ಅಲ್ಟುರಾಸ್ ಜಿ4 ಎಸ್‍ಯುವಿಗಾಗಿ ಹೊಸ ರೂಪಾಂತರ ಪರಿಚಯಿಸಿದ ಮಹೀಂದ್ರಾ

ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಅಲ್ಟುರಾಸ್ ಜಿ4 ಲೈನ್-ಅಪ್‌ನಲ್ಲಿ ಹೊಸ ರೂಪಾಂತರವನ್ನು ಪರಿಚಯಿಸಿದೆ, ಈ ಹೊಸ ರೂಪಾಂತರವನ್ನು 2WD ಹೈ ಎಂದು ಕರೆಯಲ್ಪಡುತ್ತದೆ. ಇದರ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.30.68 ಲಕ್ಷದಿಂದ ಪ್ರಾರಂಭವಾಗುತ್ತದೆ.

ಅಲ್ಟುರಾಸ್ ಜಿ4 ಎಸ್‍ಯುವಿಗಾಗಿ ಹೊಸ ರೂಪಾಂತರ ಪರಿಚಯಿಸಿದ ಮಹೀಂದ್ರಾ

ಮಹೀಂದ್ರಾ ಅಲ್ಟುರಾಸ್ ಎಸ್‍ಯುವಿಯ ಹೊಸ 2WD ಹೈ ಎಂದು ಕರೆಯಲ್ಪಡುವ ಹೊಸ ರೂಪಾಂತರದೊಂದಿಗೆ ಈ ಹಿಂದೆ ಲಭ್ಯವಿರುವ 4WD ರೂಪಾಂತರವನ್ನು ಬದಲಿಸುವ ಸಾಧ್ಯತೆಯಿದೆ, ಹೊರಹೋಗುವ 4WD ರೂಪಾಂತರಕ್ಕೆ ಹೋಲಿಸಿದರೆ, ಮಹೀಂದ್ರಾ ಅಲ್ಟುರಾಸ್ ಜಿ4 2WD ಹೈ ರೂಪಾಂತರದಲ್ಲಿ ಫೋರ್ ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಕಳೆದುಕೊಳ್ಳುತ್ತದೆ. ಈ ಬದಲಾವಣೆಯಿಂದಾಗಿ ರೂ.1.20 ಲಕ್ಷ ಬೆಲೆ ಇಳಿಕೆಯಾಗಿದೆ. ಎಸ್‍ಯುವಿಯ 4WD ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.31.88 ಲಕ್ಷವಾಗಿದೆ.

ಅಲ್ಟುರಾಸ್ ಜಿ4 ಎಸ್‍ಯುವಿಗಾಗಿ ಹೊಸ ರೂಪಾಂತರ ಪರಿಚಯಿಸಿದ ಮಹೀಂದ್ರಾ

ವೈಶಿಷ್ಟ್ಯಗಳ ವಿಷಯದಲ್ಲಿ, ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯ ಹೊಸ 2WD ಹೈ ರೂಪಾಂತರವು HID ಹೆಡ್‌ಲ್ಯಾಂಪ್‌ಗಳು, ಎಲ್ಇಡಿ DRL ಗಳು, ಎಲ್ಇಡಿ ಫಾಗ್ ಲೈಟ್‌ಗಳು ಮತ್ತು 18-ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳನ್ನು ಪಡೆಯುತ್ತದೆ.

ಅಲ್ಟುರಾಸ್ ಜಿ4 ಎಸ್‍ಯುವಿಗಾಗಿ ಹೊಸ ರೂಪಾಂತರ ಪರಿಚಯಿಸಿದ ಮಹೀಂದ್ರಾ

ಇದರೊಂದಿಗೆ ಎಲ್ಇಡಿ ಟೈಲ್ ಲೈಟ್‌ಗಳು, ಟಿಂಟೆಡ್ ಗ್ಲಾಸ್, ವೆಂಟಿಲೇಟೆಡ್ ಸೀಟ್‌ಗಳು ಮತ್ತು ಎಂಟು ಇಂಚಿನ ಟಚ್‌ಸ್ಕ್ರೀನ್ ಅನ್ನು ಪಡೆಯುತ್ತದೆ. ಈ ಕಾರಿನಲ್ಲಿ Apple CarPlay ಮತ್ತು Android Auto ಕನೆಕ್ಟಿವಿಟಿ ಹೊಂದಿರುವ ಇನ್ಫೋಟೈನ್‌ಮೆಂಟ್ ಸಿಸ್ಟಂ, 360-ಡಿಗ್ರಿ ಕ್ಯಾಮೆರಾ ಮತ್ತು ಆಂಬಿಯೆಂಟ್ ಲೈಟಿಂಗ್ ಅನ್ನು ಹೊಂದಿದೆ.

