ಬೊಲೆರೊ ಸಿಟಿ ಪಿಕ್-ಅಪ್ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಮಧ್ಯಮ ಗಾತ್ರದ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಕಂಪನಿಯು ತನ್ನ ಜನಪ್ರಿಯ ಬೊಲೆರೊ ಪಿಕ್ಅಪ್ ಮಾದರಿಯಲ್ಲಿ ಹೊಸದಾಗಿ ಸಿಟಿ ವೆರಿಯೆಂಟ್ ಬಿಡುಗಡೆ ಮಾಡಿದೆ.

ಬೊಲೆರೊ ಸಿಟಿ ಪಿಕ್-ಅಪ್ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಬಿಡುಗಡೆ ಮಾಡಿರುವ ಹೊಸ ಬೊಲೆರೊ ಸಿಟಿ ಪಿಕ್ಅಪ್ ಮಾದರಿಯು ಎಂಟ್ರಿ ಲೆವಲ್ ಮಾದರಿಯಾಗಿದ್ದು, ಹೊಸ ವಾಣಿಜ್ಯ ವಾಹನವು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 7.79 ಲಕ್ಷ ಬೆಲೆ ಹೊಂದಿದೆ. ಹೊಸ ಆವೃತ್ತಿಯಲ್ಲಿ ಈಗಾಗಲೇ ಖರೀದಿಗೆ ಲಭ್ಯವಿರುವ ಎಕ್ಸ್‌ಟ್ರಾ ಲಾಂಗ್ ಮತ್ತು ಎಕ್ಸ್‌ಟ್ರಾ ಸ್ಟ್ರಾಂಗ್ ರೂಪಾಂತರಗಳಿಂತಲೂ ಕಡಿಮೆ ದರ್ಜೆಯ ಮಾದರಿಯಾಗಿದ್ದು, ಸಿಟಿ ಪಿಕ್-ಅಪ್ ಅನ್ನು ಕಿರಿದಾದ ಮತ್ತು ವಾಹನ ದಟ್ಟಣೆಯ ರಸ್ತೆಗಳಲ್ಲಿ ನಿರ್ವಹಿಸಲು ಸುಲಭವಾಗುವಂತೆ ಸಿದ್ದಪಡಿಸಲಾಗಿದೆ.

ಬೊಲೆರೊ ಸಿಟಿ ಪಿಕ್-ಅಪ್ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಹೊಸ ಬೊಲೆರೊ ಸಿಟಿ ರೂಪಾಂತರವು ಉತ್ತಮ ಇನ್-ಕ್ಲಾಸ್ ಮೈಲೇಜ್, ಎಂಜಿನ್ ಟಾರ್ಕ್, ಸೆಗ್ಮೆಂಟ್-ಲೀಡಿಂಗ್ ಪೇ-ಲೋಡ್ ಸಾಮರ್ಥ್ಯ ಮತ್ತು ವಿಸ್ತರಿತ ಕಾರ್ಗೊ ಗ್ರಾಹಕರ ಬೇಡಿಕೆಗಳಿಗೆ ಪೂರಕವಾಗಿದೆ.

