ಆಯ್ದ ಮಹೀಂದ್ರಾ ಡೀಲರ್ಸ್‌ಗಳಲ್ಲಿ ಹೊಸ ಸ್ಕಾರ್ಪಿಯೋ ಖರೀದಿಗಾಗಿ ಬುಕಿಂಗ್ ಆರಂಭ

ಮಹೀಂದ್ರಾ ಕಂಪನಿಯು ಇದೇ ತಿಂಗಳಾಂತ್ಯಕ್ಕೆ ಹೊಸ ತಲೆಮಾರಿನ ಸ್ಕಾರ್ಪಿಯೋ ಎಸ್‌ಯುವಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಖರೀದಿಗಾಗಿ ಮಹೀಂದ್ರಾ ಕಂಪನಿಯು ಪ್ರಮುಖ ಡೀಲರ್ಸ್‌ಗಳಲ್ಲಿ ಈಗಾಗಲೇ ಬುಕಿಂಗ್ ಆರಂಭಿಸಿದೆ.

ಆಯ್ದ ಮಹೀಂದ್ರಾ ಡೀಲರ್ಸ್‌ಗಳಲ್ಲಿ ಹೊಸ ಸ್ಕಾರ್ಪಿಯೋ ಖರೀದಿಗಾಗಿ ಬುಕಿಂಗ್ ಆರಂಭ

ಹೊಸ ಸ್ಕಾರ್ಪಿಯೋ ಮಾದರಿಗಾಗಿ ಮಹೀಂದ್ರಾ ಕಂಪನಿಯು ಇದುವರೆಗೂ ಅಧಿಕೃತ ಬುಕಿಂಗ್ ಆರಂಭಿಸಿಲ್ಲವಾದರೂ ಆಯ್ದ ಡೀಲರ್ಸ್‌ಗಳಲ್ಲಿ ಆಸಕ್ತ ಗ್ರಾಹಕರಿಂದ ಬುಕಿಂಗ್ ಸ್ವಿಕರಿಸಲಾಗುತ್ತಿದ್ದು, ಜೂನ್ ಅಂತ್ಯಕ್ಕೆ ಹೊಸ ಕಾರು ವಿತರಣೆಯಾಗುವ ಭರವಸೆ ನೀಡಲಾಗುತ್ತಿದೆ. ಹೀಗಾಗಿ ಹೊಸ ಕಾರು ಈ ತಿಂಗಳಾಂತ್ಯಕ್ಕೆ ಅಧಿಕೃತವಾಗಿ ಬಿಡುಗಡೆಯಾಗಬಹುದಾಗಿದ್ದು, ಹೊಸ ಕಾರನ್ನು ಪ್ರಮುಖ ಡೀಲರ್ಸ್ ಯಾರ್ಡ್‌ಗಳಲ್ಲಿ ಸ್ಟಾಕ್ ಮಾಡಲಾಗುತ್ತಿದೆ.

ಆಯ್ದ ಮಹೀಂದ್ರಾ ಡೀಲರ್ಸ್‌ಗಳಲ್ಲಿ ಹೊಸ ಸ್ಕಾರ್ಪಿಯೋ ಖರೀದಿಗಾಗಿ ಬುಕಿಂಗ್ ಆರಂಭ

ಹೊಸ ತಲೆಮಾರಿನ ಸ್ಕಾರ್ಪಿಯೋ ಎಸ್‌ಯುವಿ ಮಾದರಿಯು ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಹೊಸ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹೊಸ ಮಾದರಿಯೊಂದಿಗೆ ಮಹೀಂದ್ರಾ ಕಂಪನಿಯು ಮಧ್ಯಮ ಕ್ರಮಾಂಕರ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಆಯ್ದ ಮಹೀಂದ್ರಾ ಡೀಲರ್ಸ್‌ಗಳಲ್ಲಿ ಹೊಸ ಸ್ಕಾರ್ಪಿಯೋ ಖರೀದಿಗಾಗಿ ಬುಕಿಂಗ್ ಆರಂಭ

ಭಾರತದಲ್ಲಿ ಬಿಡುಗಡೆಗೊಂಡ 20 ವರ್ಷಗಳ ಸಂಭ್ರಮದಲ್ಲಿರುವ ಸ್ಕಾರ್ಪಿಯೋ ಮಾದರಿಯು ಮೊದಲ ತಲೆಮಾರಿನಿಂದ ಇಲ್ಲಿಯ ತನಕ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಆಯ್ದ ಮಹೀಂದ್ರಾ ಡೀಲರ್ಸ್‌ಗಳಲ್ಲಿ ಹೊಸ ಸ್ಕಾರ್ಪಿಯೋ ಖರೀದಿಗಾಗಿ ಬುಕಿಂಗ್ ಆರಂಭ

