ಮಹೀಂದ್ರಾ ಬಾರ್ನ್ ಇವಿ ಕಾರುಗಳು: ಇವು ಕೇವಲ ಪರಿಕಲ್ಪನೆಯಲ್ಲ..ಉತ್ಪಾದನೆಗೊಳ್ಳಲಿರುವ ಮಾದರಿಗಳು..

ಮಹೀಂದ್ರಾ ಕಂಪನಿಯು ತನ್ಮ ಹೊಸ ಬಾರ್ನ್ ಎಲೆಕ್ಟ್ರಿಕ್ ಸರಣಿ ಇವಿ ಕಾರುಗಳ ಉತ್ಪಾದನಾ ಯೋಜನೆ ಅಡಿ ಇತ್ತೀಚೆಗೆ ಐದು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದ್ದು, ಹೊಸ ಕಾರುಗಳ ಕುರಿತಾಗಿ ಮಹೀಂದ್ರಾ ಕಂಪನಿಯ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

ಮಹೀಂದ್ರಾ ಬಾರ್ನ್ ಇವಿ ಕಾರುಗಳು: ಇವು ಕೇವಲ ಪರಿಕಲ್ಪನೆಲ್ಲ..ಉತ್ಪಾದನೆಗೊಳ್ಳಲಿರುವ ಮಾದರಿಗಳು..

ಬಾರ್ನ್ ಎಲೆಕ್ಟ್ರಿಕ್ ಸರಣಿಯಲ್ಲಿ ಮಹೀಂದ್ರಾ ಕಂಪನಿಯು ಒಟ್ಟು ಎರಡು ಬ್ರಾಂಡ್‌ಗಳ ಅಡಿಯಲ್ಲಿ ಐದು ಹೊಸ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಆಲ್-ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಗಳು ಆಕರ್ಷಕ ನೋಟ, ವಿಭಿನ್ನ ಒಳಾಂಗಣ ಮತ್ತು ಆಧುನಿಕ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಿದ್ದವಾಗುತ್ತಿವೆ.

ಮಹೀಂದ್ರಾ ಬಾರ್ನ್ ಇವಿ ಕಾರುಗಳು: ಇವು ಕೇವಲ ಪರಿಕಲ್ಪನೆಲ್ಲ..ಉತ್ಪಾದನೆಗೊಳ್ಳಲಿರುವ ಮಾದರಿಗಳು..

ಹೊಸ ಕಾರು ಮಾದರಿಗಳು 2024ರಿಂದ ಹಂತ-ಹಂತವಾಗಿ ಮಾರುಕಟ್ಟೆ ಪ್ರವೇಶಿಸಲಿದ್ದು, ಅನಾವರಣಗೊಳಿಸಲಾದ ಮಾದರಿಗಳು ಉತ್ಪಾದನಾ ಮಾದರಿಯಲ್ಲೂ ಹೀಗೆ ಇರಲಿವೆಯಾ ಎನ್ನುವ ಗ್ರಾಹಕರ ಪ್ರಶ್ನೆಗೆ ಆನಂದ್ ಮಹೀಂದ್ರಾ ಅವರು ಉತ್ತರಿಸಿದ್ದಾರೆ.

ಮಹೀಂದ್ರಾ ಬಾರ್ನ್ ಇವಿ ಕಾರುಗಳು: ಇವು ಕೇವಲ ಪರಿಕಲ್ಪನೆಲ್ಲ..ಉತ್ಪಾದನೆಗೊಳ್ಳಲಿರುವ ಮಾದರಿಗಳು..