ಬೊಲೆರೊ ಸಿಟಿ ಪಿಕ್-ಅಪ್ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಬೊಲೆರೊ ಸಿಟಿ ಪಿಕ್-ಅಪ್ ಇಂಟ್ರಾ-ಸಿಟಿ ಅಪ್ಲಿಕೇಶನ್‌ಗಳು ಮತ್ತು ಸಿಟಿ ಕಾರ್ಗೊ ಹ್ಯಾಂಡ್ಲಿಂಗ್‌ಗಳಿಗೆ ಪರಿಪೂರ್ಣವಾದ ಮಾದರಿಯಾಗಿದ್ದು, 2,523 ಎಂಎಂ ಕಾರ್ಗೊ ಸೌಲಭ್ಯದೊಂದಿಗೆ ಹೊಸ ವಾಹನದಲ್ಲಿ ಎಂ2ಡಿಐ ನಾಲ್ಕು ಎಂಜಿನ್ ಡೀಸೆಲ್ ಎಂಜಿನ್ 48.5kW ಪವರ್‌ನೊಂದಿಗೆ 195 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬೊಲೆರೊ ಸಿಟಿ ಪಿಕ್-ಅಪ್ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಜೊತೆಗೆ ಹೊಸ ವಾಣಿಜ್ಯ ವಾಹನವು ಸೆಗ್ಮೆಂಟ್ ಫಸ್ಟ್ ಪೇ-ಲೋಡ್ ಸಾಮರ್ಥ್ಯದೊಂದಿಗೆ ಹೆಚ್ಚಿನ ಮೈಲೇಜ್ ಹೊಂದಿದ್ದು, ಹೊಸ ವಾಹನವು ಪ್ರತಿ ಲೀಟರ್ ಡೀಸೆಲ್‌ಗೆ ಗರಿಷ್ಠ 17.2 ಕಿ.ಮೀ ಮೈಲೇಜ್ ನೀಡಲಿದೆ.

ಬೊಲೆರೊ ಸಿಟಿ ಪಿಕ್-ಅಪ್ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಹೊಸ ಪಿಕ್-ಅಪ್ ಮಾದರಿಯಲ್ಲಿ ಮಹೀಂದ್ರಾ ಕಂಪನಿಯು ವಿವಿಧ ಅಪ್ಲಿಕೇಶನ್‌ಗಳಿಗೆ ಅನುಗುಣವಾಗಿ ಬಲಿಷ್ಠವಾದ ಸಸ್ಷೆಂಷನ್ ಜೋಡಣೆ ಮಾಡಿದ್ದು, ನಗರದಲ್ಲಿ ವಿವಿಧ ಚಾಲನಾ ಪರಿಸ್ಥಿತಿಗಳಲ್ಲಿ ವಿವಿಧ ರೀತಿಯ ಲೋಡ್‌ಗಳಿಗೆ ಅನುಕೂಲಕರವಾಗುವಂತೆ ರಿಯರ್ ಸಸ್ಷೆಂಷನ್ ಬಲಪಡಿಸಲಾಗಿದೆ.

ಬೊಲೆರೊ ಸಿಟಿ ಪಿಕ್-ಅಪ್ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಹೊಸ ಬೊಲೆರೊ ಸಿಟಿ ಪಿಕ್-ಅಪ್‌ನಲ್ಲಿ 1,500 ಕೆ.ಜಿ ಪೇ-ಲೋಡ್ ಸಾಮರ್ಥ್ಯದೊಂದಿಗೆ 215/75 R15 ಟೈರ್ ನೀಡಿದ್ದು, ಕ್ಯಾಬಿನ್ ಸ್ಥಳಾವಕಾಶವನ್ನು ಹೆಚ್ಚಿಸುವುದರ ಜೊತೆಗೆ ಚಾಲಕ ಮತ್ತು ಸಹ ಪ್ರಯಾಣಿಕನಿಗೂ ಹೆಚ್ಚಿನ ಸ್ಥಳಾವಕಾಶದೊಂದಿಗೆ ಅತ್ಯುತ್ತಮ ಫೀಚರ್ಸ್ ಜೋಡಣೆ ಮಾಡಿದೆ.