ಮಹೀಂದ್ರಾ ಕಂಪನಿಯು ಕಳೆದ ಎರಡು ವರ್ಷಗಳಲ್ಲಿ ತನ್ನ ಪ್ರಮುಖ ಕಾರುಗಳ ನ್ಯೂ ಜನರೇಷನ್ ಮಾದರಿಗಳನ್ನು ಬಿಡುಗಡೆ ಮಾಡುವ ಮೂಲಕ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ತಲೆಮಾರಿನ ಸ್ಕಾರ್ಪಿಯೋ ಆವೃತ್ತಿಯೊಂದಿಗೆ ಎಸ್‌ಯುವಿ ಕಾರು ಮಾರಾಟದಲ್ಲಿ ತನ್ನ ಪ್ರಾಬಲ್ಯವನ್ನು ಗಟ್ಟಿಗೊಳಿಸಲಿದೆ.

ಆಯ್ದ ಮಹೀಂದ್ರಾ ಡೀಲರ್ಸ್‌ಗಳಲ್ಲಿ ಹೊಸ ಸ್ಕಾರ್ಪಿಯೋ ಖರೀದಿಗಾಗಿ ಬುಕಿಂಗ್ ಆರಂಭ

ಹೊಸ ಸ್ಕಾರ್ಪಿಯೋ ಕಾರು ಮಾದರಿಯ ಪ್ರಸ್ತುತ ಮಾರುಕಟ್ಟೆಯಲ್ಲಿನ ಮಾರಾಜೋ ಎಂಪಿವಿಯಿಂದಲೂ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಎರವಲು ಪಡೆದುಕೊಂಡಿದ್ದು, ಹೊಸ ಫೀಚರ್ಸ್‌ಗಳಿಂದಾಗಿ ಸ್ಕಾರ್ಪಿಯೋ ಕಾರು ಮತ್ತಷ್ಟು ಬಲಿಷ್ಠ ವಿನ್ಯಾಸದೊಂದಿಗೆ ವಿಸ್ತರಿತ ವೀಲ್ಹ್ ಬೆಸ್ ಮೂಲಕ ಅರಾಮದಾಯಕ ಕ್ಯಾಬಿನ್ ಸ್ಪೆಸ್ ಹೊಂದಿದೆ.

ಆಯ್ದ ಮಹೀಂದ್ರಾ ಡೀಲರ್ಸ್‌ಗಳಲ್ಲಿ ಹೊಸ ಸ್ಕಾರ್ಪಿಯೋ ಖರೀದಿಗಾಗಿ ಬುಕಿಂಗ್ ಆರಂಭ

ಹಾಗೆಯೇ ಹೊಸ ಕಾರಿನಲ್ಲಿ ಈ ಬಾರಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳ ಜೊತೆಗೆ ಹೆಚ್ಚಿನ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದ್ದು, ಆರಾಮದಾಯಕವಾದ ಆಸನ ಸೌಲಭ್ಯದೊಂದಿಗೆ ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್ ಪ್ಲೇ ಸರ್ಪೊಟ್ ಮಾಡುವ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ವಿವಿಧ ಡ್ರೈವ್ ಮೋಡ್ ಕಂಟ್ರೋಲ್ ಸೇರಿದಂತೆ ಹಲವು ಹೊಸ ಸೌಲಭ್ಯಗಳಿವೆ.

ಆಯ್ದ ಮಹೀಂದ್ರಾ ಡೀಲರ್ಸ್‌ಗಳಲ್ಲಿ ಹೊಸ ಸ್ಕಾರ್ಪಿಯೋ ಖರೀದಿಗಾಗಿ ಬುಕಿಂಗ್ ಆರಂಭ

ನ್ಯೂ ಜನರೇಷನ್ ಮಾದರಿಯ ವಿಶೇಷವೆಂದರೆ ಬ್ರಾಂಡ್ ನ್ಯೂ ಲೋಗೊ ಹೊಂದಿದ್ದು, ಸ್ಟೀರಿಂಗ್ ಮೌಂಟೆಡ್ ಮೇಲೆ ಇರಿಸಲಾಗಿರುವ ಲೋಗೊ ಸಾಕಷ್ಟು ಆಕರ್ಷಕವಾಗಿದೆ. ಹಾಗೆಯೇ ಹೊಸ ಕಾರಿನಲ್ಲಿ ಮಲ್ಟಿ ಏರ್‌ಬ್ಯಾಗ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಆಯ್ದ ವೆರಿಯೆಂಟ್‌ಗಳಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೌಲಭ್ಯಗಳಿವೆ.

