Just In
Don't Miss!
- Lifestyle
ಆಯುರ್ವೇದ ಔಷಧಿ ಸೇವಿಸುವ ಮುನ್ನ ಈ ಎಚ್ಚರಿಕೆಗಳನ್ನು ನೀವು ತೆಗೆದುಕೊಳ್ಳಲೇಬೇಕು
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಟ್ರಕ್ಗಳಲ್ಲಿ ಅತ್ಯಧಿಕ ಮೈಲೇಜ್ ಮತ್ತು ಬೈ ಬ್ಯಾಕ್ ಘೋಷಣೆ ಮಾಡಿದ ಮಹೀಂದ್ರಾ
ವಾಣಿಜ್ಯ ವಾಹನಗಳ ವಿಭಾಗದಲ್ಲಿ ಗ್ರಾಹಕರ ಬೇಡಿಕೆ ಅರಿತು ಹೊಸ ವಾಣಿಜ್ಯ ವಾಹನ ಉತ್ಪನ್ನಗಳಲ್ಲಿ ಸಾಕಷ್ಟು ಬದಲಾವಣೆ ಪರಿಚಯಿಸಿರುವ ಮಹೀಂದ್ರಾ ಕಂಪನಿಯು ಬಿಎಸ್ 6 ಸರಣಿಯೊಂದಿಗೆ ಮತ್ತಷ್ಟು ಹೊಸ ಆಫರ್ ಘೋಷಣೆ ಮಾಡಿದೆ.

ಮಹೀಂದ್ರಾ ಗ್ರೂಪ್ನ ವಾಣಿಜ್ಯ ವಾಹನ ವಿಭಾಗವಾದ ಮಹೀಂದ್ರಾ ಟ್ರಕ್ ಮತ್ತು ಬಸ್ (MTB) ವಿಭಾಗವು ಇಂದು ತನ್ನ ಸಂಪೂರ್ಣ ಬಿಎಸ್6 ಸರಣಿ ಟ್ರಕ್ ಶ್ರೇಣಿಗೆ "ಹೆಚ್ಚಿನ ಮೈಲೇಜ್ ಪಡೆಯಿರಿ ಅಥವಾ ಟ್ರಕ್ ಹಿಂತಿರುಗಿ" ಗ್ಯಾರಂಟಿ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.

ಹೊಸ ಘೋಷಣೆ ಅಡಿಯಲ್ಲಿ ಕಂಪನಿಯು ತನ್ನ ಬಿಎಸ್6 ಶ್ರೇಣಿಯಲ್ಲಿರುವ ಭಾರೀ, ಮಧ್ಯಮ ಮತ್ತು ಹಗುರ ವಾಣಿಜ್ಯ ವಾಹನಗಳು ಆಯಾ ವರ್ಗದ ಯಾವುದೇ ಟ್ರಕ್ಗಳಿಗಿಂತ ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಹೊಸ ವಾಹನಗಳು ಆಯಾ ಸೆಗ್ಮೆಂಟ್ನಲ್ಲಿರುವ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮ ಮೈಲೇಜ್ ನೀಡಲು ವಿಫಲವಾದರೆ ಗ್ರಾಹಕರು ಅಂತಹ ವಾಹನವನ್ನು ಕಂಪನಿಗೆ ಹಿಂತಿರುಗಿಸಬಹುದು ಎಂದು ಸ್ಪಷ್ಟಪಡಿಸಿದ್ದು, ಈ ಮೂಲಕ ಕಂಪನಿಯು ತನ್ನ ಹೊಸ ವಾಹನಗಳ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ.

ಅತ್ಯಧಿಕ ಮೈಲೇಜ್ ಮತ್ತು ಬೈಬ್ಯಾಕ್ ಆಯ್ಕೆಯನ್ನು ಕಂಪನಿಯು ತನ್ನ ಹೊಸ ಬ್ಲೆಜೊ ಎಕ್ಸ್ ಹೆವಿ, ಫ್ಯೂರಿಯೊ ಐಸಿವಿ ಮತ್ತು ಫ್ಯೂರಿಯೊ7 ಮತ್ತು ಜಾಯೊ ಲೈಟ್ ಕಮರ್ಷಿಯಲ್ ಮಾದರಿಗಳ ಖರೀದಿ ಮೇಲೆ ಈ ಗ್ಯಾರಂಟಿ ಯೋಜನೆ ಅನ್ವಯವಾಗುತ್ತದೆ.