ಬೊಲೆರೊ ಸಿಟಿ ಪಿಕ್-ಅಪ್ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಹೊಸ ಮಾದರಿಗಾಗಿ ಸುಧಾರಿತ ಫೀಚರ್ಸ್‌ಗಳೊಂದಿಗೆ ಮಹೀಂದ್ರಾ ಕಂಪನಿಯು ಕಡಿಮೆ ನಿರ್ವಹಣೆಯೊಂದಿಗೆ ಹೆಚ್ಚಿನ ಲಾಭಾಂಶವನ್ನು ಖಾತ್ರಿಪಡಿಸಿದ್ದು, ಹೊಸ ವಾಹನ ಖರೀದಿಗಾಗಿ 3 ವರ್ಷ ಅಥವಾ 1 ಲಕ್ಷ ಕಿ.ಮೀ ವಾರಂಟಿ ಮತ್ತು ನಿರ್ವಹಣಾ ವೆಚ್ಚದ ಮೇಲೆ ವಿವಿಧ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಬೊಲೆರೊ ಸಿಟಿ ಪಿಕ್-ಅಪ್ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಮಧ್ಯಮ ಗಾತ್ರದ ವಾಣಿಜ್ಯ ವಾಹನ ವಿಷಯಕ್ಕೆ ಬಂದಾಗ ಮಹೀಂದ್ರಾ ಕಂಪನಿಯು ಈ ವಿಭಾಗದಲ್ಲಿ ವಿಶಾಲವಾದ ಪೋರ್ಟ್‌ಫೋಲಿಯೊ ಮತ್ತು ವಿವಿಧ ಕಾರ್ಗೊ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಸುಲಭವಾದ ನಿರ್ವಹಣೆ ಮತ್ತು ಸೇವೆಗಾಗಿ ವ್ಯಾಪಕವಾದ ಮಹೀಂದ್ರಾ ಡೀಲರ್ ನೆಟ್‌ವರ್ಕ್‌ಗಳು ಆಯ್ಕೆ ಮೌಲ್ಯ ಹೆಚ್ಚಿಸಿವೆ.

ಬೊಲೆರೊ ಸಿಟಿ ಪಿಕ್-ಅಪ್ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಹೊಸ ವಾಹನಗಳೊಂದಿಗೆ ಕಂಪನಿಯು ದೀರ್ಘಾವಧಿಯ ದೃಷ್ಟಿ ಮತ್ತು ವಿವಿಧ ಗ್ರಾಹಕೀಕರಣ ಆಯ್ಕೆಗಳನ್ನು ನೀಡುತ್ತಿರುವ ದೊಡ್ಡ ಪ್ರಮಾಣದ ಬಳಕೆಯನ್ನು ಖಚಿತಪಡಿಸಲಿದ್ದು, ಗ್ರಾಹಕರು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗಾಗಿ, ತರಕಾರಿ ಸಾಗಾಣಿಕೆಗಾಗಿ, ಸ್ಟ್ಯಾಂಡ್ ಆಪರೇಟರ್‌ಗಳಿಗಾಗಿ, ಸರಕು ಸಾಗಣೆದಾರರಿಗಾಗಿ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಹೊಸ ವಾಹನಗಳು ಉತ್ತಮವಾಗಿವೆ.

ಬೊಲೆರೊ ಸಿಟಿ ಪಿಕ್-ಅಪ್ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಕಳೆದ 22 ವರ್ಷಗಳಿಂದ ಪಿಕ್-ಅಪ್ ವಿಭಾಗದಲ್ಲಿ ವಿವಿಧ ವಾಹನ ಮಾದರಿಗಳೊಂದಿಗೆ ನಿರಂತರವಾಗಿ ಮುಂಚೂಣಿ ಕಾಯ್ದುಕೊಂಡಿದ್ದು, ಬೊಲೆರೊ ಸರಣಿಗಳು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ.

ಬೊಲೆರೊ ಸಿಟಿ ಪಿಕ್-ಅಪ್ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಕಂಪನಿಯ ಇದೀಗ ಮಧ್ಯಮ ಗಾತ್ರದ ವಾಣಿಜ್ಯ ವಾಹನ ವಿಭಾಗವನ್ನು ಸುಧಾರಿತ ತಂತ್ರಜ್ಞಾನ ಫೀಚರ್ಸ್‌ಗಳೊಂದಿಗೆ ಉನ್ನತೀಕರಣ ಆರಂಭಿಸಿದ್ದು, ಹೊಸ ವಾಣಿಜ್ಯ ವಾಹನಗಳು ಕಾರು ಚಾಲನೆಯ ಅನುಭವ ನೀಡಲಿವೆ.

Most Read Articles

Kannada
English summary
Mahindra launched new variant for bolero city pik up details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X