ಟ್ವಿಟ್ ಮೂಲಕ ಸಂಭಾವ್ಯ ಗ್ರಾಹಕರೊಬ್ಬರು ಅನಾವರಣಗೊಳಿಸಲಾದ ಹೊಸ ಕಾರುಗಳು ಕಾನ್ಸೆಪ್ಟ್ ಮಾದರಿಯಲ್ಲಿಯೇ ಉತ್ಪಾದನೆಗೊಳ್ಳಲಿವೆಯಾ ಎನ್ನುವ ಪ್ರಶ್ನೆಗೆ ಆನಂದ್ ಮಹೀಂದ್ರಾ ಅವರು ಉತ್ತರಿಸಿದ್ದು, ಕಾನ್ಸೆಪ್ಟ್ ಮಾದರಿಯಲ್ಲಿ ನೀವು ಏನನ್ನು ನೋಡಿದ್ದಿರೋ ಅದನ್ನೇ ನೀವು ಪಡೆಯಲಿದ್ದೀರಿ ಎನ್ನುವ ಮೂಲಕ ಕಾನ್ಸೆಪ್ಟ್ ಮತ್ತು ಉತ್ಪಾದನಾ ಮಾದರಿಗೆ ಹೆಚ್ಚಿನ ವ್ಯತ್ಯಾಸವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

ಮಹೀಂದ್ರಾ ಬಾರ್ನ್ ಇವಿ ಕಾರುಗಳು: ಇವು ಕೇವಲ ಪರಿಕಲ್ಪನೆಲ್ಲ..ಉತ್ಪಾದನೆಗೊಳ್ಳಲಿರುವ ಮಾದರಿಗಳು..

ಹೊಸ ಕಾರುಗಳ ಉತ್ಪಾದನೆಗೂ ಮುನ್ನ ಅನಾವರಣಗೊಳಿಸಲಾಗುವ ಕಾನ್ಸೆಪ್ಟ್ ಮಾದರಿಗಳಿಗೂ ತದನಂತರದಲ್ಲಿ ಉತ್ಪಾದನೆ ಸಂದರ್ಭದಲ್ಲಿ ಹೆಚ್ಚಿನ ವ್ಯತ್ಯಾಸಗಳಿರುವುದರಿಂದ ಮಹೀಂದ್ರಾ ಹೊಸ ಕಾರುಗಳ ಕುರಿತಾಗಿ ಸಂಭಾವ್ಯ ಗ್ರಾಹಕರಲ್ಲಿ ಹಲವಾರು ಪ್ರಶ್ನೆಗಳನ್ನು ಮೂಡಿದ್ದವು. ಆದರೆ ಗ್ರಾಹರಕರ ಪ್ರಶ್ನೆಗೆ ಉತ್ತರಿಸಿರುವ ಆನಂದ್ ಮಹೀಂದ್ರಾ ಕಂಪನಿಯು ಕಾನ್ಸೆಪ್ಟ್ ಮಾದರಿಗಳ ವಿನ್ಯಾಸವನ್ನೇ ಉತ್ಪಾದನಾ ಹಂತದಲ್ಲೂ ಕಾಯ್ದುಕೊಳ್ಳುವ ಭರವಸೆ ನೀಡಿದ್ದಾರೆ.

ಮಹೀಂದ್ರಾ ಬಾರ್ನ್ ಇವಿ ಕಾರುಗಳು: ಇವು ಕೇವಲ ಪರಿಕಲ್ಪನೆಲ್ಲ..ಉತ್ಪಾದನೆಗೊಳ್ಳಲಿರುವ ಮಾದರಿಗಳು..

ಹಾಗೆಯೇ ಆನಂದ್ ಮಹೀಂದ್ರಾ ಅವರು ಅನಾವರಣಗೊಳಿಸಿರುವ ಐದು ಹೊಸ ಕಾರು ಮಾದರಿಗಳಲ್ಲಿ ಶೀಘ್ರದಲ್ಲಿಯೇ ಎರಡು ಮಾದರಿಗಳು ಮಾರುಕಟ್ಟೆ ಪ್ರವೇಶಿಸುವ ಸುಳಿವು ನೀಡಿದ್ದು, ಹೊಸ ಇವಿ ಕಾರು ಮಾದರಿಗಳನ್ನು ಕಂಪನಿಯು ಎಕ್ಸ್‌ಯುವಿ.ಇ(XUV.e) ಮತ್ತು ಬಿಇ (BE) ಎನ್ನುವ ಎರಡು ಬ್ರಾಂಡ್‌ಗಳ ಅಡಿಯಲ್ಲಿ ಮಾರಾಟ ಮಾಡಲಿದೆ.

