ವಿವಿಧ ಬ್ರಾಂಡ್‌ಗಳ ಎಲೆಕ್ಟ್ರಿಕ್ ವಾಹನಗಳ ಲೀಸ್ ಆರಂಭಿಸಿದ ಮಹೀಂದ್ರಾ ಒಡೆತನದ ಕ್ವಿಕ್ಲಿಜ್

ಎಲೆಕ್ಟ್ರಿಕ್ ವಾಹನ ಬಳಕೆಯು ದೇಶಾದ್ಯಂತ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇಂಧನ ಚಾಲಿತ ವಾಹನಗಳ ಮಾರಾಟಕ್ಕೆ ಹೋಲಿಕೆ ಮಾಡಿದರೆ ಸಾಕಷ್ಟು ಸುಧಾರಿಸಬೇಕಿದೆ. ಹೀಗಾಗಿ ಇವಿ ವಾಹನಗಳ ಬಳಕೆಯ ಉತ್ತೇಜನಕ್ಕಾಗಿ ಹಲವಾರು ಹೊಸ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳ ವಿವಿಧ ಯೋಜನೆಗಳ ಪರಿಣಾಮ ದಿನದಿಂದ ದಿನಕ್ಕೆ ಇವಿ ವಾಹನಗಳ ಮಾರಾಟವು ಉತ್ತಮಗೊಳ್ಳುತ್ತಿದೆ.

ವಿವಿಧ ಬ್ರಾಂಡ್‌ಗಳ ಎಲೆಕ್ಟ್ರಿಕ್ ವಾಹನಗಳ ಲೀಸ್ ಆರಂಭಿಸಿದ ಮಹೀಂದ್ರಾ ಒಡೆತನದ ಕ್ವಿಕ್ಲಿಜ್

ಇಂಧನ ಆಧರಿತ ವಾಹನಗಳ ಬದಲಾಗಿ ಪರಿಸರ ಸ್ನೇಹಿ ವಾಹನಗಳ ಬಳಕೆ ಉತ್ತೇಜನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ಗರಿಷ್ಠ ಮಟ್ಟದ ಸಬ್ಸಡಿ ಯೋಜನೆಗಳನ್ನು ಘೋಷಣೆ ಮಾಡಿವೆ. ಆದರೂ ಇವಿ ವಾಹನಗಳ ಅಳವಡಿಕೆಗೆ ಹೊಸ ವಾಹನ ಖರೀದಿದಾರರು ಹಿಂಜರಿಯಲು ಎರಡು ಪ್ರಮುಖ ಕಾರಣಗಳಿದ್ದು, ಈ ಎರಡು ಕಾರಣಗಳನ್ನು ಆಧರಿಸಿ ಗ್ರಾಹಕರಿಗೆ ಇವಿ ವಾಹನಗಳನ್ನು ಸುಲಭವಾಗಿ ಅಳಡಿಸಿಕೊಳ್ಳಲು ಮಹೀಂದ್ರಾ ಫೈನಾನ್ಸ್ ಒಡೆತನದ ಕ್ವಿಕ್ಲಿಜ್(Quicklyz) ಕಂಪನಿಯು ಇವಿ ವಾಹನಗಳ ಮೇಲೆ ಲೀಸ್ ಆರಂಭಿಸಿದೆ.

ವಿವಿಧ ಬ್ರಾಂಡ್‌ಗಳ ಎಲೆಕ್ಟ್ರಿಕ್ ವಾಹನಗಳ ಲೀಸ್ ಆರಂಭಿಸಿದ ಮಹೀಂದ್ರಾ ಒಡೆತನದ ಕ್ವಿಕ್ಲಿಜ್

ಇವಿ ವಾಹನಗಳ ಅಳವಡಿಕೆಗೆ ಹೊಸ ವಾಹನ ಖರೀದಿದಾರರು ಹಿಂಜರಿಯಲು ಪ್ರಮುಖ ಕಾರಣಗಳಾದ ಕೊನೆಯ ಮೈಲಿ ತನಕ ಹೆಚ್ಚಿನ ಸಂಖ್ಯೆಯಲ್ಲಿ ಚಾರ್ಜಿಂಗ್ ನಿಲ್ದಾಣಗಳಿಲ್ಲದಿರುವುದು ಮತ್ತು ಇವಿ ವಾಹನಗಳು ಇಂಧನ ಆಧರಿತ ವಾಹನಗಳಿಂತಲೂ ದುಪ್ಪಟ್ಟು ದರ ಹೊಂದಿರುವುದು ಇವಿ ಅಳವಡಿಕೆಗೆ ಹಿನ್ನಡೆಯಾಗುತ್ತಿದೆ.