ಆಯ್ದ ಮಹೀಂದ್ರಾ ಡೀಲರ್ಸ್‌ಗಳಲ್ಲಿ ಹೊಸ ಸ್ಕಾರ್ಪಿಯೋ ಖರೀದಿಗಾಗಿ ಬುಕಿಂಗ್ ಆರಂಭ

ಟಾಪ್ ಎಂಡ್ ಮಾದರಿಗಳಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಕ್ರೂಸ್ ಕಂಟ್ರೋಲ್, ಸನ್‌ರೂಫ್, ಪುಶ್ ಬಟನ್ ಆನ್/ಆಫ್, ಕೀ ಲೆಸ್ ಎಂಟ್ರಿ, ರೂಫ್ ರೈಲ್ಸ್, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್, ಎಲ್ಇಡಿ ಟರ್ನ್ ಇಂಡಿಕೇಟಕ್ ಲೈಟ್, ಸಿಲ್ವರ್ ಸ್ಕೀಡ್ ಪ್ಲೇಟ್ ಸೌಲಭ್ಯಗಳಿರಲಿವೆ.

ಆಯ್ದ ಮಹೀಂದ್ರಾ ಡೀಲರ್ಸ್‌ಗಳಲ್ಲಿ ಹೊಸ ಸ್ಕಾರ್ಪಿಯೋ ಖರೀದಿಗಾಗಿ ಬುಕಿಂಗ್ ಆರಂಭ

ಇದರೊಂದಿಗೆ ಹೊಸ ಕಾರಿನಲ್ಲಿ 17 ಇಂಚಿನ ಅಲಾಯ್ ವೀಲ್ಹ್‌ಗಳು, ಹೊಸ ವಿನ್ಯಾಸದ ಫ್ರಂಟ್ ಅಂಡ್ ರಿಯರ್ ಬಂಪರ್ ಮತ್ತು ವಿಸ್ತರಿತ ವೀಲ್ಹ್‌ಬೆಸ್‌ನಿಂದಾಗಿ ಮೂರನೇ ಸಾಲಿನ ಪ್ರಯಾಣಿಕರಿಗೆ ಹೆಚ್ಚಿನ ಮಟ್ಟದ ಸ್ಥಳಾವಕಾಶ ನೀಡಲಿದೆ.

ಆಯ್ದ ಮಹೀಂದ್ರಾ ಡೀಲರ್ಸ್‌ಗಳಲ್ಲಿ ಹೊಸ ಸ್ಕಾರ್ಪಿಯೋ ಖರೀದಿಗಾಗಿ ಬುಕಿಂಗ್ ಆರಂಭ

ಹೊಸ ಕಾರಿನಲ್ಲಿ ರಿಯರ್ ಎಸಿ ವೆಂಟ್ಸ್, ಲೆದರ್ ಸೀಟುಗಳು, 6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್ ಸೇರಿದಂತೆ ಹೊಸ ಕಾರಿನಲ್ಲಿ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ.

ಆಯ್ದ ಮಹೀಂದ್ರಾ ಡೀಲರ್ಸ್‌ಗಳಲ್ಲಿ ಹೊಸ ಸ್ಕಾರ್ಪಿಯೋ ಖರೀದಿಗಾಗಿ ಬುಕಿಂಗ್ ಆರಂಭ

ಹೊಸ ಕಾರಿನ ವಿನ್ಯಾಸದ ಕುರಿತು ಹೇಳುವುದಾದರೆ ನವೀಕರಿಸಲಾದ ಗ್ರಿಲ್‌ನೊಂದಿಗೆ ಅಡ್ಡಲಾಗಿ ಮತ್ತು ನಡುವೆ ಐದು ಲಂಬ ಸ್ಲೇಟ್ಗಳನ್ನು ನೀಡಲಾಗಿದೆ. ಇದರೊಂದಿಗೆ ಎರಡು ಭಾಗಗಳಲ್ಲಿ ಹೆಡ್‌ಲೈಟ್ ಘಟಕಗಳನ್ನು ನೀಡಲಾಗಿದ್ದು, ಅದನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.

