗೆ 1.30 ಲಕ್ಷಕ್ಕೂ ಹೆಚ್ಚು ಬುಕಿಂಗ್‌ನೊಂದಿಗೆ 60 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡಿವೆ. ಇನ್ನು ಸುಮಾರು 50 ಸಾವಿರಕ್ಕೂ ಹೆಚ್ಚು ಗ್ರಾಹಕರು ಹೊಸ ಕಾರು ಮಾದರಿಗಾಗಿ ಕಾಯುತ್ತಿದ್ದು, ಹೊಸ ಕಾರು ಆಫ್-ರೋಡ್‌ಗಿಂತಲೂ ಲೈಫ್‌ಸ್ಟೈಲ್ ಮಾದರಿಗಾಗಿ ಬದಲಾಗುತ್ತಿದೆ.

ಹೊಸ ಮಾದರಿಗಳೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡ ಮಹೀಂದ್ರಾ

ನ್ಯೂ ಜನರೇಷನ್ ಥಾರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಸದ್ಯ ಎಎಕ್ಸ್ ಮತ್ತು ಎಲ್ಎಕ್ಸ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಲ್ಯಾಡರ್-ಫ್ರೇಮ್ ಚಾರ್ಸಿ ಜೊತೆಗೆ ಹೊಸ ಸಸ್ಪೆಂಷನ್‌ ಸೌಲಭ್ಯವು ಹೊಸ ಥಾರ್ ಕಾರಿನ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿದೆ.

ಹೊಸ ಮಾದರಿಗಳೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡ ಮಹೀಂದ್ರಾ

ಥಾರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದ್ದು, ಬಿಎಸ್-6 ಎಂಜಿನ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದೆ.

ಹೊಸ ಮಾದರಿಗಳೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡ ಮಹೀಂದ್ರಾ

ಹಾಗೆಯೇ ಸ್ಕಾರ್ಪಿಯೋ-ಎನ್ ಮಾದರಿಯು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ 2.2 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಎರಡು ಮಾದರಿಗಳಲ್ಲೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳು ಖರೀದಿಗೆ ಲಭ್ಯವಿವೆ.

ಹೊಸ ಮಾದರಿಗಳೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡ ಮಹೀಂದ್ರಾ

2.0-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಮತ್ತು 2.2 ಲೀಟರ್ ಡೀಸೆಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಎರಡು ರೀತಿಯ ಪರ್ಫಾಮೆನ್ಸ್ ಆಯ್ಕೆಗಳನ್ನು ಹೊಂದಿದೆ.

ಹೊಸ ಮಾದರಿಗಳೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡ ಮಹೀಂದ್ರಾ

ಇದರೊಂದಿಗೆ ಮಹೀಂದ್ರಾ ಕಂಪನಿಯು ಹೊಸ ಕಾರು ಮಾದರಿಯನ್ನು ಈ ಹಿಂದಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳೊಂದಿಗೆ ಅಭಿವೃದ್ದಿಗೊಳಿಸಿದ್ದು, ಕಾರಿನ ಮುಂಭಾಗದಲ್ಲಿ ಮಹೀಂದ್ರಾ ಸಾಂಪ್ರದಾಯಿಕ ಸಿಕ್ಸ್ ಸ್ಲಾಟ್ ಫ್ರಂಟ್ ಗ್ರಿಲ್ ಜೊತೆಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಸ್ಕಾರ್ಪಿಯನ್ ಟೈಲ್ ಶೇಪ್ ಹೊಂದಿರುವ ಡಿಆರ್‌ಎಲ್ಎಸ್ ಮತ್ತು ಫಾಗ್ ಲ್ಯಾಂಪ್ ನೀಡಲಾಗಿದೆ.

ಹೊಸ ಮಾದರಿಗಳೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡ ಮಹೀಂದ್ರಾ

ಹೊಸ ಸ್ಕಾರ್ಪಿಯೋ-ಎನ್ ಮಾದರಿಯಲ್ಲಿ ಸಿ ಮತ್ತು ಡಿ-ಪಿಲ್ಲರ್ ಪ್ರದೇಶಗಳಲ್ಲಿ ವಿಂಡೋ ಕ್ರೋಮ್ ಫ್ರೇಮ್‌ನಲ್ಲಿ ಸ್ಕಾರ್ಪಿಯನ್ ಸ್ಟಿಂಗ್ ಅಂಶವನ್ನು ಸಹ ಹೊಂದಿದೆ. ಜೊತೆಗೆ ಹೊಸ ಸ್ಕಾರ್ಪಿಯೋ-ಎನ್‌ನಲ್ಲಿ ಹೊಸ ಡ್ಯುಯಲ್-ಟೋನ್ ಮಿಶ್ರಲೋಹದ 18 ಇಂಚಿನ ಚಕ್ರಗಳನ್ನು ನೀಡಲಾಗಿದ್ದು, ಲಂಬವಾಗಿ ಜೋಡಿಸಲಾದ ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು ಸ್ಪಾಯ್ಲರ್ ಅನ್ನು ಹೊಂದಿದೆ.

ಹೊಸ ಮಾದರಿಗಳೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡ ಮಹೀಂದ್ರಾ

ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಇಎಸ್ಇ, ಟ್ರಾಕ್ಷನ್ ಕಂಟ್ರೋಲ್, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಐಸೋಫಿಕ್ಸ್ ಆಂಕರ್ ಪಾಯಿಂಟ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಸೇರಿದಂತೆ ಹಲವಾರು ಫೀಚರ್ಸ್‌ಗಳಿವೆ.

ಹೊಸ ಮಾದರಿಗಳೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡ ಮಹೀಂದ್ರಾ

ಇನ್ನು ಹೊಸ ಎಕ್ಸ್‌ಯುವಿ700 ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಬೇಡಿಕೆಯೆಂತೆ 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದೆ.

ಹೊಸ ಮಾದರಿಗಳೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡ ಮಹೀಂದ್ರಾ

ಎಕ್ಸ್‌ಯುವಿ700 ಮಾದರಿಯಲ್ಲಿ ಎಂಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7 ಮತ್ತು ಎಎಕ್ಸ್7 ಲಗ್ಷುರಿ ವೆರಿಯೆಂಟ್‌ ಖರೀದಿಗೆ ಲಭ್ಯವಿದ್ದು, ಆಕರ್ಷಕ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿವೆ. ಕಂಪನಿಯೇ ಜೋಡಣೆ ಮಾಡುವ 7 ಸೀಟರ್ ಮಾದರಿಗಳನ್ನು ಹೊರತುಪಡಿಸಿ 5 ಸೀಟರ್ ಹೊಂದಿರುವ ಮಾದರಿಗಳಲ್ಲಿ 7 ಸೀಟರ್ ಬಯಸುವ ಗ್ರಾಹಕರು ಹೆಚ್ಚುವರಿ ರೂ. 70 ಸಾವಿರ ಪಾವತಿ ಮಾಡಬೇಕಾಗುತ್ತದೆ.

ಹೊಸ ಮಾದರಿಗಳೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡ ಮಹೀಂದ್ರಾ

ಇದರೊಂದಿಗೆ ಹೊಸ ಕಾರು ಸುರಕ್ಷಾ ವಿಚಾರವಾಗಿ ಭಾರತದಲ್ಲಿ 'ಸೇಫರ್ ಛಾಯ್ಸ್' ಪ್ರಶಸ್ತಿ ಪಡೆದ ಮೊದಲ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಹೊಸ ಕಾರಿನಲ್ಲಿ ಪ್ರಯಾಣಿಕರ ಗರಿಷ್ಠ ಸುರಕ್ಷತೆಗಾಗಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದೆ.

ಹೊಸ ಮಾದರಿಗಳೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡ ಮಹೀಂದ್ರಾ

ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್‌ಟೆಸ್ಟಿಂಗ್‌ನಲ್ಲಿ ಎಕ್ಸ್‌ಯುವಿ700 ಮಾದರಿಯು ವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ ನೀಡುವ 17 ಅಂಕಗಳಲ್ಲಿ 16.03 ಅಂಕಗಳನ್ನು ಮತ್ತು ಮಕ್ಕಳ ಸುರಕ್ಷತೆಗಾಗಿ ನೀಡಲಾಗುವ 49 ಅಂಕಗಳಲ್ಲಿ 41.66 ಅಂಕಗಳೊಂದಿಗೆ ಗರಿಷ್ಠ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದ್ದು, ಇದೀಗ ಹೊಸ ಕಾರಿನ ಸುರಕ್ಷಾ ಸೌಲಭ್ಯಗಳನ್ನು ಆಧರಿಸಿ ಗ್ಲೊಬಲ್ ಎನ್‌ಸಿಎಪಿ ಸಂಸ್ಥೆಯು ಮತ್ತೊಂದು ಅತ್ಯುನ್ನತ ಪ್ರಶಸ್ತಿ ನೀಡಿದೆ.

Most Read Articles

Kannada
English summary
Mahindra car sales september 2021 suvs recorded highest ever monthly
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X