Just In
- 55 min ago
ಯಾವುದೇ ಏರ್ಪೋರ್ಟ್ಗೂ ಕಮ್ಮಿಯಿಲ್ಲ ಬೆಂಗಳೂರಿನ ಈ ರೈಲು ನಿಲ್ದಾಣ: ಹೇಗಿದೆ ಒಮ್ಮೆ ನೋಡಿ
- 1 hr ago
ಹೊಸ ಫೀಚರ್ಸ್ಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್
- 2 hrs ago
ಮನಕಲುಕುವ ಘಟನೆ: ಮೃತ ತಾಯಿಯನ್ನು 80 ಕಿ.ಮೀ ಬೈಕ್ನಲ್ಲೇ ಸಾಗಿಸಿದ ಮಗ
- 2 hrs ago
ಹೊಸ ಆಫ್-ರೋಡರ್ ಆರ್ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಬಿಡುಗಡೆ ಮಾಡಿದ ಪೋಲಾರಿಸ್ ಇಂಡಿಯಾ
Don't Miss!
- News
ಕರ್ನಾಟಕದ ಪ್ರಮುಖ ಡ್ಯಾಂಗಳ ಒಳ, ಹೊರ ಹರಿವು ಅಧಿಕ
- Sports
CWG 2022: ಬೆಳ್ಳಿ ಪದಕ ಗೆದ್ದ ಕ್ರಿಕೆಟರ್ ರಾಜೇಶ್ವರಿ ಗಾಯಕ್ವಾಡ್ಗೆ ಕರ್ನಾಟಕ ಸರ್ಕಾರದಿಂದ ನಗದು ಬಹುಮಾನ
- Technology
ಸೋನಿ ಸಂಸ್ಥೆಯಿಂದ ಹೊಸ ಸ್ಮಾರ್ಟ್ಟಿವಿ ಲಾಂಚ್! ಫೀಚರ್ಸ್ ಹೇಗಿದೆ ಗೊತ್ತಾ?
- Movies
ವಿಡಿಯೋ: ಜಗ್ಗೇಶ್ ಮನೆ ನಾಯಿಗೂ ಹಾಡು ಬರುತ್ತೆ!
- Lifestyle
ನಿಶ್ಚಿತಾರ್ಥ ಆದ ಮೇಲೆ ಈ ರೀತಿ ಅನಿಸಿದರೆ ಮದುವೆಯಾಗದಿರುವುದೇ ಬೆಸ್ಟ್
- Finance
4 ತಿಂಗಳಲ್ಲೇ ಭಾರಿ ಏರಿಕೆ ಕಂಡ ಸೆನ್ಸೆಕ್ಸ್: ಆಟೋ, ಪವರ್ ಸ್ಟಾಕ್ ಬಲ
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬಿಡಿಭಾಗಗಳ ಕೊರತೆ: ಥಾರ್ ಕಾರು ಮಾದರಿಯಲ್ಲಿ ಪ್ರಮುಖ ಫೀಚರ್ಸ್ ಕೈಬಿಟ್ಟ ಮಹೀಂದ್ರಾ
ವಾಹನ ಬಿಡಿಭಾಗಗಳ ಪೂರೈಕೆಯಲ್ಲಿನ ವಿಳಂಬ ಮತ್ತು ವೆಚ್ಚ ಹೆಚ್ಚಳ ಪರಿಣಾಮ ಮಹೀಂದ್ರಾ ಕಂಪನಿಯು ಥಾರ್ ಮಾದರಿಯಲ್ಲಿ ಕೆಲವು ಫೀಚರ್ಸ್ಗಳನ್ನು ಕೈಬಿಟ್ಟಿದ್ದು, 2022ರ ಮಾದರಿಯಲ್ಲಿ ಕೈಬಿಡಲಾದ ಫೀಚರ್ಸ್ಗಳು ಗ್ರಾಹಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಕೋವಿಡ್ ಪರಿಣಾಮ ಆಟೋಉದ್ಯಮ ನಿರಂತರವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಹೊಸ ಕಾರುಗಳಿಗೆ ಬೇಡಿಕೆ ಹೆಚ್ಚಿದ್ದರೂ ಕೂಡಾ ಉತ್ಪಾದನೆಗೆ ಬೇಕಿರುವ ಬಿಡಿಭಾಗಗಳ ಪೂರೈಕೆಯಲ್ಲಿ ಆಗುತ್ತಿರುವ ಸಮಸ್ಯೆಗಳು ಉತ್ಪಾದನಾ ಪ್ರಮಾಣವನ್ನು ತಗ್ಗಿಸುತ್ತಿವೆ. ಇದರ ಪರಿಣಾಮ ಹೊಸ ಕಾರುಗಳಿಗೆ ಗ್ರಾಹಕರು ಕಾಯುವ ಅವಧಿ ಕೂಡಾ ಹೆಚ್ಚಳವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಮಹೀಂದ್ರಾ ಕಂಪನಿಯು ಥಾರ್ ಮಾದರಿಯಲ್ಲಿ ಕೆಲವು ನವೀಕರಣಗಳನ್ನು ಪರಿಚಯಿಸಿದೆ.