ಅಲ್ಟುರಾಸ್ ಜಿ4 ಎಸ್‍ಯುವಿಗಾಗಿ ಹೊಸ ರೂಪಾಂತರ ಪರಿಚಯಿಸಿದ ಮಹೀಂದ್ರಾ

ಈ ಹೊಸ ರೂಪಾಂತರದಲ್ಲಿ ಒಂಬತ್ತು ಏರ್‌ಬ್ಯಾಗ್‌ಗಳು, TPMS, ಮೆಮೊರಿ ಕಾರ್ಯದೊಂದಿಗೆ ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, ಕ್ರೂಸ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ಅನ್ನು ಕೂಡ ನೀಡಲಾಗಿದೆ,

ಅಲ್ಟುರಾಸ್ ಜಿ4 ಎಸ್‍ಯುವಿಗಾಗಿ ಹೊಸ ರೂಪಾಂತರ ಪರಿಚಯಿಸಿದ ಮಹೀಂದ್ರಾ

ಹುಡ್ ಅಡಿಯಲ್ಲಿ, ಮಹೀಂದ್ರಾ ಅಲ್ಟುರಾಸ್ G4 2WD ಹೈ ರೂಪಾಂತರದಲ್ಲಿ ಅದೇ2.2 ಲೀಟರ್ ಇ-ಎಕ್ಸ್‌ಡಿ 220 ಟರ್ಬೋಚಾರ್ಜ್ಡ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 178 ಬಿಹೆಚ್‍ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಮರ್ಸಿಡೀಸ್ ಬೆಂಝ್‍ನಿಂದ ಎರವಲು ಪಡೆದ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ.

ಅಲ್ಟುರಾಸ್ ಜಿ4 ಎಸ್‍ಯುವಿಗಾಗಿ ಹೊಸ ರೂಪಾಂತರ ಪರಿಚಯಿಸಿದ ಮಹೀಂದ್ರಾ

ಈ ಹೊಸ ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯ 2WD ಹೈ ರೂಪಾಂತರದಲ್ಲಿ ಹಲವಾರು ಫೀಚರ್ ಗಳನ್ನು ಹೊಂದಿದೆ. ಇಂಡಿಯಾನ್ ಬ್ರ್ಯಾಂಡ್ ನ ಈ ಪೂರ್ಣ ಪ್ರಮಾಣದ ಎಸ್‍ಯುವಿಯು ಹಲವಾರು ಪ್ರೀಮಿಯಂ ಮತ್ತು ಐಷಾರಾಮಿ ಫೀಚರ್ ಗಳನ್ನು ಹೊಂದಿದೆ.

ಅಲ್ಟುರಾಸ್ ಜಿ4 ಎಸ್‍ಯುವಿಗಾಗಿ ಹೊಸ ರೂಪಾಂತರ ಪರಿಚಯಿಸಿದ ಮಹೀಂದ್ರಾ

ಈ ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಸುರಕ್ಷತೆಗಾಗಿ ಒಂಬತ್ತು ಏರ್‌ಬ್ಯಾಗ್, ಫ್ರಂಟ್ ಮತ್ತು ರೇರ್ ಪಾರ್ಕಿಂಗ್ ಸೆನ್ಸರ್‌ಗಳು, 360 ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಎಬಿಎಸ್ ಜೊತೆ ಇಬಿಡಿ, ಕ್ರೂಸ್ ಕಂಟ್ರೋಲ್, ಹೈಸ್ಪೀಡ್ ಅಲರ್ಟ್ ಮತ್ತು ಸೀಟ್‌ಬೆಲ್ಟ್ ರಿಮೈಂಡರ್ ಅನ್ನು ಹೊಂದಿದೆ.

ಅಲ್ಟುರಾಸ್ ಜಿ4 ಎಸ್‍ಯುವಿಗಾಗಿ ಹೊಸ ರೂಪಾಂತರ ಪರಿಚಯಿಸಿದ ಮಹೀಂದ್ರಾ

ಇನ್ನು ಮಹೀಂದ್ರಾ ಕಂಪನಿಯ ಸರಣಿಯಲ್ಲ ಮಹೀಂದ್ರಾ ಬೊಲೆರೊ ಜನಪ್ರಿಯ ಪ್ರಯಾಣಿಕ ವಾಹನಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಮಹೀಂದ್ರಾ ಕಂಪನಿಯು ಬೊಲೆರೊ ಎಸ್‍ಯುವಿಯ ಬೆಲೆಯನ್ನು ಹೆಚ್ಚಿಸಿದೆ. ಇದರ ಜೊತೆ ಬೊಲೆರೊ ನಿಯೋ ಮಾದರಿಯ ಬೆಲೆಯನ್ನು ಕೂಡ ಹೆಚ್ಚಿಸಿದೆ.