ಆಯ್ದ ಮಹೀಂದ್ರಾ ಡೀಲರ್ಸ್‌ಗಳಲ್ಲಿ ಹೊಸ ಸ್ಕಾರ್ಪಿಯೋ ಖರೀದಿಗಾಗಿ ಬುಕಿಂಗ್ ಆರಂಭ

ಮುಂಭಾಗದಿಂದ ಬಲವಾದ ನೋಟವನ್ನು ನೀಡುವ ಅದರ ಬಾನೆಟ್ ಮೇಲೆ ಗೆರೆಗಳನ್ನು ಕಾಣಬಹುದು. ಅದರ ಬದಿಯಲ್ಲಿ ದೊಡ್ಡ ಮಿಶ್ರಲೋಹದ ಚಕ್ರಗಳು ಕಂಡುಬರುತ್ತವೆ. ಇದು ಈ ಎಸ್‌ಯುವಿಯ ಗಾತ್ರಕ್ಕೆ ಸಾಕಾಗಲಿದ್ದು, ಇದರ ಪಕ್ಕದಲ್ಲಿರುವ ಪುಟ್ ಸ್ಟೆಪ್‌ಗಳನ್ನು ಮೊದಲಿಗಿಂತಲೂ ದೊಡ್ಡದಾಗಿ ಇರಿಸಬಹುದಾಗಿದ್ದು, ಪ್ರಯಾಣಿಕರಿಗೆ ಇದು ಹತ್ತಲು ಮತ್ತು ಇಳಿಯಲು ಸಾಕಷ್ಟು ಸಹಕಾರಿಯಾಗುತ್ತದೆ. ಹಿಂಭಾಗದಲ್ಲಿ ಟೈಲ್ ಗೇಟ್ ಮತ್ತು ಅದನ್ನು ತೆರೆಯಲು ಬದಿಯಲ್ಲಿ ಡೋರ್ ಹ್ಯಾಂಡಲ್ ಇದ್ದು, ಎಲ್ಇಡಿ ಟೈಲ್ ಲೈಟ್ ಇದರಲ್ಲಿ ಕಾಣಬಹುದಾಗಿದೆ.

ಆಯ್ದ ಮಹೀಂದ್ರಾ ಡೀಲರ್ಸ್‌ಗಳಲ್ಲಿ ಹೊಸ ಸ್ಕಾರ್ಪಿಯೋ ಖರೀದಿಗಾಗಿ ಬುಕಿಂಗ್ ಆರಂಭ

ಹಿಂಭಾಗದಲ್ಲಿ ಸ್ಟಾಪ್ ಲೈಟ್, ದೊಡ್ಡ ವೈಪರ್ ಮತ್ತು ಶಾರ್ಕ್ ಫಿನ್ ಆಂಟೆನಾವನ್ನು ಮೇಲಿನ ಭಾಗದಲ್ಲಿ ಕಾಣಬಹುದಾಗಿದ್ದು, ಇದು ಹಿಂಭಾಗದಿಂದ ವಿನ್ಯಾಸವನ್ನು ಮತ್ತಷ್ಟು ಬಲಿಷ್ಠತೆ ನೀಡುತ್ತದೆ.

ಆಯ್ದ ಮಹೀಂದ್ರಾ ಡೀಲರ್ಸ್‌ಗಳಲ್ಲಿ ಹೊಸ ಸ್ಕಾರ್ಪಿಯೋ ಖರೀದಿಗಾಗಿ ಬುಕಿಂಗ್ ಆರಂಭ

ಮಹೀಂದ್ರಾ ಸ್ಕಾರ್ಪಿಯೋ ಕಾರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡಬಹುದು. ಎಕ್ಸ್‌ಯುವಿ700 ಮತ್ತು ಥಾರ್ ಮಾದರಿಯಲ್ಲಿರುವಂತೆ 2.0 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 2.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಬಹುದಾಗಿದೆ.

ಆಯ್ದ ಮಹೀಂದ್ರಾ ಡೀಲರ್ಸ್‌ಗಳಲ್ಲಿ ಹೊಸ ಸ್ಕಾರ್ಪಿಯೋ ಖರೀದಿಗಾಗಿ ಬುಕಿಂಗ್ ಆರಂಭ

ಸದ್ಯ ಮಾರುಕಟ್ಟೆಯಲ್ಲಿರುವ ಸ್ಕಾರ್ಪಿಯೋ ಎಸ್‌ಯುವಿ ಕಾರು ಮಾದರಿಯು ಪ್ರಮುಖ ಐದು ವೆರಿಯೆಂಟ್‌ಗಳೊಂದಿಗೆ 2.2-ಲೀಟರ್ ಡೀಸೆಲ್ ಎಂಜಿನ್‌ ಆಯ್ಕೆಯೊಂದಿಗೆ ಮಾರಾಟಕ್ಕೆ ಲಭ್ಯವಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.53 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.61 ಲಕ್ಷ ಬೆಲೆ ಹೊಂದಿದೆ.

Most Read Articles

Kannada
English summary
Mahindra new scorpio unofficial bookings open at dealers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X