ಮಹೀಂದ್ರಾ ಬಾರ್ನ್ ಇವಿ ಕಾರುಗಳು: ಇವು ಕೇವಲ ಪರಿಕಲ್ಪನೆಲ್ಲ..ಉತ್ಪಾದನೆಗೊಳ್ಳಲಿರುವ ಮಾದರಿಗಳು..

ಹೊಸ ಇವಿ ಕಾರುಗಳಲ್ಲಿ ಮೂರು ಎಸ್‌ಯುವಿ ಮಾದರಿಗಳಾಗಿದ್ದರೆ ಎರಡು ಎಸ್‌ಯುವಿ ಕೂಪೆ ಶೈಲಿಯಲ್ಲಿ ಆಧರಿಸಿರಲಿದ್ದು, ಹೊಸ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗಾಗಿ ಮಹೀಂದ್ರಾ ಕಂಪನಿಯು ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

ಮಹೀಂದ್ರಾ ಬಾರ್ನ್ ಇವಿ ಕಾರುಗಳು: ಇವು ಕೇವಲ ಪರಿಕಲ್ಪನೆಲ್ಲ..ಉತ್ಪಾದನೆಗೊಳ್ಳಲಿರುವ ಮಾದರಿಗಳು..

ಎಕ್ಸ್‌ಯುವಿ.ಇ(XUV.e) ಬ್ರಾಂಡ್ ಅಡಿಯಲ್ಲಿ ಎಕ್ಸ್‌ಯುವಿ.ಇ8(XUV.E8) ಮತ್ತು ಎಕ್ಸ್‌ಯುವಿ.ಇ9(XUV.E9) ಮಾರಾಟಗೊಳ್ಳಲಿದ್ದರೆ ಬಿಇ(BE) ಬ್ರಾಂಡ್ ಅಡಿಯಲ್ಲಿ ಬಿಇ.05(BE.05). ಬಿಇ.07(BE.07) ಮತ್ತು ಬಿಇ.09(BE.09) ಕಾರುಗಳು ಮಾರಾಟಗೊಳ್ಳಲಿವೆ.

ಮಹೀಂದ್ರಾ ಬಾರ್ನ್ ಇವಿ ಕಾರುಗಳು: ಇವು ಕೇವಲ ಪರಿಕಲ್ಪನೆಲ್ಲ..ಉತ್ಪಾದನೆಗೊಳ್ಳಲಿರುವ ಮಾದರಿಗಳು..

ಮಹೀಂದ್ರಾ ಕಂಪನಿಯು ಮೊದಲ ಹಂತದಲ್ಲಿ ಎಕ್ಸ್‌ಯುವಿ.ಇ ಬ್ರಾಂಡ್ ಕಾರುಗಳನ್ನು ಮಾರಾಟಗೊಳಿಸಲಿದ್ದು, ತದನಂತರವಷ್ಟೇ ಬಿಇ ಬ್ರಾಂಡ್ ಇವಿ ಕಾರುಗಳನ್ನು ಬಿಡುಗಡೆ ಮಾಡಲಿದೆ. 2024ರ ಕೊನೆಯಲ್ಲಿ ಎಕ್ಸ್‌ಯುವಿ.ಇ ಕಾರುಗಳ ಮಾರಾಟ ಆರಂಭವಾಗಲಿದ್ದು, ಬಿಇ ಬ್ರಾಂಡ್ ಕಾರುಗಳ ಮಾರಾಟವು 2025ರ ಕೊನೆಯಲ್ಲಿ ಆರಂಭವಾಗಲಿದೆ.