ವಿವಿಧ ಬ್ರಾಂಡ್‌ಗಳ ಎಲೆಕ್ಟ್ರಿಕ್ ವಾಹನಗಳ ಲೀಸ್ ಆರಂಭಿಸಿದ ಮಹೀಂದ್ರಾ ಒಡೆತನದ ಕ್ವಿಕ್ಲಿಜ್

ಹೀಗಾಗಿ ಗ್ರಾಹಕರಿಗೆ ಅವಶಕ್ಯತೆಗೆ ಅನುಗುಣವಾಗಿ ವಾಹನ ಬಳಕೆ ಮಾಡಲು ಇಂಧನ ಆಧರಿತ ಮಾದರಿಗಳ ಬದಲಾಗಿ ಇವಿ ವಾಹನಗಳ ಬಳಕೆ ಮಾಡಲು ಮತ್ತು ಗ್ರಾಹಕರ ಅವಶ್ಯವಿರುವ ಕಡೆಗಳಿಗೆ ಚಾರ್ಜಿಂಗ್ ಸೌಲಭ್ಯವನ್ನು ಪೂರೈಸಲು ಕ್ವಿಕ್ಲಿಜ್ ಬೃಹತ್ ಯೋಜನೆ ರೂಪಿಸಿದೆ.

ವಿವಿಧ ಬ್ರಾಂಡ್‌ಗಳ ಎಲೆಕ್ಟ್ರಿಕ್ ವಾಹನಗಳ ಲೀಸ್ ಆರಂಭಿಸಿದ ಮಹೀಂದ್ರಾ ಒಡೆತನದ ಕ್ವಿಕ್ಲಿಜ್

ಗ್ರಾಹಕರಿಗೆ ತಮ್ಮ ಇಷ್ಟದ ಇವಿ ವಾಹನಗಳನ್ನು ಅವಶ್ಯಕತೆಗೆ ಅನುಗುಣವಾಗಿ ಅತಿ ಕಡಿಮೆ ಬೆಲೆಯಲ್ಲಿ ಚಂದಾದಾರಿಕೆ ಮೇಲೆ ಒದಗಿಸಲಿದ್ದು, ಲೀಸ್‌ಗೆ ಪಡೆದ ವಾಹನಗಳ ನೋಂದಣಿ, ವಿಮೆ ಮತ್ತು ನಿರ್ವಹಣೆಯ ಎಲ್ಲಾ ಜವಾಬ್ದಾರಿಯನ್ನು ಕಂಪನಿಯೇ ನಿರ್ವಹಿಸುತ್ತದೆ.

ವಿವಿಧ ಬ್ರಾಂಡ್‌ಗಳ ಎಲೆಕ್ಟ್ರಿಕ್ ವಾಹನಗಳ ಲೀಸ್ ಆರಂಭಿಸಿದ ಮಹೀಂದ್ರಾ ಒಡೆತನದ ಕ್ವಿಕ್ಲಿಜ್

ಕ್ವಿಕ್ಲಿಜ್ ಪ್ರಕಾರ ಇದು ಪ್ರಸ್ತುತ ತನ್ನ ಚಂದಾದಾರಿಕೆ ವೇದಿಕೆಯಲ್ಲಿನ ಎಲೆಕ್ಟ್ರಿಕ್ ವಾಹನಗಳ ಅತಿದೊಡ್ಡ ಪೋರ್ಟ್‌ಫೋಲಿಯೊವನ್ನು ಹೊಂದಿದ್ದು, ಇದರಲ್ಲಿ ಮೂಲ ಉಪಕರಣ ತಯಾರಕರಾದ ಮಹೀಂದ್ರಾ ಸೇರಿದಂತೆ ಟಾಟಾ ಮೋಟಾರ್ಸ್, ಎಂಜಿ ಮೋಟಾರ್ಸ್, ಮರ್ಸಿಡಿಸ್-ಬೆಂಝ್, ಆಡಿ, ಜಾಗ್ವಾರ್ ನಿರ್ಮಾಣದ ವಾಹನಗಳನ್ನು ತಿಂಗಳು ಚಂದಾದಾರಿಕೆ ಆಧರದ ಮೇಲೆ ವಾಹನ ಮಾಲೀಕತ್ವ ನೀಡಲಿದೆ