ಅಲ್ಟುರಾಸ್ ಜಿ4 ಎಸ್‍ಯುವಿಗಾಗಿ ಹೊಸ ರೂಪಾಂತರ ಪರಿಚಯಿಸಿದ ಮಹೀಂದ್ರಾ

ಮಹೀಂದ್ರಾ ಬೊಲೆರೊ ಎಸ್‍ಯುವಿಯ ಬಿ4 ಮತ್ತು ಬಿ6 (ಒ) ರೂಪಾಂತರಗಳು ಈಗ ಕ್ರಮವಾಗಿ 20,701 ರೂ. ಮತ್ತು 22,000 ರೂ. ಗಳಷ್ಟು ಹೆಚ್ಚಿಸಿದೆ .ಏಕಕಾಲದಲ್ಲಿ, ಬೊಲೆರೊ ನಿಯೋದ ಎನ್ 4, ಎನ್ 10, ಮತ್ತು ಎನ್ 10 (ಒ) ರೂಪಾಂತರಗಳು ಈಗ ಕ್ರಮವಾಗಿ 18,800 ರೂ, 21,007 ರೂ. ಮತ್ತು 20,502 ರೂ. ಗಳಷ್ಟು ಹೆಚ್ಚಿಸಿದೆ. ಎಸ್‍ಯುವಿಗಳ ವೈಶಿಷ್ಟ್ಯಗಳ ಪಟ್ಟಿಗೆ ಯಾವುದೇ ನವೀಕರಣಗಳಿಲ್ಲದಿದ್ದರೂ, ಸ್ಟೀರಿಂಗ್ ವೀಲ್, ಫ್ರಂಟ್ ಗ್ರಿಲ್, ವೀಲ್ ಹಬ್ ಕ್ಯಾಪ್‌ಗಳು ಮತ್ತು ಟೈಲ್‌ಗೇಟ್‌ನಲ್ಲಿ ಕಾಣಬಹುದಾದ ಹೊಸ ಟ್ವಿನ್ ಪೀಕ್ಸ್ ಲೋಗೋದ ರೂಪದಲ್ಲಿ ಮಾತ್ರ ಬದಲಾವಣೆಯಾಗಿದೆ.

ಅಲ್ಟುರಾಸ್ ಜಿ4 ಎಸ್‍ಯುವಿಗಾಗಿ ಹೊಸ ರೂಪಾಂತರ ಪರಿಚಯಿಸಿದ ಮಹೀಂದ್ರಾ

ಮಹೀಂದ್ರಾ ಬೊಲೆರೊ ಆರಂಭಿಕ ಬೆಲೆ ರೂ 9.45 ಲಕ್ಷಗಳಾದರೆ, ಬೊಲೆರೊ ನಿಯೋ ಶ್ರೇಣಿಯ ಬೆಲೆ ರೂ.9.48 ಲಕ್ಷ ಮತ್ತು ರೂ 11.99 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಬೊಲೆರೊ ನಿಯೋ ಮೂಲಭೂತವಾಗಿ ಟಿಯುವಿ300 ಎಸ್‍ಯುವಿಯ ಫೇಸ್‌ಲಿಫ್ಟೆಡ್ ಆವೃತ್ತಿಯಾಗಿದೆ. ಮಾರಾಟದಲ್ಲಿ ಮಹೀಂದ್ರಾ ಕಂಪನಿಗೆ ಬೊಲೆರೊ ಉತ್ತಮ ಕೊಡುಗೆಯನ್ನು ನೀಡುತ್ತಿದೆ. ಸಾಮಾನ್ಯ ಬೊಲೆರೊ ಭಾರತೀಯ ಮಾರುಕಟ್ಟೆಯಲ್ಲಿ ಬಹುದೀರ್ಘಕಾಲದಿಂದ ಮಾರಾಟವಾಗುತ್ತಿರುವ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ.

ಅಲ್ಟುರಾಸ್ ಜಿ4 ಎಸ್‍ಯುವಿಗಾಗಿ ಹೊಸ ರೂಪಾಂತರ ಪರಿಚಯಿಸಿದ ಮಹೀಂದ್ರಾ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮಹೀಂದ್ರಾ ಕಂಪನಿಯು ಅಲ್ಟುರಾಸ್ ಜಿ4 ಎಸ್‍ಯುವಿಯ ಮಾರಾಟವನ್ನು ಹೆಚ್ಚಿಸಲು ಹೊಸ 2WD ಹೈ ರೂಪಾಂತರವನ್ನು ಪರಿಚಯಿಸಿದೆ. ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್, ಸ್ಕೋಡಾ ಕೊಡಿಯಾಕ್ ಮತ್ತು ಫೋಕ್ಸ್‌ವ್ಯಾಗನ್ ಟಿಗುವಾನ್ ಆಲ್‌ಸ್ಪೇಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Mahindra introduced new variant in the alturas g4 suv line up prices details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X