ಮಹೀಂದ್ರಾ ಬಾರ್ನ್ ಇವಿ ಕಾರುಗಳು: ಇವು ಕೇವಲ ಪರಿಕಲ್ಪನೆಲ್ಲ..ಉತ್ಪಾದನೆಗೊಳ್ಳಲಿರುವ ಮಾದರಿಗಳು..

ಹೊಸ ಇವಿ ಕಾರುಗಳು ಅತ್ಯಾಧುನಿಕ ಸೌಲಭ್ಯದೊಂದಿಗೆ ಅತ್ಯಧಿಕ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಹೊಸ ಇವಿ ಕಾರು ಮಾದರಿಗಳು ಅಡ್ವಾನ್ಸ್ ಫ್ಯೂಚರಿಸ್ಟಿಕ್ ವಿನ್ಯಾಸವನ್ನು ಹೊಂದಿರುವುದು ಪ್ರಮುಖ ಆಕರ್ಷಣೆಯಾಗಿವೆ.

ಮಹೀಂದ್ರಾ ಬಾರ್ನ್ ಇವಿ ಕಾರುಗಳು: ಇವು ಕೇವಲ ಪರಿಕಲ್ಪನೆಲ್ಲ..ಉತ್ಪಾದನೆಗೊಳ್ಳಲಿರುವ ಮಾದರಿಗಳು..

ಹೊಸ ಕಾರು ಮಾದರಿಗಳ ನಿರ್ಮಾಣಕ್ಕಾಗಿ ಕಂಪನಿಯು ಇನ್‌ಗ್ಲೊ(INGLO) ಪ್ಲ್ಯಾಟ್‌ಫಾರ್ಮ್ ಸಿದ್ದಪಡಿಸಿದ್ದು, ಹೊಸ ಪ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿರುವ ಇವಿ ಕಾರುಗಳು 60 ರಿಂದ 80 kWh ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರಲಿವೆ. ಹಾಗೆಯೇ ಹೊಸ ಕಾರುಗಳು 175kW ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಕೇವಲ 30 ನಿಮಿಷಗಳಲ್ಲಿ ಸೊನ್ನೆಯಿಂದ ಶೇ.80ರಷ್ಟು ರೀಚಾರ್ಜ್ ವೈಶಿಷ್ಟ್ಯತೆ ಹೊಂದಿವೆ.

ಮಹೀಂದ್ರಾ ಬಾರ್ನ್ ಇವಿ ಕಾರುಗಳು: ಇವು ಕೇವಲ ಪರಿಕಲ್ಪನೆಲ್ಲ..ಉತ್ಪಾದನೆಗೊಳ್ಳಲಿರುವ ಮಾದರಿಗಳು..

ಇದರೊಂದಿಗೆ ಮಹೀಂದ್ರಾ ಕಂಪನಿಯು ಹೊಸ ಪ್ಲ್ಯಾಟ್‌ಫಾರ್ಮ್ ನಿರ್ಮಾಣಗೊಳಿಸಿದ ಐದು ಇವಿ ಕಾರು ಮಾದರಿಗಳಿಗೂ ಸುರಕ್ಷತೆಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್‌ ಒದಗಿಸುವ ಭರವಸೆ ವ್ಯಕ್ತಪಡಿಸಿದ್ದು, ಇವುಗಳಲ್ಲಿ ರಿಯರ್ ವ್ಹೀಲ್ ಡ್ರೈವ್ ಮತ್ತು ಆಲ್ ವೀಲ್ ಡ್ರೈವ್ ಮಾದರಿಗಳನ್ನು ಒಳಗೊಂಡಿದೆ.