ಮಹೀಂದ್ರಾ ಕಂಪನಿಯು 'ಗಿವ್ ಬ್ಯಾಕ್ ಟ್ರಕ್' ಗ್ಯಾರಂಟಿ ಪ್ರೋಗ್ರಾಂ ಅನ್ನು ಮೊದಲು 2016ರಲ್ಲಿ ಬ್ಲೆಜೊ ಎಕ್ಸ್ ಹೆವಿ ಟ್ರಕ್ ಮಾದರಿಯೊಂದಿಗೆ ಪರಿಚಯಿಸಿತ್ತು. ಅಂದಿನಿಂದ ಮಹೀಂದ್ರಾ ಕಂಪನಿಯು ಸುಮಾರು 33 ಸಾವಿರ ಯುನಿಟ್ ಬ್ಲೆಜೊ ಎಕ್ಸ್ ಟ್ರಕ್ಗಳನ್ನು ಮಾರಾಟ ಮಾಡಿದ್ದು, ಅವುಗಳಲ್ಲಿ ಇದುವರೆಗೂ ಯಾವುದೊಂದು ಮಾದರಿಯು ಕಾರ್ಯಕ್ಷಮತೆಯಲ್ಲಿ ವಿಫಲವಾಗಿ ಹಿಂತಿರುಗಿಸಲಾಗಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.

ಜೊತೆಗೆ ಬಿಎಸ್6 ಟ್ರಕ್ ಶ್ರೇಣಿಯ ಟ್ರಕ್ಗಳಲ್ಲಿ ಮಹೀಂದ್ರಾ ಕಂಪನಿಯು ತನ್ನ ಸುಧಾರಿತ ತಂತ್ರಜ್ಞಾನ ಪ್ರೇರಿತ ಫ್ಯೂಲ್ಸ್ಮಾರ್ಟ್ (FuelSmart) ಬಳಕೆ ಮಾಡುತ್ತಿದ್ದು, ಇದು ಮೈಲ್ಡ್ ಇಆರ್ಜಿನೊಂದಿಗೆ ಬಾಷ್ ಆಫ್ಟರ್ ಟ್ರೀಟ್ಮೆಂಟ್ ಸಿಸ್ಟಂ ಮೂಲಕ ಇಂಧನ ಬಳಕೆಯನ್ನು ಕಡಿಮೆ ಮಾಡುತ್ತದೆ.

ಈ ಮೂಲಕ ಮಹೀಂದ್ರಾ ಟ್ರಕ್ಗಳು ಕ್ಲಾಸ್-ಲೀಡಿಂಗ್ ಮೈಲೇಜ್ ನೀಡುವಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಕಂಪನಿಯ ಹೆವಿ ಡ್ಯೂಟಿ ಶ್ರೇಣಿಯು 7.2-ಲೀಟರ್ ಎಂಪವರ್ ಎಂಜಿನ್ನಿಂದ ಚಾಲಿತವಾಗುತ್ತಿದ್ದರೆ ಮಧ್ಯಮ ಮತ್ತು ಹಗುರ ವಾಣಿಜ್ಯ ವಾಹನ ಮಾದರಿಗಳು ಎಂಡಿಐ ಟೆಕ್ ಡೀಸೆಲ್ ಎಂಜಿನ್ನೊಂದಿಗೆ ಚಾಲನೆಗೊಳ್ಳುತ್ತಿವೆ.