ನವೀಕರಿಸಲಾದ ಥಾರ್ ಎಸ್ಯುವಿಯಲ್ಲಿ ಕಂಪನಿಯು ಪ್ರಮುಖ ವೈಶಿಷ್ಟ್ಯತೆಗಳನ್ನು ಕೈಬಿಟ್ಟಿದ್ದು, ಲಭ್ಯವಿರುವ ಬಿಡಿಭಾಗಗಳನ್ನು ಆಧರಿಸಿ ಹೊಸ ಕಾರು ಮಾದರಿಯನ್ನು ಸಿದ್ದಪಡಿಸುತ್ತಿದೆ. ಹೊಸ ನವೀಕರಣದ ಯಾವುದೇ ರೀತಿದ ದರ ಕಡಿತ ಮಾಡಿಲ್ಲವಾದ್ದರಿಂದ ಇದು ಕೆಲವು ಗ್ರಾಹಕರಿಗೆ ಅಸಮಾಧಾನ ತಂದಿದ್ದು, ನವೀಕೃತ ಮಾದರಿಯಲ್ಲಿ ಹೊರ ಮತ್ತು ಒಳಭಾಗದ ಕೆಲವು ಬದಲಾವಣೆಗಳು ಹೊಸ ಕಾರಿನ ಸುರಕ್ಷತೆ ಮತ್ತು ಎಂಜಿನ್ ವಿಭಾಗದ ಮೇಲೆ ಯಾವುದೇ ಪರಿಣಾಮ ಉಂಟುಮಾಡುವುದಿಲ್ಲ ಎನ್ನಬಹುದು.

ಮೊದಲ ನೋಟದಲ್ಲಿಯೇ ಸುಲಭವಾಗಿ ಕಾಣುವ ಪ್ರಮುಖ ಬದಲಾವಣೆ ಎಂದರೆ ಕಪ್ಪು ಬಂಪರ್ಗಳು. ಕಪ್ಪು ಬಣ್ಣದ ಬಂಪರ್ಗಳಲ್ಲಿ ಈ ಹಿಂದೆ ಮುಂಭಾಗ ಮತ್ತು ಹಿಂಭಾಗದ ಮಧ್ಯದಲ್ಲಿ ಸಿಲ್ವರ್ ಕ್ರೋಮ್ ನೀಡಲಾಗಿತ್ತು. ಜೊತೆಗೆ ಆಲ್ ಟೇರೆನ್ ಟೈರ್ಗಳಿಗಾಗಿ ಸಿಯೆಟ್ ಜೊತೆ ಪಾಲುದಾರಿಕೆ ಹೊಂದಿದ್ದ ಮಹೀಂದ್ರಾ ಕಂಪನಿಯು ಇದೀಗ ಎಂಆರ್ಎಫ್ ನಿರ್ಮಾಣದ ವಾಂಡರರ್ ಟೈರ್ಗೆ ಬದಲಾಯಿಸಿದೆ.