ವಿವಿಧ ಬ್ರಾಂಡ್‌ಗಳ ಎಲೆಕ್ಟ್ರಿಕ್ ವಾಹನಗಳ ಲೀಸ್ ಆರಂಭಿಸಿದ ಮಹೀಂದ್ರಾ ಒಡೆತನದ ಕ್ವಿಕ್ಲಿಜ್

ಚಂದಾದಾರಿಕೆ ಆಧಾರದ ಮೇಲೆ ಗ್ರಾಹಕರು ವಿವಿಧ ಇವಿ ವಾಹಗಳನ್ನು 1 ವರ್ಷದಿಂದ 4 ವರ್ಷಗಳ ತನಕ ಲೀಸ್ ಪಡೆಯಬಹುದಾಗಿದ್ದು, ಮಾಲೀಕರ ತಪ್ಪಿನಿಂದಾಗುವ ಅಪಘಾತ ಹಾನಿಯನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ತಾಂತ್ರಿಕ ಸೌಲಭ್ಯಗಳ ಸೇವೆಯನ್ನು ಕಂಪನಿಯೇ ನಿರ್ವಹಿಸಲಿದೆ.

ವಿವಿಧ ಬ್ರಾಂಡ್‌ಗಳ ಎಲೆಕ್ಟ್ರಿಕ್ ವಾಹನಗಳ ಲೀಸ್ ಆರಂಭಿಸಿದ ಮಹೀಂದ್ರಾ ಒಡೆತನದ ಕ್ವಿಕ್ಲಿಜ್

ಇದು ಹೊಸ ವಾಹನವನ್ನು ಖರೀದಿ ಮಾಡುವುದಕ್ಕಿಂತಲೂ ತುಸು ಭಿನ್ನವಾಗಿದ್ದು, ಲೀಸ್ ಆಯ್ಕೆಯಲ್ಲಿರುವ ವಾಹನವನ್ನು ಅವಶ್ಯವಿದ್ದಾಗ ಬಳಕೆ ಮಾಡಿಕೊಂಡು ಅವಶ್ಯವಿಲ್ಲದ ನಂತರ ಲೀಸ್ ಕಂಪನಿಗೆ ಮರಳಿಸಬಹುದಾಗಿದೆ.

ವಿವಿಧ ಬ್ರಾಂಡ್‌ಗಳ ಎಲೆಕ್ಟ್ರಿಕ್ ವಾಹನಗಳ ಲೀಸ್ ಆರಂಭಿಸಿದ ಮಹೀಂದ್ರಾ ಒಡೆತನದ ಕ್ವಿಕ್ಲಿಜ್

ಆದರೆ ಒಂದು ವಾಹನವನ್ನು ಸ್ವಂತಕ್ಕೆ ಖರೀದಿ ಮಾಡಿದಾಗ ಮಾಲೀಕತ್ವದಿಂದ ಹಿಡಿದು ಆ ವಾಹನದ ಎಲ್ಲಾ ಖರ್ಚು ವೆಚ್ಚಗಳನ್ನು ನಿರ್ವಹಿಸುವುದು ಸಾಮಾನ್ಯವಾಗಿದ್ದರೂ ಈ ವಾಹನವು ಅವಶ್ಯಕತೆಯಿದ್ದಾಗ ಇಟ್ಟುಕೊಳ್ಳಲು ಮತ್ತು ಬೇಡವೆಂದ ತಕ್ಷಣಕ್ಕೆ ಮರುಮಾರಾಟ ಮಾಡುವ ಪ್ರಕ್ರಿಯೆ ತುಸು ಕಷ್ಟ ಎನ್ನಬಹುದು.