ಮಹೀಂದ್ರಾ ಬಾರ್ನ್ ಇವಿ ಕಾರುಗಳು: ಇವು ಕೇವಲ ಪರಿಕಲ್ಪನೆಲ್ಲ..ಉತ್ಪಾದನೆಗೊಳ್ಳಲಿರುವ ಮಾದರಿಗಳು..

ಈ ಮೂಲಕ ಹೊಸ ಮಾದರಿಗಳು ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್‌ಗಳ ಜೊತೆಗೆ ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿದ್ದು, ರಿಯಲ್ ವ್ಹೀಲ್ ಮಾದರಿಗಳು 231 ಬಿಎಚ್‌ಪಿಯಿಂದ 285 ಬಿಎಚ್‌ಪಿ ಉತ್ಪಾದಿಸಲಿದ್ದರೆ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿರುವ ಕಾರು ಮಾದರಿಗಳು 340 ಬಿಎಚ್‌ಪಿಯಿಂದ 394 ಬಿಎಚ್‌ಪಿ ಉತ್ಪಾದಿಸಬಲ್ಲವು.

ಮಹೀಂದ್ರಾ ಬಾರ್ನ್ ಇವಿ ಕಾರುಗಳು: ಇವು ಕೇವಲ ಪರಿಕಲ್ಪನೆಲ್ಲ..ಉತ್ಪಾದನೆಗೊಳ್ಳಲಿರುವ ಮಾದರಿಗಳು..

ವೈಶಿಷ್ಟ್ಯತೆಗಳ ವಿಷಯದಲ್ಲಿ ಹೊಸ ಇವಿ ಕಾರು ಮಾದರಿಗಳು ಐಷಾರಾಮಿ ಕಾರುಗಳಲ್ಲೂ ಇಲ್ಲದ ಹಲವು ಹೊಸ ಫೀಚರ್ಸ್‌ಗಳೊಂದಿಗೆ ಲೆವಲ್ 2 ಎಡಿಎಎಸ್ ಸೇರಿದಂತೆ ಹಲವಾರು ಫೀಚರ್ಸ್ ಹೊಂದಿರಲಿದ್ದು, ಎಲ್ಲಾ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಹೊಸ ಉತ್ಪನ್ನಗಳನ್ನು ಸಿದ್ದಪಡಿಸಲಾಗುತ್ತಿದೆ.

ಮಹೀಂದ್ರಾ ಬಾರ್ನ್ ಇವಿ ಕಾರುಗಳು: ಇವು ಕೇವಲ ಪರಿಕಲ್ಪನೆಲ್ಲ..ಉತ್ಪಾದನೆಗೊಳ್ಳಲಿರುವ ಮಾದರಿಗಳು..

ಜೊತೆಗೆ ಹೊಸ ಇವಿ ಕಾರುಗಳ ಉತ್ಪಾದನೆಗಾಗಿ ಮಹೀಂದ್ರಾ ಕಂಪನಿಯು ಫೋಕ್ಸ್‌ವ್ಯಾಗನ್ ಕಂಪನಿಯ ಎಂಇಬಿ ಪ್ಲಾಟ್‌ಫಾರ್ಮ್‌ ಅಡಿ ನಿರ್ಮಾಣವಾಗುವ ಇವಿ ಕಾರುಗಳ ಬಿಡಿಭಾಗಳ ಬಳಕೆಗಾಗಿ ಪಾಲುದಾರಿಕೆ ಪ್ರಕಟಿಸಿದ್ದು, ಹೊಸ ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿ ಪ್ಲ್ಯಾಟ್‌ಫಾರ್ಮ್, ಬ್ಯಾಟರಿ ಉತ್ಪಾದನೆ ಮತ್ತು ಪ್ರಮುಖ ತಾಂತ್ರಿಕ ಸೌಲಭ್ಯಗಳನ್ನು ಎರವಲು ಪಡೆದುಕೊಳ್ಳಲಿದೆ.

Most Read Articles

Kannada
English summary
Mahindra electric suv will not be concept all will launch anand mahindra
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X