ಹೊಸ ಬದಲಾವಣೆಗಳು ಕೇವಲ ಹೊರಭಾಗಕ್ಕೆ ಮಾತ್ರ ಸೀಮಿತವಾಗಿರದೆ ಒಳಭಾಗದಲ್ಲೂ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಮುಂಭಾಗದ ಆಸನಗಳಿಗೆ ನೀಡಲಾಗಿದ್ದ ಸೊಂಟದ ಬೆಂಬಲ ಹೊಂದಾಣಿಕೆಯ ನಾಬ್ ಜೊತೆ ಕೇವಲ ಒಂದು ಯುಎಸ್ಬಿ ಚಾರ್ಜರ್ ಅನ್ನು ಮಾತ್ರ ನೀಡಲಾಗುತ್ತಿದೆ. ಈ ಹಿಂದೆ ಎರಡು ಯುಎಸ್ಬಿ ಚಾರ್ಜರ್ ನೀಡಿದ್ದ ಕಂಪನಿಯು ಇದೀಗ ವೆಚ್ಚ ಕಡಿತ ಮಾಡಿದ್ದು, ಇನ್ನುಳಿದ ಫೀಚರ್ಸ್ಗಳಲ್ಲಿ ಯಾವುದೇ ಬದಲಾವಣೆಗಳನ್ನು ತರಲಾಗಿಲ್ಲ.

ಕಳೆದ ಕೆಲವು ತಿಂಗಳುಗಳಲ್ಲಿ ಹೊಸ ವಾಹನಗಳ ಬೆಲೆಯು ಸಾಕಷ್ಟು ಏರಿಕೆಯಾಗಿದ್ದು, ಇದೀಗ ಮಹೀಂದ್ರಾ ಪ್ರಮುಖ ಕಾರುಗಳ ವಿವಿಧ ವೆರಿಯೆಂಟ್ಗಳ ಬೆಲೆಯಲ್ಲಿ ಶೇ.1.20 ರಿಂದ ಶೇ. 2.50 ರಷ್ಟು ಹೆಚ್ಚಳವಾಗಿರುವುದರಿಂದ ಥಾರ್ ಕಾರಿನ ಬೆಲೆ ರೂ. 13.53 ಲಕ್ಷದಿಂದ ರೂ. 16.03 ಲಕ್ಷ ಬೆಲೆ ಹೊಂದಿದೆ.

ಆಫ್ ರೋಡಿಂಗ್ ವೈಶಿಷ್ಟ್ಯತೆಯೊಂದಿಗೆ ತನ್ನದೆ ಆದ ಜನಪ್ರಿಯೆತೆ ಹೊಂದಿರುವ ಥಾರ್ ಕಾರು ಮಾದರಿಯು ಸಾಮಾನ್ಯ ಕಾರು ಮಾದರಿಗಳಂತೆ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ನ್ಯೂ ಜನರೇಷನ್ ಥಾರ್ ಖರೀದಿ ಮಾಡಿರುವ ಗ್ರಾಹಕರಲ್ಲಿ ಬಹುತೇಕರು ಹೊಸದಾಗಿ ಆಫ್ ಕೌಶಲ್ಯದ ಆಸಕ್ತಿಯೊಂದಿಗೆ ಥಾರ್ ಮಾಲೀಕತ್ವ ಪಡೆದುಕೊಂಡವರಾಗಿದ್ದಾರೆ.