ವಿವಿಧ ಬ್ರಾಂಡ್‌ಗಳ ಎಲೆಕ್ಟ್ರಿಕ್ ವಾಹನಗಳ ಲೀಸ್ ಆರಂಭಿಸಿದ ಮಹೀಂದ್ರಾ ಒಡೆತನದ ಕ್ವಿಕ್ಲಿಜ್

ಯಾವುದೇ ಒಂದು ವಾಹನವನ್ನು ಬಳಕೆ ಮಾಡಿದ ಮೂರರಿಂದ ನಾಲ್ಕು ವರ್ಷಗಳಲ್ಲಿ ಅದರ ಮರುಮಾರಾಟ ಮೌಲ್ಯದಲ್ಲಿ ಕುಸಿತವು ವಾಹನ ಮಾಲೀಕತ್ವಕ್ಕೆ ಸಾಕಷ್ಟು ಹೊರೆಯಾಗಬಹುದಾಗಿದ್ದು, ಈ ಹಿನ್ನಲೆಯಲ್ಲಿ ಅವಶ್ಯಕತೆಗೆ ಅನುಗುಣವಾಗಿ ಲೀಸ್ ಆಯ್ಕೆ ಉತ್ತಮ ಆಯ್ಕೆ ಎನ್ನಬಹುದು.

ವಿವಿಧ ಬ್ರಾಂಡ್‌ಗಳ ಎಲೆಕ್ಟ್ರಿಕ್ ವಾಹನಗಳ ಲೀಸ್ ಆರಂಭಿಸಿದ ಮಹೀಂದ್ರಾ ಒಡೆತನದ ಕ್ವಿಕ್ಲಿಜ್

ವಿದೇಶಿಗಳಲ್ಲಿ ಸದ್ಯ ಶೇ.50ಕ್ಕಿಂತಲೂ ಹೆಚ್ಚು ಜನ ಲೀಸ್ ಮಾದರಿಯಲ್ಲಿನ ವಾಹನಗಳನ್ನೇ ಬಳಕೆ ಮಾಡುತ್ತಿದ್ದು, ಕಾಲ-ಕಾಲಕ್ಕೆ ತಕ್ಕಂತೆ ವಾಹನಗಳನ್ನು ಬದಲಾಯಿಸಲು ಇದು ಅನುಕೂಲಕವಾಗಿದೆ. ಆದರೆ ಸ್ವಂತ ವಾಹನವನ್ನು ಪದೇ ಪದೇ ಬದಲಾಯಿಸಲು ಸಾಧ್ಯವಿಲ್ಲದಿರುವುದು ಲೀಸ್ ವಾಹನಗಳಿಗೆ ಹೆಚ್ಚಿನ ಬೇಡಿಕೆ ಹರಿದುಬರುತ್ತಿದ್ದು, ಭವಿಷ್ಯದಲ್ಲಿನ ಬೇಡಿಕೆ ಆಧರಿಸಿ ಕ್ವಿಕ್ಲಿಜ್ ಕಂಪನಿಯು ಇವಿ ವಾಹನಗಳ ಮೇಲೆ ಲೀಸ್ ಆರಂಭಿಸಿದೆ.

ವಿವಿಧ ಬ್ರಾಂಡ್‌ಗಳ ಎಲೆಕ್ಟ್ರಿಕ್ ವಾಹನಗಳ ಲೀಸ್ ಆರಂಭಿಸಿದ ಮಹೀಂದ್ರಾ ಒಡೆತನದ ಕ್ವಿಕ್ಲಿಜ್

ಕ್ವಿಕ್ಲಿಜ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ಇವಿ ವಾಹನಗಳ ಮೇಲೆ ಲೀಸ್ ಪಡೆದುಕೊಳ್ಳುವ ಗ್ರಾಹಕರಿಗೆ ಮಹೀಂದ್ರಾ ಫೈನಾನ್ಸ್ ಕಂಪನಿಯೇ ಸಾಲ-ಸೌಲಭ್ಯಗಳನ್ನು ನೀಡಲಿದ್ದು, ಯಾವುದೇ ಹೆಚ್ಚುವರಿ ಗೊಂದಲಗಳಿಲ್ಲದೆ ಇವಿ ವಾಹನ ಮಾಲೀಕತ್ವ ಹೊಂದಲು ಇದು ಸಹಕಾರಿಯಾಗಿದೆ.