ಇದಲ್ಲದೆ ಕಂಪನಿಯು ಹೊಸ ಬಿಎಸ್ 6 ಶ್ರೇಣಿಯ ಟ್ರಕ್ಗಳಿಗೆ ಮೈಲೇಜ್ ಗ್ಯಾರಂಟಿ ಜೊತೆಗೆ ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರಿಗೆ ಎರಡು ವಿಶೇಷ ಮಾರಾಟದ ನಂತರದ ಸೇವೆಯನ್ನು ಖಾತರಿಪಡಿಸಲಿದ್ದು, ಟೆಲಿಮ್ಯಾಟಿಕ್ ಮೂಲಕ ರಸ್ತೆ ಬದಿಯ ಸೇವೆಗಳನ್ನು ಸಹ ಖಾತ್ರಿಪಡಿಸುತ್ತದೆ.

ರಸ್ತೆ ಬದಿಯ ಸೇವೆಗಳನ್ನು 48 ಗಂಟೆಗಳಲ್ಲಿ ಪೂರ್ಣಗೊಳಿಸಲು ವಿಫಲವಾದದರೆ ಕಂಪನಿಯೇ ಟ್ರಕ್ ಸಿದ್ಧವಾಗುವವರೆಗೆ ಮಾಲೀಕರಿಗೆ ದಿನಕ್ಕೆ ರೂ. 1,000 ಪರಿಹಾರ ಒದಗಿಸಲಿದ್ದರೆ ಎರಡನೆಯ ಆಫರ್ನಲ್ಲಿ ಟ್ರಕ್ ಮಹೀಂದ್ರಾ ವರ್ಕ್ಶಾಪ್ನಲ್ಲಿದ್ದರೆ ಮತ್ತು ದುರಸ್ತಿ ಮಾಡಲು 36 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡರೆ ಟ್ರಕ್ ರಿಪೇರಿಯಾಗುವವರೆಗೆ ಮಹೀಂದ್ರಾ ಗ್ರಾಹಕರಿಗೆ ದಿನಕ್ಕೆ ರೂ. 3,000 ಸಾವಿರ ಪರಿಹಾರ ಪಾವತಿಸುತ್ತದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿಯು 90ಕ್ಕೂ ಹೆಚ್ಚು 3ಎಸ್ ಡೀಲರ್ಶಿಪ್ಗಳನ್ನ, 210 ಅಧಿಕೃತ ಸೇವಾ ಕೇಂದ್ರಗಳನ್ನ 1,600 ಚಿಲ್ಲರೆ ಔಟ್ಲೆಟ್ಗಳ ಬಿಡಿಭಾಗಗಳ ನೆಟ್ವರ್ಕ್ ಮತ್ತು 34 ಎಂ ಪಾರ್ಟ್ಸ್ ಪ್ಲಾಜಾಗಳನ್ನು ಒಳಗೊಂಡಂತೆ ವ್ಯಾಪಕವಾದ ಸೇವೆ ಮತ್ತು ಬಿಡಿಭಾಗಗಳ ನೆಟ್ವರ್ಕ್ ಅನ್ನು ಹೊಂದಿದೆ.

ಗ್ಯಾರಂಟಿ ಮೈಲೇಜ್ ಮತ್ತು ಬೈಬ್ಯಾಕ್ ಕಾರ್ಯಕ್ರಮದ ಕುರಿತು ಮಾತನಾಡುತ್ತಾ, ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್ನ ಆಟೋಮೋಟಿವ್ ವಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯ್ ನಕ್ರಾ ಅವರು "ಹೆಚ್ಚುತ್ತಿರುವ ಇಂಧನ ಬೆಲೆಗಳನ್ನು ಗಮನಿಸಿದರೆ, ಈ ಗ್ರಾಹಕ ಮೌಲ್ಯದ ಪ್ರತಿಪಾದನೆಯನ್ನು ಪರಿಚಯಿಸಲು ಇದು ಉತ್ತಮ ಸಮಯವಾಗಿದೆ. ಈ ಯೋಜನೆಯು ಮತ್ತಷ್ಟು ಹೊಸ ಆಯಾಮಗಳಿಗೆ ಕಾರಣವಾಗಲಿದೆ ಎಂಬ ವಿಶ್ವಾಸವಿದೆ. ಕಂಪನಿಯಲ್ಲಿ ಗ್ರಾಹಕರ ವಿಶ್ವಾಸವನ್ನು ಬಲಪಡಿಸುತ್ತದೆ' ಎಂದಿದ್ದಾರೆ.