ಥಾರ್ ಕಾರು ಮಾದರಿಗಾಗಿ ಮಹೀಂದ್ರಾ ಕಂಪನಿಯು ಇದುವರೆಗೆ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಾ ಬಂದಿದ್ದು, ಹೊಸ ಕಾರು ಬಿಡುಗಡೆಯ ನಂತರ ಇದುವರೆಗೆ ಸುಮಾರು 85 ಸಾವಿರಕ್ಕೂ ಹೆಚ್ಚು ಗ್ರಾಹಕರಿಂದ ಬುಕಿಂಗ್ ಪಡೆದುಕೊಂಡಿದೆ. ಇದರಲ್ಲಿ ಇದುವರೆಗೆ ಸುಮಾರು 40 ಸಾವಿರಕ್ಕೂ ಹೆಚ್ಚು ಯುನಿಟ್ ವಿತರಿಸಲಾಗಿದ್ದು, ಬಿಡಿಭಾಗಗಳ ಕೊರತೆಯಿಂದ ವಿತರಣೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. ಹೀಗಾಗಿ ಕೆಲವು ಫೀಚರ್ಸ್ ಬದಲಾಯಿಸಲಾಗಿದ್ದು, ನ್ಯೂ ಜನರೇಷನ್ ಥಾರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎಎಕ್ಸ್ ಮತ್ತು ಎಲ್ಎಕ್ಸ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.

ಥಾರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದ್ದು, ಲ್ಯಾಡರ್-ಫ್ರೇಮ್ ಚಾರ್ಸಿ ಜೊತೆಗೆ ಹೊಸ ಸಸ್ಪೆಂಷನ್ ಸೌಲಭ್ಯವು ಹೊಸ ಥಾರ್ ಕಾರಿನ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿದೆ.

ಹೊಸ ಥಾರ್ ಕಾರು ಮಾದರಿಯಲ್ಲಿ ಬಿಎಸ್-6 ಎಂಜಿನ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಎರಡು ಎಂಜಿನ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

ಹೊಸ ಕಾರಿನ ಒಳಭಾಗದ ಸೌಲಭ್ಯಗಳು ಪ್ರಸ್ತುತ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮತ್ತು ಮಾರ್ಡನ್ ವಿನ್ಯಾಸಗಳನ್ನು ಹೊಂದಿದ್ದು, ಆಕರ್ಷಕ ಡ್ಯಾಶ್ಬೋರ್ಡ್ನೊಂದಿಗೆ ಆ್ಯಪಲ್ ಕಾರ್ಪ್ಲೇ ಮತ್ತು ಅಂಡ್ರಾಯಿಡ್ ಆಟೋಗೆ ಸರ್ಪೋಟ್ ಮಾಡಬಲ್ಲ 7-ಇಂಚಿನ ಟಚ್ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಎಲ್ಲಾ ಮಾದರಿಯ ಹವಾಗುಣವನ್ನು ತಡೆಯಬಲ್ಲ ರೂಫ್ ಮೌಂಟೆಡ್ ಆಡಿಯೋ ಸ್ಪಿಕರ್ಸ್, ಮಲ್ಟಿ ಕಲರ್ ಇನ್ಫಾಮೆಷನ್ ಡಿಸ್ಪ್ಲೇ ಮತ್ತು ಸ್ಟೀರಿಂಗ್ ಮೌಟೆಂಟ್ ಕಂಟ್ರೋಲ್ ಸೌಲಭ್ಯ ನೀಡಲಾಗಿದೆ.

ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಸೆಫ್ಟಿ ಫೀಚರ್ಸ್ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಎರಡು ಎಂಜಿನ್ ಆಯ್ಕೆಗಳಲ್ಲೂ 4x4 ಡ್ರೈವ್ ಸಿಸ್ಟಂ, ಕ್ರೂಸ್ ಕಂಟ್ರೋಲ್, 255/65 18-ಇಂಚಿನ ಆಲ್ ಟೆರೆನ್ ಟೈರ್ಸ್, ಡ್ಯುಯಲ್ ಏರ್ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ರೋಲ್ ಓವರ್ ಮಿಟಿಗೆಷನ್, ತ್ರೀ ಪಾಯಿಂಟ್ ಸಿಲ್ಟ್ ಬೆಲ್ಟ್, ರಿಯರ್ ವ್ಯೂ ಕ್ಯಾಮೆರಾ ಜೋಡಿಸಲಾಗಿದೆ.