ವಿವಿಧ ಬ್ರಾಂಡ್‌ಗಳ ಎಲೆಕ್ಟ್ರಿಕ್ ವಾಹನಗಳ ಲೀಸ್ ಆರಂಭಿಸಿದ ಮಹೀಂದ್ರಾ ಒಡೆತನದ ಕ್ವಿಕ್ಲಿಜ್

ಲೀಸ್ ವಾಹನಗಳ ಪ್ಲ್ಯಾಟ್‌ಫಾರ್ಮ್‌ನಲ್ಲಿ ಕ್ವಿಕ್ಲಿಜ್ ಕಂಪನಿಯು ಇವಿ ದ್ವಿಚಕ್ರ ವಾಹನ ಮತ್ತು ಇವಿ ಕಾರುಗಳನ್ನು ಮಾತ್ರವಲ್ಲದೆ ಚಿಲ್ಲರೆ ವಹಿವಾಟು ನಡೆಸುವ ಉದ್ಯಮ ಸಂಸ್ಥೆಗಳಿಗೆ ಎಲೆಕ್ಟ್ರಿಕ್ ತ್ರಿ-ಚಕ್ರ ವಾಹನಗಳನ್ನು ಸಹ ಲೀಸ್‌ಗೆ ಒದಗಿಸಲಿದೆ.

ವಿವಿಧ ಬ್ರಾಂಡ್‌ಗಳ ಎಲೆಕ್ಟ್ರಿಕ್ ವಾಹನಗಳ ಲೀಸ್ ಆರಂಭಿಸಿದ ಮಹೀಂದ್ರಾ ಒಡೆತನದ ಕ್ವಿಕ್ಲಿಜ್

ಕ್ವಿಕ್ಲಿಜ್‌ನ ವೆಹಿಕಲ್ ಲೀಸಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಮಾಸಿಕ ಚಂದಾದಾರಿಕೆ ಶುಲ್ಕವನ್ನು ಎಲೆಕ್ಟ್ರಿಕ್ ಕಾರುಗಳಿಗೆ ತಿಂಗಳಿಗೆ ರೂ. 21,399 ಮತ್ತು ಎಲೆಕ್ಟ್ರಿಕ್ ತ್ರಿ-ಚಕ್ರ ವಾಹನಗಳಿಗೆ ರೂ 13,549 ಎಂದು ನಿಗದಿಪಡಿಸಲಾಗಿದ್ದು, ಈ ಶುಲ್ಕವು ವಿಮೆ, ನಿರ್ವಹಣೆ, ರಸ್ತೆಬದಿಯ ನೆರವು ಮತ್ತು ವಾಹನ ನವೀಕರಣ ಸೌಲಭ್ಯದ ಶುಲ್ಕವನ್ನು ಒಳಗೊಂಡಿರುತ್ತದೆ.

ವಿವಿಧ ಬ್ರಾಂಡ್‌ಗಳ ಎಲೆಕ್ಟ್ರಿಕ್ ವಾಹನಗಳ ಲೀಸ್ ಆರಂಭಿಸಿದ ಮಹೀಂದ್ರಾ ಒಡೆತನದ ಕ್ವಿಕ್ಲಿಜ್

ಇನ್ನು ಮಹೀಂದ್ರಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ವಾಹನಗಳ ವಿಭಾಗದಲ್ಲಿ ಇ-ವೆರಿಟೊ ಕಾರು ಮತ್ತು ಟ್ರಿಯೊ ಜೋರ್ ಎಲೆಕ್ಟ್ರಿಕ್ ತ್ರಿಚಕ್ರ ವಾಹನವನ್ನು ಮಾರಾಟ ಮಾಡುತ್ತಿದ್ದು, ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಮಾರುಕಟ್ಟೆಯಲ್ಲಿ ಕಂಪನಿಯು ಉತ್ತಮ ಮುನ್ನಡೆ ಕಾಯ್ದುಕೊಂಡಿದೆ. ಕಂಪನಿಯು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್ ಚಿಲ್ಲರೆ ಕಂಪನಿಗಳಿಗೆ ವಿತರಣೆಗಾಗಿ ಟ್ರಿಯೊ ಜೋರ್ ತ್ರಿಚಕ್ರ ವಾಹನಗಳನ್ನು ಒದಗಿಸುತ್ತಿದ್ದು, ಪ್ರಯಾಣಿಕ ಕಾರು ವಿಭಾಗಕ್ಕೆ ಮತ್ತಷ್ಟು ವಾಹನಗಳನ್ನು ಪರಿಚಯಿಸಲು ಸಿದ್ದವಾಗುತ್ತಿದೆ.

Most Read Articles

Kannada
English summary
Mahindra finance subsidiary quicklyz starts leasing electric vehicles on its platform
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X